Wednesday, 14th May 2025

ಆಸ್ಟ್ರೇಲಿಯಾ ಏಕದಿನ ತಂಡದ ನಾಯಕನಾಗಿ ಕಮಿನ್ಸ್‌ ನೇಮಕ

ಸಿಡ್ನಿ: ಸ್ಟ್ರೇಲಿಯಾ ಏಕದಿನ ಅಂತಾರಾಷ್ಟ್ರೀಯ ತಂಡದ ನಾಯಕನಾಗಿ ಪಾಟ್ ಕಮಿನ್ಸ್‌ರನ್ನು ನೇಮಿಸಲಾಗಿದೆ.

ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ತಂಡ ಮುನ್ನಡೆಸುವ ಜವಾಬ್ದಾರಿಯನ್ನು ಪಾಟ್ ಕಮಿನ್ಸ್ ನಿರ್ವಹಿಸ ಲಿದ್ದಾರೆ. ಕಳೆದ ವರ್ಷ ಅವರನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.

ಆಸ್ಟ್ರೇಲಿಯಾ ತಂಡದ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಇಂಗಿತ ವ್ಯಕ್ತ ಪಡಿಸಿದ್ದ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್‌ರನ್ನು ಆಸ್ಟ್ರೇಲಿಯಾ ಗಣನೆಗೆ ತೆಗೆದುಕೊಂಡಿಲ್ಲ.

ಆರನ್ ಫಿಂಚ್ ಆಸ್ಟ್ರೇಲಿಯಾ ಟಿ20 ತಂಡದ ನಾಯಕರಾಗಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ತಮ್ಮ ಗಮನ ಕೇಂದ್ರೀಕರಿಸುವ ಸಲುವಾಗಿ ಏಕದಿನ ಕ್ರಿಕೆಟ್‌ಗೆ ಅವರು ವಿದಾಯ ಘೋಷಿಸಿದರು. ಫಿಂಚ್ ವಿದಾಯದಿಂದ ಆಸ್ಟ್ರೇಲಿಯಾ ಕ್ರಿಕೆಟ್‌ಗೆ ಏಕದಿನ ಕ್ರಿಕೆಟ್‌ಗೆ ನಾಯಕನನ್ನು ಆಯ್ಕೆ ಮಾಡುವುದು ಅನಿವಾ ರ್ಯವಾಗಿತ್ತು.

ಸ್ಟೀವ್ ಸ್ಮಿತ್, ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚ್ ಮಾರ್ಷ್ ಅವರಂತಹ ಇತರ ಅಭ್ಯರ್ಥಿಗಳ ಹೆಸರುಗಳು ಏಕದಿನ ನಾಯಕತ್ವಕ್ಕೆ ಮುಂಚೂಣಿಯಲ್ಲಿದ್ದವು. ಅಂತಿಮವಾಗಿ ಪಾಟ್ ಕಮಿನ್ಸ್‌ಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.

ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ಗೆ 27ನೇ ನಾಯಕನಾಗಿ ಪಾಟ್‌ ಕಮಿನ್ಸ್ ಆಯ್ಕೆಯಾಗಿದ್ದಾರೆ. 90ರ ದಶಕದ ಕೊನೆಯಲ್ಲಿ ಶೇನ್‌ ವಾರ್ನ್ 11 ಏಕದಿನ ಪಂದ್ಯಗಳಿಗೆ ಆಸ್ಟ್ರೇಲಿಯಾದ ನಾಯಕತ್ವ ವಹಿಸಿಕೊಂಡಿದ್ದರು.

ನಾಯಕನನ್ನು ಹೆಸರಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ ಸದ್ಯಕ್ಕೆ ಉಪನಾಯಕನನ್ನು ಆಯ್ಕೆ ಮಾಡಿಲ್ಲ.