Monday, 12th May 2025

ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಗೋಲ್ಡನ್ ಕ್ವೀನ್ ಅಮೂಲ್ಯ

ಬೆಂಗಳೂರು: ನಟಿ ಅಮೂಲ್ಯ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ.

ಪತಿ ಜಗದೀಶ್ ಸಂಭ್ರಮ ಹಂಚಿಕೊಂಡಿದ್ದು, ಅವಳಿ ಗಂಡು ಮಕ್ಕಳನ್ನು ದೇವರು ಕರುಣಿಸಿದ್ದಾನೆ. ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ. ನಮ್ಮ ಜೊತೆ ಇದ್ದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ನಿಮ್ಮ ಪ್ರೀತಿ, ಹರಕೆಯಿಂದ ಎಲ್ಲವೂ ಒಳ್ಳೆಯದೇ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಮಹಾಶಿವರಾತ್ರಿ ಹಬ್ಬದಂದು ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ಹಬ್ಬದ ಸಡಗರದ ಬೆನ್ನಲ್ಲೇ ನಟಿ ಅಮೂಲ್ಯ ಅವರು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುವ ಮೂಲಕ ಹಬ್ಬದ ಸಡಗರವನ್ನು ಹೆಚ್ಚಿಸಿದ್ದಾರೆ ಎಂದು ಪತಿ ಜಗದೀಶ್ ತಿಳಿಸಿದ್ದಾರೆ. ಜಗದೀಶ್ ಹಾಗೂ ಅಮೂಲ್ಯ ದಂಪತಿಗೆ ಸ್ಯಾಂಡಲ್‍ವುಡ್‍ನ ಕಲಾವಿದರು ಹಾಗೂ ತಂತ್ರಜ್ಞರು ಶುಭ ಕೋರಿದ್ದಾರೆ.

ಪರ್ವ, ಚಂದು, ಲಾಲಿಹಾಡು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಅಮೂಲ್ಯ ಚೆಲುವಿನ ಚಿತ್ತಾರದ ಮೂಲಕ ನಟಿಯಾಗಿ, ನಂತರ ಚೈತ್ರದ ಚಂದ್ರಮ, ಪ್ರೇಮಾಸ್ಮಿ, ಮನಸೋಲಾಜಿ, ಶ್ರಾವಣಿ ಸುಬ್ರಹ್ಮಣ್ಯ, ಗಜಕೇಸರಿ, ರಾಮಲೀಲಾ, ಮಾಸ್ತಿ ಗುಡಿ ಮುಂತಾದ ಚಿತ್ರಗಳಲ್ಲಿ ಅಮೂಲ್ಯ ನಟಿಸಿ ದ್ದಾರೆ.