Sunday, 11th May 2025

Bigg Boss Kannada: ಶೀಘ್ರದಲ್ಲಿ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆರಂಭ; ಪ್ರೋಮೊ ಔಟ್‌

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ (Bigg Boss Kannada) ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ. ಈ ಶೋಗಾಗಿ ಕಾದು ಕುಳಿತಿರುವ ವೀಕ್ಷಕ ವರ್ಗವೇ ಇದೆ. ಈಗಾಗಲೇ ಕಿಚ್ಚ ಸುದೀಪ್‌ (Kichcha Sudeep) ನೇತೃತ್ವದಲ್ಲಿ 10 ಸೀಸನ್‌ ಯಶಸ್ವಿಯಾಗಿ ಮುಗಿದ್ದಿದ್ದು, ಟಿಆರ್‌ಪಿಯಲ್ಲಿಯೂ ದಾಖಲೆ ಬರೆದಿದೆ. ಇದೀಗ ಸೀಸನ್‌ 11ಕ್ಕೆ ಸಿದ್ಧತೆ ನಡೆಯುತ್ತಿದೆ. ಬಿಗ್‌ಬಾಸ್‌ ಕನ್ನಡ ಸೀಸನ್‌ ಶೀಘ್ರದಲ್ಲಿಯೇ ಆರಂಭವಾಗಲಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೊ ಗಮನ ಸೆಳೆಯುತ್ತಿದೆ.

ಕಲರ್ಸ್‌ ಕನ್ನಡ ವಾಹಿನಿ ತನ್ನ ಸೋಷಿಯಲ್‌ ಮೀಡಿಯಾದಲ್ಲಿ ಸೆಪ್ಟೆಂಬರ್‌ 1ರಂದು ಬಿಗ್‌ಬಾಸ್‌ ಸೀಸನ್‌ 11ರ ಪ್ರೋಮೊ ಹಂಚಿಕೊಂಡಿದೆ. ಈ ಮೂಲಕ ಶ್ರೀಘ್ರದಲ್ಲಿಯೇ ಶೋ ಆರಂಭವಾಗುವ ಸೂಚನೆ ನೀಡಿದೆ. ಮುಂದಿನ ತಿಂಗಳಿಂದ ಶೋ ಆರಂಭವಾಗುವ ಸಾಧ್ಯತೆ ಇದೆ. ಪ್ರೋಮೊದಲ್ಲಿ ಶೋದ ಹೊಸ ಲೋಗೋ ಪರಿಚಯಿಸಲಾಗಿದೆ.

https://www.instagram.com/reel/C_YMK7tK_wc/?utm_source=ig_web_copy_link&igsh=MzRlODBiNWFlZA==

ಸುದೀಪ್‌ ಇರುತ್ತಾರೆ

ಈ ಸೀಸನ್‌ಲ್ಲಿ ನಿರೂಪಕರಾಗಿ ಕಿಚ್ಚ ಸುದೀಪ್‌ ಮುಂದುವರಿಯುವುದಿಲ್ಲ ಎನ್ನುವ ಗಾಳಿಸುದ್ದಿ ಕೆಲವು ದಿನಗಳಿಂದ ಹರಡಿತ್ತು. ಅವರು 2-3 ಸಿನಿಮಾಗಳನ್ನು ಮುಗಿಸಬೇಕಿದ್ದು, ಈ ಕಾರಣಕ್ಕೆ ಅವರು ಬಿಗ್‌ಬಾಸ್‌ ಶೋಗೆ ಲಭ್ಯರಿಲ್ಲ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಾಹಿನಿಯಾಗಲೀ, ಸುದೀಪ್‌ ಆಗಲಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಕಲರ್ಸ್‌ ವಾಹಿನಿ ಹಂಚಿಕೊಂಡಿರುವ ಪ್ರೋಮೊದ ಜತೆಗೆ ಸುದೀಪ್‌ ಅವರ ಹೆಸರನ್ನೂ ಟ್ಯಾಗ್‌ ಮಾಡಿರುವುದರಿಂದ ಅವರು ನಿರೂಪಕರಾಗಿ ಮುಂದುವರಿಯಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಹೈದರಾಬಾದ್​ನಲ್ಲಿ ಸುದೀಪ್ ಇರುವ ಬಿಗ್ ಬಾಸ್​ನ ಪ್ರೋಮೋಶೂಟ್ ಪೂರ್ಣಗೊಂಡಿದೆ ಎಂದೂ ವರದಿಯೊಂದು ತಿಳಿಸಿದೆ.

ಯಾರೆಲ್ಲ ಇರ್ತಾರೆ?

ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧರಾದ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ. ಸುಷ್ಮಿತಾ, ಜಗ್ಗಪ್ಪ, ನಿರೂಪಕಿ ಜಾಹ್ನವಿ, ಅಮಿತಾ ಕುಲಾಲ್‌, ಮಾನಸ, ವರುಣ್‌ ಆರಾಧ್ಯ, ಭೂಮಿಕಾ ಬಸವರಾಜ್‌, ಮೋಕ್ಷಿತಾ ಪೈ ಮತ್ತಿತರರು ಸ್ಪರ್ದಿಗಳಾಗಲಿದ್ದಾರೆ ಎನ್ನುವ ಗಾಳಿ ಸುದ್ದಿ ಹಬ್ಬಿದೆ. ಅಧಿಕೃತ ಪಟ್ಟಿ ಇನ್ನಷ್ಟೇ ರಿಲೀಸ್‌ ಆಗಬೇಕಿದೆ. ಬಿಗ್‌ಬಾಸ್‌ ಸೀಸನ್‌ 10 ಹಲವು ಕಾರಣಗಳಿಗೆ ಗಮನ ಸೆಳೆದಿತ್ತು. ಸ್ಪರ್ಧಿಗಳ ಜಗಳ, ಸ್ನೇಹದ ಕಾರಣಕ್ಕೆ ಸುದ್ದಿಯಾಗಿದ್ದ ಸೀಸನ್‌ 10ರ ವಿಜೇತರಾಗಿ ನಟ ಕಾರ್ತಿಕ್‌ ಮಹೇಶ್‌ ಹೊರ ಹೊಮ್ಮಿದ್ದರು. ಡ್ರೋನ್‌ ಪ್ರತಾಪ್‌ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರೆ ಸಂಗೀತಾ ಶೃಂಗೇರಿ ಎರಡನೇ ರನ್ನರ್ ಅಪ್ ಆಗಿದ್ದರು.

Leave a Reply

Your email address will not be published. Required fields are marked *