ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಈಗ ಒಂದು ತಮಾಷೆಯ ಮಾತು ತುಂಬಾ ಸದ್ದು ಮಾಡುತ್ತಿದೆ. ಆದರೆ ಈ ತಮಾಷೆಯ ಮಾತನ್ನು ಗಂಭೀರವಾಗಿ ಮಾತಾಡ್ತಾ ಇzರೆ ಅನ್ನೋದು ಇಲ್ಲಿ ಇಂಟರೆಸ್ಟಿಂಗ್ ವಿಷಯ. ಅದೇನಪ್ಪಾ ಅಂದ್ರೆ ಕನ್ನಡ ಸಿನಿಮಾಗಳು ಸೋಲ್ತಾ ಇರೋದಕ್ಕೆ ದರ್ಶನ್ ಜೈಲಿನಲ್ಲಿ ಇರೋದೇ ಕಾರಣ ಅಂತೆ. ನಮ್ಮ ಬಾಸ್ ಜೈಲಲ್ಲಿ ಇದ್ದಾರೆ.
ಅವರು ಹೊರಬರುವ ತನಕ ನಾವು ಕನ್ನಡ ಸಿನಿಮಾ ನೋಡಲ್ಲ. ನಾವು ನೋಡ್ತಾ ಇಲ್ಲ ಅನ್ನೋ ಕಾರಣಕ್ಕೇ ಎಲ್ಲ ಸಿನಿಮಾಗಳೂ ಫ್ಲಾಪ್ ಆಗ್ತಾ ಇವೆ ಅಂತ ದರ್ಶನ್ ಅಭಿಮಾನಿಗಳು ಕಾಲರ್ ಏರಿಸಿಕೊಂಡು ಮಾತಾಡ್ತಾ ಇzರೆ. ಅವರು ಕಾಲರ್ ಏರಿಸಿಕೊಂಡು ಮಾತಾಡ್ತಾ ಇದ್ದಾರೋ ಅಥವಾ ಇನ್ನೇನೋ ಏರಿಸಿಕೊಂಡು ಮಾತಾಡ್ತಾ ಇzರೋ ಗೊತ್ತಿಲ್ಲ. ಒಟ್ಟಿನಲ್ಲಿ ಅವರ ಪ್ರಕಾರ ಬಾಕ್ಸ್ ಆಫೀಸ್ ಸುಲ್ತಾನ್ ಜೈಲಲ್ಲಿ ಇರೋದಕ್ಕೆ ಎಲ್ಲ ಸಿನಿಮಾ ಗಳೂ ಸೋಲ್ತಾ ಇವೆ.
ಇವರ ಪ್ರಕಾರ ದರ್ಶನ್ ಹೊರಗೆ ಇದ್ದಾಗೆ ಎಲ್ಲ ಕನ್ನಡ ಸಿನಿಮಾಗಳೂ ಸೂಪರ್ ಹಿಟ್ ಆಗ್ತಾ ಇದ್ವು ಅನ್ಸುತ್ತೆ. ಮತ್ತು ದರ್ಶನ್ ಜೈಲಿಂದ ಶಿಫ್ಟ್ ಆಗಿ
ಹೊರಬಂದಿದ್ದೇ ತಡ, ಇಡೀ ಕರ್ನಾಟಕದ ಜನ ಮನೆಗಳಿಂದ ಚಿತ್ರಮಂದಿರಗಳಿಗೆ ಶಿಫ್ಟ್ ಆಗಿ ಎಲ್ಲ ಸಿನಿಮಾಗಳೂ ಇಂಡಸ್ಟ್ರಿ ಆಗೋದು ಗ್ಯಾರಂಟಿ ಅನ್ಸುತ್ತೆ. ಚಿತ್ರಮಂದಿರಗಳಿಗೆ ಜನ ಬರ್ತಾ ಇಲ್ಲ ಅನ್ನೋದು ಹಳೇ ಮಾತು. ಮತ್ತು ಅದು ಈಗಲೂ ಮುಂದುವರಿಯುತ್ತಿದೆ. ನಿರ್ಮಾಪಕರು, ನಿರ್ದೇ ಶಕರು ಚಿತ್ರಮಂದಿರದ ಅಂಗಳದಲ್ಲಿ ನಿಂತು, ನಾವು ಇನ್ಮೇಲೆ ಕನ್ನಡ ಸಿನಿಮಾ ಮಾಡಲ್ಲ ಅಂತ ಕಣ್ಣೀರು ಹಾಕ್ತಾ ಇದ್ದಾರೆ. ಆದರೆ ಇದನ್ನ ನೆಪವಾಗಿಸಿ ಕೊಂಡು ಬಾಸ್ ಇಲ್ಲದಿದ್ರೆ ಚಿತ್ರರಂಗ ಫುಲ್ ಲಾಸ್ ಅಂತ ದರ್ಶನ್ ಅಭಿಮಾನಿಗಳು ಬೇಳೆ ಬೇಯಿಸಿಕೊಳ್ತಾ ಇರೋದು ನೋಡಿದ್ರೆ ನಗು ಬರೋದು ಗ್ಯಾರಂಟಿ.
ಲೂಟ್ ಟಾಕ್ – ನಿರ್ಮಲಾ ಸೀತಾರಾಮನ್
ಏನ್ ಮೇಡಂ, ನಿಮ್ಮೀ ಬಜೆಟ್ ಬಗ್ಗೆ ಜನ ಏನಂತಿದ್ದಾರೆ?
-ಏನ್ರೀ ಅದು? ನಿಮ್ಮಿ ಬಜೆಟ್ ಅಂತ ಕರೆಯೋದು, ನಾನೇನ್ ನಿಮ್ ಫ್ರೆಂಡಾ?
ಹಲೋ ಮೇಡಂ, ನಾನ್ ಹೇಳಿದ್ದು, ನಿಮ್ಮ ‘ಪ್ಲಸ್ ಈ’ ಬಜೆಟ್, ಎರಡೂ ಸೇರಿ ‘ನಿಮ್ಮೀ’ ಬಜೆಟ್ ಅಂತ..
-ಓಕೆ, ಓಕೆ, ಜನ ಇನ್ನೇನಂತಾರ್ರೀ.. ನಿರ್ಮಲಾ ಟಾಯ್ಲೆಟ್ ಆಗ್ಲಿ, ನಿರ್ಮಲಾ ಬಜೆಟ್ ಆಗ್ಲಿ, ಟ್ಯಾಕ್ಸ್ ಕಟ್ಟೋದು ತಪ್ಪಲ್ಲ ಅಂತಾರೆ. ಹೋಗ್ಲಿ ಬಿಡ್ರೀ..
ಇದು ೨೫ ವರ್ಷದ ದೂರದೃಷ್ಠಿ ಇರೋ ಬಜೆಟ್ ಅಂತ ಹೇಳ್ಕೊಂಡಿದ್ದೀರಲ್ಲ?
-ಹೌದು. ಇದರ ಬಗ್ಗೆ ಇನ್ನು ೨೫ ವರ್ಷ ಯಾರೂ ಏನೂ ಕೇಳಂಗಿಲ್ಲ ಅಂತ ಅದರ ಅರ್ಥ ಆದ್ರೂ ಒಂದ್ ಸಣ್ಣ ಟ್ಯಾಬ್ಲೆಟ್ ಇಟ್ಕೊಂಡು ಅಷ್ಟು
ದೊಡ್ಡ ಬಜೆಟ್ ಮಂಡನೆ ಮಾಡಿಬಿಡ್ತೀರಲ್ಲ.. ಹೆಂಗೆ ಅಂತ
-ಏನ್ ಮಾಡೋದು ಬಜೆಟ್ ಕಮ್ಮಿ ಇತ್ತು, ನಮ್ದು ಲೋ ಬಜೆಟ್ ಬಜೆಟ್ಟು
ಮೇಡಂ, ತುಂಬಾ ಜನಕ್ಕೆ ಈ ಬಜೆಟ್‌ಗಳಲ್ಲಿ ಏನಿದೆ ಅಂತಾನೇ ಅರ್ಥ ಆಗಲ್ಲ ಅದ್ಯಾಕೆ ಹಂಗೆ?
-ಅದ್ ಹಂಗೇ, ಅರ್ಥ ಸಚಿವರು ಮಂಡನೆ ಮಾಡಿದ್ರೂ ಯಾರಿಗೂ ಅರ್ಥ ಆಗಲ್ಲ. ಅದಕ್ಕೇ ಅದನ್ನ ಬಜೆಟ್ ಅನ್ನೋದು.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಮಧ್ಯರಾತ್ರಿ ಖೇಮು ಆಟೋ ಓಡಿಸಿಕೊಂಡು ಮನೆಗೆ ಹೋಗುತ್ತಿದ್ದ. ದಾರಿಯಲ್ಲಿ ಒಬ್ಬ ಹೆಂಗಸು ನಿಂತ್ಕೊಂಡು ಕೈ ತೋರಿಸಿ ಅಡ್ಡ ಹಾಕಿದಳು. ಹೆಣ್ಣುಮಗಳು ಅಂತ ಗಾಡಿ ನಿಲ್ಲಿಸಿದ ಖೇಮು. ಅವಳ ಮುಖ ಯಾಕೋ ತಚುಂಬಾ ಗಂಭೀರವಾಗಿತ್ತು. ಅಲ್ಲದೆ, ಕಂಪ್ಲೀಟ್ ವೈಟ್ ಸೀರೆ ಹಾಕಿಕೊಂಡಿದ್ದಳು. ಮೈಮೇಲೆ ಒಂದೂ ಆಭರಣ ಇರಲಿಲ್ಲ. ಈ ರೋಡಲ್ಲಿ ದೆವ್ವಗಳ ಕಾಟ ಅಂತ ಗೊತ್ತಿದ್ರೂ ಯಾಕಪ್ಪಾ ನಿಲ್ಲಿಸಿದೆ ಅಂತ ಒಳಗೊಳಗೇ ಹೆದರಿಕೊಂಡ ಖೇಮು. ಆದರೆ ಆ ಹೆಣ್ಣು ಅಣ್ಣಾ ತುಂಬಾ ತಡ ಆಗಿದೆ ಕರ್ಕೊಂಡ್ ಹೋಗಿ ಅಂದಾಗ, ಇಲ್ಲ ಅನ್ನೋಕಾಗದೆ ಕೂರಿಸಿಕೊಂಡ. ಹಿಂದೆ ಕೂತಿರೋದು ದೆವ್ವ ಅನ್ನೋ ಭಯದ ಗಾಡಿ ಓಡಿಸುತ್ತಿದ್ದ ಖೇಮು. ತಗ್ಗು ದಿನ್ನೆ, ಹಂಪ್‌ಗಳ ಮೇಲೂ ಅವನಿಗೆ ಗಮನ ಇರಲಿಲ್ಲ. ಬೇಗ ಮನೆಗೆ ತಲುಪಿದರೆ ಸಾಕು ಅಂತ ಸ್ಪೀಡಾಗಿ ಹೋಗುತ್ತಿದ್ದ ಖೇಮು.
ಸ್ವಲ್ಪ ದೂರ ಹೋದ ಮೇಲೆ ಸುಮ್ಮನೆ ಅನುಮಾನದಿಂದ ಹಿಂದೆ ತಿರುಗಿ ನೋಡಿದರೆ, ಹುಡುಗಿಯ ಮುಖದಲ್ಲಿ ಒಂದಿಷ್ಟು ಕೆಂಪನೆ ಬಣ್ಣ ಕಾಣುತ್ತಿತ್ತು. ಅದು ರಕ್ತ ಅಂತ ಗೊತ್ತಾಯಿತು ಖೇಮುಗೆ. ಮತ್ತೆ ಮುಂದೆ ಹೋಗಿ, ಮತ್ತೆ ತಿರುಗಿ ನೋಡಿದ. ಹೀಗೆ ಪ್ರತಿ ಸಾರಿ ತಿರುಗಿ ನೋಡಿದಾಗಲೂ ಆಕೆಯ ಮುಖದ ಮೇಲಿನ ರಕ್ತ ಜಾಸ್ತಿ ಆಗ್ತಾ ಬಂತು. ಖೇಮುಗೆ ಹಾರ್ಟ್ ಅಟ್ಯಾಕ್ ಆಗೋದೊಂದ್ ಬಾಕಿ. ಕೊನೆಗೆ ಆಕೆಯ ಮುಖ ಸಂಪೂರ್ಣ ರಕ್ತ ಆಗಿದ್ದನ್ನು ನೋಡಿ, ಥಟ್ಟನೆ ಆಟೋ ನಿಲ್ಲಿಸಿ, ‘ದಯವಿಟ್ಟು ನನ್ನ ಬಿಟ್ಟು ಬಿಡು, ನನಗೆ ಹೆಂಡ್ತಿ ಮಕ್ಳಿzರೆ’ ಅಂದ. ಅದಕ್ಕೆ ಆಕೆ ಗಂಭೀರವಾಗಿ ಸ್ವಲ್ಪ ಸಿಟ್ಟಿನಿಂದಲೇ ಹೇಳಿದಳು, ‘ಅಯ್ಯೋ, ನಿನ್ ಮುಖ ಮುಚ್ಚಾ, ಅವಾಗಿಂದ ಅಷ್ಟೊಂದ್ ಸ್ಪೀಡಾಗಿ ಓಡಿಸ್ತಾ ಇದೀಯಾ. ಹಂಪ್, ತಗ್ಗು ಬಂದಾಗ ಸಡನ್ ಆಗಿ ಬ್ರೇಕ್ ಹಾಕ್ತೀಯಾ, ಪ್ರತಿ ಸಾರಿ ನೀನು ಬ್ರೇಕ್ ಹಾಕಿದಾಗಲೂ ನನ್ನ ಮುಖ ಮುಂದಿನ ಮೆಟಲ್ ಬಾರ್‌ಗೆ ಹೊಡೆದುಕೊಂಡು ಹಿಂಗೆ ರಕ್ತ ಬರ್ತಾ ಇದೆ. ಬೇಗ ಆಸ್ಪತ್ರೆಗೆ ಕರ್ಕೊಂಡ್ ಹೋಗು’.
ಲೈನ್ ಮ್ಯಾನ್
‘ಇಸ್ಪೀಟ್ ಕಾರ್ಡ್’ಗಳನ್ನು ರಾಶಿ ಹಾಕಿ, ಅದರಲ್ಲಿ ಒಂದನ್ನು ಎತ್ತಿಕೋ ಅಂತ ಹೇಳೋದು
‘ಎಲೆ’ಕ್ಷನ್
ವಯಸ್ಸಾದ ಸಕ್ಕೂಬಾಯಿಯನ್ನು ಏನಂತಾರೆ ?
‘ಸುಕ್ಕೂ’ ಬಾಯಿ
ದೇವಸ್ಥಾನದಲ್ಲಿ ಉರುಳು ಸೇವೆ ಮಾಡುವವನು
‘ರೋಲ’ ಮಾಡೆಲ್
ಜೈಲಲ್ಲಿ ನೇಣಿಗೇರಿಸುವ ಕೆಲಸ ಮಾಡುವವನದು
‘ಉರುಳು’ ಸೇವೆ
ಕುಡಿದು ‘ಹೈ’ ಆಗಿರುವವರ ಹಾಡು
‘ಇಳಿಸು’ ಬಾ, ತಾಯಿ ಇಳಿಸು ಬಾ
ಕೆಲವರು ಕುಡಿದ ಮೇಲೆ ಫೇಸ್ ಬುಕ್‌ನಲ್ಲಿ ಪೋ ಹಾಕ್ತಾರೆ, ಆದ್ರೆ ಟ್ವೀಟ್ ಮಾಡಲ್ಲ ಯಾಕೆ?
-ಯಾಕಂದ್ರೆ, ಟ್ವಿಟ್ಟರ್‌ನಲ್ಲಿ ಹಾಕೋಕೆ ಇಷ್ಟ್ ಅಕ್ಷರ ಅಂತ ‘ಲಿಮಿಟ್’ ಇರುತ್ತೆ.
ಪಾರ್ಕಿನಲ್ಲಿ ಬೆಳೆದು ನಿಂತ ಹೂವುಗಳನ್ನು ಕೀಳುವವರದ್ದು
-‘ಕೀಳು’ ಜಾತಿ
ಎಲ್ಲದಕ್ಕೂ ಅದೇನ್ ಕಿತ್ಕೊತೀಯಾ ಕಿತ್ಕೋ ಅನ್ನೋದು
-‘ಕೀಳು’ ಅಭಿರುಚಿ
ಕವಿ ಆಗಿ ೧೪ ವರ್ಷ ಅನುಭವ ಇರೋನ ಸಾಧನೆ
-ಕ‘ವನವಾಸ’
ಕೈ ನಡುಗುವ ಖಾಯಿಲೆ ಇರೋನ ಸಮಸ್ಯೆ
-ಯಾರ ಜೊತೆಗಾದ್ರೂ ಹ್ಯಾಂಡ್ ‘ಶೇಕ್’ ಮಾಡೋದು ಕಷ್ಟ
ಅನುಮಾನದ ಆಧಾರದ ಮೇಲೆ ಮಾಡಿದ ವರದಿ
-Whether ರಿಪೋರ್ಟ್