Sunday, 11th May 2025

Bigg Boss kannada 11 : ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ವಿವರ ಇಲ್ಲಿದೆ

Bigg Boss kannada 11

ಬೆಂಗಳೂರು: ಬಿಗ್‌ಬಾಸ್ ಕನ್ನಡ 11 ಗ್ರ್ಯಾಂಡ್ (Bigg Boss kannada 11) ಓಪನಿಂಗ್ ಮುಕ್ತಾಯಗೊಂಡಿದೆ. ಕಾರ್ಯಕ್ರಮ ವೀಕ್ಷಕರಿಗೆ ಭರ್ಜರಿ ಮನರಂಜನೆ ನೀಡಿತು. ಇದರೊಂದಿಗೆ ಬಿಗ್‌ಬಾಸ್ ಮನೆ ಒಳಗೆ ಹೋಗುತ್ತಾರೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಸ್ವರ್ಗ ಹಾಗೂ ನರಕ ಎಂದು ಮನೆಯನ್ನು ಎರಡು ಭಾಗ ಮಾಡಿ ಸ್ಪರ್ಧಿಗಳನ್ನು ವಿಭಾಗಿಸಿ ಮನೆಯೊಳಗೆ ಕಳುಹಿಸಲಾಗಿದೆ.

ಸೆಪ್ಟೆಂಬರ್‌ 28ರಂದು ‘ರಾಜಾ-ರಾಣಿ’ ಗ್ರ್ಯಾಂಡ್ ಫಿನಾಲೆ ಸಮಯದಲ್ಲೇ ಬಿಗ್‌ಬಾಸ್ ಮನೆಗೆ ಹೋಗುವ 4 ಜನ ಸ್ಪರ್ಧಿಗಳ ಹೆಸರನ್ನು ಹೆಸರಿಸಲಾಗಿತ್ತು. ಲಾಯರ್ ಜಗದೀಶ್, ನಟಿ ಗೌತಮಿ ಜಾಧವ್, ಗೋಲ್ಡ್ ಸುರೇಶ್ ಹಾಗೂ ಚೈತ್ರಾ ಕುಂದಾಪುರ ಹೆಸರು ಪ್ರಕಟಗೊಂಡಿತ್ತು. ಇದೀಗ ಭಾನುವಾರ ಉಳಿದ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ.

ಭವ್ಯ ಗೌಡ

ಭವ್ಯಾ ಗೌಡ ‘ಗೀತಾ’ ಧಾರಾವಾಹಿಯಲ್ಲಿ ನಟಿಸಿ ಗೆದ್ದ ಭವ್ಯಾ ಗೌಡ ಬಿಗ್‌ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ. ಗಗನ ಸಖಿ ಆಗಬೇಕು ಎಂದುಕೊಂಡಿದ್ದ ಆಕೆ ಕೊನೆಗೆ ನಟಿಯಾಗಿದ್ದರು. ಮಾಡೆಲಿಂಗ್‌ ಮೂಲಕ ಬಣ್ಣ ಹಚ್ಚಲು ಆರಂಭಿಸಿದ ಭವ್ಯಾ ಇದೀಗ ಬಿಗ್‌ಬಾಸ್ ವೇದಿಕೆಗೆ ಬಂದಿದ್ದಾರೆ.

ಯಮುನಾ ಶ್ರೀನಿಧಿ

ಹಿರಿಯ ನಟಿ ಯಮುನಾ ಶ್ರೀನಿಧಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಕಲಾವಿದೆ ಕೂಡ ಆಗಿರುವ ಯಮುನಾ ಅವರು ನಟ ದರ್ಶನ್ ಅಭಿಮಾನಿ ಎಂದು ಹಿಂದೆ ಹೇಳಿಕೊಂಡಿದ್ದರು. ‘ತಾರಕ್’ ಚಿತ್ರದಲ್ಲಿ ಕೂಡ ನಟಿಸಿದ್ದರು. ಇನ್ನುಳಿದಂತೆ ‘ಅಶ್ವಿನಿ ನಕ್ಷತ್ರ’, ‘ಅಮೃತ ವರ್ಷಿಣಿ’ ಸೇರಿ ಕೆಲ ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.

ಧನರಾಜ್ ಆಚಾರ್

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧನರಾಜ್ ಆಚಾರ್‌ ಕೂಡ ಈ ಬಾರಿ ಬಿಗ್‌ ಬಾಸ್ ಎಂಟ್ರಿ ಪಡೆದಿದ್ದಾರೆ. ಅವರು ಒಂದು ತುಳು ಚಿತ್ರದಲ್ಲಿ ಕೂಡ ಅವರು ನಟಿಸಿದ್ದಾರೆ. ಪತ್ನಿ ಜೊತೆ ಸೇರಿ ರೀಲ್ಸ್ ಮಾಡಿ ಹೆಚ್ಚು ಗಮನ ಸೆಳೆದ ಧನರಾಜ್ ಇದೀಗ ಕಿರುತೆರೆ ವೀಕ್ಷಕರನ್ನು ರಂಜಿಸಲು ಮುಂದಾಗಿದ್ದಾರೆ.

ಗೌತಮಿ ಜಾಧವ್ ‘ಸತ್ಯ’ ಧಾರಾವಾಹಿಯಲ್ಲಿ ನಟಿಸಿ ಭಾರೀ ಜನಪ್ರಿಯತೆ ಗಳಿಸಿದವರು ಗೌತಮಿ ಜಾಧವ್. ನಿನ್ನೆಯೇ (ಸೆಪ್ಟೆಂಬರ್ 28) ಗೌತಮಿ ದೊಡ್ಮನೆ ಪ್ರವೇಶಿಸಿದ್ದರು.  ಅವರು ಸೀರಿಯಲ್‌ಹಾಗೂ ಸಿನಿಮಾ ಮೂಲಕವೇ ಪ್ರಖ್ಯಾತಿ ಪಡೆದವರು.

ಅನುಷ್ಕಾ ರೈ

ಅನುಷಾ ರೈ ನಟಿ ಅನುಷಾ ರೈ 5ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದರು. ‘ದಮಯಂತಿ’, ‘ಖಡಕ್’ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ನಾಗಕನ್ನಿಕೆ’ ಹಾಗೂ ‘ರಾಜಕುಮಾರಿ’ ಸಿನಿಮಾಗಳಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರು ಫೇಮಸ್‌.

ಲಾಯರ್ ಜಗದೀಶ್

ಬಿಗ್‌ಬಾಸ್ ಮನೆಗೆ ಲಾಯರ್ ಜಗದೀಶ್ ಹೋಗುವುದು ಒಂದು ದಿನ ಮೊದಲೇ ಗೊತ್ತಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವಿವಾದಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರು. ಆರ್‌ಟಿಐ ಕಾರ್ಯಕರ್ತರಾಗಿರುವ ಅವರು ಪ್ರಭಾವಿ ವ್ಯ್ಕಕ್ತಿಗಳ ವಿರುದ್ಧ ಗಂಭೀರ ಆರೋಪಗಳನ್ನು ಮಾಡುತ್ತಿದ್ದರು.

ಶಿಶಿರ್‌

ಶಿಶಿರ್ ‘ಕುಲವಧು’ ಧಾರಾವಾಹಿಯಲ್ಲಿ ನಟಿಸಿ ಮನೆಮಾತಾದ ಶಿಶಿರ್ 8ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದಾರೆ. ತೆಲುಗು ಧಾರಾವಾಹಿಯಲ್ಲೂ ಕೂಡ ನಟಿಸಿದ್ದಾರೆ. ಡ್ಯಾನ್ಸ್ ಮಾಡಿ ವೇದಿಕೆಗೆ ಬಂದ ಶಿಶಿರ್‌ ಬಿಗ್‌ಬಾಸ್ ಮನೆಗೆ ಹೋಗುವುದು ನನ್ನ ದೊಡ್ಡ ಕನಸು ಎಂದು ಹೇಳಿದ್ದಾರೆ.

ತ್ರಿವಿಕ್ರಮ್

ಶಿಶಿರ್ ಜೊತೆಗೆ ‘ಪದ್ಮಾವತಿ’ ಧಾರಾವಾಹಿ ನಟ ತ್ರಿವಿಕ್ರಮ್ ದೊಡ್ಮನೆ ಪ್ರವೇಶಿಸಿದ್ದಾರೆ. ಇಬ್ಬರಲ್ಲಿ ಯಾರಿಗೆ ಎಷ್ಟು ಶಕ್ತಿ ಇದೆ ನೋಡೋಣ ಎಂದು ಕಿಚ್ಚ ಸುದೀಪ್‌ ಚಾಲೆಂಜ್ ಹಾಕಿದ್ದಾರೆ.

ಹಂಸಾ ಪ್ರತಾಪ್

ಹಲವು ವರ್ಷಗಳಿಂದ ನಟಿ ಹಂಸಾ ಪ್ರತಾಪ್ ಬಣ್ಣದ ಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ‘ಡ್ರಾಮಾ’, ‘ಅಂಗುಲಿಮಾಲ’ ಹಾಗೂ ‘ಅಮ್ಮ’ ಸೇರಿದಂತೆ ಹಲವರು ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ. ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ರಾಜೇಶ್ವರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾನಸ

ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತು ಪತ್ನಿ ಮಾನಸ ಕೂಡ ದೊಡ್ಮನೆ ಪ್ರವೇಶಿದ್ದಾರೆ. ಕಳೆದ ವರ್ಷ ಸಂತು ಬಿಗ್‌ಬಾಸ್ ಮನೆಯಲ್ಲಿ ವೀಕ್ಷಕರನ್ನು ರಂಜಿಸಿದ್ದರು. ಈ ಬಾರಿ ಪತ್ನಿಯ ಸರದಿ.

ಗೋಲ್ಡ್ ಸುರೇಶ್

ಉದ್ಯಮಿ ಗೋಲ್ಡ್ ಸುರೇಶ್ ಈ ಬಾರಿ ಬಿಗ್‌ಬಾಸ್ ಮನೆಗೆ ಅಚ್ಚರಿಯ ಪ್ರವೇಶ ಎಂದು ಕೆಲವರು ಹೇಳುತ್ತಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಸುರೇಶ್ ಮುಂದೆ ತಮ್ಮದೇ ಪರಿಶ್ರಮದಿಂದ ಶ್ರೀಮಂತರಾಗಿದ್ದಾರೆ. ಕೋಟ್ಯಂತರ ಮೌಲ್ಯದ ಚಿನ್ನಾಭರಣವನ್ನು ಧರಿಸಿ ಓಡಾಡುತ್ತಾರೆ. ಉತ್ತರ ಕರ್ನಾಟಕ ಮೂಲದ ಸುರೇಶ್ ಈ ಬಾರಿ ಬಿಗ್‌ಬಾಸ್ ಮನೆಯ ಕೇಂದ್ರಬಿಂದುವಾಗಿದ್ದಾರೆ.

ಇದನ್ನೂ ಓದಿ: Bigg Boss Kannada 11: ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಕೆಜಿಗಟ್ಟಲೆ ಚಿನ್ನ ಧರಿಸುವ ಗೋಲ್ಡ್‌ ಸುರೇಶ್‌; ಏನಿವರ ಹಿನ್ನೆಲೆ?

ಐಶ್ವರ್ಯ ಸಿಂಧೋಗಿ

ನಾಯಕಿ ನಟಿ ಐಶ್ವರ್ಯ ಸಿಂಧೋಗಿ ಬಿಗ್‌ಬಾಸ್ ಮನೆಗೆ 13ನೇ ಸ್ಪರ್ಧಿ. ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ನೋವಿನ ಸಂಗತಿಯನ್ನು ಅವರು ವೇದಿಕೆಯಲ್ಲಿ ಬಿಚ್ಚಿಟ್ಟರು.

ಚೈತ್ರಾ ಕುಂದಾಪುರ

ಹಿಂದೂ ಫೈರ್ ಬ್ರಾಂಡ್ ಭಾಷಣಕಾರ್ತಿ ಹಾಗೂ ಉದ್ಯಮಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೊಪಿದಲ್ಲಿಜೈಲು ಸೇರಿದ್ದ ಚೈತ್ರಾ ಕುಂದಾಪುರ ಅವರು ಬಿಗ್‌ಬಾಸ್ ಮನೆಗೆ ಎಂಟ್ರಿ ಗಿಟ್ಟಿಸಿಕೊಂಡಿದ್ದಾರೆ.

ಮಂಜು

15ನೇ ಸ್ಪರ್ಧಿಗಯಾಗಿ ಮಂಜು ಬಿಗ್‌ಬಾಸ್ ಮನಗೆ ಪ್ರವೇಶ ಪಡೆದಿದ್ದಾರೆ.

ಮೋಕ್ಷಿತಾ ಪೈ

ಸೀರಿಯಲ್ ನಟಿ ಹಾಗೂ ಪಾರೂ ಧಾರವಾಹಿ ಮೂಲಕ ಜನಪ್ರಿಯತೆ ಗಳಿಸಿದ್ದ ಮೋಕ್ಷಿತಾ ಪೈ ಬಿಗ್ ಬಾಸ್‌ಗೆ ಎಂಟ್ರಿ ಪಡೆದಿದ್ದಾರೆ.

ರಂಜಿತ್‌

ರಂಜಿತ್‌ ಅವರು 17ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ.