ಅಭಿವ್ಯಕ್ತಿ
ಡಾ.ಕೆ.ಪುತ್ತೂರಾಯ
ಫೆಬ್ರವರಿ ೧೪, ಪ್ರೇಮಿಗಳಿಂದ ಪ್ರೇಮಿಗಳಿಗಾಗಿ ಪ್ರೇಮಿಗಳಿಗೋಸ್ಕರವೇ ವಿಶ್ವದಾದ್ಯಂತ ಆಚರಿಸಲ್ಪಡುವ ‘ಪ್ರೇಮಿಗಳ ದಿನ’. ಚಳಿಗಾಲ ಮುಗಿಯುತ್ತಿದ್ದಂತೆ ಬರುವ ಪ್ರಣಯ ಕಾಲವಿದು; Lovism Blossom ಆಗುವ ಕಾಲ. ಈ ಕಲ್ಪನೆ ಆರಂಭವಾದದ್ದು ಪಾಶ್ಚಾತ್ಯ ದೇಶದಲ್ಲಿ.
ಯುಲೈಸಿಸ್ ಕ್ಲಾಡಿಯಸ್ ಎಂಬ ರೋಮ್ ದೇಶದ ರಾಜ, ಪ್ರೇಮ ವಿವಾಹಗಳು ಸೈನಿಕರ ಮತ್ತು ಜನರ ಶಕ್ತಿ ಸಾಮರ್ಥ್ಯಗಳನ್ನು
ಕುಂಠಿತಗೊಳಿಸ ಬಹುದೆಂದು ಯೋಚಿಸಿ ಪ್ರೇಮ ವಿವಾಹಗಳಿಗೆ ನಿರ್ಭಂಧವನ್ನು ಹೇರಿದ. ಆದರೆ ವ್ಯಾಲೈಂಟೈನ್ ಎಂಬ ಹೆಸರಿನ ಸಂತ ರಾಜನ ಆಜ್ಞೆಯ ವಿರುದ್ಧವಾಗಿ ಪ್ರೀತಿ ಪ್ರೇಮದಿಂದ ಎಲ್ಲರನ್ನೂ ಗೆಲ್ಲಬಹುದೆಂಬುದನ್ನು ಸಾರಿದ ಹಾಗೂ ಪ್ರೇಮ
ವಿವಾಹಗಳನ್ನು ಪ್ರೋತ್ಸಾಹಿಸಿದ. ಇವನ ಈ ಅಪರಾಧಕ್ಕೆ ಫೆಬ್ರವರಿ ೧೪ರಂದು ಇವನನ್ನು ಕೊಲ್ಲಲಾಯಿತು. ಆದರೆ ಈ ದಿನವನ್ನು Lover’s day ಎಂದು ಆಚರಿಸುವ ಪದ್ಧತಿ ಪ್ರಾರಂಭ ವಾಯಿತು.
ಹೀಗೆ ‘Valentine day’ ಪಾಶ್ಚಾತ್ಯರ ಕೊಡುಗೆ. ನಮ್ಮದು ತ್ಯಾಗಭೂಮಿ; ಅವರದು ಭೋಗಭೂಮಿ. ಭೋಗ ಸಂಸ್ಕೃತಿ ಪ್ರಧಾನ
ವಾಗಿರುವ ಈ ದೇಶ ವಾಸಿಗಳಿಗೆ ದಂಪತಿಗಳಿಂದ ಹಿಡಿದು ಹೆತ್ತವರು ಮತ್ತು ಮಕ್ಕಳ ಹಾಗೂ ಪ್ರೇಮಿಗಳ ನಡುವಣ ಸಂಬಂಧ ಗಳೆಂದರೆ mostly a matter of convience not a commitment, ಅಲ್ಲಿ ಅವಿಭಕ್ತ ಕುಟುಂಬ ಪದ್ಧತಿ (In India every day is a Mother’s day, Father’s day) ಅಪರೂಪ. ದೊಡ್ಡವರಾದಂತೆ ಮಕ್ಕಳು ಹೆತ್ತವರಿಂದ ದೂರವಾಗುತ್ತಾರೆ. ಮಾತ್ರವೇ ಅಲ್ಲ, ಹೆತ್ತವರ ಮತ್ತು ಮಕ್ಕಳ ಭೇಟಿ ಅಪರೂಪಕ್ಕೆ; ಅದೂ ಆಮಂತ್ರಣ ವಿದ್ದರೆ ಮಾತ್ರ! ಹೀಗೆ ಭೇಟಿಗಳಿಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಹಾಗೂ ಮೋಜು ಮಸ್ತಿಗಳಿಗೆ ನೆಪವೊಂದು ಬೇಕು. ಈ ಕಾರಣಕ್ಕೆ ವರುಷದಲ್ಲಿ ‘Happy Mother’s day, ಎಂಬೆಲ್ಲಾ ಆಚರಣೆ ಯನ್ನು ತಂದರು.
ಅಪ್ಪ ಅಮ್ಮನನ್ನು, ಅಜ್ಜಿ ತಾತನನ್ನು ನೆನೆಯಲು ಈ ದಿನಗಳೇ ಬರಬೇಕು. ಅಂತೆಯೇ ಬಟ್ಟೆ ಬದಲಾಯಿಸಿದಂತೆ, ಪ್ರೇಮಿಗಳನ್ನು ಬದಲಿಸುವ ಕೆಲವರಿಗೆ ಅವರನ್ನು ನೆನೆಯಲು ಪ್ರೇಮಿಗಳ ದಿನವೇ ಬರಬೇಕು. ಆದರೆ ಭಾರತೀಯರಾದ ನಮಗೆ ಇದರ
ಅವಶ್ಯಕತೆ ಬರಲಿಲ್ಲ. ಕಾರಣ ಹೆತ್ತವರನ್ನು ಹಿರಿಯರನ್ನು ನಿತ್ಯ ಸ್ಮರಿಸೋದೇ ನಮ್ಮ ಸಂಪ್ರದಾಯ ಮತ್ತು ಸಂಸ್ಕೃತಿ. In India every day is a Mother’s day, Father’s day. ವರ್ಷದಲ್ಲಿ ಒಂದು ದಿನ ಮಾತ್ರ ಏನೋ ಒಂದು ಉಡುಗೊರೆ ಕೊಟ್ಟು ‘Happy Mother’s day ಎಂದರೆ ನಮ್ಮ ಜವಾಬ್ದಾರಿ ಮುಗಿದು ಹೋಯಿತೇ? ನಾವು ಭಗವಂತನಿಂದ ಹಿಡಿದು ಭೂತಾಯಿಯವರೆಗೆ ನಮ್ಮ
ಜನನ ಮತ್ತು ಜೀವನಕ್ಕೆ ನೆರವಾದ ಯಾರನ್ನೂ ಯಾವುದನ್ನೂ ಮರೆಯುವುದಿಲ್ಲ.
ಮರೆತರೆ ತಾನೇ ಅವರನ್ನು ಜ್ಞಾಪಿಸಿಕೊಳ್ಳಲು ದಿನಾಚರಣೆಗಳು ಬೇಕು! ಇದೇ ಮಾತನ್ನು ಬೆಳಗಾಗಿ ಎದ್ದು ನಾನು ಯಾರ‍್ಯಾರ
ನೆನೆಯಲಿ ಎಂಬ ಜಾನಪದ ಹಾಡು ಹೇಳುತ್ತದೆ. ಆದರೆ ಪಾಶ್ಚಿಮಾತ್ಯದ ಗಾಳಿ ಬಲವಾಗಿ ಬೀಸ ತೊಡಗಿರುವ ಕಾರಣದಿಂದ ‘ಪ್ರೇಮಿಗಳ ದಿನಾಚರಣೆ’ಯ ವಿಚಾರದಲ್ಲಿ ನಮ್ಮ ದೇಶವೂ ಹೊರತಾಗಿಲ್ಲ. ಇತ್ತೀಚೆಗಿನ ವರುಷಗಳಲ್ಲಂತೂ ಈ ದಿನವನ್ನು ದೇಶದಾದ್ಯಂತ ಯುವಕ ಯುವತಿಯರು ಭರ್ಜರಿ ಯಾಗಿ ಆಚರಿಸುತ್ತಾರೆ.
ಈ ದಿನ ಗುಪ್ತ ಗುಪ್ತವಾಗಿರುವ ತಮ್ಮ ಪ್ರೇಮವನ್ನು ಮುಕ್ತ ಮುಕ್ತವಾಗಿ ಪ್ರದರ್ಶಿಸುತ್ತಾ, ಸಾರ್ವಜನಿಕವಾಗಿ ಸಂಭ್ರಮಿಸ ಬೇಕೆಂದು ಬಯಸುವ ಯುವಕ ಯುವತಿಯರ ದಿನ. ಭಾರತೀಯ ಸಂಸ್ಕೃತಿಯಲ್ಲಿ ನಂಬಿಕೆ ಇಟ್ಟವರಿಗೆ ಇದು ನಮ್ಮ ಸಂಸ್ಕೃತಿಗೆ
ವಿರುದ್ಧವಾದ ಆಚರಣೆ ಎಂದು ಭಾಸವಾಗುತ್ತಿರುವ ದಿನ. ಬೆಳೆದು ನಿಂತ ಮಕ್ಕಳ ಭಾವನೆಗಳನ್ನು ತಡೆ ಹಿಡಿಯಲಾಗದ ಕೆಲವು ಹೆತ್ತವರಿಗೆ ಇದು ನುಂಗಲಾಗದ, ಉಗುಳಲಾಗದ ತುತ್ತು. ಈ ಆಚರಣೆಯಲ್ಲಿ ಭಾಗಿಯಾಗದವರಿಗೆ ಕಾಮತುರಾಣಾಂ ನ ಭಯಂ, ನ ಲಜ್ಞಾಂ ಎಂಬ ಮಾತಿನಂತೆ ಈ ಹುಚ್ಚು ಪ್ರೇಮಿಗಳ ವರ್ತನೆಯನ್ನು ದೂರದಿಂದ ನೋಡಿ, ಮಜಾ ತೆಗೆದುಕೊಳ್ಳುವ ದಿನ.
ಮಾಧ್ಯಮಗಳಲ್ಲಿ ಇದರ ಪರ ವಿರೋಧ ನಿಲುವುಗಳ ಬಗ್ಗೆ ವ್ಯಾಪಕ ಬಿಸಿ ಬಿಸಿ ಚರ್ಚೆಯಾಗುವ ದಿನ.
ಹೂ ಮಾರಾಟಗಾರರಿಗೆ(ಅದರಲ್ಲೂ ಕೆಂಪು ರಂಗಿನ ಗುಲಾಬಿ ಹೂ), greetings card ಅಂಗಡಿಯವರಿಗೆ ಒಳ್ಳೆಯ ವ್ಯಾಪಾರದ ದಿನ. ಈ ದಿನ ನೆನಪಿನ ಕಾಣಿಕೆ ಯಾಗಿ ನೀಡಲು ತರತರದ ವಸ್ತುಗಳನ್ನು ತಯಾರಿಸಿ, ಬಹುರಾಷ್ಟ್ರೀಯ ಕಂಪನಿ
ಗಳು ಕೋಟ್ಯಂತರ ರುಪಾಯಿಗಳ ವ್ಯವಹಾರ ವನ್ನು ಡೆಸುತಿರುವುದಂತೂ ನಿಜ. ಈ ವಿಷಯ ಪ್ರೇಮಲೋಕದಲ್ಲಿ ತೇಲಾಡು ತ್ತಿರುವ ಪ್ರೇಮಿಗಳಿಗೆ ಹೇಗೆ ಅರ್ಥವಾಗಬೇಕು!
ಹಾಗೆಂದು ಪ್ರೀತಿಸುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಈ ಖುಷಿಂದ ಯಾರನ್ನೂ ವಂಚಿತರನ್ನಾಗಿ ಮಾಡಬಾರದು. ಆದರೆ, ಎಲ್ಲಿ – ಯಾವಾಗ – ಯಾರನ್ನು ಹೇಗೆ ಪ್ರೀತಿಸಬೇಕೆಂಬುದರ ಬಗ್ಗೆ ನಮ್ಮ ಸಂಸ್ಕೃತಿಯಲ್ಲಿ ಕೆಲವೊಂದು ಗೌರವಯುತವಾದ ವಿಧಿ ವಿಧಾನಗಳಿವೆ; ರೀತಿ ರಿವಾಜುಗಳಿವೆ. ಪ್ರೀತಿ – ಪ್ರೇಮವೆಂಬುದು ಕಂಡ ಕಂಡಲ್ಲಿ ಬೆಳೆಯುವ ಕಾಡು ಗಿಡವಲ್ಲ; ಹೃದಯದಲ್ಲಿ ಮೊಳೆತು ಅರಳುವ ಮಂದಾರ ಕುಸುಮ. ನಿಜವಾಗಿ ನೋಡಿದರೆ, ಪ್ರೀತಿ ಬೇರೆ; ಕಾಮ ಬೇರೆ, ಪ್ರೌಢಾವಸ್ಥೆಯ ಪ್ರಾಯದಲ್ಲಿ
ಕಾಮನ ಕಳ್ಳ ಕೈವಾಡರುತ್ತದೆ. ಈ ಸತ್ಯವನ್ನೇ ಒಬ್ಬರು ತಮಾಷೆಯಾಗಿ ಹೀಗೆ ಹೇಳಿದರು.
ಸುಂದರ ಹುಡುಗಿಯೂ ಕುರುಪಿಯಾಗಿ ಕಂಡರೆ, ಅದು ದೃಷ್ಟಿದೋಷ. ಆದರೆ ಆ ಕುರೂಪಿ ಹುಡುಗಿಯೂ ಸುಂದರವಾಗಿ ಕಂಡರೆ, ಅದು ಪ್ರಾಯದ ದೋಷ! ನಿಜವಾದ ಪ್ರೇಮ ಒಂದು ದಿವ್ಯ ಅನುಭವ, ಪ್ರೀತಿ ಪ್ರೇಮವೆಂಬುದು ಮನಸ್ಸಿನೊಳಗೆ ಸದ್ದುಗದ್ದಲಲ್ಲದೆ ಹರಿಯುತ್ತಿರುವ ಅಂತರಗಂಗೆಯಂತೆ; ಮನದ ಮೂಲೆಯಲ್ಲಿ ಬೆಚ್ಚಗೆ ಕೂತಿರುವ, ನೆನೆದಾಗ,
ಮೈಮನಸ್ಸು ಗಳನ್ನು ಮುದಗೊಳಿಸುವ ಚೈತನ್ಯ ವಿದ್ದಂತೆ.
ಇದಕ್ಕೆ ಗಂಟೆ ಜಾಗಟೆಗಳಿಲ್ಲ; ತಮಟೆ ತಂಬೂರಿಗಳಿಲ್ಲ, ಇದು ಮೌನವಾಗಿ ಹರಿಯುವ ಪ್ರೇಮದ ಹೊಳೆ. ಇದು ಗುಪ್ತವಾಗಿದ್ದರೇನೇ ಚೆಂದ, ಪ್ರೀತಿ ಪ್ರೇಮಗಳು ಖಾಸಗಿಯಾಗಿ ಬಿಂಬಿತವಾದಷ್ಟು ಅದರ ರಸಾನುಭೂತಿ ಅಧಿಕವಾಗಿ, ಪ್ರೀತಿಸುವವರಲ್ಲಿ ಪತ್ರ ಭಾವನೆಯನ್ನು ಮೂಡಿಸುತ್ತದೆ. ಇಷ್ಟಕ್ಕೂ ಪ್ರೀತಿ ಪ್ರೇಮವೆಂಬುದು ಇಬ್ಬರ ನಡುವಿನ ಸಂಬಂಧವೇ
ಹೊರತು, ಸಾರ್ವಜನಿಕವಾಗಿ ಚರ್ಚೆಗೆ ಒಳಪಡುವ ಇಲ್ಲವೇ ಪ್ರದರ್ಶನಗೊಳ್ಳುವ ವಿಷಯವೇ ಅಲ್ಲ!
ಎಲ್ಲರೆದುರು ನಮ್ಮ ಪ್ರೀತಿ ಪ್ರೇಮವನ್ನು ಹೂ ಇಲ್ಲವೇ ವಸ್ತು ಮುಖೇನ ವ್ಯಕ್ತಪಡಿಸಿ ಇಲ್ಲಿ ನೋಡಿ ನಾವಿಬ್ಬರೂ ಪ್ರೇಮಿಗಳು ಎಂಬುದನ್ನು ಊರಿಗೆಲ್ಲಾ ತಿಳಿಸುವ ಅವಶ್ಯಕತೆ, ಅಗತ್ಯವಾದರೂ ಏನಿದೆ? ಇಂತಹ ತೋರಿಕೆಯ ಆಚರಣೆಯಿಂದ ನೈಜತೆ
ಮಾಯ ವಾಗುತ್ತದೆ. ನಾಟಕೀಯತೆ ಹೆಚ್ಚಾಗುತ್ತದೆ ಅಲ್ಲವೇ? ಪ್ರೀತಿ ಮಾಡಬಾರದು. ಮಾಡಿದರೆ ಜಗಕೆ ಹೆದರ ಬಾರದು ಎಂಬ ಹಾಡು ಕೇಳೋದಕ್ಕೇನು ಚಂದ. ಆದರೆ ಈ ಧೈರ್ಯವನ್ನು ಸಾರ್ವಜನಿಕವಾಗಿ mಟqಛಿ ಮಾಡುವ ಅವಶ್ಯಕತೆಯಾದರೂ ಎಲ್ಲಿದೆ? ಮೇಲಾಗಿ ಪ್ರೀತಿಸಲು, ಪ್ರೇಮಿಸಲು ಸಕಾಲ ವೆಂಬುದೊಂದಿದೆ. ವಿದ್ಯಾರ್ಜನೆಯ ಕಾಲವಂತೂ ಖಂಡಿತಾ ಅಲ್ಲ. ಜ್ಞಾನಾರ್ಜನೆಗೆಂದೇ
ಮೀಸಲಾಗಿರುವ ಹಾಗೂ ಬ್ರಹ್ಮಚರ್ಯವನ್ನೇ ಕಡ್ಡಾಯವಾಗಿ ಪಾಲಿಸಬೇಕಾದ ಯುವಕ ಯುವತಿಯರಿಗೆ, ಪ್ರೀತಿ ಪ್ರೇಮಗಳಿಗೆ ಸಮಯಾವಕಾಶವೂ ಇಲ್ಲ; ಅನುಮತಿಯೂ ಇಲ್ಲ. ಓದು ಕಲಿಕೆಗಳೆಲ್ಲವನ್ನು ಮುಗಿಸಿ ಗೃಹಸ್ಥಾಶ್ರಮವನ್ನು ಪ್ರಾರಂಭಿಸಲು ಪ್ರಶಸ್ಥ ಸಮಯ ಬಂದಾಗ, ಬಾಳ ಸಂಗಾತಿಯಾಗುವವರನ್ನು ಪ್ರೀತಿ ಮಾಡಿದರೆ, ಅದಕ್ಕೊಂದು ಅರ್ಥವಿದೆ; ದೈವತ್ವವಿದೆ. ಆದರೆ ಹೈಸ್ಕೂಲು ಮಕ್ಕಳೇ ಪ್ರೀತಿ ಒಪ ಮಾಡಲು ಹೊರಟರೆ, ಓದೋದು ಯಾವಾಗ? ಪ್ರೀತಿಗೆ ಕಣ್ಣಿಲ್ಲವೆಂಬುದು ನಿಜ.
ಆದರೆ ಪ್ರೀತಿಸುವವರಿಗೆ ಕಣ್ಣಿಲ್ಲವೇ? ಯಾವಾಗ ಏನನ್ನು ಮಾಡಬೇಕು ಅದನ್ನೇ ಮಾಡಬೇಕು ಅನ್ನುತ್ತದೆ ನಮ್ಮ ಆಶ್ರಮ ಧರ್ಮ. ಬ್ರಹ್ಮಚರ್ಯ ಪಾಲಿಸ ಬೇಕಾದ ಕಾಲದಲ್ಲಿ ಗೃಹಸ್ಥಾಶ್ರಮ ಸುಖವನ್ನು ಅನುಭವಿಸುವುದು ತರವಲ್ಲ. ಮದುವೆಯ ಹಿಂದಿನ
ಪ್ರೀತಿಗಿಂತಲೂ, ಮದುವೆಯ ನಂತರದ ಪ್ರೀತಿ ಅವಶ್ಯ ಹಾಗೂ ಶಾಶ್ವತ. ಮದುವೆಗೆ ಮುನ್ನ ಪ್ರೀತಿಸಿದವರನ್ನೇ ಮದುವೆ ಯಾಗಬೇಕು; ಮದುವೆಯ ನಂತರ ಮದುವೆಯಾದವರನ್ನು ಮಾತ್ರ ಪ್ರೀತಿಸಬೇಕು ಎನ್ನುತ್ತದೆ ನಮ್ಮ ಸಂಸ್ಕೃತಿ.
ಆದರೆ ಪ್ರೀತಿ ಪ್ರೇಮ ಗಳೆಂಬ ವಿಚಾರಗಳೆಲ್ಲಾ ವಿದ್ಯಾರ್ಥಿಗಳಿಗೆ ವರ್ಜ್ಯ. ಒಂದು ವೇಳೆ ಅದು ಸಂಸಾರಸ್ಥರಾಗಲು ಸೂಕ್ತ ವಾಗಿರುವ ಯುವಕ ಯುವತಿಯರಲ್ಲಿ ಅಭಿವ್ಯಕ್ತ ವಾದರೂ ಅದೊಂದು ಪ್ರದರ್ಶನದ ವಿಷಯ ವಾಗಬಾರದು ಹಾಗೂ
ಏಕದಿನದ ಆಚರಣೆಯಾಗಿ ಸೀಮಿತಗೊಳ್ಳಬಾರದು. ಈ ಒಂದು ದಿನದ ಆಚರಣೆ ಯಿಂದ ನಿಜವಾದ ಪ್ರೇಮ ದಿಢೀರ್ ಆಗಿ ಹೆಚ್ಚಾಗುವು ದಿಲ್ಲ.
ಆಚರಿಸದಿದ್ದರೆ ಕಡಿಮೆಯೂ ಆಗುವುದಿಲ್ಲ. ಹೀಗೆ ಹೆಚ್ಚು ಕಮ್ಮಿಯಾದರೆ ಅದು ನಿಜವಾದ ಪ್ರೇಮವೇ ಅಲ್ಲ! ನಿಜವಾದ ಪ್ರೇಮಿಗಳು ತಮ್ಮ ಪ್ರೇಮಿಯನ್ನು ಕೇವಲ ಪ್ರೇಮ ಸಂಗಾತಿ ಎಂದು ಭಾವಿಸೋದಿಲ್ಲ; ಬದಲಿಗೆ ತಮ್ಮ ಆತ್ಮ ಸಂಗಾತಿಯೆಂದು ಪರಿಗಣಿಸುತ್ತಾರೆ. ಹಾಗೂ ಅವರನ್ನು ತಮ್ಮ ಅಂತರಂಗದ ಗುಡಿಯಲ್ಲಿಟ್ಟು ಪೂಜಿಸುತ್ತಾರೆ, ಆರಾಧಿಸುತ್ತಾರೆ. ಒಟ್ಟಿನಲ್ಲಿ ಪ್ರೇಮದ ದೈವೀಕತೆಯ, ಪಾವಿತ್ರ್ಯತೆಯ, ಗಾಂಭೀರ್ಯತೆಯ ಪರಿಚಯ ಪ್ರೇಮಿಗಳಿಗಾಗಲಿ.
ಹಾಗಾದಾಗ ಈ ‘ಒಂದು ದಿನದ’ ಆಚರಣೆ ನಿಂತು ಹೋಗುತ್ತದೆ. ಪರಮ ಶ್ರೇಷ್ಠವಾದ ಭಾರತೀಯ ಸಂಸ್ಕೃತಿಯನ್ನು ಕಡೆಗಣಿಸಿ, ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಷ್ಟು ಸರಿ? ಮೇಲಾಗಿ ಈ ಪ್ರೇಮಿಗಳ ದಿನಾಚರಣೆ ಯಿಂದ, ಪ್ರೇಮಿಗಳೇ
ಇಲ್ಲದವರಿಗೆ ನಿರಾಸೆಯನ್ನು, ನೋವನ್ನು ದುಃ ಖವನ್ನು ತಂದೊಡ್ಡೀತಲ್ಲವೇ! ದುರದೃಷ್ಟಕರ ವಿಚಾರವೆಂದರೆ, ಹೆಚ್ಚಿನ ಯುವಕ
ಯುವತಿಯರಿಗೆ, ನಮ್ಮ ದೇಶದ ಮಹಾತ್ಮರ, ಹುತಾತ್ಮರ ಬಗ್ಗೆ ಏನೂ ತಿಳಿಯದು.
ಆದರೆ ನಟ ನಟಿಯರ ಬಗ್ಗೆ ಕ್ರಿಕೆಟ್ ತಾರೆಯರ ಬಗ್ಗೆ ಎಲ್ಲವೂ ಗೊತ್ತು. ರಾಷ್ಟ್ರಗೀತೆಯನ್ನು ಹಾಡಲು ಬಾರದು; ಆದರೆ ಫಿಲ್ಮೀ ಗೀತೆಗಳೆಲ್ಲವೂ ಬಾಯಿಪಾಠ. ಆತ್ಮೀಯತೆಯಿಂದ ಅಮ್ಮ ಅಪ್ಪನನ್ನು ಅಪ್ಪುವ, ತುಂಟ ತಂಗಿಗೆ ಚಾಕಲೇಟುಗಳನ್ನು ನೀಡೋದು
ಅಣ್ಣನಿಗೆ ಇಷ್ಟವಾದ ಪೆನ್ನನ್ನ ನೀಡೋದು, ಅಜ್ಜಿಗೆ ಭಗವದ್ಗೀತೆ ಯನ್ನು ನೀಡೋದು – ಎಲ್ಲವೂ ವ್ಯಾಲಂಟೈನ್ ಉಡುಗೊ ರೆಗಳೇ ಆಗಬಹುದು.
Spirit of valentineನ್ನು ಬರೇ ಪ್ರೇಯಸಿ ಪ್ರಿಯಕರರಿಗಷ್ಟೇ ಸೀಮಿತಗೊಳಿಸದೆ, ಹೀಗೂ ಪರಿವರ್ತನೆ ಮಾಡಿಕೊಳ್ಳ ಬಹುದು. ಕುಟುಂಬ ಬಂಧನ, ಸ್ನೇಹ ಹೀಗೆ ಹಲವಾರು ಅನುಬಂಧಗಳು ಪ್ರೇಮಗಳಾಗಿ ವಿಕಸನ ಗೊಳ್ಳಬೇಕು. ಒಟ್ಟಿನಲ್ಲಿ ವ್ಯಾಲೆಂಟೇನ್ ಡೇ ಎಂದರೆ ವೃತ್ತಿ, ವಯಸ್ಸನ್ನು ಮೀರಿ ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯ ಮೇಲೆ ತನಗಿರುವ ಪ್ರೀತಿ ಪ್ರೇಮವನ್ನು ಸಾರಿ ಹೇಳುವ
ದಿನವೆಂದು ಅರ್ಥೈಸಿಕೊಳ್ಳಬಹುದೇ! ಆದುದರಿಂದಲೇ Finlandನಲ್ಲಿ Valentine Day ಯನ್ನು Friends Day ಆಗಿ ಆಚರಿಸುತ್ತಾರೆ.
ಒಟ್ಟಿನಲ್ಲಿ ಹದಿಹರೆಯದ ಈ ವಯಸ್ಸಿನಲ್ಲಿ ಪ್ರೀತಿ ಮಾಡಲೇ ಬೇಕೆಂದಿದ್ದಲ್ಲಿ ಹೆತ್ತವರನ್ನ, ದೇಶ ವನ್ನ, ಪ್ರಕೃತಿಯನ್ನು, ಭೂತಾಯಿಯನ್ನು, ಯೋಧ ರನ್ನು,ರೈತರನ್ನು, ಪ್ರೀತಿಸಿ; ಆಗ ಅದು ದೈವತ್ವವನ್ನು ಪಡೆದುಕೊಳ್ಳುತ್ತದೆ.