ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ರೋಚಕತೆ ಸೃಷ್ಟಿಸುತ್ತಿದೆ. ಸದ್ಯ 10ನೇ ವಾರಕ್ಕೆ ಕಾಲಿಟ್ಟಿರುವ ಬಿಬಿಕೆ 11 ರಲ್ಲಿ ಟಾಸ್ಕ್ಗಳ ಕಾವು ಕೂಡ ಏರುತ್ತಿದೆ. ಕಳೆದ ವಾರ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಇನ್ಮುಂದೆ ಕಠಿಣ ಟಾಸ್ಕ್ ಬರಲಿದೆ ಎಂದು ಹೇಳಿದ್ದರು. ಅದರಂತೆ ಇದೀಗ ದೊಡ್ಮನೆ ಟಿವಿ ವಾಹಿನಿಯಾಗಿ ಪರಿವರ್ತನೆಯಾಗಿದೆ. ಈ ವಿಭಿನ್ನ ಕಾನ್ಸೆಪ್ಟ್ ಕಂಡು ವೀಕ್ಷಕರು ಬೆಚ್ಚಿಬಿದ್ದಿದ್ದು, ಏನೆಲ್ಲ ಆಗುತ್ತ ಎಂದು ನೋಡಲು ಕಾದು ಕುಳಿತಿದ್ದಾರೆ.
ಇಂದಿನ ಸಂಚಿಕೆಯ ಪ್ರೊಮೋ ಒಂದನ್ನಿ ಕಲರ್ಸ್ ಕನ್ನಡ ಬಿಡುಗಡೆ ಮಾಡಿದ್ದು, ಇದಕ್ಕೆ ಸುದ್ದಿ ಆಗೋರು ಸುದ್ದಿ ಓದಿದ್ರೆ..? ಎಂಬ ಶೀರ್ಷಿಕೆ ನೀಡಿದೆ. ಈ ವಾರ ಬಿಗ್ ಬಾಸ್ ಮನೆ ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಯಾಗಿದೆ. ಇದಕ್ಕಾಗಿ ಮನೆಯ ಸದಸ್ಯರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಯ ಪ್ರಯುತ್ನ ಆಗಿದೆ. ಈ ಎರಡು ಟಿವಿ ಚಾನೆಲ್ ಪೈಕಿ ಯಾರು ಹೆಚ್ಚು ಮನೋರಂಜನೆ ನೀಡುತ್ತಾರೆ ಎಂಬುದು ನೋಡಬೇಕಿದೆ.
ಇನ್ನೊಂದು ವಿಶೇಷ ಎಂದರೆ ಈ ಎರಡು ಟಿವಿ ಚಾನೆಲ್ ಪೈಕಿ ಯಾರು ಉತ್ತಮ ಪ್ರದರ್ಶನ ನೀಡಿದರು ಎಂಬುದನ್ನು ಈ ಬಾರಿ ನಿರ್ಧರಿಸುವುದು ಸ್ವತಃ ವೀಕ್ಷಕರೆ. ಇದಕ್ಕಾಗಿ ಜಿಯೋ ಸಿನಿಮಾ ಆ್ಯಪ್ನಲ್ಲಿ ವೀಕ್ಷಕರಿಗೆ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗಿದೆ. ಬುಧವಾರ ಬೆಳಗ್ಗಿನ ತನಕ ವೋಟಿಂಗ್ ಲೈನಪ್ ತೆರೆದಿರುತ್ತದೆ.
ಕಳಚಿತು ಗೌತಮಿ ಜಾದವ್ ಪಾಸಿಟಿವ್ ಮುಖವಾಡ:
ಗೌತಮಿ ಜಾದವ್ ಅವರು ಪ್ರತಿ ಬಾರಿ ಮಾತಿನಲ್ಲಿ ಪಾಸಿಟಿವ್ ಎನ್ನುತ್ತಾರೆ. ಆದರೆ ಅವರು ನಡೆದುಕೊಳ್ಳುವ ರೀತಿಯಲ್ಲಿ ಪಾಸಿಟಿವಿಟಿ ಇರುವುದಿಲ್ಲ ಎಂಬುದು ಬಹುತೇಕರ ವಾದ. ಇದೇ ಮಾತನ್ನು ಚೈತ್ರಾ ಕುಂದಾಪುರ ಅವರು ಟಿವಿ ಚಾನೆಲ್ ಮೂಲಕ ಹೇಳಿದ್ದಾರೆ. ಸುದ್ದಿ ವಾಹಿನಿ ಟಾಸ್ಕ್ನಲ್ಲಿ ವಾರ್ತೆ ಓದುತ್ತಿರುವ ಚೈತ್ರಾ ಕುಂದಾಪುರ ಅವರು ತಮ್ಮ ಟಿವಿಯ ಬ್ರೇಕಿಂಗ್ ನ್ಯೂಸ್ ಮೂಲಕ ಯುವರಾಣಿಯ ಮೇಲಿನ ಅಸೂಯೆಗೆ ಕಳಚಿತು ಪಾಸಿಟಿವಿಟಿಯ ಮುಖವಾಡ ಎಂದು ಹೇಳಿದ್ದಾರೆ.
ಅತ್ತ ಮತ್ತೊಂದು ಟಿವಿ ಚಾನೆಲ್ನಿಂದ ಐಶ್ವರ್ಯಾ ಸಿಂಧೋಗಿ ಆ್ಯಂಕರ್ ಆಗಿದ್ದು, ಹೂಸು ಹನುಮ ಬರೀ ಹಾಡನ್ನು ಹಾಡಿಕೊಂಡು ಎಲ್ಲರನ್ನೂ ಗೆದ್ದೆ ಅಂದುಕೊಂಡಿದ್ದಾರೆ. ಅವರಿಗೆ ಗೊತ್ತಿಲ್ಲ, ಅವರ ವೀಕ್ನೆಸ್ ಮನೆಯವರಿಗೆ ಗೊತ್ತಾಗಿದೆ ಅಂತ ಎಂದು ಹೇಳಿದ್ದಾರೆ. ಜೊತೆಗೆ ಚೈತ್ರಾ ಕುಂದಾಪುರ ಅವರನ್ನು ಪಿನ್ ಚೈತ್ರಾ ಎಂದು ಕರೆದಿರುವ ಐಶ್ವರ್ಯಾ ಇವರು ಯಾರಿಗೆ ಹಾಲು ಕೊಡ್ತಾರೋ, ಯಾರಿಗೆ ಹಾಲಾಹಲವನ್ನು ಕೊಡ್ತಾರೋ ಗೊತ್ತೇ ಆಗಲ್ಲ. ಇವ್ರ ಜೊತೆಗೆ ಯಾರು ನಾಲ್ಕು ದಿನ ಚೆನ್ನಾಗಿ ಮಾತನಾಡಿಕೊಂಡು ಇರ್ತಾರೋ, ಅವರಿಗೆ ಈ ಬಿಗ್ ಬಾಸ್ ಮನೆಯ ಗೇಟ್ ಓಪನ್ ಆಗೋದಂತೂ ಗ್ಯಾರಂಟಿ. ಚೈತ್ರಾ ನಕಲಿ ಮಂಡೋದರಿ.. ಸಿಕ್ಕವರಿಗೆಲ್ಲಾ ಅಣ್ಣ ಅಂತ ಕರೀತಾರೆ ಎಂದಿದ್ದಾರೆ.
ಒಟ್ಟಿನಲ್ಲಿ ಈ ವಾರದ ಬಿಗ್ ಬಾಸ್ ಟಾಸ್ಕ್ ಸಾಕಷ್ಟು ವಿಭಿನ್ನತೆಯಿಂದ ಕೂಡಿದೆ. ಈ ಎರಡು ಗುಂಪುಗಳ ಪೈಕಿ ಯಾರು ಹೆಚ್ಚು ಮನೋರಂಜನೆ ನೀಡುತ್ತಾರೆ ಎಂಬುದು ಕಾದುನೋಡಬೇಕಿದೆ.
BBK 11: ಬಿಗ್ ಬಾಸ್ನಿಂದ ಶೋಭಾ ಶೆಟ್ಟಿ ದಿಢೀರ್ ಹೊರಬರಲು ಏನು ಕಾರಣ?: ಇಲ್ಲಿದೆ ಅಸಲಿ ವಿಚಾರ