Saturday, 24th May 2025

ತುಮಕೂರು ವಿವಿ: ಹಣಕಾಸು ಅಧಿಕಾರಿ ಹೆಸರು ಬದಲಿಸಿ

ತುಮಕೂರು: ತುಮಕೂರು ವಿವಿಯ ಹಣಕಾಸು ವಿಭಾಗಕ್ಕೆ ಹೊಸ ಹಣಕಾಸು ಅಧಿಕಾರಿ ನೇಮಕವಾಗಿದ್ದರೂ ಹಳೆಯ ಅಧಿಕಾರಿಯ ಹೆಸರು, ಭಾವಚಿತ್ರವನ್ನು ಬದಲಿಸಿಲ್ಲ.

ನೂತನ ಹಣಕಾಸು ಅಧಿಕಾರಿಯಾಗಿ ರೇವಣ್ಣ ನೇಮಕವಾಗಿದ್ದಾರೆ ಆದರೆ ಹಿಂದಿನ ಹಣಕಾಸು ಅಧಿಕಾರಿ ಪ್ರೊ.ಪರಮಶಿವಯ್ಯ ಪಿ., ಅವರ ಹೆಸರು, ಭಾವಚಿತ್ರವನ್ನು ವಿವಿ ತಾಂತ್ರಿಕ ಶಾಖೆ ಬದಲಿಸಿಲ್ಲ. ಈ ಬಗ್ಗೆ ಗಮನಹರಿಸಬೇಕಿದೆ.