ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ನಡೆಯುತ್ತಿರುವ ಟಿಕೆಟ್ ಟು ಫಿನಾಲೆ ಟಾಸ್ಕ್ ಮಿತಿ ಮೀರಿ ಹೋಗುತ್ತಿದೆ. ಸ್ಪರ್ಧಿಗಳು ತಮಗೆ ಬೇಕಾದಂತೆ, ಮನಬಂದಂತೆ ಆಟವಾಡುತ್ತಿದ್ದಾರೆ. ಈ ವಾರವಂತು ನಡೆಯುತ್ತಿರುವ ಪ್ರತಿಯೊಂದು ಟಾಸ್ಕ್ನಲ್ಲಿ ಜಗಳಗಳ ಕಾವು ಮತ್ತಷ್ಟು ಏರಿದೆ. ಕಳೆದ ಭಾನುವಾರ ಸುದೀಪ್ ಅವರು, ಈ ವಾರ ಎಲ್ಲರಿಗೂ ಅತಿ ಮುಖ್ಯ ಎಂದು ಹೇಳಿದ್ದೇ ತಡ ಸ್ಪರ್ಧಿಗಳು ಮನುಷ್ಯತ್ವವವನ್ನೇ ಬಿಟ್ಟು ಆಡಿದಂತಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಸರಣಿ ಟಾಸ್ಕ್ಗಳು ನಡೆಯುತ್ತಿದೆ. ಇಂದು ಬಿಗ್ ಬಾಸ್ ಟಾಸ್ಕ್ನಲ್ಲಿ ಒಂದು ಸಂಖ್ಯೆಯನ್ನು ಸೂಚಿಸುತ್ತಾರೆ. ಆ ಸಂಖ್ಯೆಗೆ ಮೀಸಲಿರುವ ಚೆಂಡುಗಳನ್ನು ತೆಗೆದುಕೊಂಡು ಸ್ಪರ್ಧಿಗಳು ತಮ್ಮ ಟೀಮ್ನ ಬಾಸ್ಕೆಟ್ನಲ್ಲಿ ಹಾಕಬೇಕಾಗಿದೆ. ಒಂದು ತಂಡದಲ್ಲಿ ಮೂವರು ಎನ್ನುವಂತೆ 2 ಟೀಮ್ಗಳನ್ನು ರೆಡಿ ಮಾಡಿದ್ದು ಅವರ ಕಾಲಿಗೆ ಹಗ್ಗಗಳನ್ನು ಕಟ್ಟಲಾಗಿದೆ.
ಆದರೆ. ಟಾಸ್ಕ್ ವೇಳೆ ಅನೇಕ ಡ್ರಾಮ ನಡೆದಿದೆ. ಕ್ಯಾಪ್ಟನ್ ರಜತ್ ಅವರು ತಾವು ಗೆಲ್ಲುವುದರ ಜೊತೆಗೆ ಸ್ಪರ್ಧಿಗಳ ಜೊತೆ ಎಚ್ಚರಿಕೆಯಿಂದ ಆಡಬೇಕಿದೆ. ನಿಯಮಗಳನ್ನು ಮೀರಿದಾಗ ರಜತ್ ಎಲ್ಲಿ, ಹೇಗೆ, ಯಾಕೆ ತಪ್ಪಾಗಿದೆ ಎಂದು ಹೇಳಬೇಕು. ಆದರೆ, ಇಲ್ಲಿ ಕ್ಯಾಪ್ಟನ್ ಮಾತು ಯಾವುದೇ ಸ್ಪರ್ಧಿ ಕೇಳುತ್ತಿಲ್ಲ. ಎಲ್ಲರೂ ತಮಗೆ ಅನಿಸಿದಂತೆ ಆಡುತ್ತಿದ್ದಾರೆ.
ಆಟ ಆಡುವ ವೇಳೆ ಭವ್ಯ ಕತ್ತನ್ನು ಮಂಜು ಹಿಸಿಕ್ಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮಂಜು ಅವರು ಈ ವಾರ ಹಿಂದಿನ ಕೆಲ ವಾರಗಳಿಗಿಂತ ತುಂಬಾ ಅಗ್ರೆಸ್ಸಿವ್ ಆಗಿ ಆಟ ಆಡುತ್ತಿರುವುದು ಕಂಡು ಬರುತ್ತಿದೆ. ಸದ್ಯ ಈ ಟಾಸ್ಕ್ನಲ್ಲೂ ಸಹ ಮಂಜು ಹಾಗೂ ಭವ್ಯ ನಡುವೆ ಜಗಳವಾಗಿದೆ. ಈ ಆಟದಲ್ಲಿ ಮಂಜು ಅವರು ಭವ್ಯಾ ಗೌಡ ಅವರ ಕತ್ತು ಹಿಸುಕಿದ್ರು ಎಂದು ಆರೋಪಿಸಲಾಗುತ್ತಿದೆ.
ಈ ಗೇಮ್ ಆಡುವಾಗ ಭವ್ಯ ಅವರನ್ನು ಮಂಜು ತಳ್ಳಿದ್ದು ಇದಕ್ಕೆ ಭವ್ಯ ಕೋಪಗೊಂಡಿದ್ದಾರೆ. ಮೂಗಿಗೆ ಭವ್ಯ ಹೊಡೆದಿರುವುದನ್ನ ಮಂಜು ಪ್ರಶ್ನೆ ಮಾಡಿದ್ದಕ್ಕೆ ಬೇರೆಯವರಿಗೆ ಹೇಳುವುದಕ್ಕೂ ಮುಂಚೆ, ನೀವು ಮೊದಲು ಕರೆಕ್ಟ್ ಆಗಿ ಆಟ ಆಡಿ ಎಂದು ಗಟ್ಟಿ ಧ್ವನಿಯಲ್ಲೇ ಭವ್ಯ ಹೇಳಿದ್ದಾರೆ. ಬಳಿಕ ಮಂಜು ಭವ್ಯಾ ಅವರ ಕೈಯಲ್ಲಿರುವ ಬಾಲ್ ಅನ್ನು ಕಸಿದುಕೊಳ್ಳುವ ಸಂದರ್ಭ ಅವರ ಕುತ್ತಿಗೆಗೆ ಕೈ ಹಾಕಿ ಎಳೆದಂತಿದೆ.
ಫಿನಾಲೆ ತಲುಪೋ ಹಟ; ರೊಚ್ಚಿಗೆದ್ರು ಸ್ಪರ್ಧಿಗಳು, ಆಟವಾಯ್ತು ರಂಪಾಟ!
— Colors Kannada (@ColorsKannada) January 8, 2025
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11 #BBK11 #HosaAdhyaya #ColorsKannada #BannaHosadaagideBandhaBigiyaagide #ಕಲರ್ಫುಲ್ಕತೆ #colorfulstory #Kicchasudeepa #BBKPromo pic.twitter.com/H0FIGBTHLF
ಈ ವೇಳೆ ಕ್ಯಾಪ್ಟನ್ ರಜತ್ ನೀನು ಆಡುತ್ತಿರುವುದು ತಪ್ಪು ಎಂದು ಹೇಳಿದ್ದಾರೆ. ಎಲ್ಲ ಸ್ಪರ್ಧಿಗಳು ಚೆಂಡಿಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದು ಬಿಡಿಸಲು ರಜತ್ ಓಡಿ ಬಂದಿದ್ದಾರೆ. ಒಟ್ಟಾರೆ ಫಿನಾಲೆ ಟಿಕೆಟ್ ಗಿಟ್ಟಿಸಿಕೊಳ್ಳಲು ಕೆಲ ಸ್ಪರ್ಧಿಗಳು ಮನುಷ್ಯತ್ವವನ್ನೇ ಬಿಟ್ಟು ಆಡುತ್ತಿರುವಂತೆ ಕಾಣುತ್ತಿದೆ.
BBK 11: ಈ ದಿನಾಂಕದಂದು ನಡೆಯಲಿದೆ ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ