ಬಹಳ ದೊಡ್ಡ ಶ್ರೀಮಂತನೊಬ್ಬನಿದ್ದ.ಅವನಿಗೆ ಸಂಪತ್ತನ್ನು ಅತಿಯಾಗಿ ಕೂಡಿಡುವ ಅಭ್ಯಾಸ. ತನ್ನ ಸಂಪತ್ತಿನ ಲೆಕ್ಕವನ್ನು ಇಡುತಿದ್ದ, ಲೆಕ್ಕಿಗನನ್ನು ಕರೆದು, ತನ್ನ ಆಸ್ತಿ ಎಷ್ಟಿರಬಹುದೆಂಬುದರ ಲೆಕ್ಕಾಚಾರ ವನ್ನು ಮಾಡುವಂತೆ ಅವನಿಗೆ ಹೇಳಿದ. ಶ್ರೀಮಂತನ ಆಸ್ತಿಯ ಎಲ್ಲ ಲೆಕ್ಕಾಚಾರವನ್ನು ಮಾಡಿದ ಅವನ ಕಾರ್ಯದರ್ಶಿ ನೀವೇನೂ ಚಿಂತಿಸುವಂತಿಲ್ಲ, ನಿಮ್ಮ ಆಸ್ತಿ, ಹತ್ತು ತಲೆಮಾರು ಕುಳಿತು ತಿನ್ನುವಷ್ಟು ಇದೆ ಎಂದು ಹೇಳಿದ. ಆಗ ಶ್ರೀಮಂತ, ಏನೋ ಆದವನಂತೆ, ತಲೆಯ ಮೇಲೆ ಕೈ ಹೊತ್ತು ಕುಳಿತು ಹತ್ತು ತಲೆ ಮಾರಿನವರೇನೋ ಕುಳಿತು ತಿನ್ನಬಹುದು, ಆದರೆ ಅದರ […]