ಮಾಳಿಂಗರಾಯ ಪೂಜಾರ ಗದಗ
ಬೀದಿಗೆ ಬಿದ್ದ ಚಿತ್ತರಗಿ ಶ್ರೀಕುಮಾರ ವಿಜಯ ನಾಟಕ ಕಂಪನಿ ಕಲಾವಿದರು
ಜಿಲ್ಲಾದ್ಯಂತ ಒಂದು ವಾರದಿಂದ ಸುರಿಯುತ್ತಿರುವ ಚಿತ್ತಿ ಮಳೆ ಸಾಕಷ್ಟು ಅವಾಂತರ ಸೃಷಿಸಿದ್ದು, ಮುಂಡರಗಿ ಯಲ್ಲಿ ಒಂದು ನಾಟಕ ಕಂಪನಿಯೇ ಧರೆಗೆ ಉರುಳಿದ್ದು, ರಂಗಭೂಮಿ ಕಲಾವಿದರ ಬದುಕು ಬೀದಿಗೆ ಬಂದಿದೆ.
ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಚಿತ್ತರಗಿಯ ಶ್ರೀಕುಮಾರವಿಜಯ ನಾಟಕ ಕಂಪನಿಯು ಕಳೆದ ಒಂದು
ವರ್ಷದಿಂದ ಇಲ್ಲಿ ನಾಟಕ ಪ್ರದರ್ಶನ ಮಾಡುತ್ತಾ ಬಂದಿದೆ. ಈ ನಾಟಕ ಕಂಪನಿಯು ತಮ್ಮ ಕಲಾ ಪ್ರದರ್ಶನದಿಂದ
ಸಾಕಷ್ಟು ಕಲಾ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಶುಕ್ರವಾರ ರಾತ್ರಿ ಗಾಳಿ ಸಹಿತ ಸುರಿದ ಮಳೆಯಿಂದ ನಾಟಕ
ಕಂಪನಿಯು ಸಂಪೂರ್ಣ ನೆಲಕ್ಕೆ ಬಿದ್ದಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
ಈ ನಾಟಕ ಕಂಪನಿಯಲ್ಲಿ ಸುಮಾರು 25 ಕುಟುಂಬದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಟಕ ಕಂಪನಿಯಲ್ಲಿ ತಮ್ಮ ಕಲೆಯನ್ನು ವ್ಯಕ್ತಪಡಿಸಿ, ಸಂಸಾರದ ಡೋಣಿ ಸಾಗಿಸುತ್ತಿದ್ದರು. ನಾಟಕ ಪ್ರದರ್ಶನ ಮಾಡುವವರ ಜೀವನ ಒಂದು ರೀತಿಯಲ್ಲಿ ಅಲೆಮಾರಿ ಜೀವನವಾಗಿದೆ ಈ ರೀತಿ ನಾಟಕ ಕಂಪನಿ ನೆಲಕ್ಕೆ ಬಿದ್ದರೆ ಇವರ ಜೀವನವೇ
ಬೀದಿಗೆ ಬಂದಂತಾಗಿದೆ. ನಾಟಕ ಕಂಪನಿಯ ಶೆಡ್ ಸಮೇತ ನೆಲಕ್ಕೆ ಬಿದ್ದಿದ್ದರಿಂದ ಪ್ರದರ್ಶನದ ಮಾಡಲು ಬಳಸುವ ಲೈಟ್, ಪರದೆ, ಕಾರ್, ಬೈಕ್, ಕುರ್ಚಿ, ಟೇಬಲ್, ಕಲಾವಿದರ ಡ್ರೆಸ್ ಸೇರಿದಂತೆ ಮುಂತಾದವರು ಸಾಮಗ್ರಿಗಳು ಎಲ್ಲಾ ಮಳೆಗೆ ಹಾಳಾಗಿ ಹೋಗಿದ್ದು, ಸುಮಾರು ೮ ರಿಂದ ೧೦ ಲಕ್ಷ ನಷ್ಟವಾಗಿದೆ.
ಸರಕಾರ ಕೂಡಲೇ ನಾಟಕ ಪ್ರದರ್ಶನ ಮಾಡುವ ಕಂಪನಿಯ ಮಾಲೀಕರ ಸ್ಥಿತಿ ಚಿಂತಾಜನಕವಾಗಿದೆ. ರಂಗಭೂಮಿ ಯಲ್ಲಿ ಅಭಿಯಾನ ಮಾಡುವ( ನಟಿಸುವ) ಕಲಾವಿದರ ಹಿಂದೆ ಬಹಳಷ್ಟು ವೈಥೆ ಇರುತ್ತದೆ ಟಿವಿ ಮಾಧ್ಯಮ ಬಂದಾಗ ನಾಟಕಗಳನ್ನು ಯಾರು ನೋಡುತ್ತಾರೆ ಎಂದು ಅನೇಕರು ಜರಿದಿದ್ದರು. ಇನ್ನು ಸಿನಿಮಾರಂಗ ಕಾಲಿಟ್ಟಾ ಗಲ್ಲಂತೂ ಎಂದು ಹಲವು ಮಂದಿ ವಾದ ಮಂಡಿಸಿದ್ದರು. ಆದರೆ ರಂಗಭೂಮಿ ಪೇಕ್ಷಕರ ಸಂಖ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ.
ಇತ್ತೀಚೆಗೆ ಕನ್ನಡ ರಂಗಭೂಮಿಯಲ್ಲಿ ಯುವ ತಲೆಮಾರು ನಾಟಕ ರಚನೆ, ನಿರ್ದೇಶನ ಹಾಗೂ ಪ್ರಯೋಗಗಳಲ್ಲಿ ಅನೇಕ ಹೊಸತನಗಳನ್ನು ಹೊತ್ತು ತರುತ್ತಿದೆ. ಒಟ್ಟಾರೆ ಕಲಾಪ್ರೇಕ್ಷಕರು ನಾಟಕ ಕಂಪನಿಯತ್ತ ಸೆಳೆದಿದೆ ಆದರೆ ಈಗ ಮಳೆಯಿಂದ ನಾಟಕ ಕಂಪನಿಗಳು ಸಾಕಷ್ಟು ಪ್ರಮಾಣದಲ್ಲಿ ನಷ್ಟವನ್ನು ಅನುಭವವಿದೆ.
*
ಮಳೆಯಿಂದ ನಾಟಕ ಕಂಪನಿಯು ನೆಲಕ್ಕೆ ಬಿದ್ದಿದ್ದು, ಇದರಿಂದ ಸುಮಾರು 8 ರಿಂದ 10 ಲಕ್ಷ ನಷ್ಟವಾಗಿದೆ. ನಮ್ಮ ನಾಟಕ ಕಂಪನಿಯಲ್ಲಿ 25 ಕ್ಕೂ ಕುಟುಂಬಗಳು ಕೆಲಸ ಮಾಡುತ್ತಾರೆ ಸರಕಾರ ಕೂಡಲೇ ಪರಿಹಾರ ನೀಡಬೇಕು.
-ಮಂಜುನಾಥ ಜಾಲಿಹಾಳ, ಚಿತ್ತರಗಿ, ನಾಟಕ ಕಂಪನಿಯ ಅಧ್ಯಕ್ಷರು