ವಿರೇಂದ್ರ ಪಾಟೀಲ್, ಕಾರಟಗಿ
ಏಳು ತಿಂಗಳಿನಿಂದ ಕಾರಟಗಿ ಪುರಸಭೆಯ ಗುತ್ತಿಗೆ ನೌಕರರಿಗೆ, ಚಾಲಕರಿಗೆ ಸಿಕ್ಕಿಲ್ಲ ವೇತನ
ಕಾರಟಗಿ: ಇಲ್ಲಿನ ಪುರಸಭೆಯ ವಿವಿಧ ವಾಹನಗಳ ಗುತ್ತಿಗೆ ಆಧಾರಿತ ಚಾಲಕರು ವೇತನಕ್ಕಾಗಿ ಪರದಾಡುತ್ತಿದ್ದು, ಬಾಕಿ ಹಣ ನೀಡುವಂತೆ ಅಂಗಲಾಚುತ್ತಿದ್ದಾರೆ. ಮತ್ತೊಂದೆಡೆ ಗುತ್ತಿಗೆ ಅವಧಿ ಮುಗಿದಿದ್ದು, ನವೀಕರಣ ಮಾಡದೇ ಚಾಲಕರಿಂದ ಸೇವೆ ಪಡೆಯುತ್ತಿದ್ದಾರೆ. ಇದರಿಂದ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ.
ಕಾರಟಗಿ ಪುರಸಭೆಯ ಟ್ರಾಕ್ಟರ್, ಆಟೋ, ಟಿಪ್ಪರ್, ಜೆಸಿಬಿ ವಾಹನ ಚಾಲಕರ ಪರದಾಡುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಪುರಸಭೆ ಈ ಎಲ್ಲ ಚಾಲಕರಿಗೆ ಕಳೆದ ಏಳು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ. ಧರ್ಮಸ್ಥಳ ಸಂಸ್ಥೆಯ ಮಹಿಳಾ ಗುಂಪುಗಳಲ್ಲಿ ಸಾಲ ಪಡೆದು ಮಕ್ಕಳ ಶಾಲಾ ಶುಲ್ಕ ಪಾವತಿ ಮಾಡಿದ್ದೇವೆ ಎಂದು ಪುರಸಭೆಯ ಮುಂದೆ ಸೋಮವಾರ ಚಾಲಕರು ತಮ್ಮ ಅಳಲು ತೊಡಿಕೊಂಡರು. ವೇತನ ನೀಡುವಂತೆ ಅಧಿಕಾರಗಳಲ್ಲಿ ಮನವಿ ಮಾಡಿಕೊಂಡರ.
೭ ತಿಂಗಳಿಂದ ವೇತನ ಇಲ್ಲ: ಪುರಸಭೆಯಲ್ಲಿ 6 ಜನ ವಾಹನ ಚಾಲಕರು, ಇಬ್ಬರು ಸುಪರ್ ವೈಜರ್ ಗುತ್ತಿಗೆ
ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ 29 ತಿಂಗಳ ಹಿಂದೆಯೇ ಹೊರಗುತ್ತಿಗೆ ಆಧಾರದಲ್ಲಿ ಚಾಲಕರು ಕರ್ತವ್ಯಕ್ಕೆ ಹಾಜರಾಗಿದ್ದರು. ಆದರೆ ಈಗಾಗಲೇ ಗುತ್ತಿಗೆ ಟೆಂಡರ್ ಅವಧಿ ಮುಕ್ತಾಯವಾಗಿದೆ. ಆದರೆ ಮರು ಟೆಂಡರ್ ಮಾಡಿ ನೇಮಕ ಮಾಡಿಕೊಳ್ಳದೇ ಇರುವ ಚಾಲಕರನ್ನೇ ಪುರಸಭೆ ಅಧಿಕಾರಿಗಳು ಕೆಲಸಕ್ಕೆ ಮುಂದುವರೆಸಿ
ಕೊಂಡಿದ್ದಾರೆ.
ಬಾಕಿ ಏಳು ತಿಂಗಳ ವೇತನ ಬಿಡುಗಡೆ ಮಾಡುವಲ್ಲಿ ಪುರಸಭೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷ ಮಾಡಿದ್ದಾರೆ ಎಂಬ ಆರೋಪ ಚಾಲಕರಿಂದ ಕೇಳಿ ಬರುತ್ತಿದೆ. ಕೆಲಸದ ಟೆಂಡರ್ ಅವಧಿ ಮುಕ್ತಾಯವಾಗಿದೆ. ಮರು ಟೆಂಡರ್ ಕರೆಯುವವರೆಗೂ ಇರುವ ಚಾಲಕರಿಗೆ ಅವಕಾಶ ನೀಡಲಾಗಿದೆ. ೪ ಆಟೋಟಿಪ್ಪರ್, ೧ ಟ್ರಾಕ್ಟರ್, ೧ ಜೆಸಿಬಿ ವಾಹನಗಳು ಪುರಸಭೆಯಲ್ಲಿ ವಿವಿಧ ಕಾರ್ಯಕ್ಕೆ ಬಳಕೆ ಮಾಡಲಾಗುತ್ತದೆ.
ಸ್ವಚ್ಛತೆ, ಕಸ ವಿಲೇವಾರಿ, ಚರಂಡಿ ಮಲೀನ ತೆರವು ಸೇರಿದಂತೆ ಇನ್ನಿತರ ಕೆಲಸಕ್ಕೆ ಈ ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಈ ವಾಹನಗಳ ಚಾಲನೆಗಾಗಿ ಟೆಂಡರ್ ಮೂಲಕ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ
ನೇಮಕ ಮಾಡಿಕೊಳ್ಳಲಾಗಿದೆ. ೨೯ ತಿಂಗಳು ಕೆಲಸ ಮಾಡಿರುವ ಚಾಲಕರಿಗೆ ಈಗಾಗಲೇ 22 ತಿಂಗಳ ವೇತನ
ನೀಡಿದ್ದು, ಇನ್ನು ಏಳು ತಿಂಗಳ ವೇತನ ಬಿಡುಗಡೆ ಮಾಡದೇ ಅಧಿಕಾರಿಗಳು ಶತಾಯಿಸುತ್ತಿದ್ದಾರೆ.
ಪುರಸಭೆಯಲ್ಲಿ ಅನುದಾನವಿದ್ದರೂ ತಮ್ಮ ವೇತನ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳ ನಿರ್ಲಕ್ಷ ಕಾರಣವಾಗಿದೆ.
ಪುರಸಭೆಯ ಪರಿಸರ ಅಭಿಯಂತರರು ಮತ್ತು ಮುಖ್ಯಾಧಿಕಾರಿಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ನಮಗೆ ವೇತನ ಬಿಡುಗಡೆ ಮಾಡುವಲ್ಲಿ ವಿಳಂಬವಾಗುತ್ತಿದೆ ಎಂದು ಅಳಲು ತೊಡಿಕೊಂಡಿರುವ ವಾಹನ ಚಾಲಕರಾದ ರವಿ, ದುರಗಪ್ಪ, ಆನಂದ, ಹುಲಗಪ್ಪ, ದುರಗಪ್ಪ, ಇಬ್ರಾಹಿಂ, ಮಾರುತಿ, ಅಂಜಿ ಮತ್ತಿತರು ಈಗ ಪುರಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚನೆಯಾಗಿದ್ದು, ಅಧ್ಯಕ್ಷ, ಉಪಾಧ್ಯಕ್ಷರು ಪುರಸಭೆಯ ಆಡಳಿತ ನಿರ್ವಹಣೆ ಮಾಡು ತ್ತಿದ್ದಾರೆ. ಹೀಗಾಗಿ ಅಧ್ಯಕ್ಷರು ನಮ್ಮ ಬಾಕಿ ವೇತನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ವಿವಿಧ ವಾಹನಗಳ ಚಾಲಕರ ವೇತನ ಬಿಡುಗಡೆಯಾಗಿಲ್ಲ ಎಂಬ ಮಾಹಿತಿ
ಇತ್ತೀಚಿಗೆ ನನ್ನ ಗಮನಕ್ಕೆ ಬಂದಿದೆ. ಆಡಳಿತ ಮಂಡಳಿ ರಚನೆಯಾಗದ ಕಾರಣ ಇದುವರೆಗೂ ಪುರಸಭೆಯ ಕೆಲಸ ಕಾರ್ಯದ ಬಗ್ಗೆ ಪ್ರಶ್ನಿಸಲು ಸದಸ್ಯರಿಗೆ ಸಮಸ್ಯೆಯಾಗುತ್ತಿತ್ತು. ಈಗಷ್ಟೇ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿ ಕೊಂಡಿ ದ್ದೇನೆ. ಈ ಕುರಿತು ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಬಾಕಿ ವೇತನ ಬಿಡುಗಡೆ ಮಾಡಲು ಶೀಘ್ರ ಕ್ರಮ ಕೈಗೊಳ್ಳುತ್ತೇನೆ.
ರೇಖಾ ಆನೇಹೂಸರು, ಅಧ್ಯಕ್ಷೆ, ಪುರಸಭೆ ಕಾರಟಗಿ
- ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಶೀಲಿಸುತ್ತೇನೆ. ಶೀಘ್ರವೇ ಹೊರಗುತ್ತಿಗೆ ಆಧಾರದ ಪುರಸಭೆ ವಾಹನ ಚಾಲಕರಿಗೆ ನ್ಯಾಯ ಕೊಡಿಸುವೆ. ವೇತನ ನೀಡಲು ಕ್ರಮ ವಹಿಸುತ್ತೇನೆ.
-ನಲಿನ್ ಅತುಲ್, ಜಿಲ್ಲಾಧಿಕಾರಿ, ಕೊಪ್ಪಳ