Saturday, 24th May 2025

ಗ್ರಾ.ಪಂ ಅಧ್ಯಕ್ಷರಿಗೆ ಹಣಕಾಸು ನಿರ್ವಹಣೆಯ ಹೊಣೆಯಿರಲಿ

ಚಿಕ್ಕನಾಯಕನಹಳ್ಳಿ: ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊರಗಿಡ ಬಾರದೆಂದು ಹೊನ್ನೆಬಾಗಿ ಗ್ರಾ.ಪಂ ಅಧ್ಯಕ್ಷ ತೇಜರಾಜ್ ಸರಕಾರವನ್ನು ಒತ್ತಾಯಿಸಿದ್ದಾರೆ.

ಹಣಕಾಸು ನಿರ್ವಹಣೆಯ ಹೊಣೆಗಾರಿಕೆಯನ್ನು ಪಿಡಿಓ ಹಾಗು ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ನೀಡುವ ನಿರ್ಧಾರವನ್ನು ಸರಕಾರ ತಳೆಯುತ್ತಿದ್ದು ಈ ಮೂಲಕ ಅಧ್ಯಕ್ಷರ ಹಾಗು ಜನಪ್ರತಿನಿಧಿಗಳ ಅಧಿಕಾರ ಮೊಟಕುಗೊಳಿಸುವ ಹುನ್ನಾರವನ್ನು ನಡೆಸುತ್ತಿದೆ. ಇದು ಗಾಂಧಿಜಿಯವರ ಗ್ರಾಮ ಸ್ವರಾಜ್ ಕನಸುಗಳಿಗೆ ಮಾರಕವಾಗಿದೆ. ಅಧಿಕಾರ ವಿಕೇಂದ್ರಿಕರಣದ ಆಶಯಗಳನ್ನು ಹೊತ್ತು ಅನುಷ್ಠಾನಿಸಲ್ಪಟ್ಟ ಪಂಚಾ ಯತ್ ರಾಜ್ ವ್ಯವಸ್ಥೆಯು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಮಹತ್ವದ ಸ್ಥಾನ ಪಡೆದಿದೆ.

ಗ್ರಾಮ ಪಂಚಾಯಿತಿಗಳು ಕೂಡ ಸ್ಥಳೀಯ ಸರಕಾರವೆಂದು ಸಂವಿಧಾನವೇ ಮಾನ್ಯತೇ ನೀಡಿದೆ. ಯಾವುದೇ ಬಿಲ್ ಪಾಸ್ ಮಾಡುವ ಅಥವಾ ಚೆಕ್‌ಗೆ ಸಹಿ ಮಾಡುವ ಅಧಿಕಾರ ವನ್ನು ಅಧ್ಯಕ್ಷರಿಗೆ ನಿರಾಕರಿಸಿದರೆ ಭ್ರಷಾಚಾರವನ್ನು ಇನ್ನಷ್ಟು ಪೋಷಿಸಿ ದಂತಾಗುತ್ತದೆ. ಮತ ನೀಡಿ ನಮ್ಮನ್ನು ಗೆಲ್ಲಿಸಿದ ಮತದಾರರ ಇಚ್ಚೆಯ ಅನುಸಾರ ಯೋಜನೆಗಳನ್ನು ರೂಪಿಸಿ ಅವರ ಆಶಯಗಳಿಗೆ ಪೂರಕವಾಗಿ ಕೆಲಸ ಮಾಡಲು ಸಾದ್ಯವಾಗದೆ ಸಾರ್ವಜನಿಕರಿಂದ ಅಸಡ್ಡೆಗೊಳಪಡಬೇಕಾಗುತ್ತದೆ.

ಆದ್ದರಿಂದ ಕಾಯ್ದೆಗೆ ತಿದ್ದುಪಡಿ ಮಾಡಬಾರದೆಂದು ಸರಕಾರವನ್ನು ಆಗ್ರಹಿಸಿದ್ದಾರೆ.