Monday, 12th May 2025

Sandalwood News: ‘ನಟ್ವರ್ ಲಾಲ್’ ಬಳಿಕ ʼನೆಪೋಲಿಯನ್ʼ ಅವತಾರ ಎತ್ತಿದ ತನುಷ್ ಶಿವಣ್ಣ

Sandalwood News

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಹೊಸಬರು ಛಾಪು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ʼನಟ್ವರ್ ಲಾಲ್ʼ (Natwarlal) ಚಿತ್ರದ ಮೂಲಕ ಗಮನ ಸೆಳೆದ ತನುಷ್ ಶಿವಣ್ಣ (Tanush Shivanna) ಮತ್ತೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೊಸ ಸಿನಿಮಾಕ್ಕೆ ʼನೆಪೋಲಿಯನ್ʼ ಎಂದು ಹೆಸರಿಡಲಾಗಿದೆ (Sandalwood News).

‘ನಟ್ವರ್ ಲಾಲ್’ ಚಿತ್ರದಲ್ಲಿ ತನುಷ್ ಶಿವಣ್ಣ ಮತ್ತು ಸೋನಾಲ್ ಮೊಂತೆರೊ ಜೋಡಿಯಾಗಿ ನಟಿದ್ದರು. ಚಿತ್ರ ಜನಮನಸೂರೆಗೊಂಡಿತ್ತು. ಅಮೇಜಾನ್ ಪ್ರೈಮ್‌ನಲ್ಲೂ ಈ ಸಿನಿಮಾವನ್ನು ಅಧಿಕ ಸಂಖ್ಯೆಯ ಜನರು ‌ವೀಕ್ಷಿಸುತ್ತಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ತನುಷ್ ಶಿವಣ್ಣ ನಾಯಕನಾಗಿ ನಟಿಸುತ್ತಿರುವ ಮತ್ತೊಂದು ಚಿತ್ರದ ಘೋಷಣೆಯಾಗಿರುವುದು ವಿಶೇಷ.

ಸಂಕ್ರಾಂತಿ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ʼನೆಪೋಲಿಯನ್ʼ ಚಿತ್ರವನ್ನು ʼನಟ್ವರ್ ಲಾಲ್ʼ ಸಿನಿಮಾದ ನಿರ್ದೇಶಕ ಲವ ವಿ. ಅವರೇ ನಿರ್ದೇಶಿಸುತ್ತಿದ್ದಾರೆ‌. ಕಿಚ್ಚ ಸುದೀಪ್‌ ಅಭಿನಯದ  ʼವಿಕ್ರಾಂತ್ ರೋಣʼ ಖ್ಯಾತಿಯ ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ ಹಾಗೂ ʼಮಾರ್ಟಿನ್ʼ ಖ್ಯಾತಿಯ ಮಹೇಶ್ ಅವರ ಸಂಕಲನ ಈ ನೂತನ ಚಿತ್ರಕ್ಕಿದೆ. ಮುಂದಿನ ತಿಂಗಳ ಮಧ್ಯದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಕರ್ನಾಟಕದ ಅನೇಕ‌ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಶೋಷಿತ ಹೆಣ್ಣುಮಕ್ಕಳ ಪರ ಧ್ವನಿ ಎತ್ತುವ ಕಥಾಹಂದರ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ದ್ಯಾವಿಪ್ರಸಾದ್ ಸಂಗೀತ ನೀಡುತ್ತಿದ್ದಾರೆ‌. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ.

ತನುಷ್ ನಟನಾಗಿ ಮಾತ್ರವಲ್ಲ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. 2016ರಲ್ಲಿ ತೆರೆಕಂಡ ʼಮಡಮಕ್ಕಿʼ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದ ಅವರು, ʼನಂಜುಂಡಿ ಕಲ್ಯಾಣʼ ಹಾಗೂ ʼನಟ್ವರ್ ಲಾಲ್ʼ ಮುಂತಾದ  ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.

Leave a Reply

Your email address will not be published. Required fields are marked *