Tuesday, 13th May 2025

’ಯಜಮಾನ’ನ ಅವಹೇಳನಕಾರಿ ಹೇಳಿಕೆಗೆ ನಟಿ ರಕ್ಷಿತಾ ಗರಂ

ಬೆಂಗಳೂರು : ಪತಿ ಪ್ರೇಮ್‌ ಬಗ್ಗೆ ನಟ ದರ್ಶನ್ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಅಸಮಾಧಾನ ವ್ಯಕ್ತ ಪಡಿಸಿರುವ ನಟಿ ರಕ್ಷಿತಾ, ಇನ್ನೊಬ್ಬ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ಮಾತನಾಡುವ ಮುನ್ನ ತಮ್ಮ ಜೀವನದಲ್ಲಿ ಏನಾಗಿದ್ದಾರೆ ಎಂದು ನೋಡಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಕ್ಷಿತಾ ಪ್ರೇಮ್, ಜನಗಳ ಮುಂದೆ ಏನು ಮಾತನಾಡಬೇಕು, ಹೇಗೆ ಮಾತನಾಡಬೇಕು ಎಂದು ಅರಿತುಕೊಳ್ಳ ಬೇಕು ಎಂದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ.

”ಮುಖ ಇಲ್ಲದ ಫೇಸ್‌ಬುಕ್ ಪ್ರೊಫೈಲ್‌ಗಳು ನನ್ನನ್ನು ಟಾರ್ಗೆಟ್ ಮಾಡುತ್ತಿವೆ ಏಕೆ? ನಾನು, ನನ್ನ ಪತಿ ಪ್ರೇಮ್ ಪರ ಬೆಂಬಲಕ್ಕೆ ನಿಂತಿದ್ದೇನೆ. ನಾನು ನನ್ನ ಪತಿಯ ಪರವಾಗಿ ನಿಂತರೆ ಉಳಿದವರನ್ನು ವಿರೋಧಿಸುತ್ತೇನೆ ಎಂದು ಹೇಗೆ ಪರಿಗಣಿಸಿದಿರಿ” ಎಂದು ಪ್ರಶ್ನೆ ಮಾಡಿದ್ದಾರೆ.

”ಈಗ ನಮ್ಮ ಮದುವೆ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಲು ಹೊರಟಿರುವ ಎಲ್ಲರಿಗೂ ನಾಚಿಕೆಯಾಗಬೇಕು” ಎಂದಿದ್ದಾರೆ ರಕ್ಷಿತಾ. ನಿನ್ನೆ ಮಾಧ್ಯಮಗಳೊಟ್ಟಿಗೆ ಆಕ್ರೋಶದಿಂದ ಮಾತನಾಡಿದ್ದ ನಟ ದರ್ಶನ್, ‘ಜೋಗಿ ಪ್ರೇಮ್ ಏನು ದೊಡ್ಡ ಪುಡುಂಗಾ? ಅನಿಗೆ ಎರಡು ಕೊಂಬಿದ್ಯಾ? ಎಂದು ಆಕ್ರೋಶದಿಂದ ಪ್ರಶ್ನಿಸಿದ್ದರು. ಇದು ನಿರ್ದೇಶಕ ಪ್ರೇಮ್ ಹಾಗೂ ಅವರ ಪತ್ನಿ ರಕ್ಷಿತಾ ಅಸಮಾಧಾನಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *