Sunday, 11th May 2025

‘ಸ್ವಚ್ಛತಾ ಪಖ್ವಾದ’ ಚಾಲನೆ ನೀಡಿ ಶುಭ ಕೋರಿದ ಸಚಿವ ವೈಷ್ಣವ್

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವಾದ ಶನಿವಾರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಭಕೋರಿದ್ದಾರೆ.

ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ ಇಂದು ದೇಶದೆಲ್ಲೆಡೆ ಬಿಜೆಪಿಯು ಹಲವಾರು ಕಾರ್ಯಕ್ರಮಗಳು ಹಾಗೂ ಅಭಿಯಾನಗಳನ್ನು ಆಯೋಜಿಸಿದೆ. ಅದರಲ್ಲಿ ‘ಸ್ವಚ್ಛತಾ ಪಖ್ವಾದ’ ಕೂಡ ಒಂದು. ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ಸಚಿವ ಅಶ್ವಿನಿ ವೈಷ್ಣವ್ ಕಸ ಗುಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಶನಿವಾರ ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣದಲ್ಲಿ ಕಸ ಗುಡಿಸುವ ಮೂಲಕ ಮೋದಿ ಅವರಿಗೆ ಅಶ್ವನ್ ವೈಷ್ಣವ್ ಅವರು ಶುಭ ಹಾರೈಸಿದ್ದಾರೆ.

ಪ್ರಧಾನಿ ಮೋದಿ ಹುಟ್ಟುಹಬ್ಬದ ಅಂಗವಾಗಿ, ದೇಶದೆಲ್ಲೆಡೆ ಬಿಜೆಪಿಯು ಹಲವಾರು ಕಾರ್ಯಕ್ರಮಗಳು ಹಾಗೂ ಅಭಿಯಾನ ಗಳನ್ನು ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಅಶ್ವಿನಿ ವೈಷ್ಣವ್ ಕಸ ಗುಡಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.

ಇಂದಿನಿಂದ ಭಾರತೀಯ ರೈಲ್ವೆ, ಅಂಚೆ ಕಚೇರಿಗಳು, ಟೆಲಿಕಾಂ, ಐಟಿ ಮತ್ತು ದೇಶದ ಇತರ ಇಲಾಖೆಗಳಲ್ಲಿ ಸ್ವಚ್ಛತೆಯ ಅಭಿಯಾನ ಪ್ರಾರಂಭಿಸಲಾಗಿದೆ. ಪ್ರಧಾನಿ ಮೋದಿಯವರು ರಾಜಕೀಯವನ್ನು ಸೇವಾ ಮಾಧ್ಯಮವನ್ನಾಗಿಸಿಕೊಂಡ ರೀತಿ ಇದು. ಸ್ವಚ್ಛತೆ ಕೂಡ ಸೇವೆಗೆ ಉತ್ತಮ ಸಮಾನಾರ್ಥಕವಾಗಿದೆ” ಎಂದು ತಿಳಿಸಿದರು.