Actress Shabhavi: ‘ಸಲಗ’, ‘ಕೆಜಿಎಫ್’ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿರುವ ‘ಅಮೃತಧಾರೆ’ ಸೀರಿಯಲ್‌ನ(Small screen) ಮಾನ್ಯ ಖ್ಯಾತಿಯ ನಟಿ ಶಾಂಭವಿ (Actress Shambhavi) ಬಾಳಲ್ಲಿ ಬರಸಿಡಿಲು ಬಡಿದಿದೆ. ನಿಜ ಜೀವನದಲ್ಲಿ ಅವಳಿ ಮಕ್ಕಳಿಗೆ ನಟಿ ಶಾಂಭವಿ ತಾಯಿಯಾಗಿದ್ದಾರೆ. ಶಾಂಭವಿ ಅವರ ಅವಳಿ ಮಕ್ಕಳ ಪೈಕಿ ಒಂದು ಮಗು ಕ್ಯಾನ್ಸರ್‌ನಿಂದ ಬಳಲುತ್ತಿದೆ. 3 ವರ್ಷದ ತಮ್ಮ ಮಗ ಬ್ಲಡ್ ಕ್ಯಾನ್ಸರ್(Cancer)ನಿಂದ ಬಳಲುತ್ತಿರುವ ಆಘಾತಕಾರಿ ಸಂಗತಿಯನ್ನ ನಟಿ ಶಾಂಭವಿ ಈ ಹಿಂದೆಯೇ ಬಹಿರಂಗ ಪಡಿಸಿದ್ದರು.
ಕಿರುತೆರೆ ನಟಿ ಶಾಂಭವಿ ತನ್ನಿಬ್ಬರು ಅವಳಿ ಮಕ್ಕಳಲ್ಲಿ ಮಗ ದುಷ್ಯಂತ್‌ಗೆ ಬ್ಲಡ್ ಕ್ಯಾನ್ಸರ್ ಇರುವ ವಿಷಯವನ್ನು ಅಭಿಮಾನಿಗಳ ಜತೆ ಬಹಳ ನೋವಿನಿಂದಲೇ ಹಂಚಿಕೊಂಡಿದ್ದರು. ಇದೀಗ ಆಘಾತಕಾರಿ ರೋಗಕ್ಕೆ ತುತ್ತಾಗಿರುವ ದುಷ್ಯಂತ್‌ನ ಕೂದಲು ತೆಗೆಯುವ ಭಾವನಾತ್ಮಕ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಏಕೆ ತನ್ನ ಕೂದಲು ತೆಗೆಯಲಾಗುತ್ತಿದೆ ಎಂಬ ವಿಷಯ ಈ ಮೂರು ವರ್ಷದ ಕಂದಮ್ಮಗೆ ತಿಳಿದಿಲ್ಲ. ಮಗನಿಗೆ ಬೇಜಾರು ಆಗಬಾರದೆಂಬ ಕಾರಣಕ್ಕೆ ತಂದೆಯೂ ಸಹ ತಲೆ ಬೋಳಿಸಿಕೊಂಡಿದ್ದಾರೆ. ಈ ವಿಡಿಯೊ ನೋಡಿದ ಶಾಂಭವಿ ಅಭಿಮಾನಿಗಳು, ಯಾವ ತಾಯಿಗೂ ಇಂಥ ಕಷ್ಟ ಬಾರಬಾರದಪ್ಪಾ ಎಂದು ಕೈ ಮುಗಿದು ದೇವರಲ್ಲಿ ಪ್ರಾರ್ಥಿಸಿಕೊಂಡು ನಟಿಗೆ ಧೈರ್ಯ ತುಂಬಿದ್ದಾರೆ.
ಹೌದು, ಕಿರುತೆರೆ ನಟಿ ಶಾಂಭವಿ ವರಿಗೆ ಅವಳಿ ಮಕ್ಕಳು. ಒಂದು ಗಂಡು ಮಗು ಮತ್ತೊಂದು ಹೆಣ್ಣು ಮಗು. ಶಾಂಭವಿ ಅವರ ಮಕ್ಕಳಿಗೆ ಈಗಾಗಲೇ ಮೂರು ವರ್ಷ ವಯಸ್ಸು. ಶಾಂಭವಿ ಅವರು ತಮ್ಮ ಮನೆಯಲ್ಲಿ ಪೂಜೆ ನಡೆದರೆ, ಹಬ್ಬವಾದರೆ, ಊರಿಗೆ ಹೋದಾಗ ಹೀಗೆ ಪ್ರತಿಯೊಂದು ವಿಚಾರವನ್ನೂ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿರುವ ಶಾಂಭವಿ ಅವರು ಆಗಾಗ ತಮ್ಮ ಶೂಟಿಂಗ್ ಬಗ್ಗೆಯೂ ಮಾಹಿತಿ ನೀಡುತ್ತಿರುತ್ತಾರೆ. ಮಕ್ಕಳಿಗೆ ಹೆಚ್ಚು ಸಮಯವನ್ನು ನೀಡುತ್ತಿರುತ್ತಾರೆ.
ತಮ್ಮ ಸಮಯವನ್ನು ಮಕ್ಕಳಿಗಾಗಿ ಮೀಸಲಿಡುತ್ತಿದ್ದ ಶಾಂಭವಿ ಅವರು ಮಕ್ಕಳಾದ ದುರ್ಗಾ ಮತ್ತು ದುಶ್ಯಂತ್‌ಗೆ ಶ್ಲೋಕ ಹೇಳಿ ಕೊಡುವುದು, ಡ್ರಾಯಿಂಗ್, ಪೇಂಟಿಂಗ್, ಆಟ ಪಾಠ ಗಳಲ್ಲಿ ಜೊತೆಯಾಗುತ್ತಿದ್ದರು.
ಆದರೆ ಇದೀಗ ಶಾಂಭವಿ ಅವರು ಬಹಳ ಕಷ್ಟದ ದಿನಗಳನ್ನು ಕಳೆಯುತ್ತಿದ್ದು, ಶಾಂಭವಿ ಅವರ ಅವಳಿ ಮಕ್ಕಳ ಪೈಕಿ ಒಂದು ಮಗು ಕ್ಯಾನ್ಸರ್ ರೋಗದಿಂದ ಬಳಲುತ್ತಿದೆ. ಅದರ ಚಿಕಿತ್ಸೆಯ ವಿಡಿಯೊವನ್ನು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ದುಷ್ಯೂಗೆ ತನ್ನ ತಲೆಗೂದಲು ತುಂಬಾ ಇಷ್ಟವಾಗಿತ್ತು. 3 ವರ್ಷದ ಇವನು ಹೇರ್ ಕಟಿಂಗ್ ಸಮಯದಲ್ಲಿ ಇಲ್ಲಿ ಲೈನ್ ಬೇಕು ಅಲ್ಲಿ ಲೈನ್ ಬೇಕು ಅಂತ ಕಿವಿಯ ಅಕ್ಕ-ಪಕ್ಕ ಲೈನ್ ಹಾಕಿಸ್ಕೊಳ್ತಿದ್ದನು. ಕಿಮೋಥೆರಪಿಯ ಹಲವಾರು ಸೈಡ್ ಎಫೆಕ್ಟ್‌ನಲ್ಲಿ ಕೂದಲು ಉದುರುವದು ಕೂಡ ಒಂದು. ಥೆರಪಿಯ ಸೆಕೆಂಡ್ ಸೈಕಲ್‌ನಲ್ಲಿ ಶುರುವಾದ ಹೇರ್ ಫಾಲ್, ನೋಡ್ – ನೋಡ್ತಿದ್ದಂತೆ 24 ಗಂಟೆಗಳಲ್ಲಿ ಮನೆ ತುಂಬಾ ದುಷ್ಯೂ ಕೂದಲು ಹರಡೋಕೆ ಶುರುವಾಯ್ತು. ಮಗುವನ್ನ ಹೆಡ್ ಶೇವಿಂಗ್ ಮಾಡೋದಕ್ಕೆ ಒಪ್ಪಿಸೋದು ಕಷ್ಟದ ವಿಚಾರವಾಗಿತ್ತು. ಹೀಗಾಗಿ ಅವರಪ್ಪ ಕೂದಲು ತೆಗಿಸಿದರು, ಅವರನ್ನ ನೋಡಿ ದೂಷ್ಯು ಕೂಡ ಹೊಸ ಹೇರ್ ಸ್ಟೈಲ್ ಮಾಡಿಸ್ಕೋತಿನಿ ಅಂತಾ ಹೇಳ್ತಾ ಕೂದಲು ತೆಗೆಯೋಕೆ ಒಪ್ಪಿಕೊಂಡ. ಈಗ ನಮ್ಮ ಗುಂಡಣ್ಣ, ಮರಿ ಗೂಂಡಾ ಥರಾ ಕಾಣುತ್ತಿದ್ದಾನೆ ಎಂದು ಶಾಂಭವಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆಯೇ ಶಾಂಭವಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಮಗ ಕ್ಯಾನ್ಸರ್‌ನಿಂದ ಬಳಲುತ್ತಿರುವ ಕುರಿತು ಹಂಚಿಕೊಂಡಿದ್ದರು. ತಮ್ಮ ಮಗ ದುಶ್ಯಂತ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾನೆ ಎಂದು ತಿಳಿಸಿದ್ದರು. ನಾಲ್ಕು ದಿನಗಳ ಹಿಂದೆ ಮಗನ ತಲೆ ಕೂದಲು ಉದುರುತ್ತಿದ್ದು, ಶೇವ್ ಮಾಡುವ ಸಮಯ ಬಂದಿದೆ ಎಂದಿದ್ದರು. ಆದರೆ ಇದು ಯಾರಿಗೂ ಅರ್ಥವಾಗಿರಲಿಲ್ಲ. ಕೆಳ ದಿನಗಳ ಬಳಿಕ ಫೋಟೊ ಮತ್ತು ವೀಡಿಯೋ ಪೋಸ್ಟ್ ಮಾಡಿದ್ದರು.
ಧೈರ್ಯ ತುಂಬಿದ ನೆಟ್ಟಿಗರು
ಈ ವಿಡಿಯೋಗೆ ಕಮೆಂಟ್ ಮಾಡಿರುವ ಅಭಿಮಾನಿಗಳು, ರಾಯರಿದ್ದಾರೆ, ಅಕ್ಕ ಯೋಚನೆ ಮಾಡಿ. ನಿಮ್ಮ ಮಗ ಗುಣಮುಖನಾಗುತ್ತಾನೆ. ಬೇಗ ಹುಷಾರಾಗಿ ನೂರಾರು ಕಾಲ ಚೆನ್ನಾಗಿರು ಕಂದಮ್ಮ. ಆ ಮಂಜುನಾಥಸ್ವಾಮಿ ಆಶೀರ್ವಾದ ನಿನ್ನ ಮೇಲಿರಲಿ. ಮಗನೇ ನಿನಗೆ ಏನು ಆಗೋಲ್ಲ ಬಂಗಾರಿ ಬೇಗ ಹುಷಾರು ಆಗಿತ್ತಿಯಾ. ಸ್ಟ್ರಾಂಗ್ ಆಗಿರು ಕಂದ. ನಿನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಸುದ್ದಿಯನ್ನು ಓದಿ: LIC Scholarship: ಎಲ್‌ಐಸಿಯಿಂದ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್, ಯಾರು ಅರ್ಜಿ ಸಲ್ಲಿಸಬಹುದು?