Wednesday, 14th May 2025

2,430 ಹೊಸ ಪ್ರಕರಣ ದೃಢ

ವದೆಹಲಿ: ದೇಶದಲ್ಲಿ ಕೋವಿಡ್-19 ದೃಢಪಟ್ಟ 2,430 ಹೊಸ ಪ್ರಕರಣಗಳು ಕಳೆದ 24 ಗಂಟೆಗಳಲ್ಲಿ ವರದಿಯಾಗಿದ್ದು, ಇದೇ ಅವಧಿಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ಸದ್ಯ ದೇಶದಲ್ಲಿ 26,618 ಪ್ರಕರಣಗಳು ಸಕ್ರಿಯವಾಗಿವೆ.

ಶುಕ್ರವಾರ 26,583 ಪ್ರಕರಣಗಳು ಸಕ್ರಿಯವಾಗಿದ್ದವು.

ಸಚಿವಾಲಯ ಬೆಳಗ್ಗೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ದೇಶದಲ್ಲಿ ಇದುವರೆಗೆ ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 4,46,26,427ಕ್ಕೆ ತಲುಪಿದೆ. ಈ ಪೈಕಿ 4,40,70,935 ಸೋಂಕಿತರು ಚೇತರಿಸಿಕೊಂಡಿದ್ದಾರೆ.

ಗುಣಮುಖರಾದವರ ಪ್ರಮಾಣ ಶೇ 98.76 ರಷ್ಟು ಇದೆ. ದೈನಂದಿನ ಸೋಂಕು ದೃಢ ದರ ಶೇ 1.01 ಮತ್ತು ವಾರದ ಸೋಂಕು ದೃಢ ದರ ಶೇ 1.07 ಆಗಿದೆ ಎಂದು ಸಚಿವಾಲಯ ಹೇಳಿದೆ. ಇದುವರೆಗೆ 219.27 ಕೋಟಿ ಡೋಸ್‌ ಕೋವಿಡ್ ಲಸಿಕೆ ವಿತರಿಸಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ 2020ರ ಆಗಸ್ಟ್‌ 7 ರಂದು 20 ಲಕ್ಷದ ಗಡಿ ದಾಟಿತ್ತು. ಕೋವಿಡ್‌ ಪ್ರಕರಣಗಳ ಒಟ್ಟು ಸಂಖ್ಯೆ 2020ರ ಡಿಸೆಂಬರ್‌ 19ರಂದು ಒಂದು ಕೋಟಿ, 2021ರ ಮೇ 4 ರಂದು ಎರಡು ಕೋಟಿ ಹಾಗೂ ಜೂನ್‌ 23ರಂದು ಮೂರು ಕೋಟಿ ಗಡಿ ದಾಟಿತ್ತು.