Saturday, 10th May 2025

Bhagya Lakshmi Serial: ಕುಡಿದು ಬಂದು, ರಂಪಾಟ ಮಾಡಿದ ತಾಂಡವ್​ನನ್ನು ಮನೆಯಿಂದ ಹೊರ ಹಾಕಿದ ಭಾಗ್ಯಾ

Bhagya Lakshmi serial (2)

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi Serial) ಭಾಗ್ಯಾಳ ಹೊಸ ಅಧ್ಯಾಯ ಶುರುವಾಗಿದೆ. ತಾನು ಅನುಭವಿಸಿದ ಕಷ್ಟವನ್ನು ತಾಂಡವ್​ಗೆ ರಿಟರ್ನ್ ಕೊಡಲು ಒಂದೊಂದೆ ಹೆಜ್ಜೆ ಇಡುತ್ತಿದ್ದಾಳೆ. ಹಿಂದಿನ ಸಂಚಿಕೆಯಲ್ಲಿ ಎರಡನೇ ಶ್ರೇಷ್ಠಾ ಜೊತೆ ಮದುವೆಯಾಗಲು ಹೊರಟಿದ್ದ ತಾಂಡವ್​ಗೆ ಭಾಗ್ಯಾ ಪೊಲೀಸರನ್ನು ಕರೆಸಿ ಶಾಕ್ ಕೊಟ್ಟಿದ್ದಳು. ಜೈಲಿಗೆ ಹೋದರೆ ನನ್ನ ಕೆಲಸ ಹೋಗುತ್ತದೆ, ಮಾನ ಮರ್ಯಾದೆ ಹೋಗುತ್ತದೆ ಎಂದು, ಭಾಗ್ಯಾ ಬಳಿ ಕಂಪ್ಲೇಂಟ್‌ ವಾಪಸ್‌ ತೆಗೆದುಕೋಕು ಎಂದು ಬೇಡಿಕೊಂಡ ಪರಿಣಾಮ ಕೆಲವು ಕಂಡಿಷನ್‌ಗಳೊಂದಿಗೆ ಭಾಗ್ಯ ಇದಕ್ಕೆ ಒಪ್ಪಿದ್ದಳು.

ಆದರೆ, ತಾಂಡವ್‌ಗೆ ತಾನು ಮಾಡಬಾರದ ಕೆಲಸ ಮಾಡಿದರೂ ಅಹಂಕಾರ ಮಾತ್ರ ಕಡಿಮೆ ಅಗಿಲ್ಲ. ಒಂದಲ್ಲಾ ಒಂದು ದಿನ ನಿಮ್ಮನ್ನೆಲ್ಲಾ ಮನೆಯಿಂದ ಹೊರ ಹಾಕುತ್ತೇನೆ ಎಂದು ಸವಾಲು ಹಾಕುತ್ತಾನೆ. ಇದೇ ಕೋಪದಲ್ಲಿ ತಾಂಡವ್‌ ಬಾರ್‌ಗೆ ಹೋಗಿ ಡ್ರಿಂಕ್ಸ್‌ ಮಾಡಲು ಆರಂಭಿಸುತ್ತಾನೆ. ಅಲ್ಲಿದ್ದವರೂ ತಾಂಡವ್‌ಗೆ ಜೊತೆಯಾಗುತ್ತಾರೆ. ಹೆಂಡಿಗೆ ಎದುರಾಡುವ ಧೈರ್ಯ ಯಾರಿಗೂ ಇಲ್ಲ, ಆದ್ದರಿಂದ ನಾನು ಕುಡಿಯುತ್ತಿದ್ದೇನೆ ಎಂದು ತಾಂಡವ್‌ ಹೇಳಿಕೊಳ್ಳುತ್ತಾನೆ.

ಕುಡಿದ ಮತ್ತಿನಲ್ಲಿ ನನಗೆ ಈಗ ಧೈರ್ಯ ಬಂದಿದೆ ಮನೆಗೆ ಹೋಗಿ ಅವಳಿಗೆ ಬುದ್ಧಿ ಕಲಿಸುತ್ತೇನೆ, ಅವಳನ್ನು ಮನೆಯಿಂದ ಹೊರ ಹಾಕುತ್ತೇನೆ ಎಂದು ತಾಂಡವ್‌ ಹೇಳುತ್ತಾನೆ. ತೂರಾಡುತ್ತಲೇ ನೇರವಾಗಿ ಮನೆಗೆ ಬಂದ ತಾಂಡವ್, ರಂಪಾಟ ಮಾಡಿದ್ದಾನೆ. ಮನೆಯ ಬಾಗಿಲು ಜೋರಾಗಿ ಬಡಿಯುತ್ತಾನೆ. ಅವನು ಗಲಾಟೆ ಮಾಡುವುದನ್ನು ಕೇಳಿಸಿಕೊಂಡು ಅಕ್ಕಪಕ್ಕದವರು ಕೂಡಾ ಎದ್ದು ಬರುತ್ತಾರೆ. ಭಾಗ್ಯಾ ಬಾಗಿಲು ತೆಗೆದಾಗ ತಾಂಡವ್‌ ಡ್ರಿಂಕ್ಸ್‌ ಮಾಡಿ ಬಂದಿರುವುದು ಕಂಡು ಶಾಕ್‌ ಆಗುತ್ತಾಳೆ.

ತೂರಾಡಿಕೊಂಡೇ ಒಳಗೆ ಬಂದು ನನಗೆ ಹಸಿವಾಗುತ್ತಿದೆ ಊಟ ಬಡಿಸು ಎಂದು ಭಾಗ್ಯಾಗೆ ಹೇಳುತ್ತಾನೆ. ಆದರೆ ಭಾಗ್ಯಾ ನಾನು ಬಡಿಸುವುದಿಲ್ಲ, ಹೊತ್ತಿಲ್ಲದ ಹೊತ್ತಿಗೆ ಬಂದು ಊಟ ಬಡಿಸು ಎಂದರೆ ಸಾಧ್ಯವಿಲ್ಲ ಎನ್ನುತ್ತಾಳೆ. ಸರಿ ನಾನೇ ಬಡಿಸಿಕೊಳ್ಳುತ್ತೇನೆ ಎಂದು ತಾಂಡವ್‌ ಅಡುಗೆ ಮನೆಗೆ ಹೋಗಿ ನೋಡಿದರೆ ಅಲ್ಲಿ ಏನೂ ಇರುವುದಿಲ್ಲ, ನಾನು ಏನೂ ಮಾಡಿಲ್ಲ, ಈ ಮನೆಯವರಿಗೆ ಮಾತ್ರ ಅಡುಗೆ ಮಾಡು ಅಂತ ಅತ್ತೆ ಹೇಳಿದ್ದಾರೆ. ನೀವು ಈ ಮನೆಗೆ ಸಂಬಂಧಿಸಿದವರಲ್ಲ ಅದಕ್ಕೆ ಮಾಡಿಲ್ಲ ಎಂದು ಭಾಗ್ಯಾ ಹೇಳುತ್ತಾಳೆ.

ಇದರಿಂದ ಕೋಪಗೊಂಡ ತಾಂಡವ್‌, ಮನೆಯಲ್ಲಿರುವ ಸಾಮಗ್ರಿಗಳನ್ನು ಒಡೆಯುತ್ತಾನೆ. ಆಗ ಕೋಪಗೊಂಡ ಭಾಗ್ಯಾಳ ಅಮ್ಮ ತಾಂಡವ್​ನ ಕಾಲರ್ ಪಟ್ಟಿ ಹಿಡಿದು ಮನೆಯಿಂದ ಆಚೆ ಹಾಕಿ ಬಾಗಲು ಕ್ಲೋಸ್ ಮಾಡುತ್ತಾಳೆ. ಅತ್ತ ತಾಂಡವ್ ರೊಚ್ಚಿಗೆದ್ದು ಮನೆಯೊಳಗೆ ಕಲ್ಲು ಬಿಸಾಡುತ್ತಾನೆ. ಆಗ ಸುಮ್ಮನಾಗದ ಭಾಗ್ಯಾ ಬಾಗಿಲು ತೆರೆಯುತ್ತಾಳೆ. ಈ ಸಂದರ್ಭ ತಾಂಡವ್, ಮರ್ಯಾದೆಯಿಂದ ನನ್ನ ಕಾಲು ತೊಳೆದು ಒಳಗೆ ಕರೆಸಿಕೊ ಎಂದು ಹೇಳುತ್ತಾನೆ.

ತಾಂಡವ್​ನ ಸೊಕ್ಕು ಮುರಿಯಲು ಪ್ಲಾನ್ ಮಾಡಿದ ಭಾಗ್ಯಾ ಒಂದು ಬಕೆಟ್ ನೀರು ತಂದು ಅವನ ಮೈಮೇಲೆ ಎರೆಚಿದ್ದಾಳೆ. ಜೊತೆಗೆ ಕುಡಿದು ಬಂದು ಹೆಂಡ್ತೀನಾ ಹೆದರಿಸ್ತೀನಿ ಎನ್ನುವವರಿಗೆ ಇದೊಂದು ಪಾಠ ಆಗಬೇಕು ಎಂದು ಹೇಳಿದ್ದಾರೆ. ನಂತರ ತಾಂಡವ್​ನ ಅಲ್ಲೆ ಹೊರಗಡೆ ಬಿಟ್ಟು ಬಾಗಿಲು ಹಾಕಿದ್ದಾಳೆ. ಸದ್ಯ ತಾಂಡವ್ ಏನು ಮಾಡುತ್ತಾನೆ?, ಒಬ್ಬಂಟಿಯಾಗಿ ರಾತ್ರಿ ಇಡೀ ಮನೆ ಹೊರಗೆನೇ ಸಮಯ ಕಳೆಯುತ್ತಾನಾ? ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

BBK 11: ಈ ವಾರ ದೊಡ್ಮನೆಯಿಂದ ಹೊರಹೋಗಲು ಯಾರೆಲ್ಲ ನಾಮಿನೇಟ್?