Wednesday, 14th May 2025

ಅಸ್ವಸ್ಥರಾದ ನಟಿ ಸಮಂತಾ: ಎಐಜಿ ಆಸ್ಪತ್ರೆಗೆ ದಾಖಲು

Samantha

ಹೈದರಾಬಾದ್‌ : ಟಾಲಿವುಡ್ ಸ್ಟಾರ್ ನಟಿ ಸಮಂತಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಸಮಂತಾ ಅವರನ್ನು ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.

ಕಳೆದ ಭಾನುವಾರ ತಿರುಪತಿಗೆ ತೆರಳಿದ್ದ ಸಮಂತಾ ಸ್ಥಳೀಯ ಹವಾಮಾನದಿಂದಾಗಿ ಅಸ್ವಸ್ಥರಾಗಿದ್ದಾರೆ ಎನ್ನಲಾಗಿದ್ದು, ಮುನ್ನೆಚ್ಚರಿಕೆಯಾಗಿ ಆರೋಗ್ಯ ತಪಾಸಣೆಗಾಗಿ ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.