
ಆರೋಪಿಗಳು ಮಂಗಳವಾರ ಮಧ್ಯರಾತ್ರಿ ಪೂರ್ವ ದೆಹಲಿಯ ಜಗತ್ ಪುರಿ ನಿವಾಸಿ ಅಂಶ್ ಕೊಹ್ಲಿ (21) ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು ಎಂದು ಹೇಳಲಾಗಿದೆ. ಫ್ಲೈಓವರ್ ಮೇಲೇರಿದ್ದ ಯುವಕರ ತಂಡ ಕಾರಿನ ಬಾನೆಟ್ ಮೇಲೆ ಕೇಕ್ ಕತ್ತರಿಸಿ ಜೋರಾಗಿ ಸಂಗೀತ ನುಡಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
‘ಆರೋಪಿಗಳು ತಮ್ಮ ಕಾರನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ಮೂಲಕ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದರು. ಈ ವೇಳೆ ಇತರ ಪ್ರಯಾಣಿಕರಿಗೆ ನಿಂದನೀಯ ಭಾಷೆಯನ್ನು ಬಳಸು ತ್ತಿದ್ದರು’ ಎಂದು ನಗರದ ಎರಡನೇ ಎಸ್ಪಿ ಜ್ಞಾನೇಂದ್ರ ಸಿಂಗ್ ಹೇಳಿದ್ದಾರೆ.