ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಸಂಸದರು ಆಗಸ್ಟ್’ನಲ್ಲಿ 70 ವರ್ಷದ ಖಾನ್ ವಿರುದ್ಧ ಪಾಕಿಸ್ತಾನದ ಚುನಾವಣಾ ಆಯೋಗ ದಲ್ಲಿ (ECP) ಪ್ರಕರಣ ದಾಖಲಿಸಿದ್ದರು. ಉಡುಗೊರೆಗಳ ಮಾರಾಟದಿಂದ ಬರುವ ಆದಾಯವನ್ನ ಬಹಿರಂಗಪಡಿಸಲು ವಿಫಲ ವಾದ ಕಾರಣ ಅವರನ್ನ ಅನರ್ಹಗೊಳಿಸುವಂತೆ ಕೋರಿದರು. ಇಸಿಪಿ ಸೆಪ್ಟೆಂಬರ್ 19ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ನೇತೃತ್ವದ ಇಸಿಪಿಯ ನಾಲ್ಕು ಸದಸ್ಯರ ಪೀಠವು ಶುಕ್ರವಾರ ಖಾನ್ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಮತ್ತು ಸಂಸತ್ತಿನ ಸದಸ್ಯ ಸ್ಥಾನದಿಂದ ಅನರ್ಹರಾಗಿದ್ದಾರೆ ಎಂದು ಸರ್ವಾನುಮತದಿಂದ ತೀರ್ಪು ನೀಡಿದೆ.