Saturday, 10th May 2025

Aishwarya Shindogi: ಅಪ್ಪ-ಅಮ್ಮ ಯಾರೂ ಇಲ್ಲ: ಬಿಗ್ ಬಾಸ್ ಮನೆಯಲ್ಲಿರುವ ಐಶ್ವರ್ಯಾ ಲೈಫ್ ಸ್ಟೋರಿ ಕೇಳಿದ್ರೆ ಅಳು ಬರುತ್ತೆ

Aishwarya Shindogi

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada) ಶುರುವಾಗಿ ವಾರ ಕಳೆದಿದ್ದು ಸ್ಪರ್ಧಿಗಳು ಒಬ್ಬರನೊಬ್ಬರು ಅರ್ಥ ಮಾಡಿಕೊಳ್ಳುತ್ತಿದ್ದಾರೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಬಂದ ನಂತರ ಅನಗತ್ಯ ಗಲಾಟೆ ಹತೋಟಿಗೆ ಬಂದಿದೆ. ಟಾಸ್ಕ್​ನ ಕಾವು ಏರುತ್ತಿದೆ. ಈ ವಾರ ಮನೆಯಿಂದ ಹೊರಹೋಗಲು ಎಲ್ಲ ಸ್ಪರ್ಧಿಗಳು ನಾಮಿನೇಟ್ ಕೂಡ ಆಗಿದ್ದಾರೆ. ಈ ಬಾರಿ ಮನೆಯಲ್ಲಿರುವ ಮುದ್ದು ಹುಡುಗಿಯರ ಪೈಕಿ ಐಶ್ವರ್ಯ ಸಿಂಧೋಗಿ ಕೂಡ ಒಬ್ಬರು. ದೊಡ್ಮನೆಯಲ್ಲಿ ನಗುತ್ತಾ, ಎಲ್ಲರನ್ನು ನಗಿಸುತ್ತಾ ಇರುವ ಇವರ ಲೈಫ್​ಸ್ಟೋರಿ ಕೇಳಿದ್ರೆ ನಿಜಕ್ಕೂ ಅಳು ಬರುತ್ತೆ.

ಕನ್ನಡ ಸಿನಿಮಾ ಸೇರಿದಂತೆ ಕಿರುತೆರೆಯಲ್ಲಿ ಮಿಂಚಿರುವ ಐಶ್ವರ್ಯಾ ಸಿಂಧೋಗಿ ನಮ್ಮ ಲಚ್ಚಿ, ಮಂಗಳ ಗೌರಿ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿ ಮನೆ ಮಾತಾದರು. ಇವೆರಡು ಧಾರಾವಾಹಿಯಲ್ಲದೇ ಶಾಂಭವಿ ಎಂದ ಧಾರಾವಾಹಿಯಲ್ಲಿ ಕೂಡ ಆಕ್ಟ್ ಮಾಡಿರುವ ಐಶ್ವರ್ಯ ಆಶಿಕಿ 2 ಸೇರಿ ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿಯ ಪಾತ್ರವನ್ನೂ ಕೂಡ ನಿರ್ವಹಿಸಿದ್ದಾರೆ.

ಐಶ್ವರ್ಯಾ ನಗು ಮುಖದ ಚೆಲುವೆ. ಸದ್ಯ ಬಿಗ್‌ ಬಾಸ್‌ ಮನೆಯಲ್ಲಿ ಸ್ವರ್ಗದಲ್ಲಿ ಇರುವ ಇವರು ನಿಜ ಜೀವನದಲ್ಲಿ ನರಕ ಕಂಡಿದ್ದಾರೆ. ಈ ಬಗ್ಗೆ ಅವರೇ ಹೇಳಿದ್ದು, ‘ಅಪ್ಪ – ಅಮ್ಮನಿಗೆ ನಾನು ಒಬ್ಬಳೇ ಮಗಳು. ತುಂಬಾ ಮುದ್ದಾಗಿ ನನ್ನನ್ನ ನೋಡಿಕೊಂಡಿದ್ದಾರೆ. ಅಪ್ಪ-ಅಮ್ಮನ ಜೊತೆಗೆ ಮಾತ್ರ ನಾನು ಬೆಳೆದಿದ್ದು. ಜಾಯಿಂಟ್ ಫ್ಯಾಮಿಲಿ ಕಾನ್ಸೆಪ್ಟ್ ನನಗೆ ಗೊತ್ತಿಲ್ಲ. ನಾನು ಇಂಡಿಪೆಂಡೆಂಟ್ ಗರ್ಲ್. ಮೊದಲು ನಾನು ಅಪ್ಪನನ್ನ ಕಳೆದುಕೊಂಡೆ. ವಿಷಯ ಗೊತ್ತಾದಾಗ ನನಗೆ ಕೈ ಕಾಲೇ ಆಡಲಿಲ್ಲ. ಅಮ್ಮ ಹೋದಾಗ ಇನ್ನೊಂಥರಾ ನೋವು. ಈಗ ನನ್ನ ಲೈಫ್‌ನಲ್ಲಿ ಯಾರೂ ಇಲ್ಲ’ ಎಂದು ಹೇಳಿದ್ದಾರೆ.

‘ತಂದೆ ತೀರಿಕೊಂಡ ನಂತರ ಅಪ್ಪನ ಬಿಸಿನೆಸ್ ನೋಡಿಕೊಳ್ಳಲು ಹೋದಾಗ ತುಂಬಾ ಜನ ಮೋಸ ಮಾಡಿಬಿಟ್ಟರು. ಅಪ್ಪನನ್ನು ಕಳೆದುಕೊಂಡ ಎರಡೇ ವರ್ಷದಲ್ಲಿ ತಾಯಿಯನ್ನೂ ಕಳೆದುಕೊಂಡೆ. 2018ರಲ್ಲಿ ಅಪ್ಪನಿಗೆ ಕಾರ್ಡಿಯಾಕ್ ಅರೆಸ್ಟ್ ಆಯ್ತು. ಅವರು ಸಫರ್ ಆಗೋದನ್ನ ಇಡೀ ಜೀವನದಲ್ಲಿ ನಾನು ನೋಡಿರಲಿಲ್ಲ. ಅವರು ಹೋಗುವಾಗಲೂ ನಾನು ನೋಡಲಿಲ್ಲ. ಅಮ್ಮನಿಗೆ ಆರೋಗ್ಯ ಸಮಸ್ಯೆ ಇತ್ತು. ಮಲ್ಟಿಪಲ್ ಆರ್ಗನ್ ಫೇಲ್ಯೂರ್‌ನಿಂದ 2020ರಲ್ಲಿ ಅಮ್ಮ ಮೃತಪಟ್ಟರು. ನನಗೆ ಅಕ್ಕ-ತಮ್ಮ ಅಂತ ಯಾರೂ ಇಲ್ಲ. ಅಪ್ಪ-ಅಮ್ಮನೇ ಈಗಲೂ ದಾರಿದೀಪವಾಗಿ ಎಲ್ಲವನ್ನೂ ತೋರಿಸುತ್ತಿದ್ದಾರೆ,’ ಎಂದು ತಮ್ಮ ಜೀವನದ ಕಥೆಯನ್ನು ಐಶ್ವರ್ಯ ಹೇಳಿಕೊಂಡಿದ್ದಾರೆ.

ಧರ್ಮಾ ಮೇಲೆ ಐಶ್ವರ್ಯಾಗೆ ಕಣ್ಣು?:

ಮೊದಲ ವಾರ ಯಮುನಾ ಅವರು ಐಶ್ವರ್ಯಾರನ್ನು ನೋಡಿ ‘ಧರ್ಮಾ ನರಕದ ಸೈಡ್​ಗೆ ಹೋದರೆ ಬಹಳ ಕೋಪ ಮಾಡಿಕೊಳ್ಳುತ್ತಾರೆ ಇಲ್ಲಿ’ ಎಂದು ಹೇಳಿದ್ದಾರೆ. ಆಗ ಧರ್ಮಾ ಇಷ್ಟವಾಗಲು ಕಾರಣ ತಿಳಿಸಿದ ಐಶ್ವರ್ಯ, ‘ತುಂಬಾ ಸಾಫ್ಟ್ ಆಗಿ ಮಾತಾಡ್ತೀರ, ಫ್ರೂಟ್ಸ್ ಕಟ್ ಮಾಡುವಾಗ ಮುದ್ದಾಗಿ ಮಾಡ್ತೀರ, ಯಾವಾಗ ಫುಲ್ ಬಿದ್ದೋದೆ ಅಂದ್ರೆ.. ಐ ಮೀನ್ ಬಿದ್ದೋಗಿಲ್ಲ’ ಎಂದು ಹೇಳಿ ನಾಚಿ ನೀರಾಗಿದ್ದರು. ಇದೇ ವಿಚಾರದ ಕುರಿತು ಸುದೀಪ್ ಅವರು ಯೆಸ್ or ನೋ ರೌಂಡ್​ನಲ್ಲಿ ಪ್ರಶ್ನೆಕೇಳಿದಾಗ ಕೂಡ ಐಶ್ವರ್ಯ ನಗುತ್ತಾ ನಾಚುತ್ತಿದ್ದರು.

BBK 11: ಸಿಡಿದೆದ್ದ ಜಗದೀಶ್-ಚೈತ್ರಾ ಕುಂದಾಪುರ: ನರಕ ವಾಸಿಗಳ ಆರ್ಭಟಕ್ಕೆ ಕ್ಯಾಪ್ಟನ್ ಹಂಸ ಗಪ್​ಚುಪ್