ಝೀ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ ಕಾಮಿಡಿ ಕಿಲಾಡಿ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ಪಡೆದ ಮಾಂತೇಶ
ಮಾಳಿಂಗರಾಯ ಪೂಜಾರ
ಗದಗ: ಕಿತ್ತು ತಿನ್ನುವ ಬಡತನ ಹಾಗೂ ಆರ್ಥಿಕ ಸಮಸ್ಯೆ ನಡುವೆಯೇ ತನ್ನ ಕಲೆಯನ್ನು ವ್ಯಕ್ತಪಡಿಸಿ
ಮೂಲಕ ಜಿಲ್ಲೆಯ ಯುವ ಪ್ರತಿಭೆ ನಾಡಿನ ಜನಮನ ಗೆದ್ದಿದ್ದಾನೆ. ಝೀ ಕನ್ನಡದ ಪ್ರಸಿದ್ದ ರಿಯಾಲಿಟಿ ಶೋ
ಕಾಮಿಡಿ ಕಿಲಾಡಿ ಪ್ರೀಮಿಯರ್ ಲೀಗ್ ನಲ್ಲಿ ಹಾಸ್ಯದ ನಟನೆ ಮೂಲಕ ಮನೆ ಮಾತಾಗುತ್ತಿರುವ ಗದಗ
ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಯುವ ಉತ್ಸಾಹಿ, ಕಾಮಿಡಿಯನ್ ಮಾಂತೇಶ ಕರಮಣ್ಣವರ ಭಾಗವಹಿಸಿದ್ದ ಖ್ಯಾತ ನಿರೂಪಕಿ ಅನುಶ್ರೀಯವರ ತಂಡ ಗೆಲುವು ಸಾಧಿಸಿದ್ದು, ಈ ತಂಡದಲ್ಲಿ ಮಾಂತೇಶ ಎನ್ನುವ ಪ್ರತಿಭೆ ತನ್ನ ನಟನೆಯ ಮೂಲಕ ಕಲಾರಸಿಕರ ಮನ ಸೆಳೆದಿದ್ದಾನೆ.
ಕಲೆ ಎನ್ನುವದು ಯಾರ ಸ್ವತ್ತಲ್ಲ ಈ ಮಾತು ಅಕ್ಷರಶಃ ಗದಗ ಜಿಲ್ಲೆ ಲಕ್ಷೇಶ್ವರದ ಮಾಂತೇಶ ಎಂ. ಕರಮಣ್ಣವರಗೆ ಒಪ್ಪುತ್ತದೆ ಅವರಿಗೆ ಕುಟುಂಬದ ಹಿನ್ನೆಲೆ ಯಾರು ಕಲಾವಿದರು ಇರಲಿಲ್ಲ ಇವರು ತಮ್ಮ ಸ್ವಂತ ಬಲದಿಂದ ಕಲೆಯನ್ನು ಕಲಿತಿದ್ದಾರೆ.
ಸಾಧಿಸಿಬೇಕು ಎಂದರೆ ಛಲ ಕಠಿಣ ಶ್ರಮ ಹೊಂದಿದ್ದರೆ ಏನನ್ನಾದರು ಸಾಧನೆ ಮಾಡಬಹುದು ಎನ್ನುವುದನ್ನು
ತೋರಿಸಿಕೊಟ್ಟಿರುವ ಈ ಕಲಾವಿದ ಬಾಲ್ಯದಿಂದ ಕಷ್ಟದಲ್ಲಿ ಬೆಂದು ಈಗ ಅರಳಿದ್ದಾನೆ.
ಜಿಲ್ಲೆಯ ಲಕ್ಷ್ಮೇಶ್ವರದ ಈ ಪೋರ ಮಾಂತೇಶ ಕರಮಣ್ಣವರ ತಂದೆ ಮಶಪ್ಪ, ತಾಯಿ ಗಂಗವ್ವ ಎನ್ನುವ ಈ ದಂಪತಿಯ ಮುದ್ದಿನ ಇರುವ ಏಕೈಕ ಪುತ್ರನನ್ನು ಅಭಿಲಾಷೆ ತಕ್ಕಂತೆ ಬೆಳೆಸಲು ಶ್ರಮಿಸುತ್ತಿರುವ ತಂದೆ-ತಾಯಿಯ ಪ್ರೀತಿಯಲ್ಲಿ ಬೆಳೆಸಿದ್ದಾರೆ ಮಗನೂ ದೊಡ್ಡ ಸಾಧನೆ ಮಾಡಬೇಕು ಎಂಬ ಹಿರಿದಾಸೆ ಹೊಂದಿ ಮಗನಿಗೆ ಕಲಿಯಲು
ಯಾವುದೇ ಅಡ್ಡಿ ಪಡಿಸದೆ ಅವನಿಗೆ ಯಾವುದು ಆಸಕ್ತಿ ಇದೆಯೋ ಅದನ್ನು ಕಲಿಸಲು ತಾವು ಕಷ್ಟ ಪಟ್ಟು
ಹಣ ನೀಡಿ ಕಲಿಸಿದ್ದಾರೆ.
ಈ ಬಡ ಕುಟುಂಬ ಚಿಕ್ಕದಾಗಿ ಇಡ್ಲಿ ವಡಾ, ದೋಸೆ ಮಾರುವ ಅಂಗಡಿ ಇಟ್ಟಿಕೊಂಡಿದ್ದು ಈ ವ್ಯಾಪಾರದಿಂದ ಬಂದಿರುವ ಲಾಭದಿಂದ ಜೀವನ ನಡೆಸುತ್ತಿದ್ದಾರೆ. ಮಾಂತೇಶ ವ್ಯಾಸಂಗ ಮಾಡುತ್ತಾ ತನ್ನ ತಂದೆಗೆ ಹೋಟೆಲ್ ನಲ್ಲಿ ಸಹಾಯ ಮಾಡುತ್ತಾ ಬೆಳೆದಿದ್ದಾನೆ.
ಇದರ ಜೊತೆಗೆ ಇವನಿಗೆ ಡ್ಯಾ ಅಂದರೆ ತುಂಬಾ ಆಸಕ್ತಿ ಇದ್ದು, ಶಾಲಾ ಕಾಲೇಜು ಸೇರಿದಂತೆ ಜಿಲ್ಲೆಯ ಅನೇಕ ಸಾಂಸ್ಕೃತಿಕ ಮನರಂಜನೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನೃತ್ಯವನ್ನು ಮಾಡಿರುವ ಇವನು ಈಗ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ಎನ್ನುವ ವೇದಿಕೆಯಲ್ಲಿ ಕಲಾ ಪ್ರೇಕ್ಷಕರನ್ನು ಮೋಡಿ ಮಾಡುತ್ತಿರುವುದು
ನಿಜಕ್ಕೂ ಅಭಿನಂದನೀಯ.
ಅಲ್ಲದೆ ಗದಗ ಸಂಭ್ರಮ , ಪುಲಗೇರಿ ಉತ್ಸವ, ಬೆಂಗಳೂರನಲ್ಲಿ ಡ್ಯಾನ್ಸ್ ಪ್ರದರ್ಶನ ಕೊಡುವ ಮೂಲಕ ಹಲವು ಪ್ರಶಸ್ತಿಗಳನ್ನು ಮೂಡಿಗೆರಿಸಿಕೊಂಡಿದ್ದು, ನೃತ್ಯ,ಕರಾಟೆ ಸೇರಿದಂತೆ ಅನೇಕ ವಿಧದ ಪ್ರತಿಭೆ ಹೊಂದಿರುವ ಈ ಪ್ರತಿಭೆ
ಶಾಲಾ ಮಟ್ಟದ, ಜಿ ಮಟ್ಟದ, ವಿಭಾಗ ಮಟ್ಟದ ಮತ್ತು ರಾಜ್ಯಮಟ್ಟದ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮ ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಹೊತ್ತು ತಂದಿದ್ದನು ಪದಕ,ಪಾರಿತೋಷಕ, ಪ್ರಶಸ್ತಿ ಪತ್ರಗಳನ್ನು ಪಡೆದಿದ್ದ ಲೆಕ್ಕವೇ ಇಲ್ಲ. ಪೂರ್ವ ಪ್ರಾಥಮಿಕ ಹಂತದಿಂದಲೇ ಧೈರ್ಯದಿಂದ ಪ್ರತಿಯೊಂದು ಆಟೋಟಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿಭೆ ಮೆರೆದಿದ್ದ ಇವನು, ಈಗ ಝೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿ ವೇದಿಕೆಯಲ್ಲಿ ಅವರು ಭಾಗವಹಿಸಿದ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾನೆ ಎಂದು ಹೇಳಿದರೆ ತಪ್ಪಾಗಲಾರದು.
ಏಕೆಂದರೆ ಮಾಂತೇಶ ಇವರು ನೃತ್ಯ, ನಟನೆ ಹಾಗೂ ಕರಾಟೆ ಮಾಡಬಲ್ಲವನಾಗಿದ್ದು, ಇದರಿಂದ ಪ್ರತಿಯೊಂದು
ಎಫಿಸೋಡಿನಲ್ಲಿ ತೀರ್ಪುಗಾರರ ಮೆಚ್ಚುಗೆ ಗಳಿಸಿರುವುದೆ ಇದಕ್ಕೆ ಸಾಕ್ಷಿಯಾಗಿದೆ. ಶಾಲೆ ಕಲಿಯುವ ಸಂದರ್ಭದಲ್ಲಿ ಹುಬ್ಬಳ್ಳಿಗೆ ದಿನನಿತ್ಯ ಶಾಲೆ ಮುಗಿಸಿಕೊಂಡು ಡ್ಯಾ ಕಲಿಯಲು ಹೋಗುತ್ತಿದ್ದ ಮಾಂತೇಶ ಇವನಿಗೆ ಡ್ಯಾನ್ಸ್ ಶೋನಲ್ಲಿ
ಸ್ಪರ್ಧಿಸಬೇಕು ಎನ್ನುವ ಮಹದಾಸೆ ಹೊಂದಿದ್ದ ಆದರೆ ಇವನಿಗೆ ಕಾಮಿಡಿ ಕಿಲಾಡಿ ಶೋನಲ್ಲಿ ಸ್ಪರ್ಧಿಸುವ
ಅವಕಾಶ ದೊರೆಯಿತು.
ನೃತ್ಯ ಸೈ ನಟನೆಗೂ ಸೈ ಎನಿಸಿಕೊಂಡ ಇವನೂ ಕಾಮಿಡಿ ಕಿಲಾಡಿಯಲ್ಲಿ ಸ್ಪರ್ಧಿಸಿ ಜಿಲ್ಲೆಯ ಕೀರ್ತಿ ಬೆಳಗಿಸಿದ್ದಾನೆ. ಕನ್ನಡದ ರಿಯಾಲಿಟಿ ಶೋ ಡಿಕೆಡಿಗೆ ಆಯ್ಕೆ ಆಗಬೇಕು ಎನ್ನುವ ಆಸೆ ಇರುವ ಇವನಿಗೆ ಡಿಕೆಡಿ ಹಾಗೂ ಕಾಮಿಡಿ ಕಿಲಾಡಿ ಮಹಾಸಂಗಮ ವೇದಿಕೆಯಲ್ಲಿ ಭಾಗವಹಿಸಿ, ಡ್ಯಾನ್ಸ್ನಲ್ಲಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಬಾರಿ ಆಡಿಷನ್ ಕೊಟ್ಟರು ಅದೃಷ್ಟ ಕೈ ಹಿಡಿಯಲಿಲ್ಲ, ಡ್ಯಾನ್ಸ ನಲ್ಲಿ ಕೈ ಕೊಟ್ಟರು ಝೀ ಕನ್ನಡದ ಕಾಮಿಡಿ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಪ್ರಿಮಿಯರ ಲೀಗ್ ನಲ್ಲಿ ಅದೃಷ್ಟ ಕೈ ಹಿಡಿದಿದ್ದು ರಾಜ್ಯದ ಜನತೆಯನ್ನು ಹಾಸ್ಯದ ಹೊನಲುನಲ್ಲಿ ತೆಲಿಸುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.
ಡ್ಯಾ ಕಲಿಯಬೇಕು ಎಂದು ಗದಗ ನಗರಕ್ಕೆ ಬಂದಾಗ ಸೋಮಶೇಖರ ಚಿಕ್ಕಮಠ ಎಂಬುವರು ಪರಿಚಯವಾಗಿ
ಗದಗದ ನಟರಂಗದಲ್ಲಿ ಇವನಿಗೆ ನಟನೆ ಕಲಿಯಲು ವೇದಿಕೆ ಕಲ್ಪಿಸಿಕೊಟ್ಟರು. ನಟರಂಗದಲ್ಲಿ ನಟನೆ (ಆಕ್ಟಿಂಗ್ )ಮಾಡುವುದು ಕಲಿ ಎಂದು ಧೈರ್ಯ ಕೊಟ್ಟರು ಅದೇ ರೀತಿ ಗದಗದಲ್ಲಿ ಇರುವ ಪ್ರಸಿದ್ಧ ಮಠಗಳಲ್ಲಿ ದಿನನಿತ್ಯ
ಊಟ ಗೆಳೆಯರ ಜೊತೆಗೆ ಅಡುಗೆ ಮಾಡಿಕೊಂಡು ಕಷ್ಟಪಟ್ಟು ನಟರಂಗದಲ್ಲಿ ಸತತವಾಗಿ ೬ ವರ್ಷದಿಂದ ನಟನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದ ಯುವಕ ಇವನಿಗೆ ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಉಮೇಶ ಕಿನ್ನಾಳ ಗುರುಗಳಾಗಿ ಎಲ್ಲಾ ರೀತಿಯ ನಟನೆಯ ಆಯಾಮಗಳನ್ನು ಹೇಳಿಕೊಟ್ಟಿದನ್ನು ನೆನಪಿಸಿಕೊಳ್ಳುತ್ತಾನೆ.
ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಾಲೆಯಲ್ಲಿ ಹಾಗೂ ಗದಗನ ಕೆ ಎಲ್ ಇ ಸಂಸ್ಥೆಯ ಜಗದ್ಗುರು ತೊಂಟದಾರ್ಯ ಕಾಲೇಜನಲ್ಲಿ ಪಿ ಯು ಸಿ ಓದಿರುವ ಇವನು ಸದ್ಯ ಅದೇ ಕಾಲೇಜನಲ್ಲಿ ಪದವಿ ಓದುತ್ತಿದ್ದಾನೆ. ಅಲ್ಲದೆ ಕರಾಟೆಯಲ್ಲಿ ಅಂತಾರಾಷ್ಟ್ರೀಯ ಸಂಸ್ಥೆ ಮಾನ್ಯತೆ ಪಡೆದ ಮತ್ತು ಕೇಂದ್ರ ಸರಕಾರ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದಲೂ ಮಾನ್ಯತೆ ಪಡೆದ ಸಂಸ್ಥೆಯೊಂದರಿಂದ ಕರಾಟೆ ಯಲ್ಲಿನ ಎಲ್ಲಾ ಹಂತದ ಬೆಲ್ಟ್ಗಳನ್ನು ಪಡೆದಿದ್ದಾನೆ.
*
ಮಗನು ಡ್ಯಾನ್ಸ್ ಹಾಗೂ ನಟನೆಯಲ್ಲಿ ಸಾಧಿಸಿ ಊರಿನ ಹೆಸರನ್ನು ತರಬೇಕು ಅವನು ಚಿಕ್ಕವನಿದ್ದಾಗಿನಿಂದ ಡ್ಯಾ ಹಾಗೂ ನಟನೆ ಮನರಂಜನೆ ಕಾರ್ಯಕ್ರಮ ಕೊಡುವ ಮೂಲಕ ಗಮನ ಸೆಳೆದಿದ್ದ ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎನ್ನುವುದು ನಮ್ಮ ಆಸೆಯಾಗಿದೆ.
-ಗಂಗವ್ವ, ಮಾಂತೇಶ ತಾಯಿ
ಕಲಿಸಿದ ಗುರುಗಳು, ತಂದೆ ತಾಯಿಗಳು ಹಿರಿಯರು ಅನೇಕರ ಪ್ರೋತ್ಸಾಹ ಕೊಟ್ಟಿದ್ದರ ಪರಿಣಾಮ ಈ ಹಂತಕ್ಕೆ ಬೆಳೆಯಲು ಸಾಧ್ಯವಾಗಿದ್ದು, ಗದಗ ಜಿಲ್ಲೆಯಿಂದ ಕನ್ನಡ ಚಿತ್ರರಂಗದಲ್ಲಿ ನಟನಾಗಬೇಕು ಎಂಬುವುದು ಬಹಳ ಆಸೆ ಇದೆ.
-ಮಾಂತೇಶ ಕರಮಣ್ಣವರ,
ಝೀ ಕನ್ನಡದ ಕಾಮಿಡಿ ಕಿಲಾಡಿಗಳು
ಗೆದ್ದಿರುವ ಯುವಕ