ಯಶೋ ಬೆಳಗು
ಯಶೋಮತಿ ಬೆಳಗೆರೆ
yashomathy@gmail.com
ಅವರಾಗೇ ಹೇಳದೇ, ಸ್ವಯಂ ನಿರ್ಧಾರ ತೆಗೆದುಕೊಳ್ಳುವಂತಿರಲಿಲ್ಲ. ಎಲ್ಲರ ಕಣ್ಣಲ್ಲೂ ನಾನು ಅವರಿಗೆ ಕೆಡುಕನ್ನುಂಟು ಮಾಡುತ್ತಿರು ವವಳು ಎಂಬ ಭಾವನೆಯಿಂದ ಯಾರೂ ನನ್ನೊಡನೆ ವಿಶ್ವಾಸದಿಂದ ಮಾತನಾಡುತ್ತಿರಲಿಲ್ಲ. ಈ ಶನಿ ಹೆಂಗಸಿನಿಂದಲೇ ಇಷ್ಟೆಲ್ಲ ಆಗುತ್ತಿರುವುದು ಅನ್ನುವ ಮಾತುಗಳು ಕಿವಿಗೆ ಬಿದ್ದರೂ ಚಕಾರವೆತ್ತದೆ ಸಹಿಸಿಕೊಳ್ಳಲೇ ಬೇಕಾದಂಥ ಪರಿಸ್ಥಿತಿ…
ಸಮಯ ರಾತ್ರಿ ಎಂಟು ಗಂಟೆ ಮೀರುತ್ತಿದೆ. ಮನಸ್ಸಿನ್ನೂ ಡೋಲಾಯಮಾನ. ಮೊದಲಾದರೆ ಡ್ರೈವರ್ ಇರ್ತಿದ್ರು. ರವಿಯ ಅನುಮತಿ ಪಡೆದು ನಿರಾತಂಕವಾಗಿ ಹೊತ್ತಿನ ಪರಿವೆಯಿಲ್ಲದೆ ಮಗನನ್ನು ಕರೆದುಕೊಂಡು ಒಬ್ಬಳೇ ಬೇಕೆಂದ ಸ್ಥಳಕ್ಕೆ ಹೊರಟುಬಿಡುವ ಸ್ವಾತಂತ್ರ್ಯ ವಿತ್ತು. ಆದರೆ ಈಗ ಧೈರ್ಯವಾಗುವುದಿಲ್ಲ. ಎಲ್ಲವನ್ನೂ, ಎಲ್ಲರನ್ನೂ ಸುಲಭವಾಗಿ ನಂಬಲಿಕ್ಕಾಗದೇ ಯಾರಾದರೂ ತಿಳಿದವರು, ದೊಡ್ವವರು ಜತೆಗೆ ಸಿಕ್ಕರೆ ಮಾತ್ರ ವ್ಯವಸ್ಥಿತ ಪ್ರಯಾಣ ಸಾಧ್ಯ. ಅಮ್ಮನಿಗೆ ಕಾಲು ನೋವಿರುವುದರಿಂದ ಪ್ರಯಾಣ ಕಷ್ಟ. ಇನ್ನು ತನ್ನ ಹೈಸ್ಕೂಲು ವಿದ್ಯಾಭ್ಯಾಸವನ್ನು ಪ್ರಾರ್ಥನಾ ಶಾಲೆಯ ಕಲಿಯುತ್ತ ನಮ್ಮೊಂದಿಗಿದ್ದ ಅಣ್ಣನ ಮಗನಿಗೆ, ನಾಲ್ಕು ವರ್ಷದ ಹಿಂದೆ ಅವರ ದೊಡ್ಡಮ್ಮನ ಮನೆಯಲ್ಲಿ ಬಚ್ಚಲು ಮನೆಯ ಕ್ಲೀನಿಂಗಿಗೆ ಎಂದು ಇಟ್ಟಿದ್ದ ಡೈಲ್ಯೂಟೆಡ್ ಅಸಿಡ್ ಬಾಟಲಿಯನ್ನು ನೀರಿನ ಬಾಟಲಿಯೆಂದು ತಿಳಿದು ಅನಾಯಾಸವಾಗಿ ಬಾಯೊ ಳಗೆ ಹಾಕಿದ ಕೂಡಲೆ ಗಂಟಲು, ಕರುಳೆಲ್ಲವೂ ಸುಟ್ಟು ಕ್ಷಣಾರ್ಧದಲ್ಲಿ ನೆಲದ ಮೇಲೆ ಕುಸಿದು ಬಿದ್ದ ಅವನ ತಮ್ಮನನ್ನು ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ.
ಅಂಥದ್ದರಲ್ಲೂ ನಮ್ಮ ಜತೆಗೆ ಹೊರಡಲು ಜತೆಯಾದವನಿಗೆ ಇನ್ನೇನು ಹೊರಡುವ ಕೊನೆಯ ಕ್ಷಣದಲ್ಲಿ ತಮ್ಮನ ಆರೋಗ್ಯದಲ್ಲಿ ಏರುಪೇರೆಂದು -ನು ಬಂದ ಕಾರಣ, ಬಂದ ದಾರಿಯ ಪೆಚ್ಚುಮೋರೆ ಹಾಕಿಕೊಂಡು ಹೊರಟು ಬಿಟ್ಟ. ಇನ್ನು ತಂಗಿಯ ಮಗಳಿಗೆ ಪರೀಕ್ಷೆಯ ಸಮಯ. ಅವರನ್ನು ಜತೆಗೆ ಕರೆದೊಯ್ಯುವುದು ದೂರವೇ ಉಳಿಯಿತು. ಯಾಕೋ ಶಕುನಗಳೇ ಸರಿಯಾಗುತ್ತಿಲ್ಲ. ಅಂದುಕೊಂಡಂತೆ ಬಸ್ ಟಿಕೆಟ್ಟು, ಟ್ರೇನ್ ಟಿಕೆಟ್ಟೂ ಸಿಕ್ತಿಲ್ಲ. ಅಂದಮೇಲೆ ಸುಮ್ಮನೆ postpone ಮಾಡೋದೇ ಒಳ್ಳೇದು. ಮತ್ತೊಮ್ಮೆ ಯಾವಾಗಲಾದರೂ ಹೋಗೋಣ ಎಂದು ಸುಮ್ಮನಾಗಿ ಬಿಟ್ಟೆ.
ಆದರೂ ಪ್ರಯತ್ನ ಬಿಡಬಾರದೆಂಬ ಛಲ. ಆಗ ನೆನಪಾಗಿದ್ದೇ ಸಚಿನ್ ಡ್ರೈವಿಂಗ್ ಸರ್ವೀಸ್! ಲೋಕಲ್ ಜತೆಗೆ ಟ್ಠಠಿoಠಿZಠಿಜಿಟ್ಞಗಳಲ್ಲೂ ಉತ್ತಮ ಸೇವೆಯನ್ನು ನೀಡು ತ್ತಿರುವ ಅದರ ಮಾಲೀಕರಾದ ಮಾದೇಶ್ ಅವರಿಗೆ ಫೋನ್ ಮಾಡಿ. ಪರಿಸ್ಥಿತಿ ವಿವರಿಸಿ ಒಳ್ಳೆಯ ಡ್ರೈವರ್‌ರನ್ನು ಕಳಿಸಿಕೊಡಿ ಎಂದು ಕೇಳಿದೆ. ‘ಮೇಡಮ್ ನೀವು ಚಿಂತೇನೇ ಮಾಡ್ಬೇಡಿ. ನೆಮ್ಮದಿಯಾಗಿ ಹೋಗಿಬನ್ನಿ’ ಎಂದು ಹೇಳಿ ಉತ್ತಮವಾದ ಡ್ರೈವರನ್ನು ಕಳಿಸಿಕೊಟ್ಟರು. ಆದರೂ ಸಮಯ ರಾತ್ರಿ ಹನ್ನೊಂದೂವರೆ ದಾಟಿದೆ. ಡ್ರೈವರ್ ಬಂದು ನಿಂತಾಗಿದೆ.
ಕೊನೆಕ್ಷಣದಲ್ಲಿ ಜತೆಗಿದ್ದ ಅಣ್ಣನ ಮಗನೂ ಹಿಂತಿರುಗಿ ಹೋಗಬೇಕಾಗಿದೆ. ಏನು ಮಾಡೋದು? ಏನಾದರಾಗಲಿ ಮುಂದಿಟ್ಟ ಹೆಜ್ಜೆ ಹಿಂತೆಗೆ ಯೋದು ಬೇಡ ಎಂದು ನಿರ್ಧರಿಸಿ ಒಂದೇ ಮನಸಿನಿಂದ ಹೊರಟುಬಿಟ್ಟೆ. ಹೊರಟ ಹತ್ತೇ ನಿಮಿಷಕ್ಕೆ ಮಗ ಅಳೋಕೆ ಶುರು ಮಾಡಿದ ‘ವಾಪಸ್ ಹೊರಟು ಹೋಗೋಣ ಅಮ್ಮಾ’ ಅಂತ. ಅವನಿಗೆ ಸಮಾಧಾನ ಮಾಡಿ ನಂತರ ಡ್ರೈವರ್ ಪರಿಚಯ ಮಾಡಿಕೊಂಡು ಅವರ ಮೇಲೆ ವಿಶ್ವಾಸ ಮೂಡಿದ ನಂತರ ನೆಮ್ಮದಿಯಾಗಿ ನಿದ್ರೆ ಮಾಡಿದ.
ಯಾಕಿದೆಲ್ಲ ವಿವರಿಸುತ್ತಿದ್ದೇನೆ ಎಂದರೆ ಮನೆಯ ಯಜಮಾನರಾದವರು ಇದ್ದಕ್ಕಿದ್ದಂತೇ ನಿರ್ಗಮಿಸಿದಾಗ ಗೌಣವಾಗಿದ್ದ ವಿಷಯ ಗಳೂ ಕೂಡ ಹೇಗೆ ಮಹತ್ವದ ವಿಷಯಗಳಾಗಿ ಬದಲಾಗುತ್ತ ಏನೆಲ್ಲ ವ್ಯತ್ಯಾಸಗಳು ಅನುಭವಕ್ಕೆ ಬರುತ್ತದೆ ಎಂಬುದರ ಅರಿವು ಮೂಡಿಸುವು ದಕ್ಕೆ. ಅಷ್ಟಿಷ್ಟು ತಿಳಿದು, ಪರಿಸ್ಥಿತಿಯನ್ನು ನಿಭಾಯಿಸುವಂಥ ಅಲ್ಪಸ್ವಲ್ಪ ಗಟ್ಟಿತನವಿರುವ ನನಗೇ ಇಂಥಾ ಪರಿಸ್ಥಿತಿ ಎಂದರೆ ಇನ್ನು ಹೊರಜಗತ್ತನ್ನೇ ಕಾಣದೇ ಮನೆಗಳ ಉಳಿದುಹೋದ ಹೆಣ್ಣುಮಕ್ಕಳ ಪಾಡೇನು? ಹೊರಟಿದ್ದು ಉತ್ತರ ಕರ್ನಾಟಕದ ಜೋಯಿಡಾದ ಕಾಡುಮನೆಗೆ.
ಪಾಂಜೇಲಿ ಹಾಗೂ ಕೊನಡಾದಲ್ಲಿರುವ ನಮ್ಮ ಜಮೀನಿನ ಪರಿಸ್ಥಿತಿ ಹೇಗಿದೆ? ಎಂದು ನೋಡಿ ಬರಲಿಕ್ಕೆ. ಸತತವಾಗಿ ಎಂಟೊಂಬತ್ತು ಗಂಟೆಗಳ ಪ್ರಯಾಣ. ನಡುವೆ ಧಾರವಾಡ ಸಿಗುವುದರಿಂದ ಅಲ್ಲಿ ರವಿ ಕುಲಕರ್ಣಿ, ಪ್ರಸನ್ನ ಕರ್ಪೂರ, ಸುವರ್ಣ ಶಾನುಭೋಗ್, ಡಾ.
ಆನಂದ ಪಾಂಡುರಂಗಿ, ಅಶೋಕ್ ಶೆಟ್ಟರ್, ಜಿ.ಎಚ್. ರಾಘವೇಂದ್ರರ ಪತ್ನಿ ಸುಧಾ ವೈನಿ ಎಲ್ಲರನ್ನೂ ಮಾತಾಡಿಸಿಕೊಂಡು ಹೋಗುವ ಇರಾದೆ ಇತ್ತು. ಆದರೆ ಸಮಯ ಹೊಂದಿಸಿಕೊಳ್ಳಲಾಗದೇ ನೇರವಾಗಿ ಕಾಡುಮನೆಗೆ ಹೊರಟೆವು. ಅಳ್ನಾವರ ದಾಟಿ ಹಳಿಯಾಳಕ್ಕೆ ಕಾಲಿಡುತ್ತಿದ್ದಂತೆಯೇ ಆ ಸಾಲು ಸಾಲು ಎತ್ತೆತ್ತರದ ಮರಗಳನ್ನು ಕಂಡಾಗ ಎಂಥದ್ದೇ ಖುಷಿ. ನಮ್ಮ ನೆಲಕ್ಕೆ ಕಾಲಿಟ್ಟಂಥ ಅನುಭವ. ಸುಮಾರು ಎಂಟತ್ತು ವರುಷಗಳೇ ಆಗಿಹೋಗಿದ್ದವು ಆ ದಾರಿಯಲ್ಲಿ ಹೋಗಿ. ಹಳಿಯಾಳವನ್ನು ಹಿಂದಕ್ಕೆ ಹಾಕಿ ದಾಂ ಡೇಲಿ
ಎದುರಾಗಿ ತಿರುವಿನಲ್ಲಿ ಅದೇ ರಭಸದಿಂದ ಹರಿಯುತ್ತಿದ್ದ ಕಾಳೀ ನದಿಯನ್ನು ಕಂಡಾಗ ಮನಸೆಲ್ಲ ಪ್ರಫುಲ್ಲ ಪ್ರಫುಲ್ಲ.
ಈ ಕಾಳಿಗೂ ನನಗೂ ಬಿಡದ ನಂಟು! ಕಾಳಿ ನಮ್ಮ ವಿಶ್ವಕರ್ಮ ಜನಾಂಗದ ಕುಲದೇವತೆ. ಹೀಗಾಗಿ ಹೆಚ್ಚಾಗಿ ನಮ್ಮೆಲ್ಲರ ಬಣ್ಣಗಳೂ ಅವಳಂತೆಯೇ ಕಪ್ಪು. ಮದುವೆ ಯಾಗಿ ಎರಡು ವರ್ಷಗಳಾದರೂ ಮಡಿಲು ತುಂಬದಾಗ ಅಮ್ಮ ಕಾಳಿಕಾಂಬೆಗೆ ಹರಕೆ ಕಟ್ಟಿಟ್ಟಿದ್ದರಂತೆ. ನನ್ನ ಮಡಿಲು ತುಂಬಿಸಿದರೆ ಆ ಮಗುವಿನ ಕೈಯಿಂದ ಬೆಳ್ಳಿಯ ತೊಟ್ಟಿಲು ನಿನಗೆ ಅರ್ಪಿಸುತ್ತೇನೆ ಎಂದು. ಹೀಗಾಗಿ ಕಾಳಿಯ ವರ
ಪ್ರಸಾದದಿಂದ ಜನಸಿದ ನನಗೆ ಇಂದಿಗೂ ದೇವಿಯೇ ಆರಾಧ್ಯ ದೇವತೆ. ಈಗಲೂ ಚೆನ್ನಪಟ್ಟಣದಲ್ಲಿರುವ ಕಾಳಿಕಾಂಬ ದೇವಿಯ ಗುಡಿಗೆ ತಿಂಗಳಿಗೊಮ್ಮೆಯಾದರೂ ಹೋಗಿಬರುವ ರೂಢಿಯಿದೆ.
ಅಲ್ಲಿಗೆ ಹೋಗಿ ಬಂದರೆ ಮನಸ್ಸಿಗೆಂಥದ್ದೋ ಸಮಾಧಾನ. ಏನನ್ನೂ ಕೋರಿಕೊಳ್ಳದೆಯೇ ಮನದಿಂಗಿತವನ್ನು ಪೂರೈಸುವ ಶಕ್ತಿದೇವತೆ ಅವಳು. ಬಹುಶಃ 2006ರ ಸಮಯ. ರವಿಯ ಆರೋಗ್ಯದಲ್ಲಿ ಏರುಪೇರಾಗಿತ್ತು. ಊಟ ಮಾಡುವುದನ್ನೇ ಬಿಟ್ಟುಬಿಟ್ಟಿದ್ದರು. ಅಂಥಾ ಕಂಚಿನ ಧ್ವನಿಯಿಂದ ಮನೆಮನೆ ಮಾತಾಗಿದ್ದವರಿಗೆ ಮಾತಾಡಲು ಸ್ವರವೇ ಹೊರಡುತ್ತಿರಲಿಲ್ಲ. ಪಕ್ಕಕ್ಕೆ ಹೊರಳಲೂ ಮತ್ತೊಬ್ಬರ ಸಹಾಯ ಬೇಕು ಅನ್ನುವಂಥ ಪರಿಸ್ಥಿತಿ. ಅಂತಹ ಮಹಾನ್ ಸಿಟ್ಟಿನ ರೂಪವಾಗಿದ್ದ ಅವರಿಗೆ ಸಿಟ್ಟೇ ಬರುತ್ತಿರಲಿಲ್ಲ. ಇದೇನಾಗಿ ಹೋಯಿತು ಇದ್ದಕ್ಕಿದ್ದಂತೆ ಎನ್ನುವ ಧಾವಂತ ಎಲ್ಲರಿಗೂ. ಅವರಾಗೇ ಹೇಳದೇ ಯಾವ ಕೆಲಸಕ್ಕೂ ನಾನಾಗೇ ಸ್ವಯಂ ನಿರ್ಧಾರ ತೆಗೆದುಕೊಳ್ಳು ವಂತಿರಲಿಲ್ಲ.
ಎಲ್ಲರ ಕಣ್ಣಲ್ಲೂ ನಾನು ಅವರಿಗೆ ಕೆಡುಕನ್ನುಂಟು ಮಾಡುತ್ತಿರುವವಳು ಎಂಬ ಭಾವನೆಯಿಂದ ಯಾರೂ ನನ್ನೊಡನೆ ವಿಶ್ವಾಸದಿಂದ ಮಾತ ನಾಡುತ್ತಿರಲಿಲ್ಲ. ಈ ಶನಿ ಹೆಂಗಸಿನಿಂದಲೇ ಇಷ್ಟೆಲ್ಲ ಆಗುತ್ತಿರುವುದು ಅನ್ನುವ ಮಾತುಗಳು ಕಿವಿಗೆ ಬಿದ್ದರೂ ಚಕಾರವೆತ್ತದೆ ಸಹಿಸಿ ಕೊಳ್ಳಲೇ ಬೇಕಾದಂಥ ಪರಿಸ್ಥಿತಿಯಲ್ಲಿ ನಾನೇನಾದಾರೂ ಮಾಡಿ ಅದರಿಂದ ಅವರಿಗೆ ಇನ್ನಷ್ಟು ತೊಂದರೆಯಾಗಿಬಿಟ್ಟರೆ… ಅನ್ನುವ ಭಯದಿಂದ ಏನು ಮಾಡಲೂ ತೋಚದೇ ಮನದ ಕಂಡಕಂಡ ದೇವರಿಗೆಲ್ಲ ಹರಕೆ ಹೊತ್ತಿz. ಸರಿಯಾದರೆ ಸಾಕು ಅಂತ.
ನನ್ನ ದೈನ್ಯದ ಮೊರೆ ಕೇಳಿತೇನೋ ಎಂಬಂತೆ ರವಿ ಸ್ವಲ್ಪ ಚೈತನ್ಯದಿಂದ ಗೆಲುವಾಗಿ ಕಾಣಲಾರಂಭಿಸಿದರು. ಅವರ ಅಪಾರವಾದ ಡಿಜ್ಝ್ಝಿ mಟಡಿಛ್ಟಿ ಕೂಡ ಅದರ ಒಂದು ಮುಖ್ಯ ಕಾರಣವಾಗಿತ್ತು. ನಾನು ಕಂಪ್ಯೂಟರಿನಲ್ಲಿ ಪತ್ರಿಕೆಯ ಪುಟ ವಿನ್ಯಾಸದಲ್ಲಿ ತೊಡಗಿಕೊಂಡಿದ್ದೆ. ಡ್ರೈವರನ್ನು ಜತೆ ಮಾಡಿಕೊಂಡು ರವಿ ಎಲ್ಲೋ ಹೊರಟ ಹಾಗಿತ್ತು. ಅರ್ಧಗಂಟೆಯಾದರೂ ಡ್ರೈವರ್ ಪತ್ತೆಯಿಲ್ಲ. ಸರಿ ತಾವೇ ಸ್ಟೇರಿಂಗ್
ಹಿಡಿದು ಡ್ರೈವಿಂಗ್ ಸೀಟಿನಲ್ಲಿ ಕೂತಾಗಿತ್ತು. ‘ಬಾಸ್ ಕರೀತಿದ್ದಾರೆ. ನೀವು ಹೋಗ್ಬೇಕಂತೆ ಜತೆಗೆ’ ಅಂದಾಗ ಯಾವುದೇ ತಯಾರಿಯಿಲ್ಲದೆ ಇದ್ದಕ್ಕಿದ್ದಂತೆ ಹೊರಡುವುದು ಹೇಗೆ? ಆದರೂ ಮಾತಾಡುವಂತಿಲ್ಲ.
ಸರಿ ಎರಡೇ ನಿಮಿಷದಲ್ಲಿ ಮನೆಗೆ ಓಡಿ ಸಿಕ್ಕ ಬಟ್ಟೆ ಟ್ರಾವೆಲ್ ಬ್ಯಾಗಿನಲ್ಲಿ ತುರುಕಿಕೊಂಡು ಓಡಿಬರುವುದಕ್ಕೂ, ಅವರು ತಮ್ಮ ಸ್ಕಾರ್ಪಿಯೋ ಕಾರು ಸ್ಟಾರ್ಟ್ ಮಾಡಿ ಹೊರಡುವುದಕ್ಕೂ ಸರಿಹೋಯಿತು. ಎರಡೇ ನಿಮಿಷ ತಡವಾಗಿದ್ದರೂ ಒಬ್ಬರೇ ಹೊರಟು ಬಿಡುತ್ತಿದ್ದರು. ಚಿತ್ರದುರ್ಗದಲ್ಲಿ ಕಾಫಿಗೆ ಅಂತ ಇಳಿದದ್ದು ಬಿಟ್ಟರೆ ಧಾರವಾಡದವರೆಗೂ ಎಲ್ಲೂ ನಿಲ್ಲಲಿಲ್ಲ. ಅಲ್ಲಿಂದ ನೇರವಾಗಿ ಡಾ. ಆನಂದ ಪಾಂಡುರಂಗಿ ಯವರ ಮನೆಗೆ ಹೋಗಿ ಅವರ ತಾಯಿಯನ್ನು ಮಾತನಾಡಿಸಿ, Io.ಪಾಂಡುರಂಗಿಯವರು ಕೊಟ್ಟ ಅದ್ಭುತವಾದ ಶುಂಠಿ ಎಲೆಯ ಘಮಘಮಿಸುವ ಚಹಾ ಕುಡಿದು, ಅಲ್ಲಿಂದ ಅಶೋಕ ಶೆಟ್ಟರ್‌ರವರ ಮನೆಗೆ ಹೋಗಿ ಅವರನ್ನು ಮಾತಾಡಿಸಿಕೊಂಡು ಸೀದಾ ಹೊರಟಿದ್ದು ದಾಂಡೇಲಿಯ ಹಾರ್ನ್ ಬಿಲ್ ರೆಸಾರ್ಟಿಗೆ.
ಹುಣ್ಣಿಮೆಯ ಬೆಳದಿಂಗಳಿನಲ್ಲಿ ಕಾಳಿ ನದಿಯ ಜುಳುಜುಳು ನಾದ ಮನಸ್ಸಿಗೆ ಆಹ್ಲಾದವನ್ನುಂಟು ಮಾಡಿತ್ತು. ಅಲ್ಲಿಯ ಮತ್ತೊಂದು ಕಾರ್ನರಿನಲ್ಲಿ ಕುಟುಂಬದವರೆಲ್ಲ ‘ಬರಸೋ ರೆ ಮೇಘಾ ಮೇಘಾ’ ಹಾಡಿಗೆ ಹೆಜ್ಜೆ ಹಾಕುತ್ತ ಸಂತೋಷದಿಂದಿದ್ದರು. ನಮ್ಮ ಕಾಟೇಜಿನ ವರಾಂಡದಲ್ಲಿ ಇದನ್ನೆಲ್ಲ ಗಮನಿಸುತ್ತ ಕುಳಿತಿದ್ದಾಗಲೇ ಮಾರುದೂರದಲ್ಲಿ ಸಾಮಾನ್ಯ ಎತ್ತರದ ಹಾಲುಬಿಳುಪಿನ ವ್ಯಕ್ತಿಯೊಬ್ಬರು ನಿಂತು ನಮ್ಮೆಡೆಗೆ ನೋಡುತ್ತಿರುವುದು ಕಂಡು, ‘ಹೇ ನರಸಿಂಹ, ಅಲ್ಯಾಕೆ ನಿಂತಿದ್ದೀಯ? ಬಾ ಮಾರಾಯಾ’ ಅಂತ ಕರೆದಾಗ ನಾನು ಜತೆ ಯಲ್ಲಿದ್ದುದರಿಂದ ಬರಲು ಸ್ವಲ್ಪ ಹಿಂಜರಿದಂತಾಯ್ತು.
‘ನಾನು ಒಳಗಿರ್ಲಾ? ನೀವೇನೋ ಮಾತಾಡಬೇಕನ್ಸತ್ತೆ’ ಅಂದಾಗ, ‘ಅಂಥಾ ರಹಸ್ಯವೇನೂ ಇಲ್ಲ ನೀನೂ ಇ ಇರು’ ಎಂದು ಹೇಳಿ ಮನೋಹರ ಮಳಗಾಂವ್ಕರ್ ಬಗ್ಗೆ ಮಾತಾಡುತ್ತ ಅವರನ್ನು ಮಾರನೆಯ ದಿನ ಭೇಟಿಯಾಗುವ ವಿಚಾರವಾಗಿ ಸಮಯ ನಿಗದಿಪಡಿಸಲು ಹೇಳಿದರು. ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಲೇಖಕರಾಗಿ, ಅದ್ಭುತ ಜೀವನಶೈಲಿ ಯನ್ನು ಹೊಂದಿದ್ದ, ಅಷ್ಟು ಸುಲಭಕ್ಕೆ ಯಾರನ್ನೂ ಭೇಟಿ ಯಾಗದ ಅವರನ್ನು ಹರಸಾಹಸ ಮಾಡಿ ಒಪ್ಪಿಸಿ ಭೇಟಿ ಮಾಡಿಸಿದ ಕೃಪೆ ನರಸಿಂಹ ಛಾಪಖಂಡರದ್ದು.
ನೋಡಿದ ಮೊದಲ ದಿನದಿಂದಲೇ ‘ಅಕ್ಕಾ’ ಅನ್ನುವ ಆತ್ಮೀಯ ಮಾತಿನಿಂದ ಪರಿಚಿತನಾದ ನರಸಿಂಹನದ್ದು ಇಂದಿಗೂ ಅದೇ ತಪ್ಪದ ಭಾವ. ಅದೇ ಆತ್ಮೀಯತೆ. ಅವನ ಮಗ ಧ್ರುವಂಗೆ ಬೆಳಗೆರೆ ಮಾವ ಅಂದ್ರೆ ಪಂಚಪ್ರಾಣ. ಅವನ ಹೆಂಡತಿ ಕಾವ್ಯ ಮಾಡಿ ತರುತ್ತಿದ್ದ ಒಂದೆಲಗದ ಪಾನಕವನ್ನು ಅಷ್ಟೇ ಪ್ರೀತಿಯಿಂದ ಕುಡಿಯುತ್ತಿದ್ದರು. ಮಗಳು ನದಿ ಆನಂತರ ಬಂದವಳಾದ್ದರಿಂದ ಇನ್ನುಮುಂದೆ
ಪರಿಚಯ ವಾಗಬೇಕಾಗಿದೆ.
ಹೋಳಿ ಹುಣ್ಣಿಮೆಯ ಬೆಳದಿಂಗಳ ರಾತ್ರಿಯಲ್ಲಿ ಕಾಡೆಲ್ಲ ಅಲೆದು, ಕಾಳೀನದಿಯಲ್ಲಿ ಮಿಂದು ಬಂದ ನಂತರ ಬದುಕು ನಿಧಾನಕ್ಕೆ ಖಿ ಠ್ಠ್ಟ್ಞಿ ತೆಗೆದುಕೊಳ್ಳಲಾರಂಭಿಸಿತು. ಅಲ್ಲಿಯ ಕೊನಡಾದಲ್ಲಿ ಖರೀದಿಸಿದ ಮೊದಲ ಜಮೀನಿನಿಂದ ಆರಂಭವಾಗಿ ನಂತರ ಬೆಂಗಳೂರಿನಂದು ಫ್ಲಾಟು ಖರೀದಿಸಿದ ನಂತರ ಬದುಕಿಗೆ ಆಸರೆಯಾಗಿ ಬಂದವನು ಮಗ. ಓಡುತ್ತಿರುವ ಕಾರಿನ ಜತೆ ಜತೆಗೆ ಕಾಡಿನ ಗಂಧದಲ್ಲಿ ಮಿಂದೇ ಳುತ್ತಿದ್ದ ಭಾವನೆಗಳು ಅಲ್ಲಲ್ಲಿ ಕುಳಿತು, ನಿಂತು, ಓಡಾಡಿ ನೆನಪಿನ ತರಂಗಗಳನ್ನೆಬ್ಬಿಸುತ್ತಿದ್ದವು. ಮರಳಿ ಬೆಂಗಳೂರಿಗೆ ಬರುವಷ್ಟರಲ್ಲಿ ಸುರೇಶಣ್ಣ (ಗುಮೆರ್ ಸುರೇಶ್ ಶೆಟ್ಟಿ)ನ ಫೋನು. ಜತೆಗೇ ಕರ್ಣನದ್ದು.
‘ಬೆಳಗೆರೆ ಕುಟುಂಬ ಅಂದರೆ ನೀವು ಹಾಗೂ ಹಿಮವಂತನ್ನೂ ಸೇರಿಯೇ. ನೀವ್ಯಾವತ್ತೂ ಹೊರಗಿನವರಲ್ಲ. ಹಿಮವಂತನನ್ನು ಚೆನ್ನಾಗಿ ನೋಡಿಕೊಳ್ತೀನಿ ಅಂತ ಅಪ್ಪನಿಗೆ ಪ್ರಾಮಿಸ್ ಮಾಡಿದ್ದೀನಿ. ನಾನು ಮಾತಿಗೆ ತಪ್ಪುವವನಲ್ಲ. ಅವನು ತನ್ನ ದುಡಿಮೆಯನ್ನು ಆರಂಭಿಸುವವರೆಗೂ ಅವನ ಜವಾಬ್ದಾರಿ ನನ್ನದು…’ ಈ ಮಾತು ಕೇಳಿ ಭುಗಿಲೆದ್ದಿದ್ದ ಆಕ್ರೋಶದ ಜ್ವಾಲೆಗಳೆಲ್ಲ ತಣ್ಣಗಾದವು.