Monday, 12th May 2025

ಟಿ-20 ವಿಶ್ವಕಪ್‌ ಪಂದ್ಯಾವಳಿಗೆ ನ್ಯೂಜಿಲೆಂಡ್‌ ತಂಡ ಪ್ರಕಟ

ವೆಲ್ಲಿಂಗ್ಟನ್‌: ಅಕ್ಟೋಬರ್‌ನಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ ಟೂನಿರ್ಗೆ ನ್ಯೂಜಿಲೆಂಡ್‌ ತಂಡವನ್ನು ಪ್ರಕಟಿಸಲಾಗಿದೆ.

ಹಿರಿಯ ಆಟಗಾರ ಮಾರ್ಟಿನ್ ಗಪ್ಟಿಲ್ ಸ್ಥಾನ ಪಡೆದಿದ್ದಾರೆ. ಗಪ್ಟಿಲ್ ಜೊತೆಗೆ ಕಿರಿಯ ಆಟಗಾರರಾದ ಫಿನ್ ಅಲೆನ್, ಮಿಚೆಲ್ ಬ್ರಾಚ್ವೆಲ್ ಅವರಿಗೆ ಅವಕಾಶ ದೊರೆತಿದೆ. ಕೇನ್ ವಿಲಿಯಮ್ಸನ್ ಅವರು ಮೂರನೇ ಸಲ ತಂಡವನ್ನು ಮುನ್ನಡೆಸುವರು.

ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್‌ ತಂಡ ಅಕ್ಟೋಬರ್ 22ರಂದು ಆಸ್ಟ್ರೇಲಿಯಾ ವಿರುದ್ಧ ಸೆಣಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ಕಳೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಮುಖಿಯಾಗಿದ್ದವು.

ವಿಶ್ವಕಪ್ಗೆ ತಂಡ ಹೀಗಿದೆ: ಕೇನ್ ವಿಲಿಯಮ್ಸನ್ (ನಾಯಕ), ಮಾರ್ಟಿನ್ ಗಪ್ಟಿಲ್, ಆಯಡಂ ಮಿಲ್ನೆ, ಫಿನ್ ಅಲೆನ್, ಡೆವೊನ್ ಕಾನ್ವೆ, ಡೆರಿಲ್ ಮಿಚೆಲ್, ಮಾರ್ಕ್ ಚಾಪ ಮನ್, ಜೇಮ್ಸ್ ನಿಶಾಮ್, ಟ್ರೆಂಟ್ ಬೌಲ್ಟ್, ಈಶ ಸೋಧಿ, ಟಿಮ್ ಸೌಥಿ, ಮಿಚೆಲ್ ಸ್ಯಾಂಟನರ್, ಮಿಚೆಲ್ ಬ್ರಾಚ್ವೆಲ್, ಲೂಕಿ ಫರ್ಗ್ಯೂಸನ್, ಡ್ರಾಲ್ ಮಿಚೆಲ್, ಗ್ಲೆನ್ ಫಿಲಿಪ್ಸ್