ಹತ್ತನೇ ವಾರಕ್ಕೆ ತಲುಪಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ವಿಶೇಷ ಟಾಸ್ಕ್ಗಳನ್ನು ನೀಡಲಾಗಿತ್ತು. ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ಮಾಡಿ, ಎರಡು ಟಿವಿ ಚಾನೆಲ್ಗಳನ್ನ ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಎಂಎಂ ಟಿವಿ ಮತ್ತು ಡಿಡಿ ಚಾನೆಲ್ ಎಂದು ಎರಡು ಟಿವಿ ವಾಹಿನಿಯಾಗಿ ಪರಿವರ್ತನೆಗೊಂಡು ಅವರಿಗೆ ಕಾಲ ಕಾಲಕ್ಕೆ ಟಾಸ್ಕ್ ನೀಡಲಾಗಿತ್ತು.
ಒಂದು ತಂಡದಲ್ಲಿ ಧನರಾಜ್, ಹನುಮಂತ, ಶಿಶಿರ್, ರಜತ್, ಮೋಕ್ಷಿತಾ, ಚೈತ್ರಾ ಇದ್ದಾರೆ. ಮತ್ತೊಂದು ತಂಡದಲ್ಲಿ ಐಶ್ವರ್ಯಾ, ಸುರೇಶ್, ತ್ರಿವಿಕ್ರಮ್, ಭವ್ಯ, ಗೌತಮಿ ಮಂಜಣ್ಣ ಇದ್ದಾರೆ. ನ್ಯೂಸ್ ರೀಡಿಂಗ್ ಅಡುಗೆ ಮಾಡುವ ಟಾಸ್ಕ್, ಯೆಸ್ ಆರ್ ನೋ ಟಾಸ್ಕ್ ನೀಡಲಾಗಿತ್ತು. ಇದರ ಜೊತೆಗೆ ಎದುರಾಳಿ ವಾಹಿನಿಯಿಂದ ಈ ಮನೆಯಲ್ಲಿ ಇರಲು ಅರ್ಹತೆ ಇಲ್ಲದ ಕಳಪೆ ಸದಸ್ಯನನ್ನು ಆರಿಸಬೇಕು ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು.
ಈ ಟಾಸ್ಕ್ನಲ್ಲಿ ಕಳಪೆ ಸ್ಪರ್ಧಿಯಾಗಿ ಚೈತ್ರಾ ಕುಂದಾಪುರ ಬಂದರೆ ಇವರ ಪರವಾಗಿ ವಾದ ಮಾಡಲು ಬಂದವರು ಮೋಕ್ಷಿತಾ ಪೈ. ಎದುರಾಳಿ ತಂಡದವರು ಪ್ರಶ್ನೆಗಳನ್ನು ಕೇಳಬೇಕಿತ್ತು. ಈ ವೇಳೆ ಭವ್ಯಾ ಗೌಡ ಪದೇ ಪದೇ ಚೈತ್ರಾ ಅವರು ಆಸ್ಪತ್ರೆಗೆ ಹೋಗಿ ಬಂದ ವಿಷಯವನ್ನೇ ಇಟ್ಟುಕೊಂಡು ಟಾರ್ಗೆಟ್ ಮಾಡಿದ್ದಾರೆ. ಈ ಮೂಲಕ ಸುದೀಪ್ ಮಾತನ್ನೇ ಮೀರಿದ್ದಾರೆ.
ಇತ್ತೀಚೆಗಷ್ಟೆ ಚೈತ್ರಾ ಕುಂದಾಪುರ ಆಸ್ಪತ್ರೆಗೆ ಹೋಗಿ ಬಂದು ಇತರೆ ಸ್ಪರ್ಧಿಗಳ ಜೊತೆ ಹೊರಗಡೆ ಯಾವ ರೀತಿಯಾದ ಅಭಿಪ್ರಾಯ ಇದೆ ಅಂತ ಹೇಳಿದ್ದರು. ಈ ವಿಚಾರವಾಗಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯಲ್ಲಿ ಚೈತ್ರಾಗೆ ಕಿಚ್ಚ ಸುದೀಪ್ ಸ್ಪೆಷಲ್ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ಬಳಿಕ ಈ ಟಾಪಿಕ್ನ ಇಲ್ಲೇ ಬಿಡಬೇಕು ಎಂದು ಎಲ್ಲರಿಗೂ ಕಿಚ್ಚ ಸುದೀಪ್ ಸೂಚಿಸಿದ್ದರು. ಆದರೆ, ಇದೀಗ ಈ ವಿಚಾರವನ್ನು ಎತ್ತಿ ಸುದೀಪ್ ಮಾತನ್ನು ಕಡೆಗಣಿಸಿದ್ದಾರೆ.
ಭವ್ಯಾ ಈ ವಿಚಾರ ಎತ್ತಿ ಮಾತನಾಡುತ್ತಿದ್ದರೂ, ಅವರ ತಂಡದವರು ಸುಮ್ಮನೆ ಕೂತಿದ್ದು ಯಾಕೆ?, ಅಲ್ಲದೆ ಉಸ್ತುವಾರಿ ಸ್ಥಾನದಲ್ಲೇ ಇದ್ದವರು ಯಾಕೆ ನೆನಪಿಸಲಿಲ್ಲ ಕೊನೆ ಪಕ್ಷ ಎರಡೂ ತಂಡದವರಿಗೆ ಇದು ನೆನಪೇ ಆಗಿಲ್ಲವೇ ಎಂಬುದು ವೀಕ್ಷಕರ ಪ್ರಶ್ನೆ ಆಗಿದೆ.
BBK 11: ಚೈತ್ರಾಗೆ ದಿನದಿಂದ ದಿನಕ್ಕೆ ಹುಚ್ಚು ಜಾಸ್ತಿ ಆಗ್ತಿದೆ ಎಂದ ರಜತ್: ಬಿಗ್ ಬಾಸ್ನಲ್ಲಿ ಮಿತಿ ಮೀರಿದ ಮಾತು