Wednesday, 14th May 2025

52 ಲಕ್ಷ ರೂ. ಮರಳಿಸುವಂತೆ ನಟ ದ್ವಾರಕೇಶ್’ಗೆ ಸೂಚನೆ

Dwarakeesh

ಬೆಂಗಳೂರು: ಕೆಸಿಎನ್ ಚಂದ್ರಶೇಖರ್ ಅವರಿಂದ ಸಾಲವಾಗಿ ಹಿರಿಯ ನಟ ದ್ವಾರಕೀಶ್ ಅವರು ಪಡೆದಿದ್ದ 52 ಲಕ್ಷ ರೂಪಾಯಿ ಯನ್ನು ತಿಂಗಳೊಳಗಾಗಿ ಮರಳಿಸುವಂತೆ ಹಿರಿಯ ನಟ ದ್ವಾರಕೇಶ್ ಅವರಿಗೆ ಕೋರ್ಟ್ ಸೂಚಿಸಿದೆ.

ಈ ಸಂಬಂಧ ಕೆಸಿಎನ್ ಚಂದ್ರಶೇಖರ್ ಅವರು ಸೆಷನ್ ಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದಿ ರುವ ಕೋರ್ಟ್, ಸಾಲದ ಹಣ ಮರಳಿಸುವಂತೆ ಸೂಚಿಸಿದೆ.

2013ರಲ್ಲಿ ಹಿರಿಯ ನಟ ದ್ವಾರಕೀಶ್ ಅವರು ಕೆಸಿಎನ್ ಚಂದ್ರಶೇಖರ್ ಅವರಿಂದ 50 ಲಕ್ಷ ಸಾಲ ಪಡೆದಿದ್ದರು. ಇದಕ್ಕಾಗಿ ಚೆಕ್ ನೀಡಿದ್ದರು. ಸಾಲ ವಾಪಾಸ್ ನೀಡದೇ ಇದ್ದಾಗ ಕೆಸಿಎನ್ ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿದ್ದರು.

ನಟ ದ್ವಾರಕೀಶ್, ತಾನು ಚೆಕ್ ನೀಡಿಲ್ಲ. ಚೆಕ್ ನಲ್ಲಿ ಮಾಡಿರುವ ಸಹಿ ಕೂಡ ನನ್ನದಲ್ಲ ಎಂಬುದಾಗಿ ವಾದಿಸಿದ್ದರು. ಹೀಗಾಗಿ ಕೆಸಿಎನ್ ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿ ದ್ದರು.