Friday, 23rd May 2025

ಎತ್ತರ ಜಿಗಿತ: ಗೌತಮ್ ರಾಜ್ಯ ಮಟ್ಟಕ್ಕೆ ಆಯ್ಕೆ

ಗುಬ್ಬಿ : ತಾಲೋಕಿನ   ಅಳಿಲಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿ ಗೌತಮ್ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ  ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದು.

ಭಾನುವಾರ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗೌತಮ್ ಎಂಬ ವಿದ್ಯಾರ್ಥಿಯನ್ನು ಶಾಲೆಯ ಶಿಕ್ಷಕರು ಸನ್ಮಾನಿಸಿದರು.
ಇದೇ ಸಂಧರ್ಭದಲ್ಲಿ ಮಾತನಾಡಿದ ಎಸ್ ಡಿಎಂ ಸಿ ಅಧ್ಯಕ್ಷ ಪುಟ್ಟರಾಜು ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿ ಗೌತಮ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುವುದು ನಮ್ಮ ಶಾಲೆಗೆ ಸಂತಸ ತಂದಿದೆ ಇದೇ ರೀತಿ ಎಲ್ಲ ವಿದ್ಯಾರ್ಥಿ ಕೂಡ ಕ್ರೀಡೆಯಲ್ಲಿ ಭಾಗವಹಿಸ ಬೇಕು. ಇತ್ತೀಚಿನ ದಿನಗಳಲ್ಲಿ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸುತ್ತಿಲ್ಲ ಎಂದ ಅವರು ಶಾಲಾ ಮಕ್ಕಳು ಕ್ರೀಡೆ ಜೂತೆಗೆ ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು ಎಲ್ಲ‌ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ಅಂತರಾಷ್ವ್ರೀಯ ವಿಭಾಗಕ್ಕೆ ಹೋಗಲು ಅನುಕೂಲವಾಗುತ್ತದೆ ಎಂದು ‌ತಿಳಿಸಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಭಾಕರ್, ಸದಸ್ಯರಾದ ಲೋಕೇಶ್, ಕಿರಣ್ ಮುಖ್ಯ ಶಿಕ್ಷಕ ಮಹೇಶ್, ಎಸ್ ಡಿಎಂಸಿ ಉಪಾ ಧ್ಯಕ್ಷರಾದ  ನೇತ್ರಾವತಿ, ಶಿಕ್ಷಕರಾದ ಸಿಂದೂ, ರೂಪ ಹಾಗೂ ಶಾಲಾ  ಮಕ್ಕಳು ಭಾಗವಹಿಸಿದ್ದರು.