Monday, 12th May 2025

BBK 11: ಹೃದಯವಂತ ಧರ್ಮನಿಗೆ ‘ನಾಲಾಯಕ್’ ಪಟ್ಟ ಕಟ್ಟಿದ ಮನೆಮಂದಿ: ಕಣ್ಣೀರಿಟ್ಟ ಕ್ಯಾಡ್ಬರಿಸ್

Dharma KeerthiRaj

ಬಿಗ್ ಬಾಸ್ ಮನೆಯಲ್ಲಿ ಧರ್ಮ ಕೀರ್ತಿರಾಜ್ ಮೂಲೆಗುಂಪಾಗುತ್ತಿದ್ದಾರೆ ಎಂಬ ಮಾತು ಕಳೆದ ಕೆಲವು ವಾರಗಳಿಂದ ಕೇಳಿ ಬರುತ್ತಲೇ ಇದೆ. ಇದು ಸುಳ್ಳು ಎಂದು ಧರ್ಮ ಅನೇಕ ಬಾರಿ ಹೇಳಿದ್ದರೂ ಮೇಲ್ನೋಟಕ್ಕೆ ನಿಜದಂತೆ ಕಾಣುತ್ತಿದೆ. ಇವರಿಗೆ ಅವಕಾಶ ಸಿಕ್ಕಿದ್ದು ಕಮ್ಮಿ, ಆದರೆ, ಸಿಕ್ಕ ಅವಕಾಶವನ್ನು ದೊಡ್ಟ ಮಟ್ಟದಲ್ಲಿ ಉಳಿಸಿಕೊಂಡಿಲ್ಲ ಎಂಬುದು ಕೂಡ ನಿಜ. ಇದರಿಂದಲೇ ಧರ್ಮ ಅವರಿಗೆ ಮನೆಮಂದಿ ನಾಲಾಯಕ್ ಎಂಬ ಪಟ್ಟ ಕಟ್ಟಿದ್ದಾರೆ.

ಸೂಪರ್ ಸಂಡೇ ವಿಥ್ ಸುದೀಪ ಎಪಿಸೋಡ್​ನಲ್ಲಿ ಕಿಚ್ಚ ಮನೆಮಂದಿಗೆ ಒಂದು ಪ್ರಶ್ನೆ ಕೇಳಿದ್ದಾರೆ. ಇದು ಮನೆ ಮೆಚ್ಚಿದ ನಾಲಾಯಕ್ ಯಾರು ಎಂಬುದಾಗಿದೆ. ಈ ಪ್ರಶ್ನೆಗೆ ಉತ್ತರಿಸಿದ ಬಿಗ್ ಬಾಸ್ ಸ್ಪರ್ಧಿಗಳು ಧರ್ಮ ಕೀರ್ತಿರಾಜ್ ಹೆಸರು ತೆಗೆದುಕೊಂಡಿದ್ದಾರೆ. ಬಹುತೇಕರು ಧರ್ಮಕೀರ್ತಿ ರಾಜ್ ಹೆಸರನ್ನೇ ಹೇಳಿದ್ದಾರೆ. ಇದರಿಂದ ಧರ್ಮನಿಗೆ ನೋವಾಗಿ ಕಣ್ಣೀರಿಟ್ಟಿದ್ದಾರೆ.

ಹನುಮಂತು, ಭವ್ಯಾ ಗೌಡ, ಚೈತ್ರಾ ಕುಂದಾಪುರ ಹಾಗೂ ಮಂಜು ಕೂಡ ಧರ್ಮಕೀರ್ತಿ ರಾಜ್ ಹೆಸರು ಹೇಳಿದ್ದಾರೆ. ಅವರಿಗೆ ಮುನ್ನುಗ್ಗಿ ಹೋಗುವ ಗುಣ ಇಲ್ಲ, ಅವರ ತನವನ್ನು ಬಿಟ್ಟುಕೊಟ್ಟು ಆಟವಾಡುತ್ತಿದ್ದಾರೆ, ಒಂದು ಟಾಸ್ಕ್ ಆಡಿದ್ವಿ ತ್ರಿವಿಕ್ರಮ್, ಮಂಜಣ್ಣ ಕೂಡ ಮುಂದೆ ಬಂದ್ರು ಆದರೆ ಧರ್ಮ ಕೀರ್ತಿ ಅವರು ಬಂದು ನಾನು ಯಾವತರ ಆಡಲಿ ಎಂದು ನನ್ನನ್ನೇ ಪ್ರಶ್ನೆ ಮಾಡಿದರು ಎಂಬ ಮಾತು ಮನೆಮಂದಿಯಿಂದ ಕೇಳಿದೆ.

ಇದರಿಂದ ಬೇಸರಗೊಂಡ ಧರ್ಮ, ಅದೇನೋ ಮಹಾನ್ ತಪ್ಪು ನಾನು ಮಾಡಿಲ್ಲ. ಅದೇ ಒಂದು ರೀಸನ್ ಇಟ್ಕೊಂಡು ಪ್ರತಿ ಬಾರಿ ಹೇಳಿದ್ರೆ ನನಗೂ ಬೇಸರವಿದೆ ಎಂದು ಧರ್ಮ ಹೇಳಿದ್ದಾರೆ. ಬಳಿಕ ರಾತ್ರಿ ಮನೆಯವರ ಮುಂದೆ ಇದೇ ವಿಚಾರ ನೆನೆದು, ಎಲ್ಲರೂ ಅವರ ಫೀಲ್ಡ್ ನಲ್ಲಿ ಕಷ್ಟಪಟ್ಟು ಮುಂದೆ ಬಂದಿರ್ತಾರೆ. ಆ ವರ್ಡ್ ನನಗೆ ತುಂಬಾ ನಾಟಿಗೆ, ಮನಸ್ಸಿಗೆ ಚುಚ್ಚಿದೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ.

ಇನ್ನು ಮನೆ ಮೆಚ್ಚಿದ ಫೇಕ್ ಸ್ಪರ್ಧಿ ಯಾರು ಅವಾರ್ಡ್ ಅನ್ನ ಎಲ್ಲರೂ ಸೇರಿ ಚೈತ್ರಾ ಕುಂದಾಪುರಗೆ ಕೊಟ್ಟಿದ್ದಾರೆ. ಮೋಕ್ಷಿತಾ ಪೈ, ಇಡೀ ಚೈತ್ರಾ ಕುಂದಾಪುರ ಅವರ ವ್ಯಕ್ತಿತ್ವವನ್ನು ವಿಶ್ಲೇಷಣೆ ಮಾಡಿದ್ದಾರೆ. ಇಲ್ಲಿರೋದಕ್ಕೂ ಹೊರಗಡೆ ಇರೋದಕ್ಕೂ ತುಂಬಾನೆ ವ್ಯತ್ಯಾಸ ಇದೆ ಅಂತ ಹೇಳಿದ್ದಾರೆ. ಇದನ್ನ ಬೇಸರದಲ್ಲಿಯೇ ಚೈತ್ರಾ ಸ್ವೀಕರಿಸಿದ್ದಾರೆ. ಹಾಗೆಯೆ ಗೋಲ್ಡ್ ಸುರೇಶ್ ಅವರಿಗೆ ಊಸರವಳ್ಳಿ ಅವಾರ್ಡ್ ಸಿಕ್ಕಿದೆ.

BBK 11: ಇನೋಸೆಂಟ್ ಅಲ್ಲ ಎಂದ ಮನೆಮಂದಿಗೆ ಕಿಚ್ಚನ ಎದುರೇ ಸ್ಲಿಪ್ಪರ್ ಶಾಟ್ ಹೊಡೆದ ಹನುಮಂತ