Monday, 12th May 2025

ಜಿಪುಣ ಅಂದ್ರೆ ಜಿಪುಣ ಈ ಕಾಲ !

#corona

ಯಶೋ ಬೆಳಗು

ಯಶೋಮತಿ ಬೆಳಗೆರೆ

yashomathy@gmail.com

ಕರೋನಾ ಮೂಲಕ ನಾವು ಸಾಕಷ್ಟು ಕಲಿತಿದ್ದೇವೆ. ಬದಲಾಗಿದ್ದೇವೆ. ಪರಸರದ ಮಹತ್ವವೇನು? ಕುಟುಂಬದ ಮಹತ್ವ ವೇನು? ಎಂಬುದನ್ನು ಅರಿತಿದ್ದೇವೆ. ಅದನ್ನು ಯಾಕೆ ರಕ್ಷಿಸಬೇಕು? ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬ ಪಾಠವನ್ನು ಕಲಿತಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವದ ಮೌಲ್ಯವೇನು ಎಂಬುದು ಪ್ರತಿಯೊಬ್ಬರಿಗೂ ಮನವರಿಕೆಯಾದಂತಾಗಿದೆ.

ಸಾಡೇ ಸಾತಿ ಅನ್ನುವುದು ಪ್ರತಿಯೊಬ್ಬ ಮನುಷ್ಯನ ಪೂರ್ಣ ಜೀವಿತಾವಧಿಯಲ್ಲೂ ಮೂರು ಬಾರಿ ಪುನರಾವರ್ತನ ಗೊಳ್ಳುತ್ತ ದಂತೆ. ಕರ್ಮಕಾರಕನಾದ ಶನಿದೇವನು ಇರುವ ಹನ್ನೆರಡು ರಾಶಿಗಳಲ್ಲೂ ಎರಡೂವರೆ ವರ್ಷಗಳ ಕಾಲ ನೆಲೆಸಿರುತ್ತಾನಂತೆ. ಆದರೂ ಆ ಸಮಯದಲ್ಲೇ ತಾನಿರುವ ರಾಶಿಯ ಹಿಂದಿನ ರಾಶಿ ಹಾಗೂ ಮುಂದಿನ ರಾಶಿಯವರಿಗೂ ಅವರವರ ಕರ್ಮಾನುಸಾರ ಫಲಗಳನ್ನು ಕೊಡುತ್ತಾನೆ ಅನ್ನುವುದು ನಂಬಿಕೆ.

ಶನಿ ಕೆಟ್ಟವನಲ್ಲ. ನಮ್ಮ ಸುತ್ತ ಆವರಿಸಿಕೊಂಡಿರುವ ಭ್ರಮೆ ಹಾಗೂ ಮುಖವಾಡಗಳನ್ನು ಕಳಚಿ ಸತ್ಯದರ್ಶನ ಮಾಡಿಸುತ್ತಾ, ಜೀವನವೆಂದರೇನು? ಹಣವೆಂದರೇನು? ಬಂಧು ಗಳೆಂದರೇನು? ನೋವು- ನಲಿವುಗಳೆಂದರೇನು? ಎಂಬುದನ್ನು ಮನವರಿಕೆ ಮಾಡಿಸಿ ಕೊಡುತ್ತಾನೆ. ಜತೆಗೆ ನಮ್ಮ ನಡೆ-ನುಡಿಯಂತೆ ನಮ್ಮ ಕರ್ಮಗಳನ್ನು ಆಧರಿಸಿ, ಅದರ ಫಲಗಳನ್ನು ನೀಡುತ್ತಾನೆ.

ಸುಖದ ಕಾಲದಲ್ಲಿ ಮತ್ತೊಬ್ಬರನ್ನು ಹೀಯಾಳಿಸುವುದು, ದಬ್ಬಾಳಿಕೆ ನಡೆಸುವುದು, ಕ್ರೌರ್ಯ-ಅನ್ಯಾಯ-ಅಕ್ರಮ -ಅನೀತಿ-ಅಧರ್ಮದ ಕೆಲಸಗಳನ್ನು ಮಾಡಿದ್ದರೆ, ಅದೆಲ್ಲಕ್ಕೂ ಉತ್ತರವನ್ನು ತನ್ನ ಅವಧಿಯಾದ ಸಾಡೇಸಾತಿಯಲ್ಲಿ ನೀಡುತ್ತಾನೆ. ಬದುಕಲೂ ಆಗದೆ, ಸಾಯಲೂ ಆಗದೆ ತಮ್ಮ ಪ್ರತಿಯೊಂದು ಕಾರ್ಯಕ್ಕೂ ತಕ್ಕ ಫಲವನ್ನು ಅನುಭವಿಸಿಯೇ ತೀರುವಂತೆ ಮಾಡುವುದು ಮಾತ್ರ ಖಚಿತ.

ಹೀಗಾಗಿ ಹೆಚ್ಚಾಗಿ ಮೆರೆಯದೇ, ನ್ಯಾಯ-ನೀತಿ- ಧರ್ಮದ ಹಾದಿಯಲ್ಲಿ ನಡೆಯುತ್ತಾ ಅವನ ಕೃಪೆಗೆ ಪಾತ್ರರಾಗಬೇಕು ಅನ್ನುವುದು ಪ್ರತೀತಿ. ಹೀಗಾಗಿ ಬಾಲ್ಯ, ಯೌವನ, ನಡುವಯಸ್ಸು ಹಾಗೂ ಮುಪ್ಪಿನ ನಡುವಿನ ಜೀವನದಲ್ಲಿ ವಿದ್ಯೆ, ವಿವಾಹ, ನೌಕರಿಯ ನಡುವೆ ಕುಟುಂಬದಲ್ಲಿ ಕೆಲವರಿಗೆ ಕೆಲವು ರೀತಿಯ ಕಷ್ಟದ ಅನುಭವಗಳನ್ನು ಎದುರಿ ಸುವುದು ಅನಿವಾರ್ಯ. ಇದೇನಿದು ಇದ್ದಕ್ಕಿದ್ದಂತೆ ಸಾಡೇಸಾತಿ ವಿಷಯ ಅಂದುಕೊಳ್ಳುತ್ತಿದ್ದೀರಾ? ನಮ್ಮೆಲ್ಲರನ್ನೂ ಒಂದಲ್ಲ ರೀತಿಯಲ್ಲಿ ಕಾಡಿದ ಕರೋನಾ ಎಂಬ ಮಹಾಮಾರಿಯ ಆಗಮನವಾಗಿಯೂ ಸರಿಸುಮಾರು ಏಳುನೂರ ಐವತ್ತು ದಿನಗಳು ಕಳೆದಿವೆ!

ಅವತ್ತು ಮಗನನ್ನು ಶಾಲೆಗೆ ಬಿಟ್ಟು ಬರುತ್ತಾ ದಾರಿಯಲ್ಲಿ ಕಾರಿನ ಸ್ಟೀರಿಯೋದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಯಕ್ರಮ ವೊಂದರಲ್ಲಿ ಆರ್ ಜೆಯೊಬ್ಬರು ಈ ಕರೋನಾದ ಬಗ್ಗೆ ಹಗುರವಾಗಿ ಗೇಲಿ ಮಾಡುತ್ತಾ ಇದೆಲ್ಲಾ ಸುಳ್ಳುಸುದ್ದಿ ಅನ್ನುವ ರೀತಿ ಯಲ್ಲಿ ಮಾತನಾಡುತ್ತಿದ್ದಾಗ ನನಗೂ ಹೌದೆನ್ನಿಸಿತ್ತು. ಬೇಡದ ವಿಷಯಗಳಿಗೆ ಮಹತ್ವ ಕೊಟ್ಟು ಸುಮ್ಮನೆ ಪುಕಾರು ಹುಟ್ಟಿಸಿ ಟ್ರೋಲ್ ಮಾಡುವುದು ನವಸಮಾಜದ ನೀತಿಯಾಗಿದೆ. ಇದರಿಂದಾಗಿ ಗಂಭೀರವಾದ ವಿಷಯಗಳೂ ಸಹ ಮುಖ್ಯ ವಾಹಿನಿಗೆ ಬರದೆ ತಲುಪಬೇಕಾದವರನ್ನು ತಲುಪದೇ ಹೋಗುವ ಸಾಧ್ಯತೆಗಳು ಹೆಚ್ಚಾಗಿವೆ.

ಆದರೆ ಇದ್ದಕ್ಕಿದ್ದಂತೆ ಮೇಲಿಂದ ಮೇಲೆ ಅನ್ಯರಾಷ್ಟ್ರಗಳಲ್ಲಾಗುತ್ತಿದ್ದ ಸಾವು-ನೋವು- ತಲ್ಲಣಗಳ ದೃಶ್ಯಗಳನ್ನು ನೋಡುತ್ತಾ ಜೀವಭಯದಿಂದ ನಡುಗಿ ಹೋದೆವು. ಪರೀಕ್ಷೆಯ ಸಿದ್ಧತೆಯಲ್ಲಿದ್ದ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮರೆತು ಮನೆಗಳಲ್ಲಿ ಲಾಕ್ ಆಗಿ ಹೋದರು. ಹಬ್ಬದ ಸಂಭ್ರಮದ ನಿರೀಕ್ಷೆಯಲ್ಲಿದ್ದ ನಾಗರಿಕರು-ವ್ಯಾಪಾರಿಗಳೆಲ್ಲ ಅಂಗಡಿಗಳನ್ನು ಮುಚ್ಚಿ ಉಸಿರು ಬಿಗಿ ಹಿಡಿದು ತಮ್ಮ ತಮ್ಮ ಮನೆಗಳನ್ನು ಸೇರಿಕೊಂಡರು. ವಿದೇಶ ದಿಂದ ಬಂದಿದ್ದ ಯಾತ್ರಿಕನ ಅಂಗೈ ಮೇಲಿದ್ದ ಸೀಲಿನ ಗುರುತು ಕಂಡು ಎಷ್ಟು ಕಾಡಿ ಬೇಡಿದರೂ ಸಹಾಯ ನೀಡದೆ ಅದೆಷ್ಟು ನಿರ್ದಯತೆಯಿಂದ ನಡೆದುಕೊಳ್ಳುವಂತೆ ಮಾಡಿತು? ಎಲ್ಲೆಂದ ರಲ್ಲಿ ಉಗಿಯುತ್ತಾ, ಚೆಲ್ಲುತ್ತಾ ಕೊಳಕು ಕೊಳಕು ಕೊಳಕಾಗಿದ್ದ ಗಲ್ಲಿಗಳು ಮನುಷ್ಯನ ನೆರಳಿಲ್ಲದೆ ಒಮ್ಮೆಲೇ ಸ್ವಚ್ಛವಾಗತೊಡಗಿ ದವು.

ವಾಹನ ದಟ್ಟಣೆಯಿಂದ ಪರಿಸರದಲ್ಲಿ ಉಂಟಾಗಿದ್ದ ಕಲುಷಿತವೆಲ್ಲ ಕೆಲವೇ ದಿನಗಳಲ್ಲಿ ನಿವಾರಣೆಯಾಗಿ ಶುಭ್ರ ಹಿಮಾಲಯದ ಚಿತ್ರವನ್ನು ಕಂಡೆವು. ದೀಪ ಬೆಳಗುತ್ತ, ಜಾಗಟೆ ಬಡಿಯುತ್ತ, ಮಂತ್ರಗಳನ್ನು ಪಠಿಸುತ್ತ, ಹರಕೆಗಳನ್ನು ಕಟ್ಟಿಡುತ್ತಾ ಭಗವಾನ್ ಹೇ ಕಹಾ ರೆ ತೂ.. ಎನ್ನುತ್ತಾ ಕಾಣದ ದೇವರಿಗೆ ಮೊರೆ ಹೋದೆವು. ಮಕ್ಕಳಿಗಾಗಿ ಸಮಯ ಮೀಸಲಿಡಲಾಗದೆ ಹಣ-ಅಧಿಕಾರ-ವ್ಯವಹಾರವೆನ್ನುತ್ತಾ ದಿನಬೆಳಗಾದರೆ ದೇಶ-ವಿದೇಶ ಸುತ್ತುತ್ತಾ, ಪಾರ್ಟಿ-ಫ್ರೆಂಡ್ಸು-ಕಚೇರಿ ಎನ್ನುತ್ತಾ ಮನೆಯ ಯಜಮಾನ ರೆನಿಸಿಕೊಂಡವರು ದಿನದ ಹೆಚ್ಚಿನ ಸಮಯ ಹೊರಗೇ ಉಳಿಯುತ್ತಾ ಅನಾಥ ಭಾವದಲ್ಲಿದ್ದ ಮಕ್ಕಳೆಲ್ಲ ತಮ್ಮ ಅಪ್ಪ-ಅಮ್ಮ ನನ್ನು ಜತೆಜತೆಯಲ್ಲೇ ಕಾಣುತ್ತಾ ಸಂತೋಷದಿಂದ ಬೀಗಿದವು.

ನಷ್ಟದ ಹೊರೆಯನ್ನು ತಪ್ಪಿಸಲು ಅದೆಷ್ಟು ಸಂಸ್ಥೆಗಳು ತಮ್ಮ ನೌಕರರನ್ನು ನೌಕರಿಯಿಂದ ಹೊರದೂಡಿದರು. ಇದ್ದ ಕೆಲಸ ವನ್ನು ಕಳೆದುಕೊಂಡು, ಹೊಸ ಕೆಲಸ ಸಿಗದೆ ಅದೆಷ್ಟು ಜನರು ಕಂಗಾಲಾಗಿ ಹೋದರು. ಮನೆಯ ಕೆಲಸಗಳನ್ನೆಲ್ಲ ಮರೆತು ಕ್ಲಬ್ಬು, ಕಿಟ್ಟಿಪಾರ್ಟಿ ಎಂದು ಮೇಕಪ್ಪು ಮೆತ್ತಿಕೊಂಡು, ಹೈ ಹೀಲ್ಡ್ ಹಾಕಿಕೊಂಡು ನಲಿದಾಡುತ್ತಿದ್ದ ಹೈಫೈ ಗೃಹಿಣಿಯರು ಮನೆ ಯಲ್ಲಿ ಕೆಲಸದಾಕೆ ಬರದೆ ತಾವೇ ಕಸ-ಮುಸುರೆ ತೊಳೆಯುತ್ತಾ ಕೂರುವಂತಾಯಿತು.

ದಿನಬೆಳಗಾದರೆ ಬೇರೆ ಜಗತ್ತನ್ನೇ ಕಾಣದೆ ಕೇವಲ ಕುಟುಂಬದವರೊಡನೆ ಕಾಲ ಕಳೆಯುವ ಸಮಯ ಎದುರಾಗಿದ್ದರಿಂದ ಒಬ್ಬರ ನ್ನೊಬ್ಬರು ಅರಿಯುವಂತೆ ಮಾಡಲು ಹೆಚ್ಚಿನ ಸಮಯ ದೊರೆತಂತಾಯಿತು. ಇದೆಲ್ಲ ನೋಡುವಾಗ ಕರೋನಾ ಮೂಲಕ ನಾವು ಸಾಕಷ್ಟು ಕಲಿತಿದ್ದೇವೆ. ಬದಲಾಗಿದ್ದೇವೆ. ಪರಸರದ ಮಹತ್ವವೇನು? ಕುಟುಂಬದ ಮಹತ್ವವೇನು? ಎಂಬುದನ್ನು ಅರಿತಿದ್ದೇವೆ. ಅದನ್ನು ಯಾಕೆ ರಕ್ಷಿಸಬೇಕು? ಸುರಕ್ಷಿತವಾಗಿಟ್ಟುಕೊಳ್ಳಬೇಕು ಎಂಬ ಪಾಠವನ್ನು ಕಲಿತಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಜೀವದ ಮೌಲ್ಯವೇನು ಎಂಬುದು ಪ್ರತಿಯೊಬ್ಬರಿಗೂ ಮನವರಿಕೆಯಾದಂತಾಗಿದೆ.

ಎಂದುಕೊಳ್ಳುತ್ತಾ ಬದುಕು ಸಹಜ ಸ್ಥಿತಿಗೆ ಮರಳುತ್ತಿರುವ ಈ ಸಮಯದಲ್ಲಿ ಅದೆಷ್ಟು ದಿನಗಳಾದವು ಇದೆಲ್ಲ ಅದಲು-ಬದಲಾ ಗುವ ಸಮಯ ಆರಂಭವಾಗಿ ಎಂದು ಲೆಕ್ಕ ಹಾಕಿ ನೋಡುವಾಗ ಒಂದು ಕ್ಷಣ ದಿಗ್ಬ್ರಮೆ! ಸರಿಯಾಗಿ ಏಳುನೂರಾ ಐವತ್ತು
ದಿನ ಗಳು! ಅಂದರೆ ಇಡೀ ಮನುಕುಲಕ್ಕೇ ಸಾಡೇಸಾತಿ ಆವರಿಸಿಕೊಂಡುಬಿಟ್ಟಿತ್ತಾ? ನಮ್ಮ ತಪ್ಪುಗಳ ಅರಿವು ಮೂಡಿಸಲು ಈ ವೈರಸ್ ಮೂಲಕ ನಮಗೆ ಪಾಠ ಕಲಿಸಿದನಾ ಶನಿದೇವಾ? ಅನ್ನುವ ಜಿಜ್ಞಾಸೆ ಹುಟ್ಟಿ ಇಷ್ಟೆಲ್ಲ ವಿಚಾರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವಂತೆ ಮಾಡಿತು.

ಇದೆಲ್ಲದರ ಜತೆಗೆ ಎದುರಾದ ಸಮಸ್ಯೆಗೆ ತಕ್ಕಂತೆ ಒಂದು ಪರ್ಯಾಯ ಮಾರ್ಗವನ್ನು ಹುಡುಕುವಲ್ಲಿ ಸಫಲನಾಗುತ್ತಾ ಮಾನವ ಅದೆಷ್ಟು ಸಾಹಸಿ ಹಾಗೂ ಕ್ರಿಯಾಶೀಲ ಅನ್ನುವುದು ಕೂಡಾ ಸಾಬೀತಾದಂತಾಯಿತು. ಮಾರ್ಚ್ 15 ರವಿಯ ಜನ್ಮದಿನ! ಪ್ರತಿ ವರ್ಷವೂ ಕಚೇರಿಯಲ್ಲಿ ಅದ್ಧೂರಿಯಾಗಿ ಆಚರಿಸುತ್ತಿದ್ದರು. ಅಭಿಮಾನಿಗಳ ಹಿಂಡೇ ನೆರೆದಿರುತ್ತಿತ್ತು ಅಂದು. ಪ್ರತೀ ವರ್ಷಕ್ಕೆ ಅವರಿಗೆ ಅತ್ಯಂತ ಪ್ರಿಯವಾದುದನ್ನು ಸರ್ಪ್ರೈಸ್ ಆಗಿ ನೀಡುತ್ತಾ ಅವರ ಕಣ್ಣುಗಳಲ್ಲಿ ಮೂಡುವ ಅಚ್ಚರಿಯ ಆನಂದದ ಕ್ಷಣಗಳನ್ನು ಅನುಭವಿಸುವುದು ಮನೆಯಲ್ಲಿ ರೂಢಿಗತವಾದ ಸಂಪ್ರದಾಯ.

ಅದಕ್ಕಾಗಿ ೬ ತಿಂಗಳ ಹಿಂದಿನಿಂದಲೇ ತಯಾರಿ ಆರಂಭವಾಗುತ್ತಿತ್ತು. ಬರಹಗಾರರಾದವರು ಸದಾ ಧ್ಯಾನದ ಸ್ಥಿತಿಯಲ್ಲಿಯೇ ಇರುತ್ತಾರೆ. ಒಂದಲ್ಲ ಒಂದು ವಿಷಯದ ಕುರಿತಾಗಿ ಅವರ ಮನದೊಳಗೆ ಮಂಥನ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
ಅವರು ಅತ್ಯಂತ ಇಷ್ಟ ಪಡುವ ಮಗುವಿನ ಅತಿಯಾದ ಮಾತುಗಳೂ ಸಹ ಒಮ್ಮೊಮ್ಮೆ ಅವರ ಚಿಂತನೆಗೆ ಭಂಗ ತರುವುದುಂಟು. ಇದನ್ನೆಲ್ಲ ಬೆಳೆಯುತ್ತಿರುವ ಮಗನಿಗೆ ತಿಳಿಸಿ ಹೇಳುವುದು ಹೇಗೆ? ಅವನ ಪಾಲಿಗೆ ಅವರು ಅಪ್ಪ ಅಷ್ಟೆ! ಇದೆಲ್ಲ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು ಅವರ ಬರವಣಿಗೆಗೆ ಯಾವ ರೀತಿಯಲ್ಲೂ ಭಂಗ ಬಾರದಿರುವಂತೆ ಅವರಿಗೇ ಅಂತಲೇ ಪ್ರತ್ಯೇಕ ಕೋಣೆ ಅವರಿಗೆ ಬೇಕಾದ ರೀತಿಯಲ್ಲಿ modify ಮಾಡಿ ಅದನ್ನು ಅವರ 62ನೇ ಜನ್ಮದಿನದಂದು ಉಡುಗೊರೆಯಾಗಿ ಕೊಡುವ ತಯಾರಿ ನಡೆಯುತ್ತಿತ್ತು.

ಅದೇ ಸಮಯಕ್ಕೆ ಸರಿಯಾಗಿ ಫ್ಲೈಟ್ ಟಿಕೆಟ್ಟೇ ಇಲ್ಲದೆ ಕೊರೋನಾ ನೇರವಾಗಿ ಭಾರತಕ್ಕೂ ಪದಾರ್ಪಣೆ ಮಾಡಿತ್ತು. ಅದರ ಆಗಮನ ದಿಂದಾಗಿ ಎಲ್ಲೆಡೆ ಲಾಕ್‌ಡೌನ್ ಘೋಷಣೆಯಾಗಿತ್ತು. ಹೀಗಾಗಿ ಪತ್ರಿಕಾ ಕಚೇರಿಗಳೂ ಇತಿಹಾಸದಲ್ಲೇ ಮೊದಲ ಬಾರಿಗೆ ಲಾಕ್ಡೌನ್ ಆದವು. ಆದರೆ ಕಚೇರಿ ಅಭ್ಯಾಸವಾದವರಿಗೆ ದಿನದ ಇಪ್ಪತ್ನಾಲ್ಕೂ ಗಂಟೆ ಕೇವಲ ಹೆಂಡತಿ-ಮಗುವಿನ ಜೊತೆ ಕಳೆಯಲು ಸಾಧ್ಯವಾಗುವುದಾದರೂ ಹೇಗೆ? ಕೊನೆಗೆ ಕೆಲವೇ ಸೀಮಿತ ಸಿಬ್ಬಂದಿಗಳೊಂದಿಗೆ ಕೆಲವು ಗಂಟೆಗಳ ಕಾಲ ಮಾತ್ರ ಕಚೇರಿಯಲ್ಲಿದ್ದು ಕೆಲಸ-ಕಾರ್ಯಗಳ ಚರ್ಚೆ ಮುಗಿಸಿ ಮನೆಗೆ ಬೇಗ ಮರಳಿ ಬಂದು ಬಿಡುತ್ತಿದ್ದರು.

ಆಗೆಲ್ಲ ಮಗನೊಂದಿಗೆ ಒಂದಷ್ಟು ಹರಟೆ, ನಗುವಿನ ಜೊತೆಗೆ ನನ್ನೊಡನೆ ಅಡುಗೆ ತಯಾರಿಯಲ್ಲೂ ಸಾಥ್ ನೀಡುತ್ತಿದ್ದರು. ಅಮ್ಮನ ಆರೋಗ್ಯ ವಿಚಾರಿಸುತ್ತಿದ್ದರು. ಮೊದಲ ಬಾರಿಗೆ ಕಚೇರಿಯಲ್ಲಿ ಅವರ ಜನ್ಮದಿನವನ್ನು ಆಚರಿಸಿಕೊಳ್ಳದೆ ಮಿತ್ರರು-ಹಿತೈಷಿಗಳು-ಅಭಿಮಾನಿಗಳನ್ನು ಭೇಟಿಯಾಗದೆ ಬ್ರೇಕ್ ನೀಡಿದರು. ಆ ಕೊರತೆ ಅವರಿಗೆ ಕಾಡಬಾರದೆಂದು ಅವರಿಗೆ ತಿಳಿಯದಂತೆ ಮನೆಯೆಲ್ಲ ಸಿಂಗರಿಸಿ ಬೆಳಗ್ಗೆ ಏಳುವಾಗ ಸಂತೋಷದಿಂದ ಅವರ ಕಣ್ಣರಳುವುದನ್ನು ಕಂಡು ಕಣ್ತುಂಬಿಕೊಂಡಿದ್ದೆವು.

ಆದರೆ ಅದೇ ಕೊನೆಯ birthday celebration ಆಗಿಬಿಡತ್ತೆ ಅನ್ನುವುದರ ಸಣ್ಣ ಸುಳಿವೂ ಸಿಕ್ಕಿರಲಿಲ್ಲ ಅಂದು. ಎಲ್ಲದರ ನಡುವೆ ಯೂ ದಿನಗಳು ಅದೆಷ್ಟು ಸೊಗಸಾಗಿದ್ದವು. ಮಾಚಿಂದ ನವೆಂಬರ್ ನಡುವೆ ಅದೆಷ್ಟು ಸಮಯ ಜತೆಜತೆಗೆ ಕಳೆದೆವು. ನಂಗ್ಯಾಕೋ ಇಲ್ಲಿಂದ ಹೋಗೋಕೇ ಮನಸ್ಸಾಗ್ತಿಲ್ಲ ಯಶೂ ಎGive me six months time. I will write a book. And you will compose….
Let’s make our life more meaningful ಎಂದು ಅವರು ಹೇಳಿ ಹೋದ ಕೊನೆಯ ಮಾತುಗಳು ನೆನಪಾಗಿ ಕಣ್ತುಂಬಿ ಬರುತ್ತವೆ. But nothing is in our hand.

ನಮ್ಮ ಖಾತೆಯಲ್ಲಿ ಅದೆಷ್ಟು ಸಮಯ ಬಾಕಿ ಉಳಿದಿದೆಯೋ ಯಾರಿಗೆ ಗೊತ್ತು? ಕಾಲನ ಕರೆ ಬಂದಾಗ ಮರುಮಾತಿಲ್ಲದೆ ಎಲ್ಲ ವನ್ನೂ ಬಿಟ್ಟು ಎದ್ದು ಹೋಗಲೇ ಬೇಕು. ಬೇಕೆಂದರೂ ಒಂದರೆ ಘಳಿಗೆಯೂ ಹೆಚ್ಚಿಗೆ ಕರುಣಿಸದ ಜಿಪುಣಗ್ರೇಸರ ಈ ಕಾಲನೆಂಬ ಮಹಾನುಭಾವ! ಅದಕ್ಕೇ ಈ ದ್ವೇಷ-ಅಸೂಯೆ-ಮತ್ಸರಗಳನ್ನೆಲ್ಲ ಪಕ್ಕಕ್ಕಿಟ್ಟು ಪ್ರೀತಿಯಿಂದ ಎಲ್ಲರೊಡನೆ ಬೆರೆತು ಬಾಳುವ ಮನಸು ಎಲ್ಲರಲೂ ಮೂಡಲಿ. ನಾಳೆ ನೋಡಿದರಾಯಿತು. ಮಾತಾಡಿದರಾಯಿತು ಎಂದು ಉಡಾಫೆ ಮಾಡುತ್ತಾ ಕೂತರೆ ಆ
ಅವಕಾಶವೇ ಸಿಗದೆ ಹೋಗಬಹುದು. Let’s care who cares for us!

ರವಿ ಯಾವಾಗ್ಲೂ ಹೇಳ್ತಿದ್ರು. I am reliving my childhood through hima ಎಂದು. ಅಪ್ಪನ ತದ್ರೂಪಾಗಿ ಹಿಮವಂತ ಜೊತೆಗಿ ದ್ದಾನೆ. I met ravi in his middle age. ಅವರ ಬಾಲ್ಯ, ಹಾಗೂ ಯೌವನದ ದಿನಗಳನ್ನು ಹಿಮವಂತನ ಮೂಲಕ ಕಾಣುತ್ತಿದ್ದೇನೆ. ಸೆಕೆಂಡ್ ಹಾ- ಈಗ ಆರಂಭವಾಗಿದೆ.