ಮುಂಬೈ : ಸಂಗೀತ ಮಾಂತ್ರಿಕ ಎಆರ್ ರೆಹಮಾನ್ (AR Rahman Divorce) ಹಾಗೂ ಅವರ ಪತ್ನಿ ಸಾಯಿರಾ ಬಾನು 29 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ಡಿವೋರ್ಸ್ ಪಡೆಯುವುದಾಗಿ ಘೋಷಿಸಿದ್ದಾರೆ.ಇದಾದ ಕೆಲವೇ ಗಂಟೆಗಳಲ್ಲಿ ಅಚ್ಚರಿ ಎಂಬಂತೆ ರೆಹಮಾನ್ ಮ್ಯೂಸಿಕ್ ಟೀಮ್‌ನಲ್ಲಿ ಬಾಸಿಸ್ಟ್ ಆಗಿದ್ದ ಮೋಹಿನಿ ಡೇ (Mohini Dey) ಕೂಡ ತನ್ನ ಗಂಡನಿಗೆ ವಿಚ್ಛೇದನ ನೀಡಿದ್ದಾರೆ ಎಂಬ ಸುದ್ದು ಕಾಡ್ಗಿಚ್ಚಿನಂತೆ ಹಬ್ಬಿತ್ತು. ಮ್ಯೂಸಿಕ್ ಕಂಪೋಸರ್ ಆಗಿರುವ ಮಾರ್ಕ್ ಹಾರ್ಟ್ಸುಚ್‌ನಿಂದ ವಿಚ್ಛೇದನ ಪಡೆದುಕೊಂಡಿರುವುದಾಗಿ ಮೋಹಿನಿ ಡೇ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಇದೀಗ ಸಾಯಿರಾ ಬಾನು ಪರ ವಕೀಲೆ ವಂದನಾ ಶಾ (Vandana Shah) ಎಲ್ಲಾ ವಂದಂತಿಗಳಿಗೆ ತೆರೆ ಎಳೆದಿದ್ದಾರೆ.
29 ವರ್ಷದ ಮೋಹಿನಿ ಬಾಸ್ ಪ್ಲೇಯರ್ ಆಗಿದ್ದು, ಗಾನ್ ಬಾಂಗ್ಲಾ ವಿಂಡ್ ಆಫ್ ಚೇಂಜ್‌ನ ಭಾಗವಾಗಿದ್ದಾರೆ. ಅವರು ವಿಶ್ವಾದ್ಯಂತ 40 ಕ್ಕೂ ಹೆಚ್ಚು ಸಂಗೀತ ಕಾರ್ಯಕ್ರಮದಲ್ಲಿ ರೆಹಮಾನ್ ಅವರೊಂದಿಗೆ ಪ್ರದರ್ಶನ ನೀಡಿದ್ದಾರೆ. ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ ಮೋಹಿನಿ ಇನ್‌ಸ್ಟಾಗ್ರಾಂನಲ್ಲಿ ದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. “ಭಾರವಾದ ಹೃದಯದಲ್ಲಿ ನಾನು ಹಾಗೂ ಮಾರ್ಕ್ ಬೇರೆ ಬೇರೆ ಆಗುತ್ತಿರುವುದನ್ನು ಘೋಷಿಸುತ್ತಿದ್ದೇವೆ. ಮೊದಲನೆಯದಾಗಿ, ನಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಬದ್ಧತೆ ಎನ್ನುವಂತೆ ಇದು ನಮ್ಮ ನಡುವಿನ ಪರಸ್ಪರ ಒಪ್ಪಿಗೆಯ ನಿರ್ಧಾರವಾಗಿದೆ. ನಾವಿಬ್ಬರೂ ಅದ್ಭುತ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ. ಆದರೆ, ನಾವು ಜೀವನದಲ್ಲಿ ವಿಭಿನ್ನ ವಿಷಯಗಳನ್ನು ಬಯಸುತ್ತೇವೆ ಮತ್ತು ಪರಸ್ಪರ ಒಪ್ಪಂದದ ಮೂಲಕ ಬೇರ್ಪಡುವುದು ಮುಂದುವರೆಯಲು ಉತ್ತಮ ಮಾರ್ಗವಾಗಿದೆ ಎಂದು ನಾವಿಬ್ಬರೂ ನಿರ್ಧರಿಸಿದ್ದೇವೆ’ ಎಂದು ಬರೆದುಕೊಂಡಿದ್ದರು.
ರೆಹಮಾನ್ ಹಾಗೂ ಮೋಹಿನಿ ಡೇ ಒಂದೇ ದಿನ ತಮ್ಮ ಸಂಗಾತಿಯ ಜತೆ ವಿಚ್ಛೇದನ ಘೋಷಿಸಿದ್ದರಿಂದ ಇಬ್ಬರ ನಡುವೆ ಏನೋ ಇದೆ ಎಂಬ ವದಂತಿಗಳು ಕೇಳಿ ಬಂದಿದ್ದವು. ಆದರೆ ಈಗ ರೆಹಮಾನ್ ಅವರ ವಿಚ್ಛೇದನ ಘೋಷಿಸಿದ್ದ ವಕೀಲೆ ವಂದನಾ ಶಾ ಎಲ್ಲಾ ವದಂತಿಗಳಿಗೆ ತರೆ ಎಳೆದಿದ್ದಾರೆ. ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿದ ವಂದನಾ ಮೋಹಿನಿ ಡೇ ರೆಹಮಾನ್ ಅವರ ತಂಡದ ಸದಸ್ಯೇ ಅಷ್ಟೇ ಅವರಿಗೂ ಇವರಿಗೂ ಬೇರೆ ಯಾವುದೇ ಸಂಬಂಧವಿಲ್ಲ. ಖಾಸಗಿ ಕಾರಣದಿಂದಾಗಿ ರೆಹಮಾನ್ ಹಾಗೂ ಸಾಯಿರಾ ಬಾನು ವಿಚ್ಛೇದನ ಪಡೆದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : AR Rahman: ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ದಾಂಪತ್ಯದಲ್ಲಿ ಬಿರುಕು; ಡಿವೋರ್ಸ್ ಘೋಷಿಸಿದ ಪತ್ನಿ ಸೈರಾ ಬಾನು
ನವೆಂಬರ್ 19 ರಂದು ಸಂಗೀತ ಮಾಂತ್ರಿಕ ಎಆರ್ ರೆಹಮಾನ್‌ಗೆ ಅವರ ಪತ್ನಿ ಸಾಯಿರಾ ಬಾನು ವಿಚ್ಛೇದನ ನೀಡಿದ್ದರು. ಮದುವೆಯಾಗಿ 29 ವರ್ಷಗಳ ಬಳಿಕ ದಾಂಪತ್ಯದಿಂದ ಬೇರ್ಪಡುವುದಾಗಿ ತಿಳಿಸಿದ್ದರು. 1995ರಲ್ಲಿ ವಿವಾಹವಾಗಿದ್ದ ಈ ಜೋಡಿಗೆ ಮೂರು ಮಕ್ಕಳಿದ್ದಾರೆ.