Thursday, 15th May 2025

Shriram Kalyanram Column: ಬ್ಯಾಂಕ್ ರಕ್ಷಣೆಗೆ ಏಕೆ ಖಾಸಗೀಕರಣ ಉತ್ತರವಲ್ಲ !

ಅವಲೋಕನ

ಶ್ರೀರಾಮ್‌ ಕಲ್ಯಾಣರಾಮ್

ಭಾರತ ಸರಕಾರವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು(ಪಿಎಸ್‌ಬಿ) ಖಾಸಗೀಕರಣಗೊಳಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತಿದೆ ಮತ್ತು ಈ ಕುರಿತು ಹಲವಾರು ಸಲಹೆಗಳೂ ಬಂದಿವೆ. ಭಾರತದಲ್ಲಿ, ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು 1960ರ ದಶಕದ ಉತ್ತರಾರ್ಧದಲ್ಲಿ ರಾಷ್ಟ್ರೀಕರಣಗೊಳಿಸಿದಾಗಿನಿಂದಲೂ ಅವು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಅನುತ್ಪಾದಕ ಆಸ್ತಿಗಳು (ಎನ್‌ಪಿಎ),

ಕಾರ್ಯ ದಕ್ಷತೆ ಹೊಂದಿರದ ಉದ್ಯೋಗಿಗಳನ್ನು ವಜಾಗೊಳಿಸುವಲ್ಲಿ ಯಶಸ್ವಿಯಾಗಿವೆ. 2023ರ ಏಪ್ರಿಲ್‌ನಿಂದ ಸೆಪ್ಟೆಂಬರ್ ಹೊತ್ತಿಗೆ, ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) 1.99 ಲಕ್ಷ ಕೋಟಿ ನಿವ್ವಳ ಬಡ್ಡಿ ಆದಾಯವನ್ನು ವರದಿ ಮಾಡಿವೆ, ಇದು ಖಾಸಗಿ ವಲಯದ ಬ್ಯಾಂಕುಗಳು ದಾಖಲಿಸಿದ 1.77 ಲಕ್ಷ ಕೋಟಿ ರು. ನಿವ್ವಳ ಬಡ್ಡಿ ಆದಾಯಕ್ಕಿಂತಲೂ ತುಸು ಹೆಚ್ಚು ಎನ್ನುವುದು ಅಂಕಿ ಅಂಶಗಳನ್ನು ನೋಡಿದರೆ ತಿಳಿಯುತ್ತವೆ.

ಖಾಸಗಿ ವಲಯದ ಬ್ಯಾಂಕ್‌ಗಳು ಹೊಂದಿರುವ 68.63 ಲಕ್ಷ ಕೋಟಿ ರು. ಠೇವಣಿ ಮತ್ತು 63.76 ಲಕ್ಷ ಕೋಟಿ ರು. ಸಾರ್ವಜನಿಕ ವಲಯದ ಬ್ಯಾಂಕ್ ಗಳು 122.13 ಲಕ್ಷ ಕೋಟಿ ರು. ಠೇವಣಿ ಮತ್ತು 87.63 ಲಕ್ಷ ಕೋಟಿ ರು.ಸ್ವತ್ತುಗಳ ಮೂಲಕ ಪ್ರಬಲ ಸ್ಥಾನವನ್ನು ಉಳಿಸಿಕೊಂಡಿವೆ.

ಆದಾಯದಲ್ಲಿ ವ್ಯಾಪಕ ಅಸಮಾನತೆಗಳಿರುವ ಭಾರತದಂತಹ ದೇಶದಲ್ಲಿ, ಬ್ಯಾಂಕಿಂಗ್ ಕೇವಲ ಲಾಭ-ಚಾಲಿತ ವಾಗಿರಬಾರದು. ಅದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯತ್ತಲೂ ಗಮನ ಹರಿಸಬೇಕು. ಹಲವು ವರ್ಷಗಳಲ್ಲಿ ಹತ್ತಾರು ಸವಾಲುಗಳನ್ನು ಎದುರಿಸುತ್ತಿದ್ದರೂ, ಈ ಬ್ಯಾಂಕುಗಳು ವಿವಿಧ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಆಯಾಮಗಳಲ್ಲಿ ತಮ್ಮ ನಿರ್ಣಾಯಕ ಪ್ರಾಮುಖ್ಯತೆಯನ್ನು ಪ್ರದರ್ಶಿಸಿವೆ.

ಆರ್ಥಿಕ ಸೇರ್ಪಡೆ
ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್‌ಬಿ) ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಮುನ್ನಡೆಸುವಲ್ಲಿ ನಿರ್ಣಾಯಕವಾಗಿವೆ, ಮುಖ್ಯವಾಗಿ ಅವುಗಳ ವ್ಯಾಪಕವಾದ ಶಾಖೆ ಜಾಲವು ಇದಕ್ಕೆ ಕಾರಣವಾಗಿದೆ. 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಸುಮಾರು 87,526 ಶಾಖೆಗಳನ್ನು ಹೊಂದಿವೆ. ಈ ಪೈಕಿ 28,884 ಶಾಖೆಗಳು ಗ್ರಾಮೀಣ ಪ್ರದೇಶಗಳಲ್ಲಿವೆ. ಖಾಸಗಿ ವಲಯಕ್ಕೆ ಹೋಲಿಸಿದರೆ, ಒಟ್ಟು ಸುಮಾರು 38000 + ಶಾಖೆಗಳನ್ನು ಹೆಚ್ಚಿಗೆ ಹೊಂದಿದೆ. ಈ ಶಾಖೆಗಳ ಜಾಲವು ಬ್ಯಾಂಕಿಂಗ್ ಸೌಲಭ್ಯವಿದಿಂದ ದೂರವಿರುವ ಪ್ರದೇಶ ಮತ್ತು ಜನರನ್ನು ತಲುಪಲು ಪಿಎಸ್‌ಬಿಗಳಿಗೆ ಅನುವು ಮಾಡಿಕೊಡುತ್ತದೆ. ಮಾರ್ಚ್ 2023ರ ಹೊತ್ತಿಗೆ, ಪಿಎಸ್ ಬಿಗಳು ಒಟ್ಟು 12.77 ಲಕ್ಷ ಕೋಟಿ ರು.ಗಳ (154 ಶತಕೋಟಿ ಡಾಲರ್) ಕೃಷಿ ಸಾಲಗಳನ್ನು ಬಾಕಿ ಉಳಿಸಿಕೊಂಡಿದ್ದರೆ, 21 ಖಾಸಗಿ ವಲಯದ ಬ್ಯಾಂಕುಗಳಲ್ಲಿ ಈ ಪ್ರಮಾಣ 7.53 ಲಕ್ಷ ಕೋಟಿ ರು. (90 ಶತಕೋಟಿ ಡಾಲರ್)ಆಗಿದೆ.

ಪಿಎಸ್‌ಬಿಗಳು ಈ ಸಾಲಗಳಲ್ಲಿ ಸುಮಾರು ಶೇ.58ಎಷ್ಟು ಸಣ್ಣ ಮತ್ತು ಅತಿಸಣ್ಣ ರೈತರಿಗೆ ಹಂಚಿಕೆ ಮಾಡಿವೆ, ಈ ವಿಚಾರದಲ್ಲಿ ಖಾಸಗಿ ಬ್ಯಾಂಕುಗ ಶೇ.47ರ ಪಾಲಿಗೆ ಹೋಲಿಸಿದರೆ, ಕೃಷಿ ಸಾಲದಲ್ಲಿ ಪಿಎಸ್ ಬಿಗಳು ವಹಿಸುವ ಮಹತ್ವದ ಪಾತ್ರವನ್ನು ಎತ್ತಿ ತೋರಿಸುತ್ತದೆ.

ಮಾರ್ಚ್ ೨೦೨೩ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ, ಪಿಎಸ್‌ಬಿಗಳು 1.71 ಲಕ್ಷ ಕೋಟಿ ರು.ಗಳನ್ನು
ಮುದ್ರಾ ಸಾಲಗಳ ರೂಪದಲ್ಲಿ ವಿತರಿಸಿದರೆ, ಖಾಸಗಿ ವಲಯದ ಬ್ಯಾಂಕುಗಳು 1.41 ಲಕ್ಷ ಕೋಟಿ ರು. ಮೊತ್ತದ
ಮುದ್ರಾ ಸಾಲಗಳನ್ನು ನೀಡಿವೆ.

ಸಾರ್ವಜನಿಕ ವಲಯದ ಬ್ಯಾಂಕುಗಳ ಪುನಾರಚನೆಗೆ ಕ್ರಮಗಳು
ನಿರ್ದೇಶಕರ ಮಂಡಳಿಗೆ ವೃತ್ತಿಪರರನ್ನು ನೇಮಿಸುವುದು. ಉನ್ನತ ಮಟ್ಟದ ವ್ಯವಸ್ಥಾಪಕರು ಸಚಿವಾಲಯಕ್ಕೆ ಉತ್ತ
ರದಾಯಿ ಗಳಾಗಿರುವುದಕ್ಕಿಂತಲೂ ನಿರ್ದೇಶಕ ಮಂಡಳಿಗೆ ಸಮಗ್ರ ರೀತಿಯಲ್ಲಿ ಉತ್ತರದಾಯಿಗಳಾಗಿರಬೇಕು. ರಾಜ್ಯ ಭಾಷೆ, ಪ್ರಾದೇಶಿಕ ಜಿ ಮಟ್ಟದ ಸಮಿತಿಗಳಿಗೆ ಹಾಜರಾಗುವುದು ಮುಂತಾದ ಪ್ರಮುಖವಲ್ಲದ (ನಾನ್ ಕೋರ್) ಚಟುವಟಿಕೆಗಳನ್ನು ಕೈಬಿಡುವುದು. ಅಪಾಯ, ಖಜಾನೆ ಮುಂತಾದ ಕಾರ್ಯಗಳಿಗೆ ತಜ್ಞರನ್ನು ನೇಮಿಸುವುದು ಮತ್ತು ವರ್ಗಾವಣೆಗಳಿಂದ ಅವರನ್ನು ರಕ್ಷಿಸುವುದು.

5 ವರ್ಷಗಳ ದೃಷ್ಟಿಕೋನ ಮತ್ತು ಕನಿಷ್ಠ 5 ವರ್ಷಗಳ ವರೆಗೆ ಉನ್ನತ ನಿರ್ವಹಣಾ ನಿರಂತರತೆಯನ್ನು ಒದಗಿಸು
ವುದು – ವರ್ಧಿತ ಪ್ರವೇಶ ಮತ್ತು ಸೇವಾ ಶ್ರೇಷ್ಠತೆ (ಇಇಎಸ್) ಸುಧಾರಣೆಗಳು ಇದನ್ನು ಪರಿಹರಿಸುತ್ತವೆ.

ಭಾರತದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಅನುಕೂಲಗಳು ಬಹುಮುಖಿಯಾಗಿದ್ದು, ಕೇವಲ ಹಣಕಾಸು ವಹಿವಾಟುಗಳನ್ನು ಮೀರಿ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಒಳಗೊಂಡಿವೆ. ಪಿಎಸ್‌ಬಿಗಳ ದಕ್ಷತೆ ಮತ್ತು ಲಾಭದಾಯಕತೆಯನ್ನು ಸುಧಾರಿಸಬೇಕೆಂಬ ವಾದಗಳಿವೆಯಾದರೂ, ಖಾಸಗೀಕರಣವು ಇದಕ್ಕೆ ರಾಮ ಬಾಣವಲ್ಲ. ಈ ಬ್ಯಾಂಕುಗಳನ್ನು ರಾಷ್ಟ್ರೀಯ ದ್ಯತೆಗಳ ಕಡೆಗೆ ನಿರ್ದೇಶಿಸುವಲ್ಲಿ ಸರಕಾರದ ಪಾತ್ರವು
ನಿರ್ಣಾಯಕವಾಗಿದೆ.

ಖಾಸಗೀಕರಣಗೊಳಿಸುವ ಬದಲು, ಪಿಎಸ್‌ಬಿಗಳನ್ನು ಸುಧಾರಿಸಲು ಮತ್ತು ಬಲಪಡಿಸಲು ಪ್ರಯತ್ನಗಳನ್ನು ಮಾಡಬೇಕು. ಆ ಮೂಲಕ ಅವು ಆರ್ಥಿಕತೆ ಮತ್ತು ಸಮಾಜದ ವಿಶಾಲ ಹಿತಾಸಕ್ತಿ ಪೂರೈಸುವುದನ್ನು ಮುಂದು ವರಿಸುತ್ತವೆ ಎಂದು ಖಚಿತಪಡಿಸಿಕೊಳ್ಳಬೇಕು. ಈ ವಿಧಾನವು ಲಾಭದಾಯಕತೆ ಮತ್ತು ಸಾಮಾಜಿಕ ಜವಾಬ್ದಾರಿಯ ನಡುವಿನ ಸೂಕ್ಷ್ಮ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ರಾಷ್ಟ್ರಕ್ಕೆ ಸುಸ್ಥಿರ ಮತ್ತು ಅಂತರ್ಗತ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.

(ಲೇಖಕರು: ಬಿಎಫ್‌ ಎಸ್‌ಐ ಸಲಹೆಗಾರರು)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ