Wednesday, 14th May 2025

ಪ್ರೈಮ್ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ ನಟನೆ

ಮುಂಬೈ: ಮುಂಬರುವ ಸೀರಿಸ್‌ ‘ಕಾಲ್ ಮಿ ಬೇಬ್’ ನಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಲಿದ್ದಾರೆ.

‘ಕಾಲ್ ಮಿ ಬೇಬ್’ ಚಿತ್ರೀಕರಣ ಪ್ರಾರಂಭವಾಗಿದ್ದು, ಈ ಕುರಿತು ನಟ ವರುಣ್ ಧವನ್ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

ಹೊಸ ಪ್ರೈಮ್ ಸೀರಿಸ್‌ನಲ್ಲಿ ಅನನ್ಯಾ ಪಾಂಡೆ ನಟಿಸುತ್ತಿದ್ದು, ಚಿತ್ತೀಕರಣದ ಮೊದಲ ದೃಶ್ಯ ನೋಡಿ ಹಾಗೂ ಇತರ ಅಪ್ಡೇಡ್‌ಗಾಗಿ ಕಾಯ್ತಾರಿ ಎಂದು ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿ ದ್ದಾರೆ.

“ಕಾಲ್ ಮಿ ಬೇಬ್” ಸರಣಿ ಅನ್ನು ಇಶಿತಾ ಮೊಯಿತ್ರಾ, ಸಮೀನಾ ಮೊಟ್ಲೆಕರ್ ಮತ್ತು ರೋಹಿತ್ ನಾಯರ್ ಚಿತ್ರಕಥೆ ಬರೆದಿದ್ದಾರೆ.

“ಕಾಲ್ ಮಿ ಬೇಬ್” ವಿಡಿಯೋ ಸರಣಿಯಲ್ಲಿ ಪಾಂಡೆ ಒಂದು ಬಿಲಿಯನೇರ್ ಫ್ಯಾಷನಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಾವುದೋ ಸಮಸ್ಯೆ ಯಲ್ಲಿ ಸಿಲುಕಿ ಹಾಕಿಕೊಳ್ಳುವ ಆಕೆ, ಹಾಗೇ ಒಂಟಿಯಾಗಿ ಹೋರಾಡುತ್ತಾರೆ ಮುಂತಾದವುಗಳು ಈ ಸೀರಿಸ್‌ನಲ್ಲಿ ಚಿತ್ರೀಕರಿಸಲಾಗಿದೆ.

ಈ ಸೀರಿಸ್‌ಯನ್ನು ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ಅಪೂರ್ವ ಮೆಹ್ತಾ ಮತ್ತು ಸೋಮೆನ್ ಮಿಶ್ರಾ ನಿರ್ಮಿಸಿದ್ದಾರೆ.