Wednesday, 14th May 2025

ಸರ್ಪ್ರೈಸ್​ ನೀಡಿದ ಕಾಜಲ್ ಅಗರ್ವಾಲ್, ಹಸೆಮಣೆ ಏರಲು ಡೇಟ್ ಫಿಕ್ಸ್

ಹೈದರಾಬಾದ್: ಟಾಲಿವುಡ್​ ನಟಿ ಕಾಜಲ್​ ಅಗರ್​ವಾಲ್ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ.

ಉದ್ಯಮಿ, ಇಂಟಿರಿಯರ್​ ಡಿಸೈನರ್​, ಟೆಕ್​ ಮತ್ತು ವಿನ್ಯಾಸ ಉತ್ಸಾಹಿ ಗೌತಮ್​ ಕಿಟ್ಚ್ಲು ಎಂಬು ವವರನ್ನು ಕಾಜಲ್​ ವರಿಸಲಿದ್ದಾ ರಂತೆ ಎಂದು ಹೇಳಲಾಗಿತ್ತು. ಇದೀಗ ಸ್ವತಃ ಕಾಜಲ್ ಸರ್ಪ್ರೈಸ್​ ನೀಡಿದ್ದಾರೆ.​ ನಾವು ಮದುವೆಯಾಗುತ್ತಿರುವುದು ನಿಜ ಎಂದು ಖಚಿತಪಡಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಅಕ್ಟೋಬರ್​ 30ರಂದು ಮುಂಬೈನಲ್ಲಿ ಗೌತಮ್​ ಕಿಟ್ಚ್ಲು ಅವರನ್ನು ಮದುವೆಯಾಗುತ್ತಿರುವ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸಂತಸವಾಗುತ್ತಿದೆ. ಎರಡು ಕುಟುಂಬ ಮತ್ತು ಆಪ್ತರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳ ಲಿದ್ದಾರೆ. ನೀವೆಲ್ಲರೂ ಸಹ ನಮಗೆ ಒಳ್ಳೆಯ ಮನಸ್ಸಿನಿಂದಲೇ ಹಾರೈಸುತ್ತಿರಾ ಎಂದು ತಿಳಿದಿದ್ದೇನೆ.

ಹಲವು ವರ್ಷಗಳವರೆಗೆ ನೀವು ತೋರಿದ ಅಭಿಮಾನಕ್ಕೆ ಧನ್ಯವಾದಗಳು. ನಿಮ್ಮನ್ನು ಮನ ರಂಜನೆ ಮಾಡುವುದನ್ನು ಸಹ ನಾನು ಮುಂದುವರಿಸುತ್ತೇನೆ. ಅಂತ್ಯವಿಲ್ಲದ ಬೆಂಬಲ ನೀಡು ತ್ತಿರುವ ನಿಮಗೆ ನನ್ನ ಧನ್ಯವಾದಗಳು ಎಂದು ಕಾಜಲ್​ ತಿಳಿಸಿದ್ದಾರೆ.

Leave a Reply

Your email address will not be published. Required fields are marked *