1967ರ ನಿಯಮದ ಪ್ರಕಾರ ಶಿಕ್ಷಕರಿಗೆ ಸಿಗದ ಪದೋನ್ನತಿ ಭಾಗ್ಯ
57 ವರ್ಷಗಳಿಂದಲೂ ನನೆಗುದಿ
ಅಭಿಷೇಕ ಪಾಟೀಲ, ಬಾಗಲಕೋಟೆ
ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಶಿಕ್ಷಕರೇ ಕಳೆದ ಐದಾರು ದಶಕದಿಂದ ತಮಗೆ ಸಿಗುವ ಪದೋನ್ನತಿ ಸಿಗದೇ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಚಿಕ್ಕಂದಿನಿಂದಲೇ ಅಕ್ರಮ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಗುಣ ಬೆಳೆಸುವ ಶಿಕ್ಷಕರು ಕಳೆದ 57 ಷರ್ವಗಳಿಂದ ತಮಗೆ ಸಿಗಬೇಕಾದ ಭಾಗ್ಯವನ್ನು ಪಡೆಯದೇ ಪ್ರತಿದಿನ ಸರಕಾರ ಗಳನ್ನು ದೂಷಿಸುತ್ತ ದಿನಕಳೆಯುವಂತಾಗಿದೆ.
ಶಿಕ್ಷಕರ ಸಂಘಟನೆಗಳ ನಿರ್ಲಕ್ಷ್ಯ: 1967ರ ಸಿ ಆಂಡ್ ಆರ್ ಪ್ರಕಾರ 10 ವರ್ಷ ಮೇಲ್ಪಟ್ಟ ಸೇವಾ ನಿರತ ಶಿಕ್ಷಕರಿಗೆ ಸರಕಾರ ಪದೋನ್ನತಿ ಅವಕಾಶ ಕಲ್ಪಿಸಬೇಕು. ಆದರೆ, ಸರಕಾರ ಈ ಭಾಗ್ಯವನ್ನು ಕರುಣಿಸಿಲ್ಲ. ಜತೆಗೆ ಇದರ ವಿರುದ್ಧ ಚಿಂತನೆ ನಡೆಸಿ, ಸರಕಾರದ ಕಣ್ಣು ತೆರೆಸಬೇಕಿದ್ದ ಶಿಕ್ಷಕರ ಸಂಘಟನೆ ಗಳು ಕೂಡ ಈ ಬಗ್ಗೆ ಗಮನ ಹರಿಸದ ಪರಿಣಾಮ ಪದೋನ್ನತಿ ಪಡೆಯ ಬೇಕಿದ್ದ ಸಾವಿರಾರು ಶಿಕ್ಷಕರು ತಮ್ಮ ವೃತ್ತಿಯಿಂದಲೇ ನಿವೃತ್ತರಾಗಿದ್ದಾರೆ.
ಕಾಯಿದೆ ಹೇಳುವುದೇನು ? : ಜೂನಿಯರ್ ಅಥವಾ ಜಿಲ್ಲಾ ಕಿರಿಯ ಶಿಕ್ಷಣಾಧಿಕಾರಿ ಅಥವಾ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆಗಳನ್ನು ಭರ್ತಿ ಮಾಡುವಾಗ ಸರಕಾರ 75:25ರ ಅನುಪಾತ ಅನುಸರಿಸಬೇಕೆಂಬ ನಿಯಮವಿದೆ. 100 ಬಿಇಓ ಹುದ್ದೆಗಳಿದ್ದರೆ ಶೇ.75ರಷ್ಟು ಹುದ್ದೆಗಳನ್ನು ಪ್ರೌಢಶಾಲಾ ಮುಖ್ಯಶಿಕ್ಷಕರ ತತ್ಸಮಾನ ವೃಂದದವರಿಗೆ ಜ್ಯೇಷ್ಠತೆ ಆಧಾರದ ಮೇರೆಗೆ ಪದೋನ್ನತಿ ನೀಡಬೇಕು. ಬಾಕಿ ಉಳಿಯುವ ಶೇ.25ರಷ್ಟು ಹುದ್ದೆಗಳನ್ನು ಸ್ನಾತಕೋತ್ತರ ಪದವಿ
ಅಥವಾ ಪ್ರಥಮ ದರ್ಜೆಯಲ್ಲಿ ಪದವಿ ಮತ್ತು ಬಿ.ಇಡಿ ಪೂರ್ಣಗೊಳಿಸಿ, 10 ವರ್ಷ ಮೇಲ್ಪಟ್ಟು ಶಿಕ್ಷಕರಾಗಿ ಸೇವೆ ಸಲ್ಲಿಸಿದವರಿಗೆ ಆದ್ಯತೆ ನೀಡಬೇಕು. ಆದರೆ, ಸರಕಾರ ಬರೋಬ್ಬರಿ 57 ವರ್ಷಗಳಿಂದ ಕಾಯ್ದೆ ಅನುಸರಿಸುತ್ತಿಲ್ಲ ಎನ್ನುವುದು ನಿವೃತ್ತ ಶಿಕ್ಷಕರ ಹಾಗೂ ಇಂದಿನ ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಅರ್ಹ ಶಿಕ್ಷಕರು ವಂಚಿತರು
ಶಿಕ್ಷಣ ಇಲಾಖೆಯ ಪ್ರಕಾರ ಶೇ.75ರ ಅನುಪಾತದಲ್ಲಿ 2000 ರಿಂದ 2023ರ ವರೆಗೆ ಬಿಇಓ ಹುದ್ದೆಗೆ ಪದೋನ್ನತಿ ನೀಡಿದ ಸಂಖ್ಯೆಗನುಗುಣವಾಗಿ ಶೇ. 25ರ ಅನುಪಾತದಲ್ಲಿ 174 ಬಿಇಒ ಹುದ್ದೆಗಳನ್ನು ಸೇವಾ ನಿರತ ಶಿಕ್ಷಕರಿಂದ ನೇಮಕಾತಿ ಮಾಡಬೇಕಾ ಗುತ್ತದೆ. ಒಂದು ಅಂದಾಜಿನ ಪ್ರಕಾರ 1967 ರಿಂದ 2024 ರವರೆಗೆ ಅಂದಾಜು 350 ಹುದ್ದೆ ಭರ್ತಿ ಮಾಡಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಕಾಯ್ದೆ ಜಾರಿಯಾದಾಗಿನಿಂದ ಇಲ್ಲಿಯವರೆಗೆ ಒಂದು ಬಾರಿಯೂ 10 ವರ್ಷ ಸೇವೆ ಸಲ್ಲಿಸಿದ ಪ್ರಾಥಮಿಕ ಮತ್ತು ಪ್ರೌಢಶಾಲಾ ಸಹ ಶಿಕ್ಷಕರಿಗೆ ನೇಮಕಾತಿ ಅವಕಾಶ ನೀಡಿಲ್ಲ. ಶೇ.25ರ ಅನುಪಾತವನ್ನು ಮುಖ್ಯ ಶಿಕ್ಷಕರಿಗೆ ನೀಡಲು ತಯಾರಿ ನಡೆದಿದೆ ಎನ್ನಲಾಗುತ್ತಿದ್ದು, ಇದರ ನಡುವೆ ಸಹ ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂಬುದು ಅರ್ಹ
ಸೇವಾನಿರತ ಶಿಕ್ಷಕರ ಒತ್ತಾಯವಾಗಿದೆ. ಕಾಯ್ದೆಯ ಪ್ರಕಾರ ಅವಕಾಶ ನೀಡುವಂತೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಯಾಗಿರುವ ವಿಧಾನ ಪರಿಷತ್ ಸದಸ್ಯರು ಧ್ವನಿ ಎತ್ತಬೇಕು ಎನ್ನುವುದು ಶಿಕ್ಷಕರ ಒತ್ತಾಯವಾಗಿದೆ.
ಇದನ್ನೂ ಓದಿ: Raghu Kotian Column: ಮರೆಯಲಾಗದ ದುರ್ಘಟನೆ