ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ನಮ್ಮ ಕಂಬಳ ಶ್ರೀನಿವಾಸ ಗೌಡರ ಕೋಣದಂತೆ ಷೇರು ಮಾರುಕಟ್ಟೆಯ ಗೂಳಿ ದೌಡಾಯಿಸುತ್ತಿದೆ. ಯಾವುದೇ ಕ್ಷಣದದರೂ ಮುಗ್ಗರಿಸುತ್ತದೆಂಬ ನಿರೀಕ್ಷೆ ಎಲ್ಲರಿಗೂ ಇದೆ.
ದೇಸಿ ವಾರೆನ್ ಬಫೆಟ್ ಎಂದೇ ಬಣ್ಣಿಸಲಾಗುವ ರಾಕೇಶ್ ಝುನ್ಝುನ್ವಾಲಾ ಕೆಲವೇ ದಿನಗಳ ವಹಿವಾಟಿನಲ್ಲಿ 600 ಕೋಟಿ ರು.ಗೂ ಹೆಚ್ಚು ಕಮಾಯಿಸಿದ್ದಾರೆ. ಅಷ್ಟು ಹಣ ಗಳಿಸಲು ಆತ ಕೈಯಾಡಿಸಿದ್ದು ಕೇವಲ ನಾಲ್ಕೈದು ಕಂಪನಿಗಳ ಷೇರಿನಲ್ಲಿ! ಕಳೆದ ವರ್ಷ ಸುಮಾರು ಅಷ್ಟೇ ಲಾಭವನ್ನು ಎರಡೇ ದಿನದಲ್ಲಿ ಬಾಚಿಕೊಂಡ ಕೀರ್ತಿ ಅವರದ್ದು.
ಕಳೆದ ತಿಂಗಳಷ್ಟೇ ಭಾರತದ 38ನೇ ಅತಿ ದೊಡ್ಡ ಶ್ರೀಮಂತನೆಂದು ಪರಿಗಣಿಸಲಾದ ರಾಕೇಶ್ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ತೊಡಗಿದ್ದು 1985ರಲ್ಲಿ. (ಅದೇ ವರ್ಷ ನಾನು ಪತ್ರಿಕೋದ್ಯಮದಲ್ಲಿ ಹೊಟ್ಟೆ ಹೊರೆಯಲು ಬಾಂಬೆ ಪ್ರವೇಶಿಸಿದ್ದು. ನನ್ನ ಬಳಿ ಇದ್ದದ್ದೂ ರಾಕೇಶ್ ಬಳಿ ಇದ್ದಷ್ಟೇ ಹಣವಿರಬೇಕು – 50000 ರುಪಾಯಿ!
ಹೋಲಿಕೆ ಅಲ್ಲಿಗೆ ನಿಲ್ಲುತ್ತದೆಂದೇನೂ ಸ್ಪಷ್ಟಪಡಿಸಬೇಕಿಲ್ಲ ತಾನೇ?) ಇತ್ತೀಚಿನ ವರದಿಯಂತೆ ಅವರ ಮೌಲ್ಯ 2,32,30,41,60,000 ರು. ಈ ಮೊತ್ತವನ್ನು ನೀವು ಓದಿ ಅರಗಿಸಿಕೊಳ್ಳುವ ಹೊತ್ತಿಗೆ ಅವರ ಬೊಕ್ಕಸಕ್ಕೆ ನೂರು ಕೋಟಿ ಹರಿದು ಬಂದಿದ್ದರೂ, 5000 ಕೋಟಿ ನಷ್ಟವಾಗಿದ್ದರೂ ಆಶ್ಚರ್ಯವಿಲ್ಲ. ಷೇರು ಪೇಟೆಯ ಸಮಾಚಾರವೇ ಹಾಗೆ. ಸೆನ್ಸೆಕ್ಸ್ ಎಂದು ಕರೆಯಲ್ಪಡುವ ಷೇರು ಮಾರುಕಟ್ಟೆ ಸೂಚ್ಯಂಕ ಆರತಿ ತೊಗೊಂಡ್ರೆ ಉಷ್ಣ, ತೀರ್ಥ ತೊಗೊಂಡ್ರೆ ಶೀತ ಅಂತಾರಲ್ಲ, ಹಾಗೆ. ಅಮೆರಿಕದಲ್ಲಿ ಹೊಸ ಅಧ್ಯಕ್ಷನ ಆಯ್ಕೆಯಾದರೆ ವಿಷದಂತೆ ಏರುತ್ತೆ, ಯಾವುದೋ ಕೊಲ್ಲಿ ರಾಷ್ಟ್ರದಲ್ಲಿ ಶಾಂತಿಗೆ ಭಂಗವಾದರೆ ಸರ್ರನೆ ಇಳಿಯುತ್ತೆ.
ಮುಟ್ಟಿದರೆ ಮುನಿ. ವಾಸ್ತವಿಕವಾಗಿ ನೋಡಿದರೆ, ಕೋವಿಡ್ ಹೆಮ್ಮಾರಿಯ ಹೊಡೆತಕ್ಕೆ ತತ್ತರಿಸಿರುವ ಬಹುತೇಕ ರಾಷ್ಟ್ರಗಳಂತೆ
ಭಾರತವೂ ಆರ್ಥಿಕವಾಗಿ ಹಿಂದೆ ಸರಿದಿದೆ. ಜಿಡಿಪಿ ಹಳ್ಳ ಹಿಡಿದಿದೆ. ಹಾಗಿದ್ದೂ ವಿದೇಶಿಗರ ಹೂಡಿಕೆಯ ಹರಿವು, ಕೋವಿಡ್ ಲಸಿಕೆಯ ಯಶಸ್ಸು, ಅಭಿವೃದ್ಧಿಪರ ಬಜೆಟ್ ಪ್ರಸ್ತಾವನೆಗಳೇ ಮೊದಲಾದ ಬೆಳವಣಿಗೆಗಳಿಂದ ಸೂಚ್ಯಂಕ ಏರಿಕೆ ಕಾಣುತ್ತಲೇ ಬಂದಿದೆ.
ಆರ್ಥಿಕ ಕುಸಿತದ ನಡುವೆಯೂ ಷೇರು ಮಾರುಕಟ್ಟೆ ಏರುಮುಖ ಕಾಣುವುದರ ವೈರುಧ್ಯಕ್ಕೆ ಕಾರಣಗಳಿವೆ. ಉದಾಹರಣೆಗೆ, ಸರಕುಗಳಿಗೆ/ಸೇವೆಗಳಿಗೆ ಬೇಡಿಕೆ ಕುಸಿತ ವಾದಾಗ ಕಂಪನಿಗಳು ಮತ್ತಷ್ಟು ಹಣವನ್ನು ವ್ಯವಹಾರದಲ್ಲಿ ತೊಡಗಿಸಬೇಕಿರುವುದಿಲ್ಲ. ಗಳಿಸಿದ ಹಣದ ಒಂದು ಭಾಗವನ್ನು ಷೇರುದಾರರಿಗೆ ಡಿವಿಡೆಂಡ್ ಮೂಲಕ ಹಂಚಿ ಖುಷಿ ಗೊಳಿಸುತ್ತವೆ. ಹೆಚ್ಚಿನ ಬೆಲೆಗೆ ಅವರಿಂದ ಷೇರುಗಳನ್ನು ವಾಪಸ್ ಕೊಂಡುಕೊಳ್ಳುವ (buy-back) ಪರಿಪಾಠವೂ ಉಂಟು.
ಡಿವಿಡೆಂಡ್ ಹಂಚಿಕೆಯಿಂದ ಕಂಪನಿಗಳ ಷೇರುಗಳು ಹೆಚ್ಚು ಆಕರ್ಷಣೀಯವಾಗುತ್ತವೆ. ಎರಡನೇ ಮಾರ್ಗವನ್ನನುಸರಿಸಿದಾಗ ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಹೆಚ್ಚುತ್ತದೆ. ಈ ಎರಡೂ ಕಾರಣಗಳಿಂದ ಷೇರುಗಳ ಮೌಲ್ಯ ವೃದ್ಧಿಯಾಗುತ್ತದೆ. ಭಾರತೀಯ ಆರ್ಥಿಕ ಪರಿವೀಕ್ಷಣಾ ಕೇಂದ್ರದ (Centre for Monitoring Indian Economy) ವರದಿ ಯಂತೆ, ಕೋವಿಡ್ ತಂದ ಬಿಕ್ಕಟ್ಟಿ ನಿಂದ ಕಳೆದ ಮಾರ್ಚ್- ಸೆಪ್ಟೆಂಬರ್ ಅವಧಿಯಲ್ಲಿ 4300 ಲಿಸ್ಟೆಡ್ ಕಂಪನಿಗಳ ವರಮಾನ ಶೇಕಡಾ 9ರಷ್ಟು ಕುಸಿಯಿತು.
ಆದರೆ (ಹಣದುಬ್ಬರದ ಜತೆಗೆ ಹೊಂದಿಸಿ ನೋಡಿದಾಗ) ಅವುಗಳ ನಿವ್ವಳ ಲಾಭ ಶೇಕಡಾ 740! ಇಂತಹ ವೈರುಧ್ಯಗಳ ಹಿಂದೆ
ಸಿಬ್ಬಂದಿ ಸಂಬಳದ ಬಿಲ್‌ನಲ್ಲಿ ಶೇಕಡಾ 3ರಷ್ಟು ಇಳಿಕೆಯಂತಹ ಅಂಶಗಳೂ ಕಾರಣವಾಗಿರುತ್ತವೆ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯಭಾರವಿಲ್ಲ ಅನ್ನುವಂತೆ ಬಹುತೇಕ ಆರ್ಥಿಕ ನೀತಿಗಳಿಂದ ನರಳುವುದು ಮಧ್ಯಮ ವರ್ಗವೇ ಎಂಬ ನಂಬಿಕೆ ಇದೆ. ಇದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಕೋವಿಡ್ ಮಾರಿ ಸೃಷ್ಟಿಸಿದ ಆರ್ಥಿಕ ಸಂಕಷ್ಟದಿಂದ ಕಂಗಾಲಾದವರಲ್ಲಿ ಬಡವರ್ಗವೂ ಸೇರಿದೆ. ತೀರಾ ಕೆಳವರ್ಗದ ಮಂದಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಕಡಿಮೆ. ಮಧ್ಯಮ ವರ್ಗದ ಹಲವಾರು ಜನರಲ್ಲಿ ಷೇರು ಮಾರುಕಟ್ಟೆಯೆಂದರೆ ಜೂಜಾಟವೆಂಬ ನಂಬಿಕೆ ಪ್ರಬಲವಾಗಿದೆ.
ಆ ತಪ್ಪು ಕಲ್ಪನೆಯನ್ನು ನಿವಾರಿಸುವುದರ ಜತೆಗೆ, ಪ್ರಸಕ್ತ ದುಸ್ತರ ಪರಿಸ್ಥಿತಿಯಲ್ಲಿ ಷೇರು ಮಾರುಕಟ್ಟೆಯಿಂದ ದೀರ್ಘಾವಧಿ ಲಾಭವನ್ನು ಪಡೆಯಬಹುದೆಂದು ವಿವರಿಸುವುದು ಈ ಲೇಖನದ ಉದ್ದೇಶ. ಉಳಿತಾಯವೇ ಬೇರೆ, ಹಣಹೂಡಿಕೆಯೇ ಬೇರೆ ಎಂಬುದು ಮೊದಲಿಗೆ ತಿಳಿಯಬೇಕಾದ ಮುಖ್ಯ ಅಂಶ. ರಾಷ್ಟ್ರೀಕೃತ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ನಿಮ್ಮ ಹಣಕ್ಕೆ ಸಿಗುವ ಬಡ್ಡಿ ದರ ಸರಾಸರಿ ಶೇಕಡಾ 3. ಇತ್ತೀಚೆಗೆ ಮುಂಚೂಣಿಗೆ ಬರುತ್ತಿರುವ ಸಣ್ಣ –ನಾ ಬ್ಯಾಂಕ್‌ಗಳು ಪ್ರತಿಶತ ಆರರಿಂದ ಏಳರಷ್ಟು ಬಡ್ಡಿ ನೀಡುತ್ತವೆಯಾದರೂ, ಅವು ಸಾರ್ವಜನಿಕರ ಸಂಪೂರ್ಣ ಭರವಸೆಯನ್ನು ಗಳಿಸಿಕೊಂಡಿಲ್ಲ.
(ಇದರಲ್ಲಿ ಬ್ಯಾಂಕ್‌ಗಳ ತಪ್ಪೇನಿಲ್ಲ!) ಇನ್ನು ದೀರ್ಘಾವಧಿ ಠೇವಣಿಯ ಬಡ್ಡಿ ದರವೂ ಕೇವಲ ಐದರಿಂದ ಆರು ಪರ್ಸೆಂಟ್ ಇದೆ. ಇದು ಮತ್ತಷ್ಟು ಕಡಿಮೆಯಾಗುತ್ತಾ ಹೋಗುತ್ತದೆ ಹೊರತು ಜಾಸ್ತಿಯಾಗುವುದಿಲ್ಲ. ಹಣಕಾಸಿನ ಯೋಜನೆಯನ್ನು ತಯಾರು ಮಾಡುವಾಗ ಹಣ ದುಬ್ಬರ ದಿಂದುಂಟಾಗುವ ಆರ್ಥಿಕ ಸವೆತವನ್ನೂ ಗಣನೆಗೆ ತೆಗೆದು ಕೊಳ್ಳಲಾಗುತ್ತದೆ. ಕುಟುಂಬದ ಮಟ್ಟ ದಲ್ಲೂ ಈ ಮುಖ್ಯ ಅಂಶವನ್ನು ಪರಿಗಣಿಸುವುದು ಅವಶ್ಯಕ. ವರ್ಷಂಪ್ರತಿ ಸರಾಸರಿ ಶೇ.7ರಷ್ಟು ಸವಕಳಿ ಎಂದಿಟ್ಟುಕೊಳ್ಳ ಬಹುದು.
ಠೇವಣಿಯಲ್ಲಿಟ್ಟ ಹಣ ಬೆಳೆಯುವುದಿಲ್ಲ, ಸೊರಗುತ್ತದೆ ಎಂಬ ಅಂಶ ಸುಮಾರು ಮಂದಿಗೆ ತಿಳಿಯದ ವಿಚಾರ. ವರ್ಷಂಪ್ರತಿ ನಿಮ್ಮ ಹಣ ಶೇಕಡಾ ಏಳರಷ್ಟು ಬೆಳೆದರೂ, ಅದು ಹಣದುಬ್ಬರದಿಂದಾದ ಹಿನ್ನಡೆಯನ್ನು ಸರಿದೂಗಿಸುತ್ತದೆ ಅಷ್ಟೆ. ಆದಾಯ ವನ್ನೊದ ಗಿಸುವುದಿಲ್ಲ. ಒಂದೇ ಸ್ಥಳದಲ್ಲಿ ನಿಂತು ಜಾಗ್ ಮಾಡಿದಂತೆ. ಮೇಲಾಗಿ, ಹತ್ತು ವರ್ಷದಷ್ಟು ಸುದೀರ್ಘಾವಧಿಯ
ಠೇವಣಿಯನ್ನು ಯಾವುದೇ ಬ್ಯಾಂಕ್ ಸ್ವೀಕರಿಸುವುದಿಲ್ಲ.
ಬ್ಯಾಂಕ್‌ನಲ್ಲದೇ ಖಾಸಗಿ ಕಂಪನಿ (Non-Banking Finance Company)ಗಳು ನೀಡುತ್ತಿದ್ದ ಬಡ್ಡಿ ದರ ಗಳೂ ಗಣನೀಯವಾಗಿ ಇಳಿದಿವೆ. ಅವು ಸ್ವೀಕರಿಸುವ ಠೇವಣಿ ಕೂಡ ಗರಿಷ್ಠ ಮೂರು ವರ್ಷದ ಅವಧಿಯದ್ದಾಗಿರುತ್ತದೆ. ದಿವಾ ಹೌಸಿಂಗ್ -ನಾ ಲಿಮಿಟೆಡ್ (DHFL) ಹಗರಣ ಠೇವಣಿದಾರರನ್ನು ಕಂಗೆಡಿಸಿದ್ದು ಅವರ ವಿಶ್ವಾಸವನ್ನೂ ಹಾಳುಗೆಡವಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಉತ್ತಮ ಆಯ್ಕೆ. ಷೇರು ಪೇಟೆ ಬಾಜಿ ಕಟ್ಟಿದಂತಲ್ಲ. ಅನಿಶ್ಚಿತತೆ ಎಲ್ಲಿಲ್ಲ. ನಿಮಗಿದು ನೆನಪಿರಲಿ.
ಬ್ಯಾಂಕ್‌ನಲ್ಲಿ ನೀವಿಟ್ಟ ಠೇವಣಿಗೂ ಯಾವುದೇ ಖಾತರಿ ಇಲ್ಲ. ರಾಷ್ಟ್ರೀಕೃತ ಬ್ಯಾಂಕಿರಬಹುದು, ಖಾಸಗಿ ಇರಬಹುದು,
ಮುಳುಗಡೆಯಾದರೆ, ನಿಮ್ಮ ಠೇವಣಿಯ ಮೊತ್ತ ಕೋಟಿಯೇ ಆಗಿದ್ದರೂ ನಿಮಗೆ ಸಿಗುವುದು ಕೇವಲ ಐದು ಲಕ್ಷ. ಈ ಹಗಲು ಅನ್ಯಾಯವನ್ನು ಅದೇಕೊ ಯಾವುದೇ ಗ್ರಾಹಕರು ಪ್ರಶ್ನಿಸಿಲ್ಲ. ವಿಮಾನ ಪ್ರಯಾಣ ರಸ್ತೆ ಮತ್ತು ರೈಲು ಪ್ರಯಾಣಕ್ಕಿಂತ ಹೆಚ್ಚು ಸುರಕ್ಷಿತವೆಂಬುದನ್ನು ಅಂಕಿ ಅಂಶಗಳು ತೋರುತ್ತವೆ. ಆದರೂ, ವಿಮಾನ ಪ್ರಯಾಣದ ವೆಚ್ಚ ಭರಿಸಬಲ್ಲ ಅನೇಕರು ಹಾರಾಟ ಮಾಡುವುದಕ್ಕೆ ಹೆದರುತ್ತಾರೆ.
ಷೇರು ಮಾರುಕಟ್ಟೆ ಪ್ರವೇಶಿಸಲು ಜನ ಹಿಂಜರಿಯುವುದಕ್ಕೂ ಅಂಥದೇ ಭಯ. ದ್ವಿಚಕ್ರವಾಹನದಲ್ಲಿ ಹತ್ತು ಕಿಮೀ ವೇಗದಲ್ಲಿ ಸಂಚರಿಸುವಾಗ ಅಕಸ್ಮಾತ್ ಬಿದ್ದರೂ ಪ್ರಾಣಾಪಾಯವಿದೆ. ಅನಿಶ್ಚಿತತೆ ಎಡೆ ಇದೆ. ಕೋವಿಡ್ ಅದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ಅಷ್ಟೆ ಪರಿಣಾಮಗಳನ್ನು ಎದುರಿಸುತ್ತಲೇ ಮುನ್ನಡೆಯ ಬೇಕು. ಹೊಸ ಸವಾಲುಗಳಿಗೆ ಮನಸ್ಸು ತೆರೆದುಕೊಳ್ಳಬೇಕು. ಹಾಗಂತ ಎಚ್ಚರಿಕೆವಹಿಸಬಾರದಂತಲ್ಲ. ಅನಿಶ್ಚಿತತೆ ಇರುವುದರಿಂದಲೇ ಅಲ್ಲವೇ ಜಾಗರೂಕತೆವಹಿಸಬೇಕಾದದ್ದು?
ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಉಳಿತಾಯವಲ್ಲ, ಬಂಡವಾಳ ಹೂಡುವಿಕೆ. ಬಹಳಷ್ಟು ಹೂಡಿಕೆದಾರ
ರಿಗೂ ತಿಳಿಯದ ಮುಖ್ಯ ಅಂಶವೊಂದಿದೆ. ಕಂಪನಿ ಯೊಂದರ ಷೇರುಗಳನ್ನು ಕೊಳ್ಳುವುದೆಂದರೆ ಆ ಕಂಪನಿಯ ಪಾಲುದಾರ ನಾಗುವುದು. ಅದರ ಆಗುಹೋಗುಗಳ ಹೊಣೆ ಹೊರುವುದು. ಅದರಲ್ಲಿ ನಿಮ್ಮ ದನಿಗೂ ಮೌಲ್ಯವಿದೆ.
ಇನೋಸಿಸ್ ಕಂಪನಿಯ ಷೇರುದಾರರಾಗಿದ್ದ ಮೋಹನ್ ದಾಸ್ ಪೈ, ಅದರ ವಾರ್ಷಿಕ ಸಭೆಯಲ್ಲಿ ಪ್ರಸ್ತಾಪಿಸಿದ ವಿಚಾರ
ಗಳಿಂದ ಚಕಿತವಾದ ಸಂಸ್ಥೆ ಅವರ ಪ್ರತಿಭೆ/ಒಳ ನೋಟದ ತೀಕ್ಷ್ಣತೆಯ ಲಾಭ ಪಡೆಯಲು ಅವರನ್ನು ಬೋರ್ಡ್‌ಗೆ ನೇಮಕ ಮಾಡಿತು. ಆನಂತರದಲ್ಲಿ ಅವರು ಇನ್ಫೋಸಿಸ್‌ಗೆ ನೀಡಿದ ಅಪಾರ ಕೊಡುಗೆ ನಿಮಗೆ ತಿಳಿದೇ ಇದೆ. ಇನೋಸಿಸ್ ಪಬ್ಲಿಕ್ ಇಶ್ಯೂ ನೀಡಿದಾಗ ಅದಕ್ಕೆ ಬೇಡಿಕೆ ಇರಲಿಲ್ಲ.
1993ರಲ್ಲಿ ಅದರ ಷೇರೊಂದರ ಬೆಲೆ 85. ಅಂದು ನೀವು ನೂರು ಷೇರುಗಳನ್ನು ಕೊಂಡು ತೆಪ್ಪಗಿದ್ದಿದ್ದರೂ, ಇಂದು ನಿಮ್ಮಲ್ಲಿ 51200 ಇನೋಸಿಸ್ ಷೇರುಗಳಿರುತ್ತಿದ್ದವು. ನಿಮ್ಮ 9500 ರು. ಬಂಡವಾಳ 27 ವರ್ಷಗಳಲ್ಲಿ ಆಲದ ಮರದಂತೆ 60,47,720 ರುಪಾಯಿಯಾಗುತ್ತಿತ್ತಷ್ಟೇ ಅಲ್ಲದೆ ಲಕ್ಷಾಂತರ ರುಪಾಯಿಗಳ ಬಿಳಲುಗಳು ನಿಮ್ಮ ಬೊಕ್ಕಸಕ್ಕೆ ಬೀಳುತ್ತಿದ್ದವು. ಬೆಂಗಳೂರಿನದೇ ಮತ್ತೊಂದು ಕಂಪನಿಯ ಬೆಳವಣಿಗೆ ನೋಡಿದರೆ ನಿಮಗೆ ಗರಬಡಿದು ಮಾತು ನಿಂತುಹೋಗುತ್ತದೆ.
1980 ರಲ್ಲಿ ನೀವು ಎರಡು ಲಕ್ಷ ಹೂಡಿದ್ದರೆ, ನಾಲ್ಕು ವರ್ಷಗಳ ಕೆಳಗೆ ಅದು ಪರ್ವತದೆತ್ತರಕ್ಕೆಏರಿ ನೀವು ೮೧೦೦ ಕೋಟಿ ರುಪಾಯಿಯ ಕೊಪ್ಪರಿಗೆಯ ಮೇಲೆ ಕುಳಿತಿರು ತ್ತಿದ್ದಿರಿ. 37 ವರ್ಷಗಳ ಹಿಂದೆ ಕೆಳಮಧ್ಯಮ ವರ್ಗದ ನಮ್ಮಷ್ಟು ಜನ ಎರಡು ಲಕ್ಷವಿರಲಿ, ಇಪ್ಪತ್ತೈದು ಸಾವಿರ ಕಂಡಿದ್ದೇವೆಂಬುದು ಬೇರೆ ಮಾತು. ಅಂದು ನೀವು ರುಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರೂ ಇಂದು ಅದರ ಬೆಲೆ ಸುಮಾರು ನಾಲ್ಕು ಕೋಟಿಯಷ್ಟು.
ಎಣೆಯಿಲ್ಲದ ಅಭ್ಯುದಯಕ್ಕೆ ಕೇವಲ ಎರಡು ಕಂಪನಿಗಳ ಉದಾಹರಣೆಯಲ್ಲ. ಭಾಗ್ಯಲಕ್ಷ್ಮಿ ನೀವು ಸುಮ್ಮನಿದ್ದರೂ ಆಗಮಿಸಿ, ಮಂಡಿ ನೋವಿನಿಂದ ಹೊರಗಡೆ ಹೋಗದೆ ನಿಮ್ಮ ಮನೆಯ ಠಳಾಯಿಸುವಂತೆ ಮಾಡಬಲ್ಲ ಬೇರೆ ಕಂಪನಿಗಳೂ ಇವೆ. ಐಕರ್ ಮೋಟಾರ್, ಎಂಆರ್‌ಎಫ್, ಸಿಂಫೋನಿ, ಪೇಜ್ ಇಂಡಸ್ಟ್ರೀಸ್, ಹೀರೊ ಮೋಟಾರ್ಸ್, ಅಬ್ಬಾಟ್, ಇತ್ಯಾದಿಗಳನ್ನು ಹೆಸರಿಸಬಹುದು.
ಯಾವುದೇ ರಂಗದಲ್ಲಿ ಉತ್ತಮವಾದದ್ದು, ಸಾಧಾರಣವಾದದ್ದು, ಕಳಪೆಯಾದದ್ದು ಇರುತ್ತವೆ. ಕಳಪೆ ಆಸ್ಪತ್ರೆಗಳೂ ಉಂಟು, ಗಲೀಜು ಹೊಟೆಲ್‌ಗಳು ಉಂಟು, ಮೂರುಕಾಸಿನ ವೃತ್ತಪತ್ರಿಕೆಗಳೂ ಉಂಟು. ಜೊಳ್ಳು-ಗಟ್ಟಿಗಳನ್ನು ಪ್ರತ್ಯೇಕಿ ಸುವುದು ಗ್ರಾಹಕನಿಗೆ ಬಿಟ್ಟಿದ್ದು. ಷೇರು ಕೊಳ್ಳುವಿಕೆಯಲ್ಲೂ ಹಾಗೆ. ನನ್ನ ಹಲವು ವರ್ಷಗಳ ಅನುಭವದಲ್ಲಿ ಹೇಳುವುದಾದರೆ, ಇಲ್ಲಿ ಯಾರೂ ಸರ್ವಜ್ಞರಲ್ಲ. ರಿಯಲ್ ಎಸ್ಟೇಟ್ ಮತ್ತು ಸ್ಟಾರ್‌ಗಳಿಗೆ ಸಂಬಂಧಪಟ್ಟಂತೆ ಪರಿಣತರಿಗೆ ತಿಳಿದಿರುವ ಬಹಳಷ್ಟು ವಿಷಯಗಳು ತಿಳಿವಳಿಕೆ ಇರುವ ಜನಸಾಮಾನ್ಯರಿಗೂ ಇರುತ್ತದೆ.
ಪರಿಣತರೆಂದು ಪರಿಗಣಿಸಲ್ಪಟ್ಟ ಅನೇಕರು ಎಡವುತ್ತಾರೆ. ಎಂಆರ್‌ಎಫ್ ಕಂಪನಿಯ ಒಂದು ಷೇರು 35 ರುಪಾಯಿಗೆ ಸಿಗುತ್ತಿದ್ದ ಕಾಲದಲ್ಲಿ ಅದು ಕೊಳ್ಳಬೇಡಿರೆಂದು ಒಬ್ಬ ಪರಿಣಿತ ಹೇಳಿದ್ದ. ಅದರ ಇಂದಿನ ಬೆಲೆ 92000 ದ ಆಸುಪಾಸಿನಲ್ಲಿದೆ. ವಾಣಿಜ್ಯ ವ್ಯವಹಾರಗಳಿಗೇ ಮೀಸಲಾದ ಪತ್ರಿಕೆಗಳಿಗೆ, ನಿಯತಕಾಲಿಕೆಗಳಿಗೆ ಬರೆಯುವ ಪರಿಣತರೂ ತಪ್ಪು ಸಲಹೆ ನೀಡಿದ ಪ್ರಸಂಗಗಳಿವೆ.
ಇದನ್ನು ಪತ್ತೆ ಮಾಡಲು ಹೀಗೆ ಮಾಡಿ: ಯಾವುದಾದರೂ ನಿಯತಕಾಲಿಕೆಯಲ್ಲಿ ಕಳೆದ ವರ್ಷಗಳಲ್ಲಿ ನೀಡಲಾದ ಟಿಪ್ಸ್ ಅನ್ನು ಪರಾಮರ್ಶಿಸಿ ಆ ಸಲಹೆಗಳಂತೆ ಸಂಬಂಧಿಸಿದ ಷೇರುಗಳು ಏರಿಕೆ ಕಂಡವೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಿ. ಷೇರು ಮಾರುಕಟ್ಟೆಗೆ ಪ್ರವೇಶಿಸಲು ವಿವೇಕ, ತಾಳ್ಮೆ, ಜಾಣ್ಮೆ, ಅದೆಲ್ಲಕ್ಕಿಂತ ಮಿಗಿಲಾಗಿ ನಿರ್ಲಿಪ್ತತೆ ಅತ್ಯವಶ್ಯಕ. ಮಾರುಕಟ್ಟೆಯ ನಿಯಮ ಗಳು ಹಿಂದಿನಂತಿಲ್ಲ. ವರ್ಷಗಳ ಹಿಂದೆ ನೀವು ಷೇರುಗಳನ್ನು ಲಾಟ್‌ನಲ್ಲಿ ಈಗ ವ್ಯವಸ್ಥೆ ಬದಲಾಗಿದೆ. ಯಾವುದೇ ಕಂಪನಿಯ ಒಂದೇ ಒಂದು ಷೇರ್ ಕೂಡ ಲಭ್ಯ. ಅಷ್ಟೇ ಏಕೆ, ನೀವು ವಿದೇಶಿ ಮಾರುಕಟ್ಟೆಯನ್ನೂ ಪ್ರವೇಶಿಸಬಹುದು. ಅಮೆರಿಕದ ಕಂಪನಿಯ ಷೇರೊಂದರ ಭಾಗವನ್ನು ಕೊಳ್ಳಲೂ ಅವಕಾಶವಿದೆ.
ಸಣ್ಣ ಪ್ರಮಾಣದಿಂದ ಆರಂಭ ಮಾಡಿ. ಜಟ್ಟಿಗಳಿಂದ ಪ್ರಭಾವಿತರಾದ ತರುಣರು ಜಿಮ್ ಸೇರಿದ ವಾರದ ಅವರಂತಹ ದೇಹ ದೃಢತೆ ಬರಲೆಂದು ಬಯಸುತ್ತಾರೆ. ದಿನ ನಿತ್ಯವೂ ಬೈಸೆಪ್ಸ್ ಅನ್ನು ಕನ್ನಡಿಯಲ್ಲಿ ನೋಡುತ್ತಾ, ದಾರಾ ಸಿಂಗ್ ಮೊಮ್ಮಗ
ತಾನೆಂದು ಭ್ರಮಿಸುತ್ತಾನೆ. ಷೇರು ಮಾರುಕಟ್ಟೆಯ ಪಟ್ಟಿಯನ್ನು ನಿತ್ಯ ನೋಡುತ್ತಿದ್ದರೆ ಅವುಗಳ ಬೆಲೆ ಏರುವುದಿಲ್ಲ. ಸಹನೆ ಬೇಕು. ಒಂದು ಹಂತದ ನಂತರ ನಿಮ್ಮ ಪೋರ್ಟ್ ಪೋಲಿಯೋ ಬೆಳೆದಂತೆ ಅದನ್ನು ಪೋರ್ಟ್ ಪೋಲಿಯೋ ನಿರ್ವಹಿಸುವ ವೃತ್ತಿಪರರಿಗೆ ಕೊಡಬಹುದು.
ಸ್ವಂತ ಮನೆ, ಮಕ್ಕಳ ವಿದ್ಯಾಭ್ಯಾಸ ಮತ್ತು ವಿವಾಹ, ಅನಾರೋಗ್ಯ ಸಂಬಂಧಿ ಅನಿರೀಕ್ಷಿತ ಬೆಳವಣಿಗೆಗಳು ಮುಂತಾದುವೆಲ್ಲದರ ಖರ್ಚನ್ನು ನೀಗಲು ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಉತ್ತಮ ಮಾರ್ಗ. ದೀರ್ಘಾವಽ ಮಾರುಕಟ್ಟೆಯಲ್ಲಿ ನಿಲ್ಲು ವುದು ಮುಖ್ಯ