ಯಶೋ ಬೆಳಗು
ಯಶೋಧರ ಬೆಳಗೆರೆ
yashomathy@gmail.com
ಮೊದಲ ಬಾರಿಗೆ ಅವರನ್ನು ನೋಡಿದಾಗ ಬೆಂಗಳೂರಿನ ಗಿರಿನಗರದ ಇದ್ದರು. ಶುಭ್ರವಾದ ಕಾಟನ್ ಸೀರೆಯ ಜತೆಗೆ ಹಣೆಯಲ್ಲಿ ದೊಡ್ಡ ಕುಂಕುಮ, ಮೃದುವಾದ ಮಾತಿನೊಡನೆ ಕನ್ನಡಕದ ಹಿಂದಿನ ಕಣ್ಣೊಳಗೆ ಆಳವಾದ ಜ್ಞಾನದ ಪ್ರತಿಬಿಂಬ ಕಂಡಂತಾಯಿತು. ಅವರ ಸ್ವಚ್ಛವಾದ ಕನ್ನಡವನ್ನು ಕೇಳುವುದೇ ಸೊಗಸು.
ಇವತ್ತು ಹತ್ತನೇ ತಾರೀಖು. ನಿಮ್ಮ ಮನೆಗೆ ಬಂದು ಇಂದಿಗೆ ಸರಿಯಾಗಿ ಒಂದು ತಿಂಗಳಾಯಿತು. ಇವತ್ತೇ ಪ್ರತಿಷ್ಠಿತ ಮಾಸ್ತಿ ಪುರಸ್ಕಾರ ಪ್ರಶಸ್ತಿಗೆ ನನ್ನ ಹೆಸರು ಆಯ್ಕೆಯಾದ ಸಿಹಿ ಸುದ್ದಿ ಬಂದಿದೆ. ರವಿ ಮನೆಯ ವಾತಾವರಣದ ಪ್ರಭಾವ ಹಾಗಿದೆ. ಎಲ್ಲರಿ ಗಿಂತ ಮೊದಲು ನಿನ್ನೊಂದಿಗೇ ಈ ಸಂತೋಷವನ್ನು ಹಂಚಿಕೊಳ್ಳುತ್ತಿದ್ದೇನೆ ಎಂದವರ ದನಿಯಲ್ಲಿ ಉಲ್ಲಾಸವೇ ತುಂಬಿ ಹೋಗಿತ್ತು.
ಅವರ ಮನೆಯ ಅಂಗಳಕ್ಕೆ ಕಾಲಿಟ್ಟರೆ ಪುಸ್ತಕ ಹಾಗೂ ಪ್ರಶಸ್ತಿಗಳ ಮಹಾಪೂರವೇ ಕಣ್ಣಿಗೆ ಬೀಳುತ್ತದೆ. ರವಿಯ ಮೂಲಕ ಪರಿಚಯವಾದ ಅನೇಕರಲ್ಲಿ ಇಂದಿಗೂ ಅದೇ ಆಪ್ತತೆ ಯನ್ನು ಉಳಿಸಿಕೊಂಡವರಲ್ಲಿ ಕವಯಿತ್ರಿ ಶಶಿಕಲಾ ವಸ್ತ್ರದ ಅವರೂ ಕೂಡ ಒಬ್ಬರು. ಕೆಲವು ಸಂಬಂಧಗಳು ತರ್ಕಕ್ಕೆ ನಿಲುಕದ್ದು. ಯಾವ ಜನ್ಮದ ಋಣವೋ ಎಂಬಂತೆ ತಂಪಾದ ನೆರಳಿನಂತೆ ಸದಾ ಜತೆ ಜತೆಗೆ ನಡೆದು ಬರುತ್ತವೆ. ಕೆಲವು ನೋವು ಕೊಟ್ಟರೆ, ಕೆಲವು ಒಲವು ತೋರುತ್ತವೆ.
ಕೆಲವು ತಂದಿಟ್ಟು ತಮಾಷೆ ನೋಡಿದರೆ. ಕೆಲವು ಸಂತೈಸಿ ಸಾಂತ್ವನ ನೀಡುತ್ತವೆ. ಕೆಲವು ಕಿಡಿಯನ್ನು ಕಾಳ್ಗಿಚ್ಚಾಗಿಸಿದರೆ, ಕೆಲವು ಚಿಗುರಿಗೆ ನೀರೆರೆದು ಪೋಷಿಸುತ್ತವೆ. ಎಲ್ಲ ರೀತಿಯ ಸಂಬಂಧಗಳೂ ಹಾದು ಹೋಗಿವೆ. ಇಷ್ಟಾದರೂ ಸ್ನೇಹ-ಸಂಬಂಧಗಳಲ್ಲಿ ನಂಬಿಕೆ ಕಳೆದು ಕೊಳ್ಳದೆ ಮತ್ತೆ ಮತ್ತೆ ಎಲ್ಲದರಲ್ಲೂ, ಎಲ್ಲರಲ್ಲೂ ಒಳ್ಳೆಯದನ್ನೇ ಹುಡುಕುತ್ತಾ ಈ ಭಣ ಗುಟ್ಟುವ ಬದುಕನ್ನು ಸ್ವಲ್ಪವಾದರೂ ಹಸನುಗೊಳಸಿಕೊಳ್ಳುವ ನಿರಂತರ ಪ್ರಯತ್ನ ದಲ್ಲಿದ್ದೇನೆ.
ಮೊದಲ ಬಾರಿಗೆ ಅವರನ್ನು ನೋಡಿದಾಗ ನಮ್ಮ ಬೆಂಗಳೂರಿನ ಗಿರಿನಗರದ ಇದ್ದರು. ಶುಭ್ರವಾದ ಕಾಟನ್ ಸೀರೆಯ ಜತೆಗೆ ಹಣೆ ಯಲ್ಲಿ ದೊಡ್ಡ ಕುಂಕುಮ, ಮೃದುವಾದ ಮಾತಿನೊಡನೆ ಕನ್ನಡಕದ ಹಿಂದಿನ ಕಣ್ಣೊಳಗೆ ಆಳವಾದ ಜ್ಞಾನದ ಪ್ರತಿಬಿಂಬ ಕಂಡಂತಾಯಿತು. ಉತ್ತರ ಕರ್ನಾಟಕ ಶೈಲಿಯ ಅವರ ಸ್ವಚ್ಛವಾದ ಕನ್ನಡವನ್ನು ಕೇಳುವುದೇ ಸೊಗಸು. ರವಿಯೊಂದಿಗೆ ಉತ್ತಮ ಸ್ನೇಹವಿತ್ತು. ಕವಿತೆ-ಸಾಹಿತ್ಯದ ನಡುವೆ ಸಾಹಿತ್ಯಲೋಕದ ಸಾಕಷ್ಟು ವಿಷಯಗಳೂ ಸಹ ಚರ್ಚೆಯಾಗುತ್ತಿದ್ದವು.
ಮೊದಲಿಂದಲೂ ಕವಿತೆ-ಸಾಹಿತ್ಯವೆಂದರೆ ಮಾರು ದೂರವಿದ್ದ ನನಗೆ ಇಂದಿಗೂ ಆ ವಲಯದೊಳಗೆ ಪ್ರವೇಶವೇ ಸಿಕ್ಕಿಲ್ಲ. ಆದರೆ ಅವರ ಬಗ್ಗೆ ರವಿ ನೀಡುತ್ತಿದ್ದ ವಿವರಣೆಯಿಂದ ಅವರ ಅಭಿರುಚಿ, ಹಾಗೂ ಜೀವನಾಸಕ್ತಿಗಳು ಸೂಜಿಗಲ್ಲಿನಂತೆ ಸೆಳೆದವು. ಅವರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗುತ್ತಾ ಹೋಯಿತು.
1948ರಲ್ಲಿ ವಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ಶಿಕ್ಷಕ ದಂಪತಿಯ ಎಂಟು ಮಕ್ಕಳಲ್ಲಿ ಎರಡನೆಯವರಾಗಿ ಜನಿಸಿದ ಶಶಿಕಲಾ ವಸದ ಅವರು ಸುಶಿಕ್ಷಿತ ಕುಟುಂಬದ ನುಡವೆಯೇ ಬೆಳೆದವರು. ಕಾಶಿಯಲ್ಲಿ ವೇದಾಧ್ಯಯನ ಮಾಡಿ, ಮಹಾಕವಿಗಳಾದ ಕಾಳಿದಾಸ, ಮಾಘ, ಭಾರವಿ, ಶ್ರೀಹರ್ಷರ ಐದು ಮಹಾಕಾವ್ಯಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಪಂಡಿತ ಬಸವರಾಜ ಶಾಸಿಯವರು ನಮ್ಮ ಅಜ್ಜ. ಅವರ ಕನ್ನಡ ವಿದ್ವತ್ತು, ಸಂಸ್ಕೃತ ಪಾಂಡಿತ್ಯ, ಪದನಿರ್ಮಾಣ ಕೌಶಲ್ಯ, ಚಿತ್ರಶಕ್ತಿ ಬೆರಗು ಹುಟ್ಟಿಸು ವಂಥದ್ದು.
ಅವರ ಅನುವಾದಿತ ಕೃತಿಗಳು ಪಠ್ಯಪುಸ್ತಕಗಳಾಗಿ ಮನ್ನಣೆ ಪಡೆದಿವೆ. ನಮ್ಮೆಲ್ಲರ ಮೇಲೆ ನಮ್ಮ ಅಜ್ಜ ಪಂಡಿತ ಬಸವಾರಜ ವಸ್ತ್ರದ ಅವರ ಆಶೀರ್ವಾದವಿದೆ. ಹೀಗಾಗಿಯೇ ನಮಗೆ ಅಷ್ಟಿಷ್ಟು ಅಕ್ಷರಗಳು ಒಲಿದಿವೆ. ಎಂದು ಹೇಳುತ್ತಾ ಒಪ್ಪವಾಗಿ ಜೋಡಿಸಿ ಟ್ಟಿದ್ದ ತಮ್ಮ ಕೃತಿಗಳನ್ನೆಲ್ಲ ತೋರಿಸುತ್ತಾ ಅದರ ಬಗ್ಗೆ ಪುಟ್ಟ ವಿವರಣೆ ನೀಡಿದರು. ಅದನ್ನೆಲ್ಲ ಕೇಳುತ್ತಾ We listen half,
understand quarter, think zero and react double ಎನ್ನುವ ಮಾತಿನಂತೆ ಇಷ್ಟೆಲ್ಲ ವರ್ಷಗಳಿಂದ ಅವರನ್ನು ನೋಡಿದ್ದರೂ ಅವರ ಸಾಹಿತ್ಯ ಕೃಷಿಯ ಬಗ್ಗೆ ಅರಿವೇ ಮೂಡದಿದ್ದುದು ಕಂಡು ಸ್ವಲ್ಪ ಮುಜುಗರವಾಯಿತು.
ನಿನಗೆ ಬಿಡುವಿದ್ದಾಗ ಬೇಕಾದ ಪುಸ್ತಕವನ್ನು ಒಯ್ದು ಓದುವಿಯಂತೆ ನಿಧಾನವಾಗಿ ಅವಸರವೇನಿಲ್ಲ ಎಂದಾಗ ಸ್ವಲ್ಪ ಮನಸಿಗೆ ಹಗುರಾದಂತೆನಿಸಿತು. ಚಹಾದ ನೆಪದಲ್ಲಿ, ತಿಂಡಿಯ ನೆಪದಲ್ಲಿ, ಸಿನೆಮಾ ನೋಡುವ ನೆಪದಲ್ಲಿ ಸಿಕ್ಕಾಗಲೆಲ್ಲ ಒಂದಷ್ಟು ಪುಸ್ತಕ-ವ್ಯಕ್ತಿ-ವಿಚಾರಗಳ ಚರ್ಚೆ ಈಗ ಜಾರಿಯಲ್ಲಿರುತ್ತದೆ. ಅವರ ಮೂಲಕ ಮನೆಯಲ್ಲಿ ಸಾಹಿತ್ಯದ ಘಮ ಅರಳುತ್ತಿದೆ. ತಿಳಿದಷ್ಟೂ ಅಕ್ಷಯವಾಗುವ ಜ್ಞಾನವನ್ನು ಅವರಿಂದ ಪಡೆದು ಅದನ್ನು ಮುಂದಿನ ಪೀಳಿಗೆಗೆ ದಾಟಿಸುವುದು ಹಾಗೂ ನನ್ನ ಹಾಗೆಯೇ
ತಿಳಿಯಲು ಆಸಕ್ತಿಯಿರುವ ಜನರ ಪುಟ್ಟ ಗುಂಪೊಂದನ್ನು ಮಾಡಿ ಅದರ ಮೂಲಕ ಇನ್ನಷ್ಟು ವಿಸ್ತಾರವಾಗಬೇಕಿದೆ.
ಇಷ್ಟು ವರ್ಷಗಳ ಪರಿಚಯದಲ್ಲಿ ಅವರು ಕ್ರುದ್ಧರಾಗಿ ಆಕ್ರೋಷದಿಂದ ಕೂಗಾಡಿದ್ದು ಒಂದು ದಿನಕ್ಕೂ ನೋಡಿಲ್ಲ. ಅವರ ನೋವು, ಸಂಕಷ್ಟಗಳೆಲ್ಲ ಸಂವೇದನೆಗಳಾಗಿ ಕಾವ್ಯರೂಪ ಪಡೆದುಕೊಂಡಿವೆ. ತಾಯ್ತನದ ಹಂಬಲದಲ್ಲಿ ಅವರು ಅನುಭವಿ ಸಿದ ನೋವು-ನಿರಾಕರಣೆಗಳೆಲ್ಲವನ್ನು ಎದುರಿಸಿಯೂ ಎದೆಗುಂದದೇ, ಹಸನ್ಮುಖಿಯಾಗಿಯೇ ಉಳಿದಿರುವುದು ಅವರ ಜೀವನ್ಮುಖತೆಗೆ ಸಾಕ್ಷಿಯಾಗಿದೆ.
ಎಲ್ಲವುಗಳ ನಡುವೆಯೇ ಅರ್ಧಕ್ಕೇ ನಿಂತು ಹೋಗಿದ್ದ ಓದನ್ನು ಮುಂದುವರಿಸಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 2006ರಲ್ಲಿ ನಿವೃತ್ತರಾಗಿದ್ದಾರೆ. ಈ ಸೇವಾವಧಿಯಲ್ಲಿಯೇ ಅವರು ಮಂಡ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ, ಧಾರವಾಡದ ಪ್ರಾದೇಶಿಕ ಪತ್ರಾಗಾರ ಇಲಾಖೆಯಲ್ಲಿ ಪತ್ರಪಾಲಕರಾಗಿ ಕಾರ್ಯ ನಿರ್ವಹಿಸಿದ್ದೂ ಇದೆ. ಆರು ಕವನ ಸಂಕಲನ, ನಾಲ್ಕು ಗದ್ಯ ಕೃತಿಗಳಲ್ಲದೆ ಹತ್ತು ಪುಸ್ತಕಗಳ ಸಂಪಾದನೆಯ ಗೌರವವೂ ಅವರದಾಗಿದೆ.
ಕರ್ನಾಟಕ ವಿವಿ, ಬೆಂಗಳೂರು ವಿವಿ, ಮಂಗಳೂರು ವಿವಿ, ಮೈಸೂರು ವಿವಿಗಳ ಪದವಿ ತರಗತಿಗಳಿಗೆ ಮತ್ತು ವಿಜಾಪುರದ ಮಹಿಳಾ ವಿಶ್ವವಿದ್ಯಾಲಯ ತರಗತಿಗಳಿಗೆ ಶಶಿಕಲಾರ ಕವಿತೆಗಳು, ಗದ್ಯಪಾಠಗಳು ಪಠ್ಯಕ್ಕೆ ಆಯ್ಕೆಯಾಗಿವೆ. ಅವರ ಕವಿತೆಗಳು ಹಿಂದಿ, ಉರ್ದು, ತೆಲುಗು, ಮರಾಠಿ, ಮಲೆಯಾಳಿ, ಇಂಗ್ಲಿಷ್ ಗಳಿಗೆ ಅನುವಾದವಾಗಿವೆ. ಅಲ್ಲದೇ ಸ್ವತಃ ಹಿಂದಿ, ಉರ್ದುಗಳಿಗೆ ಕವಿತೆ ಗಳನ್ನು ಅನುವಾದಿಸಿದ್ದಾರೆ. ಅಖಿಲ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿ, ದೂರದರ್ಶನ ಆಯ್ಕೆ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಪದವಿಪೂರ್ವ ಶಿಕ್ಷಣ ಸಮಿತಿ ಪಠ್ಯ ಪುಸ್ತಕ ಮಂಡಳಿಗಳ ಸದಸ್ಯೆಯಾಗಿ ಯೂ ಸೇವೆ ಸಲ್ಲಿಸಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಆಂಧ್ರ, ಮಹಾರಾಷ್ಟ್ರ, ದೆಹಲಿಗಳಲ್ಲೂ ಪ್ರವಾಸ ಮಾಡಿ ಸಾಹಿತ್ಯ ಸಂಸ್ಕೃತಿಗೆ ಪೂರಕವಾದ ಉಪನ್ಯಾಸ ನೀಡಿದ್ದಾರೆ. ಆಸ್ಪತ್ರೆಗಳಿಗೆ, ಕನ್ನಡ ಸಂಘ-ಸಂಸ್ಥೆಗಳಿಗೆ ಧನಸಹಾಯ ನೀಡಿರುವುದಲ್ಲದೆ ಮರಣೋತ್ತರ ದೇಹದಾನ ವನ್ನೂ ಘೋಷಿಸಿದ್ದಾರೆ. ಧಾರವಾಡದ ವಿದ್ಯಾವರ್ಧಕ ಸಂಘ ನೀಡುವ ಮಾತೋ ಶ್ರೀ ರತ್ನಮ್ಮ ಹೆಗ್ಗಡೆ ಕಾವ್ಯ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಪದ್ಮಭೂಷಣ ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹಾಗೂ ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗಳು ದೊರೆತಿವೆ.
2006ರ ತಮ್ಮ ನಿವೃತ್ತಿಯ ನಂತರ ಓ ಮನಸೇ ಪಾಕ್ಷಿಕದಲ್ಲಿ ಸಂಪಾದಕೀಯ ವಿಭಾಗದಲ್ಲಿ ಜವಾಬ್ದಾರಿ ಹೊತ್ತಂತಹ ಸಂದರ್ಭ ದಲ್ಲಿ ಅವರೊಡನೆ ಹೆಚ್ಚಿನ ಒಡನಾಟವೇ ರ್ಪಟ್ಟಿತ್ತು. ಆಗಲೂ ಸಾಕಷ್ಟು ಪುಸ್ತಕಗಳ ಪಟ್ಟಿಯನ್ನು ಕೊಟ್ಟು ಇವೆಲ್ಲವನ್ನೂ ಓದು ಎಂದು ಹೇಳುತ್ತಿದ್ದರು. ಒಮ್ಮೆ ಬಸವನಗುಡಿಯಲ್ಲಿರುವ ಅಂಕಿತ ಪುಸ್ತಕ ಮಳಿಗೆಗೆ ಕರೆದೊಯ್ದು ಒಂದಷ್ಟು ಪುಸ್ತಕಗಳನ್ನು ಕೊಡಿಸಿದ್ದರು. ನಿನ್ನೆಲ್ಲ ಜವಾಬ್ದಾರಿಗಳ ನಡುವೆಯೇ ನಿನಗೇ ಅಂತ ಒಂದಿಷ್ಟು ಸಮಯ ಕೊಟ್ಟುಕೊಳ್ಳುವುದನ್ನು ರೂಢಿಸಿಕೊ. ಅದರಿಂದ ಮತ್ತೆ ಕೆಲಸದಲ್ಲಿ ತೊಡಗಿಸಿಕೊಳ್ಳುವ ಉತ್ಸಾಹ ಮೂಡುತ್ತದೆ. ಅದಕ್ಕೆ ಕನ್ನಡದಲ್ಲಿ ಬಹಳ ಒಳ್ಳೆಯ ಶಬ್ದವಿದೆ ಪುನ ರ್ನವ ಎಂದು ಹೇಳಿ ಬೆಳದಿಂಗಳ ರಾತ್ರಿಯಲ್ಲಿ ತಮ್ಮ ಕವಿತಾ ವಾಚನಕ್ಕೆ ತಮ್ಮೊಂದಿಗೆ ಕರೆದೊಯ್ದಿದ್ದರು.
ರಂಗಶಂಕರದಲ್ಲಿ ನಾಟಕಗಳನ್ನು ನೋಡಲು ಕರೆದೊಯ್ಯುತ್ತಿದ್ದರು. ಇದೆಲ್ಲದರೊಂದಿಗೆ ನನ್ನ ಆಸಕ್ತಿಗಳೂ ಅದೇ ಹಾದಿ
ಯಲ್ಲಿದ್ದುದರಿಂದ ಒಡನಾಟದಲ್ಲಿ ಸಂತೋಷವಿರುತ್ತಿತ್ತು. ಇದೆಲ್ಲದರ ನಡುವೆಯೇ ಒಮ್ಮ VRL ಬಸ್ಸಿನಲ್ಲಿ upper berth ನ sleeper coach ನಲ್ಲಿ ಪ್ರಯಾಣಿಸುತ್ತಿದ್ದಾಗ ಅನಾಮತ್ತಾಗಿ ಹಾಕಿದ ಬ್ರೇಕಿನಿಂದಾಗಿ ಗಾಢ ನಿದ್ರೆಯಲ್ಲಿದ್ದವರು ನಿಯಂತ್ರಣ ತಪ್ಪಿ ಕೆಳಮುಖವಾಗಿ ಬಿದ್ದಾಗ ಕುತ್ತಿಗೆ, ಬೆನ್ನುಮೂಳೆಗೆ ಸರಿಯಾಗಿಯೇ ಪೆಟ್ಟು ಬಿದ್ದು ಹೆಚ್ಚಾಗಿ ಓಡಾಡಲಾಗದಂತೆ ಅವರನ್ನು ಮಲಗಿಸಿಬಿಟ್ಟಿತ್ತು.
ಇಂದಿಗೂ ಅದರ ನೋವಿನಿಂದ ಮುಕ್ತರಾಗಿಲ್ಲ. ಕೆಲವು ಕಾಲ ನಮ್ಮೊಂದಿಗೇ ಇದ್ದರಾದರೂ ಇದರಿಂದಾಗಿ ಅವರು ಹುಬ್ಬಳ್ಳಿಯ ಉಳಿಯಬೇಕಾದ ಪ್ರಸಂಗ ಎದುರಾಗಿದ್ದರಿಂದ ಅವರೊಡನಿದ್ದ ಸಂಪರ್ಕ ತುಂಡಾ ಯಿತು. ಆದರೂ ಬೆಂಗಳೂರಿಗೆ ಬಂದಾಗಲೆಲ್ಲ ನಮ್ಮ ಮನೆಗೆ ಮರೆಯದೇ ಬಂದು ಹೋಗುತ್ತಿದ್ದರು. ಅವರೊಂದಿಗೆ ಅವರ ಒಡಹುಟ್ಟಿದವರ, ಸಂಬಂಧಿಕರ ಪರಿಚಯವೆಲ್ಲ ಆಗತೊಡಗಿತು. ಒಡಲಲ್ಲಿ ಮಗ ಚುಕ್ಕಿಯಾಗಿ ಮೂಡಿದ್ದನ್ನು ವೈದ್ಯರು ದೃಢಪಡಿಸುವ ಹೊತ್ತಲ್ಲಿ ಜತೆಯ ಇದ್ದರು. ನೋಡು, ನಾನು ಬಂದ ಘಳಿಗೆಯ ನೀನು ತಾಯಾಗುವ ಸಿಹಿ ಸುದ್ದಿ ಸಿಕ್ಕಿದೆ ಎಂದು ಬರಿದಾದ ತಮ್ಮ ಬದುಕಿನ ಕಹಿಯನ್ನೆಲ್ಲ ಮರೆತು ಹಿರಿಹಿರಿ ಹಿಗ್ಗಿದ್ದರು.
ಅವರ ಸಂಪ್ರದಾಯದ ರೀತಿಯಲ್ಲಿ ಕುಪ್ಪಸದ ಬಾಗಿನ ಕೊಟ್ಟಿದ್ದರು. ಮಗನ ವರ್ಷದ ಸಂಭ್ರಮದಲ್ಲಿ ಅವನಿಗೆ ತುತ್ತು ಮಾಡಿ ತಿನ್ನಿಸಲಿಕ್ಕೆ ಬೆಳ್ಳಿಯ ಬಟ್ಟಲು ಉಡುಗೊರೆಯಾಗಿ ಕೊಟ್ಟಿದ್ದರು. ಅನಂತರ ಬಸವನಗುಡಿಯಲ್ಲಿ ರವಿಯ ಮತ್ತೊಂದು ಸಾಹಸದ ಪ್ರತಿಬಿಂಬವಾಗಿ ಮೂಡಿದ ಬೆಳಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಗೂ ಬಂದು ಹಾರೈಸಿದ್ದರು. ಅದರ ಬಿಬಿಸಿ ಪ್ರಕಾಶನದಲ್ಲಿ ಮೂಡಿಬಂದ ರವಿ ಬೆಳಗೆರೆಯವರ ಬರಹದ ಚೊಚ್ಚಲ ಪುಸ್ತಕವಾಗಿ ದಿ ಮರ್ಡರ್ ಮಿಸ್ಟ್ರಿ-ಮಧುಮಿತಾ ಶುಕ್ಲಾ ಹತ್ಯೆ ಪುಸ್ತಕ
ಬಿಡುಗಡೆಗೆ ಅತಿಥಿಯಾಗಿ ಆಗಮಿಸಿ ಮನಮುಟ್ಟುವಂಥಾ ಭಾಷಣ ಮಾಡಿದ್ದರು. ಅದರ ಜತೆಗೆ ಅವರದ್ದೇ ಆತ್ಮಕಥನವಾದ ‘ಇದ್ದೇನಯ್ಯಾ ಇಲ್ಲದಂತೆ’ ಪುಸ್ತಕವನ್ನು ಬದುಕಿನುದ್ದಕ್ಕೂ ಗೌರವದಿಂದ ನಡೆಸಿಕೊಂಡ ಸನ್ಮಿತ್ರ ರವಿಗೇ ಅರ್ಪಣೆ ಮಾಡಿದ್ದರು. ಅದನ್ನು ಅಭಿನಯ ಶಾರದೆ ಜಯಂತಿ ಲೋಕಾರ್ಪಣೆ ಮಾಡಿದ್ದರು.
ಅದಾದ ನಂತರ ಮತ್ತೆ ನಾನವರನ್ನು ಭೇಟಿಯಾಗಿದ್ದು ಮಾರ್ಚ್ ಇಪ್ಪತ್ತು 2022ರಂದು. ಸರಿಸುಮಾರು ಎಂಟು ಹತ್ತು ವರ್ಷಗಳ ನಂತರ. ಚೂರೂ ಬದಲಾಗಿಲ್ಲ. ಹಾಗೇ ಇದ್ದೀರ ಅಂದೆ. ನೀನೂ ಹಾಗೇ ಇದ್ದೀಯ. ಎಷ್ಟೆಲ್ಲ ಧಡಕಿಗಳ ನಡುವೆಯು ಕುಂದದಂತೆ ಎಂದು ಪರಸ್ಪರ ಮೆಚ್ಚುಗೆ ಸೂಸುತ್ತಾ ನಗೆಯಾದೆವು. ಈಗ ಜತೆಯ ಇದ್ದಾರೆ. ಅಮ್ಮ ನಂತೆ, ಗೆಳತಿಯಂತೆ, ಸೋದರಿ ಯಂತೆ, ಗುರುವಿನಂತೆ… ಬದುಕೇ ಬೆಟ್ಟದಷ್ಟಿರುವ ಕಷ್ಟಗಳ ಭಟ್ಟಿಯಲ್ಲಿ ಸುಟ್ಟರೂ ನೀ ನನ್ನ ಬೂದಿಯಾಗುವೆನೇ? ಮಡಿಕೆ ಯಾಗಿ ಬರುವೆ ನಾ ಸಿಹಿ ನೀರು ತುಂಬಿ ತರುವೆ… ಎನ್ನುತಾ ಅದೇ ಚೈತನ್ಯದ ಚಿಲುಮೆಯಾಗಿ.