Monday, 12th May 2025

ಅಭಿಮಾನದ ಅಂಗಳದಲ್ಲಿ ಭಸ್ಮವಾದ ಸಾಹಸಸಿಂಹ !

ಯಶೋ ಬೆಳಗು

yashomathy@gmail.com

ಹುಟ್ಟುತ್ತಲೇ ನಮ್ಮ ಪಯಣ ಸಾವಿನೆಡೆಗೆ ಇಂಚಿಂಚೇ ಸಾಗುತ್ತಿರುತ್ತದೆ. ಪ್ರತಿ ಹುಟ್ಟುಹಬ್ಬವೂ ನಾವು ಕಳೆದುಕೊಳ್ಳು ತ್ತಿರುವ ದಿನಗಳನ್ನು ನೆನಪಿಸುತ್ತವೆ. ಕ್ಯಾಂಡಲ್ಲನ್ನು ಆರಿಸಿ, ಕೇಕನ್ನು ಕತ್ತರಿಸಿ ಸಂಭ್ರಮಪಡುವಾಗ ಇದೆಲ್ಲ ನೆನಪಾಗು ವುದೇ ಇಲ್ಲ. ಒಮ್ಮೊಮ್ಮೆ ಇದೆಲ್ಲವನ್ನೂ ಇಲ್ಲೇ ಬಿಟ್ಟು ಅಧ್ಯಾತ್ಮವನ್ನು ಅರಸುತ್ತ ಹೊರಟುಬಿಡುವ ಮನಸ್ಸಾಗುತ್ತದೆ.

ಪರಿಚಯ, ಗೆಳೆತನ, ಪ್ರೀತಿ-ಪ್ರೇಮ, ಹಿತೈಷಿ, ಅಭಿಮಾನಿ ಹೀಗೆ ಹಲವು ರೂಪಗಳಲ್ಲಿ ಕೆಲವು ಸಂಬಂಧಗಳೊಡನೆ ನಾವೆಲ್ಲ ತಳುಕು ಹಾಕಿಕೊಂಡಿರುತ್ತೇವೆ. ಹೊಸ್ತಿಲು ದಾಟಿ ಬೀದಿಗಿಳಿದರೆ ಜನಜಾತ್ರೆ. ಎಲ್ಲರೂ ತಮ್ಮ ಪಾಡಿಗೆ ತಾವು ನಡೆದು ಹೋಗುತ್ತಿರುತ್ತಾರೆ. ಬೇಕೆಂದರೂ, ಬೇಡವೆಂದರೂ ಅವರವರ ಗಮ್ಯದೆಡೆಗೆ ಅವರವರ ಹೆಜ್ಜೆಗಳು ನಡೆದು ಹೋಗುತ್ತಿರುತ್ತವೆ.

ಎಲ್ಲರಿಗೂ ಅವರದ್ದೇ ಆದ ಬದುಕು, ಬವಣೆ, ಕೆಲಸ-ಕಾರ್ಯ, ಗುರಿ, ಜವಾಬ್ದಾರಿ, ಪದ್ಧತಿ, ಬದ್ಧತೆಗಳಿರುತ್ತವೆ. ಹಬ್ಬ-ಹರಿದಿನ, ಮದುವೆ, ನಾಮಕರಣದಂಥ ಶುಭ ಸಮಾರಂಭ ಗಳಲ್ಲಿ ಕೆಲವರು ಮಿಂದೇಳುತ್ತಿದ್ದರೆ ಇನ್ನು ಕೆಲವರದ್ದು ತಿಥಿ, ವೈಕುಂಠ ಸಮಾರಾಧನೆ, ಕರ್ಮ ಕಳೆದುಕೊಳ್ಳುವಿಕೆಯ ನಡುವೆ ಮಡುಗಟ್ಟಿದ ತೀರದ ದುಃಖ. ಎಲ್ಲರೂ ನಮ್ಮ ಹಾಗೆ ನರ, ಮಾಂಸ, ಮೂಳೆ, ರಕ್ತ, ಅಂಗಾಂಗಗಳಿಂದ ತುಂಬಿದ ದೇಹಗಳೇ. ಆದರೆ ಎಲ್ಲರ ದುಃಖಗಳೂ ನಮ್ಮ ದುಃಖಗಳಾಗುವುದಿಲ್ಲ.

ಹಾಗೆಯೇ ಎಲ್ಲರ ಸಂಭ್ರಮಗಳೂ ನಮ್ಮ ಸಂಭ್ರಮಗಳಾಗುವುದಿಲ್ಲ. ಹುಟ್ಟುತ್ತಲೇ ನಮ್ಮ ಪಯಣ ಸಾವಿನೆಡೆಗೆ ಇಂಚಿಂಚೇ ಸಾಗುತ್ತಿರುತ್ತದೆ. ಪ್ರತಿ ಹುಟ್ಟುಹಬ್ಬವೂ ನಾವು ಕಳೆದುಕೊಳ್ಳುತ್ತಿರುವ ದಿನಗಳನ್ನು ನೆನಪಿಸು ತ್ತವೆ. ಕ್ಯಾಂಡಲ್ಲನ್ನು ಆರಿಸಿ, ಕೇಕನ್ನು ಕತ್ತರಿಸಿ ಸಂಭ್ರಮಪಡುವಾಗ ಇದೆಲ್ಲ ನೆನಪಾಗುವುದೇ ಇಲ್ಲ. ಒಮ್ಮೊಮ್ಮೆ ಇದೆಲ್ಲವನ್ನೂ ಇಲ್ಲೇ ಬಿಟ್ಟು ಅಧ್ಯಾತ್ಮವನ್ನು ಅರಸುತ್ತ ಹೊರಟುಬಿಡುವ ಮನಸ್ಸಾಗುತ್ತದೆ. ಆದರೆ ನನ್ನದೂ ಅಂತ ಒಂದಷ್ಟು ಜವಾಬ್ದಾರಿ ಗಳಿವೆಯಲ್ಲ? ಬಯಸೀ ಬಯಸೀ ಕರೆದು ಕೊಂಡು ಬಂದ ಕಂದನಿದ್ದಾನಲ್ಲ? ತಾಯಿಯಾಗಿ ಒಂದಷ್ಟು ನೆರವೇರಿಸಲೇಬೇಕಾದ ಜವಾಬ್ದಾರಿಗಳಿವೆ.

ಅದೆಲ್ಲವನ್ನೂ ಚಾಚೂ ತಪ್ಪದಂತೆ ಮಾಡಿಬಿಡಬೇಕು. ಯಾವ ಮೋಹಕ್ಕೂ ಬೀಳದೆ, ನಿಚ್ಚಳವಾಗಿ ಬದುಕಿಬಿಡಬೇಕು. ಹುಟ್ಟಿದ ಮನೆಯಲ್ಲಿ ಉಳಿಯಲು ಸಾಧ್ಯವಾಗಿದ್ದು ಇಪ್ಪತ್ತೇ ವರ್ಷಗಳು. ಅದಾದ ಎರಡು ವರ್ಷಗಳಿಗಾಗಲೇ ಸಾಂಗತ್ಯದ ತೆಕ್ಕೆಯಲ್ಲಿ ಬೆಚ್ಚಗಿದ್ದೆ. ಸಿಕ್ಕಿದ್ದು ಹತ್ತೇ ವರ್ಷಗಳು. ಅಷ್ಟರಗಲೆ ನನ್ನಲ್ಲಿ ತಾಯ್ತನದ ಹಂಬಲ ಹೆಡೆ ತುಳಿದ ನಾಗರನಂತಾಗಿತ್ತು. ಅದಕ್ಕಾಗಿ ಹರಕೆ ಕಟ್ಟದ ದೇವರುಗಳಿಲ್ಲ. ಕಾಣದ ವೈದ್ಯರುಗಳಿಲ್ಲ. ಬೇಕೆಂಬ ತಪನೆಗೆ ಒಲಿದು ಬಂದವನು ಮುzದ ಹಿಮ. ಅವನ ಲಾಲನೆ ಪಾಲನೆಗಳಲ್ಲಿ ಹತ್ತು ವರ್ಷ ಹೇಗೆ ಕಳೆದುಹೋಯಿತೋ ತಿಳಿಯಲೇ ಇಲ್ಲ.

ಅದಾಗಿ ಎಲ್ಲ ಏರುಪೇರುಗಳ ನಡುವೆಯೂ ಎಲ್ಲೂ ಬಿಡದಂತೆ ಜತೆಜತೆಗೇ ನಡೆದು ಬಂದಂಥ ರವಿಯ ಸಾಂಗತ್ಯ ಸಿಕ್ಕಿದ್ದು
ಒಟ್ಟಾಗಿ ಇಪ್ಪತ್ತು ವರ್ಷಗಳು ಅದರ ಮೇಲೊಂದೆರಡು ವರ್ಷಗಳು ಅಷ್ಟೆ. ಈಗ ಎದುರಿಗಿರುವವನು ಮಗ. ಹಾಗಾದರೆ ಇನ್ನು ನನ್ನ ಬಳಿ ಉಳಿದಿರುವುದು ಕೇವಲ ಇಪ್ಪತ್ತು ಹಾಗೂ ಅದರ ಮೇಲೊಂದೆರಡು ವರ್ಷಗಳು ಮಾತ್ರವೇನಾ? ಅನ್ನುವ ಆಲೋಚನೆ ಬಂದಾಗ ಮಾಡಬೇಕಿರುವ ಹಾಗೂ ಮಾಡದೇ ಉಳಿದುಹೋದ ಕೆಲಸಗಳೇನೇನಿವೆ ಅನ್ನುವ ಪಟ್ಟಿ ಮಾಡುತ್ತ ಕೂರುತ್ತೇನೆ.

ಗಳಿಗೆಗೊಮ್ಮೆ ನಾನು ಏನು ಮಾಡುತ್ತಿದ್ದೇನೆಂದು ವಿಚಾರಿಸುತ್ತ, ‘ಅಮ್ಮ ಆರಾಮಾಗಿದ್ದಾಳೆ’ ಅನ್ನುವ ನಿರಾತಂಕದ ಭಾವದಲ್ಲಿ ತನ್ನ ಆಟ-ಓದುಗಳಲ್ಲಿ ತೊಡಗಿಕೊಳ್ಳುವ ಮಗನೊಂದಿಗೆ, ನನ್ನ ಜತೆಗಿರುವವರೊಂದಿಗೆ, ನನ್ನನ್ನು ನಂಬಿದವರೊಂದಿಗೆ
ಇನ್ನಷ್ಟು ಚೆಂದದ ಸಮಯ ಕಳೆಯಬೇಕೆನ್ನುವ ಹಂಬಲ ಮೂಡಿ ನಿಲ್ಲುತ್ತದೆ. ಆಡಾಡುತ್ತ ಬಂದು ‘ಏನ್ ಮಾಡ್ತಿದ್ಯಮ್ಮಾ?’ ಎಂದು ಕೇಳಿದ ಮಗನಿಗೆ ‘ಲೆಕ್ಕ ಹಾಕ್ತಿದೀನಿ ಪುಟ್ಟಾ…’ ಅಂದು ನಕ್ಕೆ.

‘ಅದೇನು ಲೆಕ್ಕ, ನಂಗೊಂಚೂರು ಹೇಳಮ್ಮಾ, ನಾನೂ solve ಮಾಡೋಕೆ try ಮಾಡ್ತೀನಿ’ ಅಂದ. ‘ಅದು ನಿನಗೆ ಅರ್ಥವಾ ಗದ ಲೆಕ್ಕ ಬಿಡು. ನೀನಿನ್ನೂ ಅದಕ್ಕೆ ತುಂಬ ದೊಡ್ಡವನಾಗಬೇಕು. ಆಗ ಇಬ್ಬರೂ ಕೂತು ಲೆಕ್ಕಾಚಾರದ ಮಾತಾಡೋಣ’ ಅಂದೆ. ಆದರೆ ಅವನು ಹೇಳುವಂತೆ ಹಟಕ್ಕೆ ಬಿದ್ದ. ‘ಮತ್ತೇನಿಲ್ಲ. ನಾನು ಹುಟ್ಟಿದಾಗ ತಾತ ತುಂಬ ಬಡತನದಲ್ಲೂ, ಕಷ್ಟದಲ್ಲೂ ಇದ್ದರಂತೆ. ನಾನು ಹುಟ್ಟಿದ ನಂತರ ಒಳ್ಳೆಯ ನೆಲೆ ಕಂಡರಂತೆ.

ಹಾಗೆಯೇ ನಾನು ಅಪ್ಪನನ್ನು ಭೇಟಿಯಾದಾಗ ಅವರೂ ಬಹಳ ನೋವಿನಲ್ಲಿದ್ದರು. ಅವರ ಗೆಲುವೆಲ್ಲ ನನ್ನ ಕಣ್ಣೆದುರಿನ
ನರ್ತಿಸಿತು. ಈಗ ನಿನ್ನೊಂದಿಗಿದ್ದೇನೆ. I am very sure. You will reach the height of success. Because Now the angel is
with you’’ ಅಂದು ಮಾತು ಹೊರಳಿಸಿದೆ. ‘Yes ಅಮ್ಮಾ, I will fulfil your dream. We both will roam around the world. I will take you everywhere….’ ಅನ್ನುತ್ತ ತನ್ನಪ್ಪನಂತೆ ಒಂದೇ ಹುಬ್ಬು ಕುಣಿಸುತ್ತ, ‘ಸರಿ ಬಾ, ಈಗ ಎದರೂ ಹೊರಗಡೆ ಹೋಗಿ ಒಂದೊಳ್ಳೆ ಐಸ್‌ಕ್ರೀಂ ತಿಂದುಬರೋಣ’ ಅಂದ.

ಉತ್ತರಹಳ್ಳಿ-ಕೆಂಗೇರಿ ರಸ್ತೆಯಲ್ಲಿ ಡ್ರೈವ್ ಮಾಡುತ್ತ ಹೊರಟವರಿಗೆ ಕಂಡಿದ್ದು ಕನ್ನಡ ಚಿತ್ರರಂಗದ ನೆಚ್ಚಿನ ನಟ ಡಾ. ವಿಷ್ಣು ವರ್ಧನರ ಮುಗಿಲೆತ್ತರದ ಸಾಲುಸಾಲು ಕಟೌಟುಗಳು. ‘ಅಮ್ಮಾ ಇದ್ಯಾಕೆ ಇಲ್ಲಿ ಹಾಕಿದ್ದಾರೆ?’ ಅಂದ ಮಗನಿಗೆ ‘ಅವರ ದೇಹ ಭಸ್ಮವಾಗಿ ಪಂಚಭೂತಗಳಲ್ಲಿ ಒಂದಾದ ಮಣ್ಣಲ್ಲಿ ಬೆರೆತುಹೋಗಿದ್ದು ಇ ಪುಟ್ಟಾ’ ಅಂದೆ. ‘ಇವತ್ತು ಅವರ ಹುಟ್ಟಿದ ದಿನ.
ಹೀಗಾಗಿ ಅವರ ಅಭಿಮಾನಿಗಳೆಲ್ಲ ತಮ್ಮ ಆರಾಧ್ಯದೈವವನ್ನು ಈ ರೀತಿ ನಿಲ್ಲಿಸಿದ್ದಾರೆ’ ಅಂದೆ.

‘ನೀನು ಅವರನ್ನು ನೋಡಿದ್ಯಾ?’ ಅಂದ. ‘ಹ್ಞಾಂ ನೋಡಿದ್ದೆ. ಅಪ್ಪನೇ ಪರಿಚಯ ಮಾಡಿಸಿಕೊಟ್ಟಿದ್ದರು. ಅಪ್ಪನ ಗೆಳೆಯರಾದ ನಾಗತಿಹಳ್ಳಿ ಚಂದ್ರಶೇಖರ್ ಅವರು ತಮ್ಮ ಮನೆಯಲ್ಲಿ ನಡೆಯುತ್ತಿದ್ದ ರಾತ್ರಿಯ ಪಾರ್ಟಿಗೆ ಅಪ್ಪನನ್ನು ಆಹ್ವಾನಿಸಿದ್ದರು. ಅಲ್ಲಿಗೆ ಹೋದ ಅಪ್ಪ ಕೆಲವೇ ಗಂಟೆಗಳಲ್ಲಿ ಫೋನು ಮಾಡಿ, ‘ನಿಂಗೊಂದು ಸರ್‌ಪ್ರೈಸ್ ಇದೆ. ಇನ್ನು ಹತ್ತು ನಿಮಿಷ ಟೈಮ್ ಕೊಡ್ತೀನಿ. ಅಷ್ಟರಲ್ಲಿ ಚೆಂದಗೆ ರೆಡಿ ಆಗಿ ಮನೆಯಿಂದ ಹೊರಗೆ ಬಾ.

ಅಲ್ಲಿ ನನ್ನ ಡ್ರೈವರ್ ಕಾಯ್ತಿರ್ತಾನೆ. ಸೀದ ಕಾರು ಹತ್ತಿ ನಾನಿರುವ ಸ್ಥಳಕ್ಕೆ ಬಾ’ ಅಂದು, ಮತ್ತೊಂದು ಮಾತಿಗೆ ಅವಕಾಶ
ಕೊಡದಂತೆ ಫೋನಿಟ್ಟರು. ಅರೆಬರೆ ನಿದ್ರೆಯಲ್ಲಿದ್ದ ನಾನು, ‘ಹತ್ತು ನಿಮಿಷದಲ್ಲಿ ರೆಡಿಯಾಗುವುದಾ? ಎಷ್ಟು ಚೆಂದದ ನಿದ್ರೆ ಗೆಡಿಸಿದರ?’ ಎಂದು ಗೊಣಗಿಕೊಳ್ಳುತ್ತಲೇ ಸಿಕ್ಕ ಸೀರೆಯಲ್ಲಿ ತಕ್ಕಮಟ್ಟಿಗೆ ಅಲಂಕರಿಸಿಕೊಂಡು ಹೋದೆ. ಶ್ವೇತವಸ್ತ್ರಧಾರಿಯಾಗಿ ತಿಳಿನಗೆಯಲ್ಲಿ ನಗುತ್ತ ಕುಳಿತಿದ್ದ ವಿಷ್ಣುವರ್ಧನರನ್ನೂ ಅವರ ಜತೆಗೆ ಅದೇ ಗಾಂಭೀರ್ಯದಲ್ಲಿ ಕುಳಿತಿದ್ದ ಭಾರತಿಯವರನ್ನೂ ಕಂಡ ಕೂಡಲೇ ನಿದ್ರೆಯೆಲ್ಲ ಒಂದೇ ಸಲಕ್ಕೆ ಹಾರಿಹೋಗಿ ಆಶ್ಚರ್ಯದಿಂದ, ಸಂತೋಷದಿಂದ ಏನು ಮಾತನಾಡುವುದು ಅನ್ನುವುದೇ ತೋಚದೆ ಅಪ್ಪನೆಡೆಗೆ ನೋಡಿದೆ.

‘ಸರ್, ಮೀಟ್ ಮೈ ವೈಫ್’ ಎಂದು ಪರಿಚಯಿಸುತ್ತ, ‘ಇವರು ಯಾರು ಅಂತ ಗೊತ್ತಾಯ್ತಾ?’ ಅಂದು ತುಂಟನಗೆ ನಕ್ಕರು. ‘ನಮ್ಮ ಕಾಲೇಜ್ ಡೇಸ್ ಕ್ರಷ್ ನ ಹ್ಯಾಗೆ ಮರೆಯೋಕ್ಕಾಗತ್ತೆ?’ ಎಂದು ಹೇಳಬೇಕೆನ್ನಿಸಿದರೂ, ಜತೆಯ ಇದ್ದ ಭಾರತಿಯವರನ್ನು ಕಂಡು ‘ಸರ್, ನಮಸ್ತೆ. ನಿಮ್ಮನ್ನು ನೋಡಿದ್ದು ಬಹಳ ಖುಷಿಯಾಯ್ತು. ನಿಮ್ಮ ಬಹುದೊಡ್ಡ ಅಭಿಮಾನಿ ನಾನು’ ಎಂದೆ. ಅವರದೇ ಸ್ಟೈಲಿನಲ್ಲಿ ತುದಿಮೀಸೆಯನ್ನು ತೀಡಿಕೊಳ್ಳುತ್ತ ‘ನಿಮ್ಮನ್ನೆ ನೋಡಿದ ಹಾಗಿದೆಯಲ್ಲ?’ ಅನ್ನುತ್ತ ‘ಹ್ಞಾಂ ಈಗ ನೆನಪಾಯ್ತು ನೋಡಿ, ನಮ್ಮ ಕೆ.ಮಂಜು ಹೆಂಡತಿ ಲಕ್ಷ್ಮಿ ಥರಾ ಇzರಲ್ವಾ ನೋಡೋಕೆ?’ ಅನ್ನುತ್ತ ಪಕ್ಕದ ಇದ್ದ ಭಾರತಿಯವರೆಡೆಗೆ ನೋಡಿ ದರು.

‘ಹೌದು, ನಾನೂ ಅದೇ ಅಂದುಕೊಳ್ತಿದ್ದೆ’ ಎಂದು ಅವರು ಹೇಳುವಷ್ಟರಲ್ಲಿ ಚಿತ್ರ ನಿರ್ಮಾಪಕ ಕೆ. ಮಂಜು ಪತ್ನಿಸಮೇತ
ಎದುರಾದರು. ಅವರನ್ನು ನೋಡಿದಾಗ ಹೌದು ಎಲ್ಲಾ ಒಂಚೂರು ಹೋಲಿಕೆ ಇರೋದು ನಿಜ ಅಂದುಕೊಂಡೆ. ‘ನಮ್ಮ ಹಾಗೆ ಈ ಜಗತ್ತಿಲ್ಲಿ ಏಳು ಜನರಿರುತ್ತಾರಂತೆ. ಅವರಲ್ಲಿ ಇವತ್ತು ಒಬ್ಬರನ್ನು ಭೇಟಿಯಾದಂತಾಯ್ತು’ ಎನ್ನುತ್ತ ಎಲ್ಲರೂ ನಕ್ಕೆವು. ಜತೆಯಲ್ಲಿ ರಮೇಶ್ ಅರವಿಂದ್ ದಂಪತಿಯೂ ಇದ್ದರು. ಅದೆಲ್ಲದರ ನಡುವೆ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ಉಳಿದುಹೋದ ದೃಶ್ಯ ವೆಂದರೆ ಭಾರತಿಯವರ ಆರೈಕೆ.

ಅವರ ಪ್ರತಿ ಮಾತಿನಲ್ಲೂ ವಿಷ್ಣುವರ್ಧನರೆಡೆಗಿದ್ದ ಅಪಾರವಾದ ಪ್ರೀತಿ ಮಾತೇ ಆಡದೆ ವ್ಯಕ್ತವಾಗುತ್ತಿತ್ತು. ‘ಸಿನಿಮಾದವರೆಂದ ಕೂಡಲೆ ಜನ ಏಕೆ ಏಕವಚನದಲ್ಲಿ ಮಾತನಾಡುತ್ತಾರೆ? ಎಲ್ಲರಂತೆ ನಾವೂ ಬಹಳ ಕಷ್ಟಪಟ್ಟೇ ದುಡಿಯುತ್ತೇವೆ. ಆದರೆ ಅವಳು, ಅವನು ಅನ್ನುವ ಏಕವಚನ ಏಕೆ ಬಳಸುತ್ತಾರೆ? We need minimum respect ಅಲ್ವಾ?’ ಅಂದ ಅವರ ಮಾತಿಗೆ, ‘ಅಭಿಮಾನದ ಪ್ರೀತಿಯೆಂದರೆ ಹಾಗೇ. ಅದರಲ್ಲಿ ಕಲ್ಮಶವಿರುವುದಿಲ್ಲ. ನಾವು ಅವರ ಮನೆಯವರಬ್ಬರು ಅನ್ನುವಂತೆ ನಮ್ಮನ್ನು ಪ್ರೀತಿ ಯಿಂದ ಕರೆಯುವಾಗ ನಾವು ತಲೆ ಬಾಗಲೇಬೇಕು’ ಎಂದು ಉತ್ತರಿಸಿದ ವಿಷ್ಣುವರ್ಧನರ ಮಾತು ಇವತ್ತಿಗೂ ನೆನಪಿದೆ.

‘ಇದು ಮೋಸ ಅಮ್ಮಾ. ಅಪ್ಪ ನಿನ್ನನ್ನು ಮಾತ್ರ meet ಮಾಡ್ಸಿದ್ದಾರೆ. ನಂಗ್ ಮಾತ್ರ introduce ಮಾಡ್ಲಿಲ್ಲ’ ಅನ್ನುತ್ತ ಹುಸಿ ಮುನಿಸು ತೋರಿದ. ‘ನೀನಿನ್ನೂ ಆಗ ಹುಟ್ಟೇ ಇರಲಿಲ್ಲ ಕಣೋ. ಅವರು ಈ ಜಗತ್ತಿನಿಂದ ದೂರಾದಾಗ ನಿನಗಾಗಷ್ಟೆ ಒಂದು ವರ್ಷ ತುಂಬಿತ್ತು. ಅದಿರ್ಲಿ ಅಪ್ಪ ಯಾವಾಗ್ಲೂ ಹೇಳ್ತಿದ್ರು, ಕಾಲೇಜಿನ ದಿನಗಳಲ್ಲಿ ವಿಷ್ಣು ಅಂಕಲ್ ಅವರ ಪಾತ್ರಗಳಲ್ಲೊಂದಾದ
ರಾಮಾಚಾರಿ ಪಾತ್ರದಂತೆ ಅವರನ್ನು ಗುರುತಿಸುತ್ತಿದ್ದರಂತೆ’ ಅಂದಾಗ, ‘ಹೌದಾ? ಛೆ I missed so much ಅಮ್ಮಾ….’ ಎಂದು ಪೇಚಾಡುತ್ತಿದ್ದ ಅವನಿಗೆ ಐಸ್‌ಕ್ರೀಂ ಕೊಡಿಸಿ ಮನೆಗೆ ಕರೆದುಕೊಂಡು ಬಂದೆ. ಯಾಕೋ ಮನಸೆಲ್ಲ ವಿಷ್ಣುಮಯವಾಗಿತ್ತು.