Thursday, 15th May 2025

60 ಸಾವಿರ ಲಂಚ ಸ್ವೀಕಾರ: ಮುಖ್ಯ ಇಂಜನಿಯರ್‌ ಲೋಕಾಯುಕ್ತ ಬಲೆಗೆ

ಶಿರಸಿ: ಕೆಲಸ ಮಾಡಿಕೊಡುವುದಾಗಿ ವ್ಯಕ್ತಿಯೋರ್ವನಿಂದ 60 ಸಾವಿರ ಲಂಚ ಪಡೆಯುತ್ತಿರುವಾಗ ಹಣದ ಸಮೇತ ಹೊನ್ನಾವರದ ಪಟ್ಟಣ ಪಂಚಾ ಯತಿ ಮುಖ್ಯ ಇಂಜನಿಯರ ಪ್ರವೀಣ್‌ ಕುಮಾರ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಲೋಕಾಯುಕ್ತ ಎಸ್ ಪಿ ಕುಮಾರ ಚಂದ್ ಮಾರ್ಗದರ್ಶನದಲ್ಲಿ ಕಾರವಾರದ ಲೋಕಾಯುಕ್ತ ಇಸ್ಪೆಕ್ಟರ್ ವಿನಾಯಕ್ ಬಿಲ್ಲವರವರ ನೇತೃತ್ವದಲ್ಲಿ ದಾಳಿ ನಡೆದಿದ್ದು ಹಣದ ಸಮೇತ ಕಚೇರಿಯಲ್ಲಿ ವಶಕ್ಕೆ ಪಡೆದು ಹೊನ್ನಾವರ ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಖಲೆ ಪರಿಶಿಲಿಸುತಿದ್ದು, ಕಾರವಾರ ಲೋಕಾಯುಕ್ತ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ

‘ವಿಶ್ವ ದಾಖಲೆ’ ಸೇರಿದ ‘ತುಳಸಿ’ ಹೆಗಡೆ

ಶಿರಸಿ: ಅತ್ಯಂತ‌ ಕಿರಿಯ ವಯಸ್ಸಿನಲ್ಲೇ ವಿಶ್ವಶಾಂತಿಗೆ ಯಕ್ಷ ನೃತ್ಯ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ ದಾಖಲಾಗಿದೆ. ಲಂಡನ್...

ಮುಂದೆ ಓದಿ

ಶಿರಸಿ ಮೂಲದ ಪ್ರತಿಭೆಗೆ ಒಲಿದ ಪ್ರಶಸ್ತಿ: ಡಾ.ಶೃತಿ ಹೆಗಡೆ ವಿಶ್ವ ಸುಂದರಿ 2024

ಶಿರಸಿ: ಶಿರಸಿ ತಾಲೂಕಿನ ಮುಂಡಿಗೆಸರ ಮೂಲದ ಹುಬ್ಬಳ್ಳಿಯ ಯುವತಿಯೊಬ್ಬಳು ಇತ್ತೀಚಿಗೆ ಅಮೇರಿಕಾದಲ್ಲಿ ಜರುಗಿದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತಳಾಗಿದ್ದಾಳೆ. ಮುಂಡಿಗೆಸರ ಅಜ್ಜೊರಮನೆ ಕುಟುಂಬದವರಾದ ಹುಬ್ಬಳ್ಳಿಯಲ್ಲಿ ನೆಲೆಸಿದ ಕೃಷ್ಣ ಹೆಗಡೆ,...

ಮುಂದೆ ಓದಿ

ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು

ಶಿರಸಿ/ಕಾರವಾರ: ಭಾರಿ ಮಳೆಗೆ ಮಣ್ಣಿನ ಗೋಡೆ ಕುಸಿದು ವೃದ್ಧೆ ಮೃತಪಟ್ಟಿರುವ ಘಟನೆ ಕಾರವಾರದ ಅಸ್ನೋಟಿಯ ಆರವ ಗ್ರಾಮದ ತೋರ್ಲೆಭಾಗ ದಲ್ಲಿ ಶುಕ್ರವಾರ ನಡೆದಿದೆ. ಗುಲಾಬಿ ರಾಮಚಂದ್ರ ಮಾಂಜ್ರೇಕರ್...

ಮುಂದೆ ಓದಿ

ಪ್ರತ್ಯೇಕ ಒಕ್ಕೂಟ ಮಾಡುವ ಉದ್ದೇಶ

ಶಿರಸಿ: ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಮುಂದಿನ ದಿನದಲ್ಲಿ 70 ಸಾವಿರ ಲೀಟರ್ ಹಾಲಿನ ಉತ್ಪಾದನೆ...

ಮುಂದೆ ಓದಿ

ಮಳೆಗೆ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ತೊಂದರೆ

ಶಿರಸಿ: ಬುಧವಾರ ಸುರಿದ ಮಳೆಯಿಂದಾಗಿ ರಾತ್ರಿ ಸುಮಾರು 9 ಗಂಟೆಯ ಸಮಯದಲ್ಲಿ ಹೊನ್ನಾವರ ಗೇರುಸೊಪ್ಪ (ಭಾಸ್ಕೇರಿ ) ಬಳಿ ಗುಡ್ಡ ಕುಸಿದು ರಸ್ತೆ ಸಂಚಾರಕ್ಕೆ ತೊಂದರೆಯಾಗಿದ್ದು, ಸಾರ್ವಜನಿಕರ...

ಮುಂದೆ ಓದಿ

ರಾಜ್ಯಮಟ್ಟದ ಸಮ್ಮೇಳನದಲ್ಲಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಶ್ರೀ ಭಾಗಿ

ಶಿರಸಿ: ಒಂದು ದಿನದ ರಾಜ್ಯ ಮಟ್ಟದ ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಸಮ್ಮೇಶನ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಭಾನುವಾರ ನೆರವೇರಿತು....

ಮುಂದೆ ಓದಿ

ಶಾಸಕರಾದ ಭೀಮಣ್ಣ ನಾಯ್ಕ್ ರನ್ನು ಸೂಪರ್‌ ವೈಸರ್ ಎಂದು ಕರೆದ ಬಿಜೆಪಿಗರಿಗೆ ಧನ್ಯವಾದಗಳು

ಶಿರಸಿ: ದಶಕಗಳ ಕಾಲ ಶಿರಸಿ ಸಿದ್ದಾಪುರ ಕ್ಷೇತ್ರ ವಿಐಪಿ ಸಂಸ್ಕೃತಿಯ ಶಾಸಕರಿಂದ ಬೇಸತ್ತಿದ್ದೂ, ಈ ಬಾರಿ ಜನಗಳೇ ತಮ್ಮ ಸೂಪರ್‌ ವೈಸರ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಾತಿ ಧರ್ಮಗಳ...

ಮುಂದೆ ಓದಿ

ಪೆಟ್ರೊಲ್ ಡೀಸೆಲ್ ಬೆಲೆ ಇಳಿಸಿ: ಬಿಜೆಪಿ ಪ್ರತಿಭಟನೆ

ಶಿರಸಿ: ಇಳಿಸಿ ಇಳಿಸಿ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಇಳಿಸಿ, ದರ ಏರಿಕೆ ಮಾಡಿದ ಪೆಟ್ರೊಲ್ ಡೀಸೆಲ್ ಬೆಲೆ ಇಳಿಸಿ ಎಂದು ಶಿರಸಿ ನಗರದ ಐದು ರಸ್ತೆ ಯಲ್ಲಿ...

ಮುಂದೆ ಓದಿ

NIA ತಂಡದ ವಶಕ್ಕೆ ಅಬ್ದುಲ್ ಸುಕ್ಕೂ‌ರ್: ತನಿಖೆ ಚುರುಕು

ಕಾರವಾರ: ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್ ಪೋರ್ಟ್‌ನಲ್ಲಿ ನಕಲಿ ದಾಖಲೆ ನೀಡಿರುವ ಆರೋಪದಡಿ ದುಬೈನಿಂದ ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ದಾಸನಕೊಪ್ಪಕ್ಕೆ ಬಕ್ರಿದ್...

ಮುಂದೆ ಓದಿ