Friday, 16th May 2025

ಮಳೆಯಿಂದಾಗಿ ಮಣ್ಣಿನ ಗೋಡೆ ಬಿದ್ದು ಮಗು ಸೇರಿ ಮೂವರ ದಾರುಣ ಸಾವು

ಮಾನವಿ : ತಾಲೂಕಿನ ಕುರ್ಡಿ ಗ್ರಾಮದಲ್ಲಿ ಭಾನುವಾರ ಸುರಿದ ಬಾರಿ ಮಳೆಗೆ ಮಣ್ಣಿನ ಮನೆ ಕುಸಿದು ಒಳಗೆ ಮಲಗಿದ್ದ ದಂಪತಿ ಗಳಾದ ಜಯಮ್ಮ ಮತ್ತು ಪತಿ ಪರಮೇಶ ಹಾಗೂ ಇವರ ಐದು ವರ್ಷದ ತಮ್ಮನ ಮಗನಾದ ಭರತ್ ಇವರ ಮೇಲೆ ಗೋಡೆ ಬಿದ್ದು ಮೃತ ಪಟ್ಟಿದ್ದಾರೆ.

ರಾತ್ರಿ ಅವಘಡ ಸಂಭವಿಸಿದ್ದು ಮುಂಜಾನೆ ಪಕ್ಕದ ಮನೆಯವರು ಗಮನಿಸಿ ನೋಡಿದಾಗ ಸಂಪೂರ್ಣ ಗೋಡೆ ಕುಸಿದ್ದಿದ್ದು ಕಂಡು ಗ್ರಾಮಸ್ಥರು ನೋಡಲಾಗಿ ಮೂರು ಜನರು ಮೃತರಾಗಿದ್ದು ದೃಢವಾಗಿದೆ ಕುರ್ಡಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಸ್ಥಳಕ್ಕೆ ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಮಾನವಿ ತಾಲೂಕ ದಂಡದಿಕಾರಿ, ಜಿಲ್ಲಾಧಿಕಾರಿ ಸಿಬ್ಬಂದಿಗಳು, ಆರೋಗ್ಯ ಅಧಿಕಾರಿಗಳು, ಪಂಚಾಯತಿ ಅಧಿಕಾರಿಗಳು ಬೇಟಿ ನೀಡಿದ್ದಾರೆ.

ನಂತರ ಶಾಸಕ ಮಾತನಾಡಿ, ಮುಂದಿನ ಅಂತ್ಯಸಂಸ್ಕಾರವನ್ನು ಜಿಲ್ಲಾಡಳಿತ ನೋಡಿ ಕೊಳ್ಳಲಿದ್ದು ಅವರಿಗೆ ಕೂಡಲೇ ತಲಾ ಐದು ಲಕ್ಷ ಪರಿಹಾರ ಮತ್ತು ಅವರ ಕುಟುಂಬಕ್ಕೆ ಹೊಸದಾಗಿ ನಿವಾಸವನ್ನು ಕಟ್ಟಿಕೊಡುವುದಾಗಿ ಭರವಸೆಯನ್ನು ನೀಡಿದರು.