Monday, 12th May 2025

ನಟ ಪೃಥ್ವಿ ಅಂಬಾರ್‌’ಗೆ ಮಾತೃವಿಯೋಗ

ಮಂಗಳೂರು: ದಿಯಾ ಖ್ಯಾತಿಯ ನಟ ಪೃಥ್ವಿ ಅಂಬಾರ್‌ ಅವರ ತಾಯಿ ಸುಜಾತ ವೀರಪ್ಪ ಅಂಬರ್ ಹೃದಯ ಸಂಬಂಧಿ ಕಾಯಿಲೆಯಿಂದ ಮಂಗಳೂರಿನಲ್ಲಿ ನಿಧನರಾದರು.

ಜು.15 ರಂದು ಮಂಗಳೂರಿನಲ್ಲಿ ನಿಧನರಾಗಿದ್ದಾರೆ. ಕಾಸರಗೋಡಿನ ಉಪ್ಪಳ ಸಮೀಪದ ಐಲದಲ್ಲಿ ಅಂತ್ಯಕ್ರಿಯೆ ನಡೆಯಲಿದೆ  ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸುಜಾತ ಅವರು ವೀರಪ್ಪ ಅಂಬರ್ ಅವರ ಧರ್ಮಪತ್ನಿ. ಅವರು ಹಲವು ರೀತಿಯ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಪುತ್ರ ನಟ ಪೃಥ್ವಿ ಅಂಬರ್‌ ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದು, ದಿಯಾ ಸಿನಿಮಾ ಮೂಲಕ ಸಾಕಷ್ಟು ಹೆಸರು ಮಾಡಿ ದ್ದಾರೆ. ಇತ್ತೀಚೆಗೆ ತೆರೆ ಕಂಡ ಬೈರಾಗಿ ಮತ್ತು ಶುಗರ್ ಲೆಸ್ ಚಿತ್ರದಲ್ಲಿ ಪೃಥ್ವಿ ಅಂಬರ್ ನಟಿಸಿ ದ್ದಾರೆ.