ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಟಿಆರ್ಪಿಯಲ್ಲಿ ಉತ್ತಮ ರೇಟಿಂಗ್ ಪಡೆದುಕೊಂಡು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದ್ಯ ಶ್ರೇಷ್ಠಾಳನ್ನು ತಾಂಡವ್ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾನೆ. ಇದರಲ್ಲಿ ಟ್ವಿಸ್ಟ್ ಏನಂದ್ರೆ ಸ್ವತಃ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾ ಶ್ರೇಷ್ಠಾಳನ್ನು ಆರತಿ ಎತ್ತಿ ಮನೆಯೊಳಗೆ ಸ್ವೀಕರಿಸಿದ್ದಾರೆ. ಇದು ಧಾರಾವಾಹಿಯ ಮಹಾತಿರುವು ಎನ್ನಲಾಗುತ್ತಿದೆ.
ಶ್ರೇಷ್ಠಾ, ನನ್ನವಳು, ಇದು ನನ್ನ ಮನೆ, ಇನ್ಮುಂದೆ ಅವಳು ಇಲ್ಲೇ ಇರುತ್ತಾಳೆ ಎನ್ನುತ್ತಾನೆ ತಾಂಡವ್. ಅದಕ್ಕೆ ಕುಸುಮಾ ನನ್ನ ಮಗ, ಅವಳು ಇಷ್ಟಪಟ್ಟ ಹುಡುಗಿಯನ್ನು ಮನೆಗೆ ಕರೆತಂದಿದ್ದಾನೆ. ಅವರನ್ನು ಹೀಗೆ ಹೊರಗೆ ನಿಲ್ಲಿಸಿ ಮಾತನಾಡಿಸುವುದು ಎಷ್ಟು ಸರಿ ಎಂದು ಭಾಗ್ಯಾ ಜೊತೆ ಹೇಳಿ ಬೂದುಕುಂಬಳಕಾಯಿ ತೆಗೆದುಕೊಂಡು ಬರುತ್ತಾಳೆ. ಅದರಲ್ಲಿ ಕರ್ಪೂರ ಇಟ್ಟು ತಾಂಡವ್ ಹಾಗೂ ಶ್ರೇಷ್ಠಾಗೆ ಆರತಿ ಮಾಡುತ್ತಾರೆ.
ಶ್ರೇಷ್ಠಾ-ತಾಂಡವ್ ಖುಷಿಯಾಗಿ ಮನೆ ಒಳಗೆ ಬರುತ್ತಾರೆ. ಆದರೆ, ಕುಸುಮಾ ಮಾತು ಕೇಳಿ ಎಲ್ಲರೂ ಶಾಕ್ ಆಗುತ್ತಾರೆ. ಭಾಗ್ಯಾ ಹಾಗೂ ಕುಸುಮಾ ಬಿಟ್ಟು ಉಳಿದ ಎಲ್ಲ ಮನೆಯ ಸದಸ್ಯರು ಇವರು ಆಗಮನದಿಂದ ಕೋಪಗೊಂಡಿದ್ದಾರೆ. ಊಟ ಮಾಡುವಾಗ ಕೂಡ ಸುನಂದ, ಮನಸ್ಸು ಸರಿ ಇಲ್ಲ ಅಂದ್ರೆ ಹೇಗೆ ತಿನ್ನೋದು, ಉಂಡ ಮನೆಗೆ ಎರಡು ಬಗೆಯವರ ಮಧ್ಯೆ ಊಟ ಮಾಡಿದ್ರೆ ಅದು ಎಲ್ಲಿ ಸೇರುತ್ತೆ ಎಂದು ಹೇಳುತ್ತಾಳೆ.
ಸುನಂದ ಹೀಗೆ ಹೇಳಿದ್ದೇ ತಡ, ಶ್ರೇಷ್ಠಾ ಕೋಪಗೊಂಡು ಆಂಟಿ ನೀವು ಯಾರ ಬಗ್ಗೆ ಮಾತಾಡ್ತಾ ಇದ್ದೀರಾ? ಎಂದು ಕೇಳುತ್ತಾಳೆ. ಆಗ ಸುನಂದಾಳನ್ನು ಸಮಾಧನ ಪಡಿಸಿದ ಕುಸುಮಾ, ಏನೂ ಆಗಿಲ್ಲ, ನೀವು ಊಟ ಮಾಡಿ ಎಂದು ಹೇಳುತ್ತಾರೆ. ಆಗ ಶ್ರೇಷ್ಠಾ ಕುಸುಮಾ ಆಂಟಿ.. ಅಲ್ಲ ಅಲ್ಲ ಕುಸುಮಾ ಅತ್ತೆ ಥ್ಯಾಂಕ್ಯು ಸೋ ಮಚ್, ನನ್ನ ಜೀವನದಲ್ಲಿ ತುಂಬಾ ಖಷಿಯಾದ ದಿನ ಇವತ್ತು, ಈ ತರ ಒಂದು ದಿನ ಬರುತ್ತೆ ಅಂತ ನಾನು ಅನ್ಕೊಂಡೇ ಇರಲಿಲ್ಲ, ನನ್ನ ಸೊಸೆಯಾಗಿ ಒಪ್ಪಿಕೊಳ್ತೀರ, ಈ ತರ ಎಲ್ಲರ ಜೊತೆ ಕೂತು ಊಟ ಮಾಡೋ ಅವಕಾಶ ಕೋಡ್ತೀರ ಅಂತ ಅನ್ಕೊಂಡೇ ಇರಲಿಲ್ಲ ಎಂದು ಹೇಳುತ್ತಾಳೆ.
ಇದಕ್ಕೆ ಕುಸುಮಾ, ಅದ್ರಲ್ಲೇನಿದೆ.. ನನ್ ಮಗ ನಿನ್ನ ಮನಸಾರೆ ಇಷ್ಟಪಟ್ಟಿದ್ದಾರೆ, ಮಗ ಇಷ್ಟಪಟ್ಟಿದ್ದನ್ನ ನಾನು ನೆರವೇರಿಸದಿದ್ರೆ ಒಳ್ಳೆ ತಾಯಿ ಆಗ್ತೀನಾ.. ಇನ್ಮೇಲೆ ನೀನು ಈ ಮನೆ ಮೆಚ್ಚಿದ ಸೊಸೆ.. ನಾಳೆಯಿಂದ ಶ್ರೇಷ್ಠಾ ಈ ಮನೆಯ ಸೊಸೆ, ಭಾಗ್ಯ ಈ ಮನೆಯ ಅತಿಥಿ ಆಗ್ತಾಳೆ ಎಂದು ಶಾಕ್ ಕೊಟ್ಟಿದ್ದಾಳೆ ಕುಸುಮಾ. ಸದ್ಯ ಕುಸುಮಾ-ಭಾಗ್ಯಾಳ ಉದ್ದೇಶ ಏನು? ನಿಜಕ್ಕೂ ಶ್ರೇಷ್ಠಾಳನ್ನು ಸೊಸೆ ಎಂದು ಒಪ್ಪಿಕೊಂಡುಬಿಟ್ಲಾ? ಎಂದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಇದಕ್ಕೆಲ್ಲ ಮುಂದಿನ ಎಪಿಸೋಡ್ನಲ್ಲಿ ಉತ್ತರ ಸಿಗಬಹುದು.