ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಶತಕದತ್ತ ದಾಪುಗಾಲಿಡುತ್ತಿದೆ. ಯಶಸ್ವಿ 12ನೇ ವಾರ ಬಿಬಿಕೆ ಸಾಗುತ್ತಿದ್ದು, ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ ಈ ಬಾರಿಯ ಸೀಸನ್ ಹೆಚ್ಚು ಜಗಳಗಳಿಂದಲೇ ಕೂಡಿದೆ. ಆದರೆ, ಪ್ರೇಕ್ಷಕರು ಇದನ್ನೇ ಇಷ್ಟಪಟ್ಟು ನೋಡುತ್ತಿದ್ದಾರೆ. ಇದೀಗ 50ನೇ ವಾರದ ಟಿಆರ್ಪಿ ಹೊರಬಿದ್ದಿದ್ದು, ಇಲ್ಲೂ ಬಿಗ್ ಬಾಸ್ ಅಬ್ಬರ ಜೋರಾಗಿದೆ. ಯಾವ ಧಾರಾವಾಹಿ ಕೂಡ ಇದರ ಹತ್ತಿರ ಸುಳಿಯಲು ಸಾಧ್ಯವಾಗಿಲ್ಲ.
ಪ್ರತೀ ವೀಕೆಂಡ್ ಕಿಚ್ಚ ಸುದೀಪ್ ಬಂದು ವಾರದ ಕತೆಯನ್ನು ಮಾತನಾಡುತ್ತಾರೆ. ಆದರೆ, ಕಳೆದ ಕೆಲವು ವಾರಗಳಿಂದ ವಾರದ ಕತೆ ಕಿಚ್ಚ ಜೊತೆ ಹಾಗೂ ಭಾನುವಾರ ನಡೆಯುವ ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ಗೆ ದೊಡ್ಡ ಮಟ್ಟದ ಟಿಆರ್ಪಿ ಇರಲಿಲ್ಲ. ಆದರೆ 50ನೇ ವಾರ ಬಿಗ್ ಬಾಸ್ ಭರ್ಜರಿ ಕಮ್ಬ್ಯಾಕ್ ಮಾಡಿದೆ.
ವಾರದ ದಿನಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ನಗರ ಭಾಗದಲ್ಲಿ 8.6 ಟಿವಿಆರ್ ದೊರೆತಿದೆ. ಅದೇ ಕಿಚ್ಚ ಸುದೀಪ್ ಬರುವ ಶನಿವಾರ 9.2 ಟಿವಿಆರ್ ಹಾಗೂ ಸೂಪರ್ ಸಂಡೇ ವಿಥ್ ಸುದೀಪ್ ಕಾರ್ಯಕ್ರಮದ ಭಾನುವಾರ 9.7 ಟಿವಿಆರ್ ಸಿಕ್ಕಿದೆ. ವೀಕೆಂಡ್ನಲ್ಲಿ ಸುದೀಪ್ ಅವರ ಕಾರಣಕ್ಕಾಗಿ ಹೆಚ್ಚಿನ ಟಿಆರ್ಪಿ ಸಿಗುತ್ತಿದೆ ಎಂಬುದು ಇಲ್ಲಿ ಗಮನಿಸಬೇಕಾದ ವಿಚಾರ.
ಇನ್ನು ಡಿಕೆಡಿ ಫಿನಾಲೆ ಇತ್ತೀಚೆಗಷ್ಟೆ ಮುಕ್ತಾಯಗೊಂಡಿತ್ತು. ಜೀ ಕನ್ನಡದಲ್ಲಿ ಪ್ರಸಾರ ಕಂಡ ಈ ಶೋ ಟಿಆರ್ಪಿ ಕೂಡ ಹೊರ ಬಿದ್ದಿದೆ. ಈ ರಿಯಾಲಿಟಿ ಶೋಗೆ ನಗರ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಟಿಆರ್ಪಪಿ ದೊರೆತಿದೆ. ಆದರೆ, ಬಿಗ್ ಬಾಸ್ ಕನ್ನಡ ಸೀಸನ್ 11 ರ ಟಿಆರ್ಪಿಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.
ಇನ್ನು ಧಾರಾವಾಹಿ ವಿಚಾರಕ್ಕೆ ಬರೋದಾದರೆ, ಎರಡನೇ ಸ್ಥಾನದಲ್ಲಿದ್ದ ಲಕ್ಷ್ಮೀ ನಿವಾಸ ಧಾರಾವಾಹಿ ದಿಢೀರ್ ಮೊದಲ ಸ್ಥಾನಕ್ಕೇರಿದೆ. ಇದಕ್ಕೆ 8.1 ಟಿವಿಆರ್ ದೊರೆತಿದೆ. ಮೊದಲ ಸ್ಥಾನದಲ್ಲಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿ ಎರಡನೇ ಸ್ಥಾನಕ್ಕೆ ಕುಸಿದಿದೆ. ಬ್ರೋ ಗೌಡ ನಟಿಸುತ್ತಿರುವ ಈ ಧಾರಾವಾಹಿ ಹಲವು ಟ್ವಿಸ್ಟ್ಗಳನ್ನು ಪಡೆದುಕೊಂಡು ಸಾಗುತ್ತಿದೆ. ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ಬಾರಮ್ಮ ಹಾಗೂ ಭಾಗ್ಯಲಕ್ಮೀ ಧಾರಾವಾಹಿಗಳು ಈ ಮೊದಲು ಟಾಪ್ ಐದರಲ್ಲಿ ಸ್ಥಾನ ಪಡೆಯಲು ಕಷ್ಟಪಡುತ್ತಿದ್ದವು. ಆದರೆ, ಈ ಬಾರಿ ಈ ಧಾರಾವಾಹಿಗಳಿಗೆ ಎರಡು ಹಾಗೂ ಮೂರನೇ ಸ್ಥಾನ ಸಿಕ್ಕಿದೆ. ಅಮೃತಧಾರೆ ಮತ್ತು ಅಣ್ಣಯ್ಯ ಸೀರಿಯಲ್ 4 ಮತ್ತು ಐದನೇ ಸ್ಥಾನದಲ್ಲಿದೆ.
BBK 11: ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಮುಟ್ಟಿ ನೋಡುವಂತಹ ಉತ್ತರ ಕೊಟ್ಟ ಗೋಲ್ಡ್ ಸುರೇಶ್