Thursday, 22nd May 2025

ಹಸಿರು ತುಮಕೂರಿಗಾಗಿ ಮ್ಯಾರಥಾನ್ ಓಟ

ತುಮಕೂರು: ನಗರದ  ಶ್ರೀವಿನಾಯಕ ಯೂತ್ ಆಸೋಸಿಯೇಷನ್ ವತಿಯಿಂದ ಹಸಿರು ತುಮಕೂರಿಗಾಗಿ ಓಟ ಎಂಬ ೬ಕಿ.ಮಿ. ಗಳ ಮುಕ್ತ ಆಹ್ವಾನಿತ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು.
ಪುರುಷರು,ಮಹಿಳೆಯರು,ಬಾಲಕರು, ಬಾಲಕಿಯರು ಈ ನಾಲ್ಕು ವಿಭಾಗಗಳಲ್ಲಿ ನಡೆದ ೬ ಕಿ.ಮಿ.ಗಳ ಮ್ಯಾರಥಾನ್ ಓಟಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಪೂರ್‌ವಾಡ್ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ದರು. ಈ ವೇಳೆ ಮಾಜಿ ಮಂತ್ರಿ  ಸೊಗಡು ಶಿವಣ್ಣ ಜತೆಗಿದ್ದರು.
ಎಸ್.ಐ.ಟಿಯ ಸಿದ್ದೇಶ್ವರ ಕನ್ವೆಷನ್ ಹಾಲ್ ಮುಂಭಾಗದ ಆರಂಭವಾದ ಮ್ಯಾರಥಾನ್ ಓಟ, ಗಂಗೋತ್ರಿ ನಗರ ಮುಖ್ಯರಸ್ತೆ, ಬಿ.ಹೆಚ್.ರಸ್ತೆಯ ಮೂಲಕ ಭದ್ರಮ್ಮ ವೃತ್ತ, ಡಾ.ರಾಧಾಕೃಷ್ಣ ರಸ್ತೆ, ಎಸ್.ಎಸ್.ಪುರಂ ಮುಖ್ಯರಸ್ತೆ ಮೂಲಕ ಹಾದು ಸಿದ್ದೇಶ್ವರ ಕನ್ವೆಷನ್ ಹಾಲ್ ಬಳಿ ಮುಕ್ತಾಯಗೊಂಡಿತ್ತು. ೨೫೦ಕ್ಕೂ ಹೆಚ್ಚು ವಿವಿಧ ವಯೋ ಮಾನದ ಓಟಗಾರರು ಭಾಗವಹಿಸಿದ್ದ ಓಟ ದಲ್ಲಿ ನಾಲ್ಕು ವಿಭಾಗದಲ್ಲಿ ಮೊದಲು ಮೂರು ಸ್ಥಾನಗಳನ್ನು ಪಡೆದ ಕ್ರೀಡಾಪಟುಗಳಿಗೆ ನಗದು ಬಹುಮಾನ ನೀಡಿ ಪುರಸ್ಕರಿಸ ಲಾಯಿತು.
ಕಾರ್ಯಕ್ರಮದಲ್ಲಿ ಡಾ.ಹುಲಿನಾಯ್ಕರ್,  ಚಂದನ್ ಕುಮಾರ್, ವಿಶ್ವನಾಥ್,ಕಾರ್ತಿಕಗೌಡ,ಪಾಲಿಕೆ ಸದಸ್ಯರಾದ ಮಲ್ಲಿಕಾ ರ್ಜುನಯ್ಯ,ಚಂದ್ರಕಲಾ ಪುಟ್ಟರಾಜು,ಲೋಹಿತ್, ಸಂದೀಪ್, ದೀಪಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಮಕ್ಕಳಿಗೆ ಪ್ರಶಂಶನಾ ಪತ್ರ ನೀಡಲಾಯಿತು.