ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಯಶಸ್ವಿಯಾಗಿ 100ನೇ ದಿನ ಪೂರೈಸಿ ಮುನ್ನುತ್ತಿದೆ. ಫಿನಾಲೆ ವೀಕ್ ಹತ್ತಿರವಾಗುತ್ತಿದ್ದು ಸದ್ಯ ಮನೆಯಲ್ಲಿರುವ ಒಂಬತ್ತು ಸ್ಪರ್ಧಿಗಳು ಟಾಪ್ 5ಗೆ ಬರಲು ಮೈ-ಚಳಿ ಬಿಟ್ಟು ಆಡುತ್ತಿದ್ದಾರೆ. ಮುಂದಿನ ವಾರ ನಿಮಗೆಲ್ಲಾ ತುಂಬಾ ಮುಖ್ಯವಾಗಿರೋ ವಾರ ಎಂದು ಭಾನುವಾರ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಎಚ್ಚರಿಕೆ ಕೂಡ ನೀಡಿದ್ದಾರೆ. ಯಾಕೆಂದರೆ ಈ ವಾರ ಗೇಮ್ ಚೇಂಜಿಂಗ್ ವೀಕ್ ಆಗಿದೆ.
ಈ ವಾರ ನಡೆಯುವ ಗೇಮ್ಗಳಲ್ಲಿ ಒಬ್ಬ ವ್ಯಕ್ತಿಗೆ ಟಿಕೆಟ್ ಟು ಫಿನಾಲೆ ಸಿಗುತ್ತದೆ. ಟಿಕೆಟ್ ಟು ಫಿನಾಲೆ ಪಾಸ್ ಅಂದರೆ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಸೆಲೆಕ್ಟ್ ಆಗುತ್ತಾರೆ. ಹೀಗಾಗಿ ಸದ್ಯ ಬಿಗ್ ಬಾಸ್ನಲ್ಲಿ ಅಸಲಿ ಆಟ ಶುರುವಾಗಿದೆ. ಇಷ್ಟು ದಿನ ಇದ್ದ ಕಂಫರ್ಟ್ ಝೋನ್, ಫ್ರೆಂಡ್ಶಿಪ್ ಎಲ್ಲವೂ ಕೊಚ್ಚಿ ಹೋಗಿದೆ. ಬಿಗ್ ಬಾಸ್ ಮನೆಯಲ್ಲಿ ಟಿಕೆಟ್ ಟು ಫಿನಾಲೆ ಟಾಸ್ಕ್ ಗಳು ಶುರುವಾಗಿದೆ. ಈ ಮನೆ ಪ್ರತಿ ಕ್ಷಣ ಒಂದೊಂದು ಯುದ್ಧ ನಡೆಯುವ ರಣಾರಂಗವಾಗಲಿದೆ ಎಂದು ಬಿಗ್ ಬಾಸ್ ಹೇಳಿದ್ದು, ಸ್ಪರ್ಧಿಗಳು ಆಟದಲ್ಲಿ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಟಾಸ್ಕ್ ಮಧ್ಯೆ ಜಗಳಗಳು ಜೋರಾಗಿದೆ. ಇದರ ಜೊತೆಗೆ ಭವ್ಯಾ ಗೌಡ ಅವರು ಹನುಮಂತ ಮೇಲೆ ಹಲ್ಲೆ ಮಾಡಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಐವರು ತಮ್ಮ ತಮ್ಮ ಬಾಸ್ಕೆಟ್ ಬಳಿ ಬಂದು, ಚೆಂಡಿನ ಮಳೆ ಆದಾಗ ಚೆಂಡು ಸಂಗ್ರಹಿಸಿ, ಎದುರಾಳಿಗಳಿಂದ ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿತ್ತು. ಚೈತ್ರಾ, ಗೌತಮಿ, ಭವ್ಯಾ, ಧನರಾಜ್, ಹನುಮಂತ ಅವರಲ್ಲಿ ಬಾಲ್‌ಗಳನ್ನು ಬುಟ್ಟಿಗೆ ಹಾಕುವ ಹೋರಾಟ ನಡೆದಿದೆ.
ಇದರಲ್ಲಿ ಪ್ರತಿಯೊಬ್ಬರು ಎದುರಾಳಿಯ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಕಿತ್ತುಕೊಳ್ಳಲು ಮುಂದಾಗುತ್ತಾರೆ. ಇದೇ ವೇಳೆ ಹನುಮಂತ ಭವ್ಯಾ ಅವರ ಬುಟ್ಟಿಯಲ್ಲಿದ್ದ ಬಾಲ್‌ಗಳನ್ನ ಹಿಡಿದು ಎಳೆಯುತ್ತಾರೆ. ಹನುಮಂತ ಬುಟ್ಟಿಗೆ ಕೈ ಹಾಕಿದ್ದಕ್ಕೆ ಸಿಟ್ಟಿಗೆದ್ದ ಭವ್ಯಾ ಅವರ ಟಾಸ್ಕ್‌ನಲ್ಲಿ ಹನುಮಂತು ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೆ, ಹೊಡೀತಾಯಿದ್ದಾಳೆ ಅಂತ ಹನುಮಂತ ಹೇಳಿದಾಗ, ನನಗೆ ಬಟ್ಟೆ ಎಳೆದರು ಅಂತ ಭವ್ಯಾ ಗೌಡ ಹೇಳಿದರು.
Just this is a Video of evidence. Papa badavara maklu beliyake bidi @ColorsKannada . Nim serial avrna matra yake itkoltira. Ranjith Jagadish ondu Naya Rajath Bhavya ge ondu Naya. This is getting worst. Even they didn't take captaincy back.??? #BBK11 @Hanumantha01 @KicchaSudeep pic.twitter.com/y61sd0Koyq
— Mr.Tweet (@gowtham7shetty) January 7, 2025
ಭವ್ಯಾ ಅವರು ಹಲ್ಲೆ ಮಾಡಿದ್ದನ್ನ ಹನುಮಂತ ಕ್ಯಾಪ್ಟನ್ ರಜತ್ ಅವರ ಗಮನಕ್ಕೆ ತರುತ್ತಾರೆ. ರಜತ್ ಅವರು ಭವ್ಯಾ ಅವರು ಹಲ್ಲೆ ಮಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ. ಇದು ಹೊರಗಡೆ ಸಾಕಷ್ಟು ಸದ್ದು ಮಾಡುತ್ತಿದ್ದು ಭವ್ಯಾ ವಿರುದ್ಧ ಕಿಡಿಕಾರುತ್ತಿದ್ದಾರೆ. ಇನ್ನು ಟಾಸ್ಕ್ ಮುಗಿದ ಬಳಿಕ ಭವ್ಯಾ ಅವರು ಹನುಮಂತನ ಕಾಲು ಮುಟ್ಟಿ ಈ ವಿಚಾರಕ್ಕೆ ಕ್ಷಮೆ ಯಾಚಿಸಿದ್ದಾರೆ.
BBK 11: ಫಿನಾಲೆ ಟಿಕೆಟ್ಗೆ ಮೈ-ಚಳಿ ಬಿಟ್ಟು ಆಡುತ್ತಿರುವ ಸ್ಪರ್ಧಿಗಳು: ತ್ರಿವಿಕ್ರಮ್-ಮಂಜು ನಡುವೆ ಹೊಡೆದಾಟ?