Saturday, 24th May 2025

ಶ್ರೀ ಮುಳಕಟಮ್ಮ ದೇವಿ ಜಾತ್ರಾ ಮಹೋತ್ಸವ

ಗುಬ್ಬಿ: ತಾಲೋಕಿನ ಲಕ್ಕೆನಹಳ್ಳಿ  ಗ್ರಾಮದ ಇಂದಿರಾನಗರದಲ್ಲಿ ಶ್ರೀ ಮುಳಕಟಮ್ಮ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆ ಯಿಂದ ನೆರವೇರಿತು.

ಮಂಗಳವಾರ ರಾತ್ರಿ ಕಳಸ ಮತ್ತು ಆರತಿ ಮೂಲಕ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಘಟೆ  ಹಾಗೂ ಬಾನಾ ಮೂಲಕ ಪೂಜೆ ಸಲ್ಲಿಸ ಲಾಯಿತು. ಗ್ರಾಮದ ಯುವಕರ ತಂಡ ಬಹಳ ಉತ್ಸಾಹಿಗಳಾಗಿ ದೇವಿ ಕೃಪೆಗೆ ಪಾತ್ರರಾ ದರು.
ಈ ಸಂದರ್ಭದಲ್ಲಿ ಯಜಮಾನ್  ಮುದ್ದು ರಂಗಯ್ಯ, ಕದರಯ್ಯ, ರಂಗಯ್ಯ, ರಂಗ ಸ್ವಾಮಿ, ಲೈಬ್ರೆರಿ ರಾಜಣ್ಣ,  ಕುಮಾರಣ್ಣ, ನರಸಿಯಪ್ಪ, ಮಾದೇವಯ್ಯ, ಮಹಾ ಲಿಂಗಯ್ಯ, ರಾಜಣ್ಣ, ರಂಗಸ್ವಾಮಯ್ಯ,  ದೇವೇಗೌಡ, ಆಟೋ ಮೂರ್ತಣ್ಣ,  ನಂಜುಂಡಯ್ಯ, ಪುಟ್ಟರಾಜು, ಜಯಣ್ಣ, ಶಿವಲಿಂಗಯ್ಯ, ಗ್ರಾಮದ ಯುವಕರಾದ ಯಶವಂತ್, ನರಸಿಂಹಮೂರ್ತಿ, ರಘು, ಅಭಿ, ಶಿವಲಿಂಗ ಮೂರ್ತಿ, ರವೀಶ್,  ಶಶಿ, ಮಾದೇವ್, ಶಿವರಾಜು, ಮಂಜುನಾಥ್, ರಮೇಶ್, ರಂಗನಾಥ್ ಹಾಗೂ ಭಕ್ತಾದಿಗಳು ಹಾಜರಿದ್ದರು.