Saturday, 10th May 2025

BBK 11: ಬಿಗ್ ಬಾಸ್ ಮನೆಯ ನೂತನ ಕ್ಯಾಪ್ಟನ್ ಆದ ಭವ್ಯಾ ಗೌಡ

Bhavya Gowda

ಬಿಗ್ ​ಬಾಸ್ ಕನ್ನಡ​ ಸೀಸನ್​ 11 (Bigg Boss Kannada 11) ಎಂಟನೇ ವಾರಕ್ಕೆ ಕಾಲಿಡುತ್ತಿದೆ. ಈ ವಾರ ಮನೆಯೊಳಗೆ ಸ್ಪರ್ಧಿಗಳಿಗೆ ಜೋಡಿ ಟಾಸ್ಕ್ ನೀಡಲಾಗಿತ್ತು. ಏನೆ ಟಾಸ್ಕ್ ಇದ್ದರೂ ಅದನ್ನು ಜೋಡಿಯಾಗಿಯೇ ಮಾಡಬೇಕಿತ್ತು. ಇದರಲ್ಲಿ ಹನುಮಂತ-ಗೌತಮಿ ಜಾಧವ್ ಜೋಡಿ ಮತ್ತು ತ್ರಿವಿಕ್ರಮ್-ಭವ್ಯಾ ಗೌಡ ಜೋಡಿ ಟಾಪ್​ ಎರಡರಲ್ಲಿದ್ದರು. ಹೀಗಾಗಿ ಈ ಎರಡು ಜೋಡಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹತೆ ಪಡೆದುಕೊಂಡಿತು. ಇದರಲ್ಲಿ ಅಂತಿಮವಾಗಿ 8ನೇ ವಾರದ ಬಿಗ್ ​ಬಾಸ್​ ಮನೆಯ ಕ್ಯಾಪ್ಟನ್​ ಆಗಿ ಭವ್ಯಾ ಗೌಡ ಆಯ್ಕೆ ಆಗಿದ್ದಾರೆ.

ತಮ್ಮ ಸಹಸ್ಪರ್ಧಿಯ ಸೂಚನೆಯಂತೆ ಮತ್ತೊಬ್ಬ ಸ್ಪರ್ಧಿಯು ಕಣ್ಣುಪಟ್ಟಿ ಕಟ್ಟಿಕೊಂಡು ಹಗ್ಗದ ನಡುವಿನ ತಟ್ಟೆಯ ಮೇಲೆ ಬಾಲ್‌ಗಳನ್ನು ಇಡಬೇಕಿತ್ತು. ಹನುಮಂತ, ಗೌತಮಿಗೆ ಆಟ ಆಡಲು ಸಹಾಯ ಮಾಡಿದರೆ, ತ್ರಿವಿಕ್ರಮ್‌, ಭವ್ಯಾಗೆ ಸಹಾಯ ಮಾಡಿದರು. ಕೊನೆಗೆ ಭವ್ಯಾಗೌಡ 3 ಬಾಲ್‌ಗಳನ್ನು ಇಟ್ಟು ಆ ಟಾಸ್ಕ್‌ ವಿನ್‌ ಆದರು. ಈ ಮೂಲಕ ಇದೇ ಮೊದಲ ಬಾರಿಗೆ ಭವ್ಯಾ ಗೌಡ ​ಅವರು ಕ್ಯಾಪ್ಟನ್​ ಪಟ್ಟ ಗಿಟ್ಟಿಸಿಕೊಂಡಿದ್ದಾರೆ.

ಟಾಸ್ಕ್​ನ ಕೊನೆಯ ಹಂತದಲ್ಲಿ ಭವ್ಯಾ ಗೌಡ ಹಾಗೂ ಗೌತಮಿ ಜಾದವ್ ಅವರ ಮಧ್ಯೆ ಪೈಪೋಟಿ ನಡೆದಿತ್ತು. ಕೊನೆಯ ಕ್ಷಣದಲ್ಲಿ ಯಾರು ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಆಗುತ್ತಾರೆ ಅಂತ ಕುತೂಹಲ ಮೂಡಿತ್ತು. ಅಂತಿಮವಾಗಿ ಭವ್ಯಾ ಗೆದ್ದು ನಾಯಕಿಯಾಗಿದ್ದಾರೆ.

ತಲೆ ತಿರುಗಿ ಬಿದ್ದ ಚೈತ್ರಾ ಕುಂದಾಪುರ:

ಜೋಡಿ ಟಾಸ್ಕ್ ಮುಗಿದ ಬಳಿಕ ಚೈತ್ರಾ ಕುಂದಾಪುರ ದಿಢೀರ್ ಬಾತ್​ ರೂಂನಲ್ಲಿ ಕುಸಿದು ಬಿದ್ದಿದ್ದಾರೆ. ಬಾತ್ ​ರೂಮ್​ ಏರಿಯಾದಲ್ಲಿ ಒಬ್ಬರೇ ಇದ್ದಾಗ ಪ್ರಜ್ಞೆ ತಪ್ಪಿದ್ದಾರೆ. ಇದನ್ನು ಗಮನಿಸಿದ ಬಿಗ್ ಬಾಸ್ ಕೂಡಲೇ ಅವರ ನೆರವಿಗಾಗಿ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ಅವರನ್ನು ಕಳಿಸಿದ್ದಾರೆ. ಅವರಿಬ್ಬರು ಓಡಿ ಬಂದು ನೋಡಿದಾಗ ಚೈತ್ರಾ ಕುಂದಾಪುರ ಅವರು ನೆಲದ ಮೇಲೆ ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಬಿದ್ದಿದ್ದರು.

ಗೌತಮಿ ಅವರು ಆ ಕೂಡಲೇ ಚೈತ್ರಾ ಮುಖಕ್ಕೆ ತಣ್ಣೀರಿನಿಂದ ವರೆಸಿದ್ದಾರೆ. ಆದರೂ ಚೈತ್ರಾ ಅವರು ಎದ್ದೇಳಲ್ಲಿಲ್ಲ. ಹೀಗಾಗಿ ಬಿಗ್​ಬಾಸ್​ ಚೈತ್ರಾ ಅವರನ್ನು ಕನ್ಫೆಕ್ಷನ್ ರೂಮಿಗೆ ಕರೆ ತನ್ನಿ ಎಂದು ಹೇಳಿದ್ದರು. ಬಳಿಕ ತ್ರಿವಿಕ್ರಮ್ ಅವರೇ ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್​ ರೂಮ್​ ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಕೂಡ ಚೈತ್ರಾ ಕಣ್ಣು ಬಿಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಚೈತ್ರಾಗೆ ಏನಾಯ್ತು ಎಂದು ಮನೆಮಂದಿ ಶಾಕ್ ಆಗಿದ್ದಾರೆ.

BBK 11: ಬಾತ್ ​ರೂಮ್​ ಏರಿಯಾದಲ್ಲಿ ದಿಢೀರ್ ಕುಸಿದು ಬಿದ್ದ ಚೈತ್ರಾ ಕುಂದಾಪುರ: ಕಣ್ಣೇ ಬಿಟ್ಟಿಲ್ಲ