೮ ಹುದ್ದೆಗಳು ವರ್ಷದಿಂದ ಖಾಲಿ, ಶೀಘ್ರ ನೇಮಕಕ್ಕೆ ಸುಪ್ರೀಂ ಸೂಚನೆ, ಪುಡಾರಿಗಳಿಗೆ ಪುಣ್ಯವಿಲ್ಲ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ವರ್ಷದಿಂದ ಖಾಲಿ ಇರುವ ರಾಜ್ಯ ಮಾಹಿತಿ ಆಯೋಗದ ಆಯುಕ್ತರ ನೇಮಕದ ವಿಚಾರವಾಗಿ ಸರ್ಕಾರದ ನೆತ್ತಿಯ ಮೇಲೆ ಈಗ ಸುಪ್ರೀಂಕೋರ್ಟ್ ತೂಗು ಕತ್ತಿ ನೇತಾಡುತ್ತಿದೆ. ಆಯೋಗದ ಮುಖ್ಯ ಆಯುಕ್ತರೂ ಸೇರಿದಂತೆ ಒಟ್ಟು ೮ ಆಯುಕ್ತರ ಹುದ್ದೆಗಳನ್ನು ನೇಮಕ ಮಾಡುವಲ್ಲಿ ವರ್ಷದಿಂದ ಕಾಲ ನೂಕುತ್ತಿರುವ ಸರ್ಕಾರ ಈಗ ಶೀಘ್ರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸವ ಅನಿವಾರ್ಯದಲ್ಲಿದೆ.
ಆಯುಕ್ತರ ನೇಮಕ ವಿಳಂಬವಾಗುತ್ತಿರುವ ವಿಚಾರದಲ್ಲಿ ಈಗ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸ್ಪಷ್ಟ ಸೂಚನೆ ನೀಡಿದೆ. ಮುಂದಿನ ಎರಡು ವಾರಗಳ ಅವಽಯಲ್ಲಿ ಖಾಲಿ ಇರುವ ಎಲ್ಲಾ ಸ್ಥಾನಗಳನ್ನು ತುಂಬಿ ವರದಿ ಸಲ್ಲಿಸಬೇಕೆಂದು ಸೂಚನೆ ನೀಡಿದೆ, ಹೀಗಾಗಿ ನೇಮಕಕ್ಕೆ ಸಂಬಂ ಸಿದಂತೆ ಮೂರು ಬಾರಿ ಸಭೆಗಳನ್ನು ಮುಂದೂಡಿದ ಸರ್ಕಾರ ಈ ಬಾರಿ ನೇಮಕ ಮಾಡಲೇಬೇಕಾಗಿದೆ. ನೇಮಕಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಗಾ ವಹಿಸುತ್ತಿರುವುದರಿಂದ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕಾಗಿದೆ, ಹಾಗೆಯೇ ಅರ್ಹರು ಹಾಗೂ ಸಮರ್ಥರಿಗೆ, ನೈಜ ಅನುಭವಿಗಳು, ತಜ್ಞರಿಗೆ ಅವಕಾಶ ಕಲ್ಪಿಸಬೇಕಿದೆ.
ಈ ಹಿಂದಿನ ಸರ್ಕಾರ ನೇಮಕ ಮಾಡಿದ್ದ ವೇಳೆ ಆಡಳಿತ ಅನುಭವಿಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಬದಲು ಪಕ್ಷದ ಕಾರ್ಯಕರ್ತರು, ಅನರ್ಹರು, ಕ್ರಿಮಿನಲ್ ಹಿನ್ನೆಲೆಯವರಿಗೆ ಅವಕಾಶ ನೀಡಲಾಗಿತ್ತು ಎನ್ನುವ ಆರೋಪಗಳಿದ್ದವು. ಈ ಹಿನ್ನೆಲೆಯಲ್ಲಿ ಮುಂದಿನ ವಾರದ ವೇಳೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮಾಹಿತಿ ಹಕ್ಕು ಆಯೋಗದ ನೇಮಕ ಕುರಿತ ಸಭೆ ನಡೆಸಲಿದ್ದು, ನಿಯಮದಂತೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಂಪುಟದ ಹಿರಿಯ ಸಚಿವ ಕೆಜೆ ಜಾರ್ಜ್ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸುಪ್ರೀಂಕೋರ್ಟ್ ಮಧ್ಯಪ್ರವೇಶ ಏಕೆ ?
ಮಾಹಿತಿ ಹಕ್ಕು ಆಯೋಗ ವಿಚಾರ ಒಂದು ವರ್ಷದ ಹಿಂದೆಯೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂಜನ್ ಭಾರದ್ವಾಜ್ ಎನ್ನುವವರು ಮಾಹಿತಿ ಆಯೋಗಕ್ಕೆ ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರಗಳು ವಿಳಂಬ ಮಾಡುತ್ತಿವೆ ಎನ್ನುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ರಾಜ್ಯಗಳ ನೇಮಕ ಸ್ಥಿತಿಗತಿಗಳನ್ನು ಪಡೆದಿರುವ ಸುಪ್ರೀಂ ಕೋರ್ಟ್ ಒರಿಸ್ಸಾ, ಕರ್ನಾಟಕ, ಜಾರ್ಖಂಡ್ ಬಿಹಾರ, ತಮಿಳುನಾಡು, ತೆಲಂಗಾಣ, ಛತ್ತೀಸ್ಗಢ ಸೇರಿದಂತೆ ಎಂಟು ರಾಜ್ಯಗಳಿಗೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ ಸುಪ್ರೀಂ ಕೋರ್ಟ್ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನಿಶ್ ಅವರಿಗೆ ಎರಡು ವಾರಗಳಲ್ಲಿ ಆಯುಕ್ತರ
ನೇಮಕ ಮಾಡಿ ವರದಿ ಸಲ್ಲಿಸುವಂತೆ ನ.೨೬ರಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಈ ಬಾರಿ ಯಾರಿಗೆಲ್ಲಾ ಅವಕಾಶ ?
ಆಯೋಗದ ಮುಖ್ಯ ಆಯುಕ್ತರು ಸೇರಿದಂತೆ ೮ ಮಂದಿ ಆಯುಕ್ತರ ನೇಮಕಕ್ಕೆ ಸರ್ಕಾರ ಕಳೆದ ವರ್ಷ ಡಿಸೆಂಬರ್ ನಲ್ಲಿ ಅರ್ಜಿ ಆಹ್ವಾನಿಸಿತ್ತು. ನೇಮಕ ಮಾಡಲು ಮುಖ್ಯ ಮಂತ್ರಿ ಎರಡು ಸಭೆಗಳು ನಡೆದಿದ್ದವು. ನ.೩೦ರಂದು ಮೂರನೇ ಸಭೆ ನಿಗದಿಯಾಗಿತ್ತು, ಆದರೆ ದಿಢೀರ್
ಮುಂದೂಡಲಾಗಿತ್ತು. ಈಗ ೪ನೇ ಹಾಗೂ ಅಂತಿಮ ಸಭೆ ನಡೆಯಬೇಕಿದ್ದು, ಅರ್ಜಿ ಸಲ್ಲಿಸಿರುವ ೫೦೦ಕ್ಕೂ ಹೆಚ್ಚು ಅರ್ಜಿಗಳ ಪರಿಶೀಲನೆಯೂ ಮುಗಿದಿದೆ. ಹೀಗಾಗಿ ಈ ಬಾರಿ ಸಮಾಜ ಸೇವೆ ಹೆಸರಿನಲ್ಲಿ ರಾಜಕೀಯ ಮುಖಂಡರು, ಪುಡಾರಿಗಳು ನೇಮಕವಾಗುವುದನ್ನು ಪಡೆಯಲಾಗು ತ್ತಿದೆಯಲ್ಲದೆ ಸರ್ಕಾರದ ಆಡಳಿತದಲ್ಲಿ ಅನುಭವ ಇರುವವರಿಗೆ ಅದಕ್ಕೆ ಇರುವ ಸಂಭವವಿದೆ ಎಂದು ಸರ್ಕಾರದ ಅಽಕೃತ ಮೂಲಗಳು ತಿಳಿಸಿವೆ.
ಇದನ್ನೂ ಓದಿ: Shivakumar Bellithatte Story: ಚನ್ನಪಟ್ಟಣ ಉಪಸಮರಕ್ಕೆ ಯೋಗಿ ಅಭ್ಯರ್ಥಿ?