Wednesday, 14th May 2025

ನಾವು ಬೆಳಕಿನ ದಾರಿಯಲ್ಲಿ ನಡೆದು ವಿಶ್ವಾತ್ಮರಾಗೋಣ

ಆಧ್ಯಾತ್ಮ

ಜ್ಯೋತಿರ್ಮಯಿ ವಿಶ್ವಾತ್ಮಂ. ತೇರದಾಳ

ಅಸತೋಮಾ ಸದ್ಗಮಯ
ತಮಸೋಮಾ ಜೋತಿರ್ಗಮಯ
ಮೃತ್ಯೋರ್ಮಾ ಅಮೃತಂಗಮಯ

ನಾವು ಯಾವ ದಿಸೆಯಲ್ಲಿ ಪಯಣಿಸುತ್ತಿದ್ದೇವೆ. ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ.. ಇದೇ ನಮ್ಮ ಪ್ರಯಾಣ.

‘ಅಸತೋಮ ಸದ್ಗಮಯ’ ಎಂದರೆ, ಓ ದೇವರೆ, ನನ್ನನ್ನು ಅಸತ್ಯದಿಂದ ಸತ್ಯದೆಡೆಗೆ ನಡೆಸು, ‘ತಮಸೋಮ ಜ್ಯೋೋತಿರ್ಗಮಯ’ಎಂದರೆ, ಓ ದೇವರೆ ನನ್ನನ್ನು ಅಜ್ಞಾನದಿಂದ ಜ್ಞಾನದೆಡೆಗೆ ಕರೆದುಕೊಂಡು ಹೋಗು, ‘ಮೃತ್ಯೋೋರ್ಮ ಅಮೃತಂಗಮಯ’, ಎಂದರೆ, ಓ ದೇವರೆ ನನ್ನನ್ನು ಮೃತ್ಯುವಿನಿಂದ ಅಮೃತತ್ವದ ಕಡೆ ದಾರಿ ತೋರಿಸು ಎಂದು.

ನಮ್ಮ ಭಾರತ ದೇಶದಲ್ಲಿ ನಿತ್ಯ ಪಠಿಸುತ್ತಿಿರುವ ಮೂಲಭೂತವಾದ ಈ ಪ್ರಾಾರ್ಥನೆಯಲ್ಲಿ ಅಷ್ಟು ಸತ್ಯತೆ ಕಂಡುಬರುವುದಿಲ್ಲ. ಅಲ್ಲಿ ಮೇಲೆ ಯಾವ ದೇವರೂ ಇಲ್ಲ ನಮ್ಮನ್ನು ಕರೆದುಕೊಂಡು ಹೋಗಲು. ನಾವೇ ದೇವರು ನಾವೇ ಅಲ್ಲಿಗೆ ಹೋಗಬೇಕು. ನಮ್ಮ ಸ್ವಪ್ರಯತ್ನದಿಂದ ನಾವೇ ಧ್ಯಾಾನಮಾಡಿ, ಸ್ವಾಾಧ್ಯಾಾಯ ಮಾಡಿ, ಸತ್ಸಂಗ ಮಾಡಿ ಸತ್ಯದೆಡೆಗೆ, ಜ್ಞಾನದ ಕಡೆ, ಅಮೃತತ್ವವನ್ನು ಪಡೆಯಲು ನಾವೇ ಸ್ವಯಂ ಹೋಗಬೇಕು.
ಉದ್ಧರೇನಾತ್ಮ ನಾತ್ಮಾಾನಂ ನಾತ್ಮಾಾನಮವಸಾದಯೇತ್
ಆತ್ಮೈವ ಹ್ಯಾಾತ್ಮನೋ ಬನ್ಧುರಾತ್ಮೈವ ರಿಪುರಾತ್ಮನಃ ಭಗವತ್ ಗೀತೆ – 6:5

ಭಗವದ್ಗೀತೆಯಲ್ಲಿ ಕೃಷ್ಣ ಏನು ಹೇಳಿದ್ದಾನೆ ಎಂದರೆ, ಹೇ! ಅರ್ಜುನಾ, ನಿನ್ನ ಸ್ವಪ್ರಯತ್ನದಿಂದ ನಿನ್ನನ್ನು ನೀನು ಉದ್ಧರಿಸಿಕೊಳ್ಳಬೇಕು. ಯಾರೋ ಬಂದು ನಿನ್ನನ್ನು ಉದ್ಧಾಾರಮಾಡುವುದಿಲ್ಲ. ನಿನಗೆ ನೀನೇ ಶತ್ರು, ನಿನಗೆ ನೀನೇ ಮಿತ್ರ. ನಮ್ಮ ಕಷ್ಟಗಳಿಗೆ, ಸಮಸ್ಯೆೆಗಳಿಗೆ ಯಾರೋ ಬರುತ್ತಾಾರೆ, ಏನೋ ಸಹಾಯ ಮಾಡುತ್ತಾಾರೆ ಎಂದು ಅಂದುಕೊಂಡಿದ್ದಾಾರೆ ಅಥವಾ ಹಾಗೇ ಅಪೇಕ್ಷಿಿಸಿದ್ದರೆ, ಅದು ನಮ್ಮ ಭ್ರಮೆ ಅಲ್ಲದೇ ಮತ್ತೇನೂ ಅಲ್ಲ. ಮೊದಲು ಇಂಥ ಭ್ರಮೆ ತೊಲಗಬೇಕು.

ಕಸ್ತೂರಿ ಮೃಗ ಒಂದು ತನ್ನೊೊಳಗೇ ಇರುವ ಕಸ್ತೂರಿಯ ಸುಗಂಧಕ್ಕಾಾಗಿ ಕಾಡೆಲ್ಲ ಅಲೆಯುತ್ತದೆ. ಇದು ಯಾರ ಬಳಿಯೋ ಇರಬಹುದು ಅಥವಾ ಎಲ್ಲೋ ಇರಬಹುದು ಎಂಬ ಭ್ರಮೆಯಲ್ಲಿ. ನಮ್ಮೊೊಳಗೆ ಇರುವುದನ್ನೇ ಕಂಡುಕೊಳ್ಳಲಾಗದೇ ಇನ್ನೆೆಲ್ಲೋೋ ಹುಡುಕುವುದು ಒಂದು ಭ್ರಮೆ ಅಷ್ಟೆೆ, ಅದು ಮರೀಚಿಕೆ ಇದ್ದಹಾಗೆ. ಸತ್ಯಎನ್ನುವುದು ಎಲ್ಲೋ ಇಲ್ಲ, ನೀನೇ ಆ ಸತ್ಯ, ನೀನೇ ಸತ್ಯ ಆಗಿರುವೆ. ಅದರ ಮೇಲೆ ತುಂಬಾ ಬೂದಿ ಮುಚ್ಚಿಿಕೊಂಡಿದೆಯಷ್ಟೇ. ಆ ಬೂದಿಯನ್ನು ತೊಲಗಿಸುವ ವಿಧಾನವೇ ಧ್ಯಾಾನ, ಸ್ವಾಾಧ್ಯಾಾಯ, ಸತ್ಸಂಗ. ಧ್ಯಾಾನ ಮಾಡದಿದ್ದರೆ, ಸ್ವಾಾಧ್ಯಾಾಯ ಮಾಡದಿದ್ದರೆ, ಸಜ್ಜನಸಾಂಗತ್ಯ ಮಾಡದಿದ್ದರೆ ಜ್ಞಾನ, ಸತ್ಯ, ಅಮೃತತ್ವ ಎನ್ನುವುದು ಬೂದಿ ಮುಚ್ಚಿಿಕೊಂಡ ಕೆಂಡದ ಹಾಗೆಯೇ ಉಳಿದುಬಿಡುತ್ತದೆ.

ನಾವು ನಮ್ಮಲ್ಲಿನ ಅಜ್ಞಾಾನದಿಂದಾಗಿ ಜೀವನಪೂರ್ತಿ ಕಷ್ಟಪಡುತ್ತಲೇ ಇರುತ್ತೇವೆ. ಜೀವನದಲ್ಲಿ ಒಮ್ಮೆೆಯೂ ಸುಖ, ಸಂತೋಷ, ನೆಮ್ಮದಿ ಕಾಣದೇ ಒಂದು ದಿನ ಹಾಗೆ ನಮ್ಮ ಜೀವನ ಅಂತ್ಯಗೊಳ್ಳುತ್ತದೆ. ಬೇರೆ ಯಾರೋ (ದೇವದೂತರು ಅಥವಾ ದೇವರು) ನಮಗೆ ಸಹಾಯ ಮಾಡಲು ಬರುತ್ತಾಾರೆ ಎಂದುಕೊಂಡರೆ, ಮೇಲಿನ ಲೋಕಗಳಲ್ಲಿ ಸ್ವಚ್ಛ ಕೆಂಡವಿರುತ್ತದೆ ಹೊರತು ಬೂದಿಯಿರುವುದಿಲ್ಲ. ಅಲ್ಲಿ ಹೋದ ತಕ್ಷಣ ಏತಕ್ಕಾಾಗಿ ಧ್ಯಾಾನ ಮಾಡಿಲ್ಲ, ಏತಕ್ಕಾಾಗಿ ಸ್ವಾಾಧ್ಯಾಾಯ ಮಾಡಿಲ್ಲ, ಏತಕ್ಕಾಾಗಿ ಸಜ್ಜನಸಾಂಗತ್ಯ ಮಾಡಿಲ್ಲ ಎಂದು ಅಲ್ಲಿ ಕೇಳುತ್ತಾಾರೆ ಎಂದು ಇಟ್ಟುಕೊಳ್ಳಿಿ. ಆಗ, ಏನೋ ನನಗೆ ಗೊತ್ತಾಾಗಲಿಲ್ಲ, ಯಾರೋ ಬರುತ್ತಾಾರೆ ಎಂದುಕೊಂಡೆ, ಯಾರೂ ಬರಲಿಲ್ಲ ಎಂದು ಹೇಳುತ್ತೀರಿ, ಅಲ್ವಾಾ? ಸರಿ ಹಾಗಾದರೆ, ಮುಂದಿನ ಬರುವ ಜನ್ಮದಲ್ಲಾದರೂ, ಭೂಲೋಕಕ್ಕೆೆ ಹೋಗಿ ಧ್ಯಾಾನ ಮಾಡು, ಮರೆಯಬೇಡ ಅರಿವಿನಿಂದ ಇರು. ನಿನ್ನ ಸ್ವಂತ ಬುದ್ಧಿಿ ಉಪಯೋಗಿಸು. ಅಕ್ಕಪಕ್ಕದವರು ಹೇಳಿದ ಹಾಗೆ ಮಾಡಬೇಡ. ಎಲ್ಲರೂ ಹೇಳುವುದನ್ನು ಕೇಳಿಸಿಕೊ. ಆದರೆ, ನಿನಗೆ ಏನು ಸರಿ ಅನಿಸುತ್ತದೋ ಅದನ್ನೇ ಮಾಡು ಎಂದು ಹೇಳುತ್ತಾಾರೆ.

ಪ್ರತಿಯೊಬ್ಬರು ಅನೇಕ ಜನ್ಮಗಳನ್ನು ಪಡೆಯುತ್ತೇವೆ. ಸುಮಾರು 400 ಜನ್ಮಗಳು. ಪ್ರತಿಬಾರಿ ಭೂ ಲೋಕಕ್ಕೆೆ ಬಂದಾಗಲೆಲ್ಲಾ ಇಲ್ಲಿ ತಿರುಪತಿ ತಿಮ್ಮಪ್ಪ ಸಹಾಯ ಮಾಡುತ್ತಾಾನೆ, ಕಾಶಿ ವಿಶ್ವನಾಥ ಸಹಾಯ ಮಾಡುತ್ತಾಾನೆ, ಮೇಲಿನ ಲೋಕಗಳಿಂದ ಯಾರೋ ದೇವ-ದೇವತೆಗಳು ಅಥವಾ ದೇವರ ರೂಪದಲ್ಲಿ ಯಾರೋ ಮನುಷ್ಯರು ಬಂದು ಸಹಾಯ ಮಾಡುತ್ತಾಾರೆ ಎಂದು ಎದುರು ನೋಡುತ್ತಿಿರುತ್ತೇವೆ. ಆದರೆ, ಬದುಕಿನಲ್ಲಿ ಅನುಭವಿಸುವ ಸಮಸ್ಯೆೆಗಳಿಗೆ, ಸಂಕಷ್ಟಗಳು ಬಂದಾಗ, ಸಹಾಯ ಮಾಡುವವರು ಯಾರೂ ಇಲ್ಲ. ಅವುಗಳನ್ನು ನಾವೇ ಎದುರಿಸಬೇಕು ಮತ್ತು ಅನುಭವಿಸಬೇಕಾಗುತ್ತದೆಯಷ್ಟೇ.

ಉದಾಹರಣೆಗೆ, ಒಂದು ಕ್ರಿಿಕೆಟ್ ಮ್ಯಾಾಚ್‌ನಲ್ಲಿ ಅಂಪೈರ್ ನೋಡುತ್ತಿಿರುತ್ತಾಾನೆ. ನಾವು ಔಟಾದರೆ, ಔಟ್ ಅಂತಾನೆ. ಅವರು ಬೌಂಡರಿ ಹೊಡೆದರೆ, ಬೌಂಡರಿ ಹೋಯಿತು ಅಂತ ಕೈಸನ್ನೆೆ ಮಾಡ್ತಾಾನೆ. ಆದರೆ ಅವನೇನೂ ರನ್‌ಸ್‌ ಕೊಡೋದಿಲ್ಲ, ನಮ್ಮನ್ನು ಔಟ್ ಸಹ ಮಾಡೋದಿಲ್ಲ. ಏಕಾಗ್ರತೆಯಿಂದ ಇಲ್ಲಿ ರನ್ ಗಳಿಸಬೇಕಾದವರು ನಾವೇ, ಔಟ್ ಆದರೂ ಅದು ನಾವೇ. ಅವನು ನಾವು ಮಾಡುವ ಕರ್ಮಗಳಿಗೆ ಫಲ ಕೊಡುತ್ತಿಿರುತ್ತಾಾನೆ. ನಾವು ಕಳ್ಳತನ ಮಾಡಿದರೆ ಪೊಲೀಸರನ್ನು, ನಾವು ಮಾಂಸ ತಿಂದರೆ ರೋಗಗಳನ್ನು, ನಾವು ಸುಳ್ಳು ಹೇಳಿದರೆ ಅದಕ್ಕೆೆ ತಕ್ಕ ಪ್ರತಿಫಲವನ್ನು ನೀಡುತ್ತಿಿರುತ್ತಾಾನೆ ಅಷ್ಟೇ ಹೊರತು, ನಮ್ಮ ಕರ್ಮಗಳನ್ನು ನಿರ್ದೇಶಿಸುವುದಿಲ್ಲ, ನಮ್ಮನ್ನು ಉದ್ಧರಿಸುವುದಿಲ್ಲ. ನಾವು ಯಾವ ತರಹದ ಕರ್ಮಗಳನ್ನು ಮಾಡಿರುತ್ತೇವೆಯೋ ಅಥವಾ ಮಾಡುತ್ತಿಿರುತ್ತೇವೆಯೋ, ಅದಕ್ಕೆೆ ತಕ್ಕ ಪ್ರತಿಫಲ ನಮ್ಮ ಹಿಂದೆ ಬಿದ್ದು ಬರುತ್ತಿಿರುತ್ತದೆ. ನೀನು ಈ ಕರ್ಮ ಮಾಡು, ಆ ಕರ್ಮ ಮಾಡು ಎಂದು ಮೇಲಿನ ಲೋಕಗಳಿಂದ ಯಾರೂ ಹೇಳುವುದಿಲ್ಲ. ಆ ದೇವರೆನ್ನುವವನು ಅಂಪೈರ್ ಇದ್ದ ಹಾಗೆ, ನಿಶ್ಶಬ್ದವಾಗಿ ಎಲ್ಲಾ ಗಮನಿಸುತ್ತಿಿರುತ್ತಾಾನೆ. ಅವನು ಮಧ್ಯೆೆ ಪ್ರವೇಶಿಸುವುದಿಲ್ಲ.

* ನಾವು ಇರುವುದು ಒಂದು ಪರೀಕ್ಷಾ ಕೊಠಡಿಯಲ್ಲಿ

ನಾವು ಪರೀಕ್ಷೆ ಬರೆಯಲು ಹೋದರೆ, ಪರೀಕ್ಷಾ ಕೊಠಡಿಯಲ್ಲಿ ನಮಗೆ ಅಧ್ಯಾಾಪಕರು ಬಂದು ಸಹಾಯ ಮಾಡು ಎಂದರೆ ಮಾಡುವುದಿಲ್ಲ. ಅದು ನಿಯಮಗಳಿಗೆ ವಿರುದ್ಧ. ಪರೀಕ್ಷಕ ನಮ್ಮ ಸ್ವಂತ ತಂದೆಯೇ ಆದರೂ, ಅಲ್ಲಿ ನಮಗೆ ಸಹಾಯ ಮಾಡುವುದಿಲ್ಲ. ಈ ಭೂಲೋಕ ಎನ್ನುವುದು ಒಂದು ಪರೀಕ್ಷಾ ಕೊಠಡಿ ಇದ್ದಂತೆ. ನಾವು ಮೇಲಿನ ಲೋಕಗಳಲ್ಲಿ ಪಾಠಗಳನ್ನು ಕಲಿತು, ಭೂಲೋಕದಲ್ಲಿ ಬಂದು ಪರೀಕ್ಷೆ ಬರೆಯುತ್ತೇವೆ. ನಮ್ಮ ಈ ಪರೀಕ್ಷೆಗಳಿಗೆ ಯಾರೂ ಬಂದು ಸಹಾಯ ಮಾಡುತ್ತಾಾರೆ? ಯಾರೂ ಬರುವುದಿಲ್ಲ. ಇಲ್ಲಿ ಬರೆಯಬೇಕಾದವರು ನಾವೇ. ಹೌದು, ಜೀವನದಲ್ಲಿ ಪರೀಕ್ಷೆಗಳು ಎದುರಾದಾಗ ನಾವು ತೋರಿಸುವ ಪ್ರತಿಕ್ರಿಿಯೆಯಿಂದ ನಾವು ಉತ್ತೀರ್ಣರಾಗುತ್ತೇವಾ, ಇಲ್ಲವಾ? ಎಂಬುದು ಗೊತ್ತಾಾಗುತ್ತದೆ!

ನೀವು ಮನೆಯಲ್ಲಿ ವೀಣೆ ಅಭ್ಯಾಾಸ ಮಾಡುತ್ತೀರಿ. ಅಲ್ಲಿ ಯಾವುದೇ ರೀತಿಯ ಭಯ, ಆತಂಕ ಇರುವುದಿಲ್ಲ. ಆದರೆ, ನೀವು ಮನೆಯಲ್ಲಿ ವೀಣೆ ನುಡಿಸಿದಂತೆ, ವೇದಿಕೆಯ ಮೇಲೆ ಬಂದು ಧೈರ್ಯವಾಗಿ ಅಪಸ್ವರ ಇಲ್ಲದೆ ನುಡಿಸಬೇಕೆಂದಾಗ, ನಿಮ್ಮಲ್ಲೇನೋ ಅವ್ಯಕ್ತ ಭಯ ಶುರುವಾಗುತ್ತದಲ್ಲ, ಅದೇ ಪರೀಕ್ಷಾ ಸಮಯ. ಪರೀಕ್ಷೆಗಳನ್ನು ಸರಿಯಾಗಿ ಎದುರಿಸಲಾಗದೆ ಹೋದರೆ ಉತ್ತೀರ್ಣರಾಗದೆ,ಪುನಃ ಜನ್ಮ ಪಡೆಯುತ್ತೇವೆ. ಮೊದಲನೆಯ ಪ್ರಶ್ನೆೆ ನೀನು ಆತ್ಮವೋ? ಅಥವಾ ಶರೀರವೋ? ಎಂದು ಕೇಳಿದರೆ. ನಾವು ಆತ್ಮ ಎಂದು ಬರೆಯಬೇಕು. ಹಾಗಲ್ಲದೆ ನಾನು ಶರೀರ ಎಂದು ತಿಳಿದುಕೊಂಡು, ಅದನ್ನೇ ಬರೆದರೆ ಸೊನ್ನೆೆ ಅಂಕ.

ನಾವು ನಮ್ಮ ಜೀವನದ ಪಾಠ ಪೂರ್ತಿ ಅಭ್ಯಾಾಸಿಸಬೇಕು ಉತ್ತರಗಳನ್ನು ಸರಿಯಾಗಿ ಬರೆಯಬೇಕು. ಪರೀಕ್ಷೆೆಯಲ್ಲಿ ಇನ್ಯಾಾರೋ ಸಹಾಯ ಮಾಡುತ್ತಾಾರೆಂದು ನಿರೀಕ್ಷಿಿಸಬಾರದು. ಇಲ್ಲಿ ನ್ಯಾಾಯವಾಗಿ ಹೇಗೆ ಜೀವಿಸಬೇಕೋ ಹಾಗೆ ಜೀವಿಸಿದರೇನೆ ಪರೀಕ್ಷೆಯಲ್ಲಿ ಉತ್ತೀರ್ಣ, ಇಲ್ಲದಿದ್ದರೆ ಪುನಃಪುನಃ ನಾವು ಜನ್ಮವೆತ್ತುತ್ತಲೇ ಇರುತ್ತವೆ. ಇನ್ನು ಸಾವಿರ ಬಾರಿ ಬಂದರೂ ನಾವು ಜೀವನದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗದಿದ್ದರೆ, ಸಾರ್ಥಕವೇನು? ಇದು ಸರಿಯಲ್ಲ. ಅದಕ್ಕಾಾಗಿಯೇ ಬೆಳಕಿನ ದಾರಿಯಲ್ಲಿ ನಡೆದು ವಿಶ್ವಾಾತ್ಮರಾಗೋಣ. ಈಗ ಜೀವನವನ್ನು ನೀವೆಷ್ಟು ಸಮರ್ಥವಾಗಿ ಅಭ್ಯಾಾಸಿಸಿದ್ದೇರೆಂದು ಹೇಳುತ್ತೀರಾ? ಈಗಾಗಲೇ ನಮಗೆ ಜೀವನ ಎಂಬ ಪ್ರಶ್ನೆೆ ಪತ್ರಿಿಕೆ ಕೊಟ್ಟಾಾಗಿದೆ, ಬಾಲ್ಯದ ಮೊದಲ ಗಂಟೆ ಹೊಡೆದಿದೆ, ಯೌವನದ ಎರಡನೇ ಗಂಟೆ ಈಗತಾನೇ ಬಾರಿಸಿಯಾಗಿದೆ. ಇನ್ನೇನು ಮೃತ್ಯುವಿನ ಮೂರನೇ ಹೊಡೆಯುವುದಿದೆ! ನಿಜ ಹೇಳಿ? ನೀವು ಜೀವನದಲ್ಲಿ ಪಾಸ್ ಆಗುತ್ತೀರಾ? ಫೇಲ್ ಆಗುತ್ತೀರಾ!?

Leave a Reply

Your email address will not be published. Required fields are marked *